Hyundai Creta N Line ವರ್ಸಸ್ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿರುವ ಪ್ರತಿಸ್ಪರ್ಧಿಗಳು: ಇಂಧನ ದಕ್ಷತೆಯ ಹೋಲಿಕೆ
ಹುಂಡೈ ಕ್ರೇಟಾ ಎನ್ ಲೈನ್ ಗಾಗಿ shreyash ಮೂಲಕ ಮಾರ್ಚ್ 14, 2024 09:08 pm ರಂದು ಪ್ರಕಟಿಸಲಾಗಿದೆ
- 33 Views
- ಕಾಮೆಂಟ್ ಅನ್ನು ಬರೆಯಿರಿ
6-ಸ್ಪೀಡ್ iMT (ಕ್ಲಚ್ ಪೆಡಲ್ ಇಲ್ಲದ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್) ಆಯ್ಕೆಯೊಂದಿಗೆ ಬಂದಿರುವ ಏಕೈಕ ಎಸ್‌ಯುವಿ ಕಿಯಾ ಸೆಲ್ಟೋಸ್ ಆಗಿದೆ.
ಹ್ಯುಂಡೈ ಕ್ರೆಟಾ ಎನ್ ಲೈನ್ ಅನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಈ ವಾಹನ ತಯಾರಕರು SUV ಯ ವೈಶಿಷ್ಟ್ಯಗಳು, ವಿಶೇಷಣಗಳು ಮತ್ತು ಇಂಧನ ದಕ್ಷತೆಯ ಬಗ್ಗೆ ಎಲ್ಲಾ ವಿವರಗಳನ್ನು ಅನಾವರಣಗೊಳಿಸಿದ್ದಾರೆ. 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಎಕ್ಸ್‌ಕ್ಲೂಸಿವ್ ಆಗಿ ಲಭ್ಯವಿರುವ ಕ್ರೆಟಾ ಎನ್ ಲೈನ್ ಕಿಯಾ ಸೆಲ್ಟೋಸ್, ಫೋಕ್ಸ್‌ವ್ಯಾಗನ್ ಟೈಗನ್ ಮತ್ತು ಸ್ಕೋಡಾ ಕುಶಾಕ್‌ನಂತಹ ಕಾಂಪ್ಯಾಕ್ಟ್ ಎಸ್‌ಯುವಿಗಳ ಅದೇ ರೀತಿಯ ಶಕ್ತಿಯುತ ಆವೃತ್ತಿಗಳಿಗೆ ಮುಖ್ಯ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮುತ್ತದೆ. ಅದರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಕ್ರೆಟಾ ಎನ್ ಲೈನ್ ಎಷ್ಟು ಮಿತವ್ಯಯವಾಗಿದೆ ಎಂಬುದನ್ನು ಅನ್ವೇಷಿಸೋಣ.
ವಿಶೇಷಣಗಳು |
ಹುಂಡೈ ಕ್ರೆಟಾ ಎನ್ ಲೈನ್ |
ಕಿಯಾ ಸೆಲ್ಟೋಸ್ |
ಫೋಕ್ಸ್‌ವ್ಯಾಗನ್ ಟೈಗುನ್ |
ಸ್ಕೋಡಾ ಕುಶಾಕ್ |
ಎಂಜಿನ್ |
1.5-ಲೀಟರ್ ಟರ್ಬೊ-ಪೆಟ್ರೋಲ್ |
1.5-ಲೀಟರ್ ಟರ್ಬೊ-ಪೆಟ್ರೋಲ್ |
1.5-ಲೀಟರ್ ಟರ್ಬೊ-ಪೆಟ್ರೋಲ್ |
1.5-ಲೀಟರ್ ಟರ್ಬೊ-ಪೆಟ್ರೋಲ್ |
ಪವರ್ |
160 ಪಿಎಸ್ |
160 ಪಿಎಸ್ |
150 ಪಿಎಸ್ |
150 ಪಿಎಸ್ |
ಟಾರ್ಕ್ |
253 ಎನ್ಎಂ |
253 ಎನ್ಎಂ |
250 ಎನ್ಎಂ |
250 ಎನ್ಎಂ |
ಟ್ರಾನ್ಸ್‌ಮಿಷನ್ |
6-ಸ್ಪೀಡ್ ಮ್ಯಾನುಯಲ್ / 7-ಸ್ಪೀಡ್ ಡಿಸಿಟಿ |
6-ಸ್ಪೀಡ್ ಮ್ಯಾನುಯಲ್ / 7-ಸ್ಪೀಡ್ ಡಿಸಿಟಿ |
6-ಸ್ಪೀಡ್ ಮ್ಯಾನುಯಲ್ / 7-ಸ್ಪೀಡ್ ಡಿಸಿಟಿ |
6-ಸ್ಪೀಡ್ ಮ್ಯಾನುಯಲ್ / 7-ಸ್ಪೀಡ್ ಡಿಸಿಟಿ |
ಘೋಷಿಸಿರುವ ಇಂಧನ ದಕ್ಷತೆ |
ಪ್ರತಿ ಲೀ.ಗೆ 18 ಕಿ.ಮೀ (ಮ್ಯಾನುಯಲ್) / ಪ್ರತಿ ಲೀ.ಗೆ 18.2 ಕಿ.ಮೀ (ಡಿಸಿಟಿ) |
ಪ್ರತಿ ಲೀ.ಗೆ 17.7 ಕಿ.ಮೀ (iMT) / ಪ್ರತಿ ಲೀ.ಗೆ 17.9 ಕಿ.ಮೀ (ಡಿಸಿಟಿ) |
ಪ್ರತಿ ಲೀ.ಗೆ 18.61 ಕಿ.ಮೀ (ಮ್ಯಾನುಯಲ್) / ಪ್ರತಿ ಲೀ.ಗೆ 19.01 ಕಿ.ಮೀ (ಡಿಸಿಟಿ) |
ಪ್ರತಿ ಲೀ.ಗೆ 18.60 ಕಿ.ಮೀ (ಮ್ಯಾನುಯಲ್) / ಪ್ರತಿ ಲೀ.ಗೆ 18.86 ಕಿ.ಮೀ (ಡಿಸಿಟಿ) |
ಗಮನಿಸಬೇಕಾದ ಅಂಶಗಳು
-
ಹುಂಡೈ ಕ್ರೆಟಾ ಎನ್ ಲೈನ್ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 7-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್ (ಡಿಸಿಟಿ ಆಟೋಮ್ಯಾಟಿಕ್) ನೊಂದಿಗೆ ಜೋಡಿಸಲಾಗಿದೆ. ಇದು ಕಿಯಾ ಸೆಲ್ಟೋಸ್‌ಗಿಂತ ಸ್ವಲ್ಪ ಉತ್ತಮ ಇಂಧನ ದಕ್ಷತೆಯನ್ನು ನೀಡುತ್ತದೆ ಎಂದು ಹೇಳುತ್ತದೆ, ಆದರೆ ಇದು ಸ್ಕೋಡಾ-ಫೋಕ್ಸ್‌ವ್ಯಾಗನ್ ಎಸ್‌ಯುವಿಗಳಿಗಿಂತ ಕಡಿಮೆ ಮಿತವ್ಯಯವನ್ನು ಹೊಂದಿದೆ.
-
ಸೆಲ್ಟೋಸ್ ಕ್ರೆಟಾ ಎನ್‌ಲೈನ್‌ನಂತೆಯೇ ಅದೇ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ, ಆದರೂ ಇದು ಇಲ್ಲಿ ಉಲ್ಲೇಖಿಸಲಾದ ಎಲ್ಲಾ ಇತರ ಎಸ್‌ಯುವಿಗಳಿಗಿಂತ ಕಡಿಮೆ ಇಂಧನ ದಕ್ಷತೆಯನ್ನು ನೀಡುತ್ತದೆ. ಆದಾಗಿಯೂ, ಸೆಲ್ಟೋಸ್ 6-ಸ್ಪೀಡ್ iMT (ಕ್ಲಚ್ ಪೆಡಲ್ ಇಲ್ಲದ ಮ್ಯಾನುಯಲ್ ಟ್ರಾನ್ಸ್‌ಮಿಷನ್) ಟ್ರಾನ್ಸ್‌ಮಿಷನ್‌ನ ಆಯ್ಕೆಯೊಂದಿಗೆ ಬರುವ ಏಕೈಕ ಕಾಂಪ್ಯಾಕ್ಟ್ ಎಸ್‌ಯುವಿ ಆಗಿದೆ.
ಇದನ್ನು ಸಹ ಓದಿ: Hyundai Creta N Line ವರ್ಸಸ್ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿರುವ ಪ್ರತಿಸ್ಪರ್ಧಿಗಳು: ಬೆಲೆಗಳ ಹೋಲಿಕೆ
-
ಟೈಗುನ್ ಮತ್ತು ಕುಶಾಕ್ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಕ್ರೆಟಾ ಎನ್ ಲೈನ್ ಮತ್ತು ಸೆಲ್ಟೋಸ್‌ಗಿಂತ 10 ಪಿಎಸ್ ನಷ್ಟು ಕಡಿಮೆ ಪವರ್ ಅನ್ನು ಹೊಂದಿದೆ. ಆದಾಗಿಯೂ, ಫೋಕ್ಸ್‌ವ್ಯಾಗನ್‌ನ ಡಿಸಿಟಿ ಆಟೋಮ್ಯಾಟಿಕ್‌ನಲ್ಲಿನ ಕಾಂಪ್ಯಾಕ್ಟ್ ಎಸ್‌ಯುವಿ ಇಲ್ಲಿ ಉಲ್ಲೇಖಿಸಿರುವ ಎಲ್ಲಾ ಇತರ ಎಸ್‌ಯುವಿಗಳಿಗಿಂತ ಹೆಚ್ಚಿನ ಇಂಧನ ದಕ್ಷತೆಯನ್ನು ನೀಡುತ್ತದೆ.
-
6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನಲ್ಲಿ ಸ್ಕೋಡಾ ಕುಶಾಕ್ ಮತ್ತು ಫೋಕ್ಸ್‌ವ್ಯಾಗನ್ ಎಸ್‌ಯುವಿಯ ಇಂಧನ ದಕ್ಷತೆ ಬಹುತೇಕ ಹೊಂದಿಕೆಯಾಗುತ್ತದೆ, ಆದರೆ 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್‌ನಲ್ಲಿ ಟೈಗನ್‌ಗಿಂತ ಸ್ವಲ್ಪ ಕಡಿಮೆ ಮಿತವ್ಯಯವಾಗಿದೆ.
-
ಸ್ಕೋಡಾ ಮತ್ತು ಫೋಕ್ಸ್‌ವ್ಯಾಗನ್ ಎಂಜಿನ್ ಘಟಕವು ಹೆಚ್ಚಿದ ದಕ್ಷತೆಗಾಗಿ ಆಕ್ಟಿವ್ ಸಿಲಿಂಡರ್ ತಂತ್ರಜ್ಞಾನವನ್ನು ಹೊಂದಿದೆ ಎಂದು ಗಮನಿಸಬೇಕಾದ ಅಂಶವಾಗಿದೆ. ಈ ವ್ಯವಸ್ಥೆಯು ನಾಲ್ಕು ಎಂಜಿನ್ ಸಿಲಿಂಡರ್‌ಗಳಲ್ಲಿ ಎರಡನ್ನು ಎಂಜಿನ್ ಲೋಡ್‌ನಲ್ಲಿ ಇಲ್ಲದಿರುವಾಗ ನಿಷ್ಕ್ರಿಯವಾಗಲು ಅನುಮತಿಸುತ್ತದೆ, ಉದಾಹರಣೆಗೆ ಟಾಪ್ ಗೇರ್‌ನಲ್ಲಿ ಹೆದ್ದಾರಿ ವೇಗದಲ್ಲಿ ಪ್ರಯಾಣಿಸುವಾಗ.
ಗಮನಿಸಿ: ಒದಗಿಸಲಾದ ಇಂಧನ ದಕ್ಷತೆಯ ಅಂಕಿಅಂಶಗಳನ್ನು ಆಯಾ ತಯಾರಕರು ಕ್ಲೈಮ್ ಮಾಡಿದ್ದಾರೆ ಎಂಬುದನ್ನು ದಯವಿಟ್ಟು ಗಮನಿಸಬೇಕು. ಡ್ರೈವಿಂಗ್ ಕಂಡಿಷನ್, ವಾಹನದ ಕಂಡಿಷನ್ ಮತ್ತು ಹವಾಮಾನದಂತಹ ಅಂಶಗಳ ಆಧಾರದ ಮೇಲೆ ನಿಜವಾದ ಇಂಧನ ದಕ್ಷತೆಯು ಬದಲಾಗಬಹುದು.
ಆದ್ದರಿಂದ, ಇಲ್ಲಿ ವೋಕ್ಸ್‌ವ್ಯಾಗನ್ ಟೈಗುನ್ ಅತ್ಯಂತ ಕಾರ್ಯಕ್ಷಮತೆ-ಆಧಾರಿತ ಕಾಂಪ್ಯಾಕ್ಟ್ ಎಸ್‌ಯುವಿಯಾಗಿ ಹೊರಹೊಮ್ಮುತ್ತದೆ. ಮತ್ತೊಂದೆಡೆ, ಕಿಯಾ ಸೆಲ್ಟೋಸ್ ಕನಿಷ್ಠ ಇಂಧನ ದಕ್ಷತೆಯನ್ನು ನೀಡುತ್ತದೆ. ಆದರೆ 6-ಸ್ಪೀಡ್ iMT ಆಯ್ಕೆಯನ್ನು ಒದಗಿಸುತ್ತದೆ. ಒಟ್ಟಾರೆಯಾಗಿ, ಹ್ಯುಂಡೈ ಕ್ರೆಟಾ ಎನ್ ಲೈನ್‌ನ ಹೇಳಿಕೊಳ್ಳುವಂತಹ ಇಂಧನ ಮೈಲೇಜ್ ಅದರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ತೀರಾ ಕಳಪೆಯು ಅಲ್ಲ ಅಥವಾ ಶ್ರೇಷ್ಠವೂ ಅಲ್ಲ.
ಬೆಲೆಗಳು
ಹುಂಡೈ ಕ್ರೆಟಾ ಎನ್ ಲೈನ್ |
ಕಿಯಾ ಸೆಲ್ಟೋಸ್ |
ವೋಕ್ಸ್‌ವ್ಯಾಗನ್ ಟೈಗುನ್ |
ಸ್ಕೋಡಾ ಕುಶಾಕ್ |
16.82 ಲಕ್ಷ ರೂ.ನಿಂದ 20.30 ಲಕ್ಷ ರೂ. (ಪರಿಚಯಾತ್ಮಕ) |
15 ಲಕ್ಷ ರೂ.ನಿಂದ 20.30 ಲಕ್ಷ ರೂ. |
16.77 ಲಕ್ಷ ರೂ.ನಿಂದ 20 ಲಕ್ಷ ರೂ. |
15.99 ಲಕ್ಷ ರೂ.ನಿಂದ 20.49 ಲಕ್ಷ ರೂ. |
ಎಲ್ಲಾ ಬೆಲೆಗಳು ಎಕ್ಸ್ ಶೋ ರೂಂ ಬೆಲೆಗಳು
ಇಲ್ಲಿ ಉಲ್ಲೇಖಿಸಲಾದ ಎಲ್ಲಾ ಬೆಲೆಗಳು ಈ ಎಸ್‌ಯುವಿಗಳ 1.5-ಲೀಟರ್ ಟರ್ಬೊ-ಪೆಟ್ರೋಲ್ ವೇರಿಯೆಂಟ್‌ಗಳಿಗೆ ಮಾತ್ರ ಎಂಬುದನ್ನು ದಯವಿಟ್ಟು ಗಮನಿಸಿ.
ಇನ್ನಷ್ಟು ಓದಿ : ಕ್ರೆಟಾ ಎನ್ ಲೈನ್ ಆನ್‌ರೋಡ್ ಬೆಲೆ