• English
  • Login / Register

Hyundai Creta N Line; ಮಾರ್ಚ್ 11 ರಂದು ಇದರ ಬಿಡುಗಡೆಗೆ ಮುಂಚಿತವಾಗಿಯೇ ಇಂಟಿರೀಯರ್‌ನ ಮಾಹಿತಿಗಳು ಬಹಿರಂಗ

ಹುಂಡೈ ಕ್ರೇಟಾ ಎನ್ ಲೈನ್ ಗಾಗಿ sonny ಮೂಲಕ ಮಾರ್ಚ್‌ 08, 2024 07:09 pm ರಂದು ಪ್ರಕಟಿಸಲಾಗಿದೆ

  • 29 Views
  • ಕಾಮೆಂಟ್‌ ಅನ್ನು ಬರೆಯಿರಿ

ಹಿಂದಿನ N ಲೈನ್ ಮಾದರಿಗಳಂತೆಯೇ, ಕ್ರೆಟಾ N ಲೈನ್ ಕ್ಯಾಬಿನ್ ಡ್ಯಾಶ್‌ಬೋರ್ಡ್‌ನಲ್ಲಿ ಇನ್ಸರ್ಟ್‌ಗಳೊಂದಿಗೆ ಕೆಂಪು ಬಣ್ಣದ ಡ್ಯಾಶ್ ಅನ್ನು ಪಡೆಯುತ್ತದೆ ಮತ್ತು ಅಪ್ಹೋಲ್‌ಸ್ಟರಿಯಲ್ಲಿ ಕ್ರಾಸ್‌ ಸ್ಟಿಚ್ಚಿಂಗ್‌ಅನ್ನು ಪಡೆಯುತ್ತದೆ.

Hyundai Creta N Line interior

  • ಕ್ರೆಟಾ ಎನ್ ಲೈನ್ ಡ್ಯುಯಲ್-ಇಂಟಿಗ್ರೇಟೆಡ್ 10.25-ಇಂಚಿನ ಡಿಸ್‌ಪ್ಲೇಗಳ ಸುತ್ತಲೂ ರೆಡ್‌ ಇನ್ಸರ್ಟ್‌ಗಳನ್ನು ಪಡೆಯುತ್ತದೆ.

  • ಡ್ಯಾಶ್‌ಬೋರ್ಡ್‌ನ ಪ್ರಯಾಣಿಕರ ಬದಿಯಲ್ಲಿ ರೆಡ್‌ ಆಂಬಿಯೆಂಟ್ ಲೈಟಿಂಗ್ ಸಹ ಇದೆ.

  • ಎನ್ ಲೈನ್ ಬ್ರಾಂಡ್ ಸ್ಟೀರಿಂಗ್ ವೀಲ್, ಸೀಟ್ ಅಪ್ಹೋಲ್ಸ್‌ಟೆರಿ ಮತ್ತು ಗೇರ್ ಸೆಲೆಕ್ಟರ್ ಜೊತೆಗೆ ಎಲ್ಲಾ ಕಪ್ಪು ಥೀಮ್‌ಗೆ ವ್ಯತಿರಿಕ್ತವಾಗಿ ಕೆಂಪು ಸ್ಟಿಚಿಂಗ್‌ ಅನ್ನು ಪಡೆಯುತ್ತದೆ. 

  • ವೈಶಿಷ್ಟ್ಯದ ಪಟ್ಟಿಯು ಪನೋರಮಿಕ್ ಸನ್‌ರೂಫ್, ಪವರ್‌ಡ್‌-ಚಾಲಕನ ಆಸನ ಮತ್ತು ADAS ಅನ್ನು ಒಳಗೊಂಡಿದೆ.

  • 160 ಪಿಎಸ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳನ್ನು ನೀಡುತ್ತದೆ.

 ಹ್ಯುಂಡೈ ಕ್ರೆಟಾ ಎನ್ ಲೈನ್‌ನ ಕ್ಯಾಬಿನ್ ಅನ್ನು ಅಧಿಕೃತವಾಗಿ ಅನಾವರಣಗೊಳಿಸಲಾಗಿದ್ದು, ಕಾಂಪ್ಯಾಕ್ಟ್ ಎಸ್‌ಯುವಿಯ ಸ್ಪೋರ್ಟಿಯರ್ ಆವೃತ್ತಿಗೆ ನವೀಕರಿಸಿದ ಡ್ಯಾಶ್‌ಬೋರ್ಡ್ ಸ್ಟೈಲಿಂಗ್ ಅನ್ನು ಬಹಿರಂಗಪಡಿಸಿದೆ. ಸಾಮಾನ್ಯ ಕ್ರೇಟಾದಂತೆ ಇರುವ ಲೇಔಟ್ ಅಥವಾ ಆಕಾರದಲ್ಲಿ ಯಾವುದೇ ಬದಲಾವಣೆಯಿಲ್ಲ, ಆದರೆ ಈಗ ಬ್ಲ್ಯಾಕ್ ಔಟ್ ಕ್ಯಾಬಿನ್ ವಿವಿಧ ಕೆಂಪು ಇನ್ಸರ್ಟ್‌ಗಳನ್ನು ಹೊಂದಿದೆ, ಇದು ಇತರ ಹ್ಯುಂಡೈ ಎನ್ ಲೈನ್ ಮೊಡೆಲ್‌ಗಳಲ್ಲಿಯೂ ಕಂಡುಬರುತ್ತದೆ.

ಡ್ಯಾಶ್‌ಬೋರ್ಡ್‌ನಲ್ಲಿ ರೆಡ್‌ ಎಕ್ಸೆಂಟ್‌ಗಳು

Hyundai Creta N Line dashboard

ಇನ್ಫೋಟೈನ್‌ಮೆಂಟ್ ಮತ್ತು ಡಿಜಿಟಲ್ ಗೇಜ್ ಕ್ಲಸ್ಟರ್‌ಗಾಗಿ 10.25-ಇಂಚಿನ ಇಂಟಿಗ್ರೇಟೆಡ್ ಡಿಸ್‌ಪ್ಲೇಗಳನ್ನು ಸುತ್ತುವರೆದಿರುವ ರೆಡ್‌ ಇನ್ಸರ್ಟ್‌ ಕ್ರೆಟಾ ಎನ್ ಲೈನ್ ಡ್ಯಾಶ್‌ಬೋರ್ಡ್‌ಗೆ ಅತ್ಯಂತ ಪ್ರಮುಖವಾದ ವಿಶುವಲ್‌ ಅಂಶವಾಗಿದೆ. ಡ್ಯಾಶ್‌ನ ಪ್ರಯಾಣಿಕರ ಬದಿಯಲ್ಲಿ ಮತ್ತೊಂದು ರೆಡ್‌ ಇನ್ಸರ್ಟ್‌ ಅವರ AC ದ್ವಾರಕ್ಕೆ ವಿಸ್ತರಿಸುತ್ತದೆ ಇದರೊಂದಿಗೆ ಸಣ್ಣ ಸ್ಟೋರೇಜ್‌ ಟ್ರೇ ಕೆಂಪು ಎಂಬಿಯೆಂಟ್‌ ಲೈಟಿಂಗ್‌ ಅನ್ನು ಹೊಂದಿದೆ.

ಎನ್‌ ಲೈನ್‌ ಅಂಶಗಳು

Hyundai Creta N Line gear selector
Hyundai Creta N Line seats

 

ಕ್ರೆಟಾ ಎನ್ ಲೈನ್‌ನ ಮತ್ತೊಂದು ನಿರೀಕ್ಷಿತ ವಿನ್ಯಾಸ ಬದಲಾವಣೆಯೆಂದರೆ ಈ ಮೊಡೆಲ್‌ಗಾಗಿ ಎಕ್ಸ್‌ಕ್ಲೂಸಿವ್‌ ಆಗಿ ಸ್ಟೀರಿಂಗ್ ವೀಲ್ ಮತ್ತು ಡ್ರೈವ್-ಸೆಲೆಕ್ಟರ್ ಅನ್ನು ಪಡೆಯುತ್ತದೆ. ಇವೆರಡು ಲೆಥೆರೆಟ್ ಫಿನಿಶ್‌ಗಾಗಿ ಎನ್ ಲೈನ್ ಬ್ರ್ಯಾಂಡಿಂಗ್ ಮತ್ತು ರೆಡ್ ಕ್ರಾಸ್ ಸ್ಟಿಚಿಂಗ್ ಅನ್ನು ಪಡೆಯುತ್ತವೆ. ಇದು ಎಕ್ಸಿಲರೇಶನ್‌ ಮತ್ತು ಬ್ರೇಕ್ ಪೆಡಲ್‌ಗಳಿಗೆ ಮೆಟಲ್ ಫಿನಿಶ್ ಅನ್ನು ಸಹ ಪಡೆಯುತ್ತದೆ. ಹೆಚ್ಚಿನ ಎನ್‌ ಲೈನ್ ಬ್ರ್ಯಾಂಡಿಂಗ್ ಅನ್ನು ಸೀಟ್‌ಗಳಲ್ಲಿ ಕಾಣಬಹುದು, ಅದು ವಿಭಿನ್ನವಾದ ಆಪ್ಹೊಲ್ಸ್‌ಟೆರಿಯನ್ನು ಸಹ ಪಡೆಯುತ್ತದೆ.

ಇದನ್ನು ಸಹ ಓದಿ: Hyundai Creta N Line ವರ್ಸಸ್‌ Hyundai Creta: ಬಾಹ್ಯ ಬದಲಾವಣೆಗಳ ಹೋಲಿಕೆ

ವೈಶಿಷ್ಟ್ಯಗಳೊಂದಿಗೆ ಪ್ಯಾಕ್ 

ಕ್ರೆಟಾ ಎನ್ ಲೈನ್ ಆವೃತ್ತಿಗಳು ರೆಗುಲರ್‌ ಕ್ರೆಟಾ ಎಸ್‌ಯುವಿಯ ಟಾಪ್‌-ಎಂಡ್‌ಗಳನ್ನು ಆಧರಿಸಿರುವುದರಿಂದ, ಇವುಗಳು ಅದರ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಸಹ ಪಡೆಯುತ್ತವೆ. ಇದು ಪ್ಯಾನರೋಮಿಕ್‌ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 8-ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ಡ್ರೈವ್ ಮೋಡ್‌ಗಳು ಮತ್ತು ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಅನ್ನು ಒಳಗೊಂಡಿದೆ.

Hyundai Creta N Line six airbags

ಸುರಕ್ಷತೆಯ ದೃಷ್ಟಿಯಿಂದ, ಕ್ರೆಟಾ ಎನ್ ಲೈನ್ ಆರು ಏರ್‌ಬ್ಯಾಗ್‌ಗಳು, ADAS ಮತ್ತು 360-ಡಿಗ್ರಿ ಕ್ಯಾಮೆರಾದೊಂದಿಗೆ ಬರಲಿದೆ. 

ಕ್ರೆಟಾ ಎನ್ ಲೈನ್ ಪರ್ಫೋರ್ಮೆನ್ಸ್‌

ಹುಂಡೈ ಕ್ರೆಟಾ ಎನ್ ಲೈನ್ ಸಾಮಾನ್ಯ ಕ್ರೆಟಾದಲ್ಲಿ ಕಂಡುಬರುವ ಅದೇ 1.5-ಲೀಟರ್ ಟರ್ಬೊ-ಪೆಟ್ರೋಲ್ ಅನ್ನು ಪಡೆಯುತ್ತದೆ, ಇದು 160 PS ಮತ್ತು 253 Nm ನಷ್ಟು ಉತ್ಪಾದಿಸುತ್ತದೆ. ಸಾಮಾನ್ಯ ಕ್ರೆಟಾ ಆ ಎಂಜಿನ್ ಅನ್ನು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ನೀಡುತ್ತದೆ, ಆದರೆ ಎನ್ ಲೈನ್ ಇದನ್ನು 6-ಸ್ಪೀಡ್ ಮ್ಯಾನ್ಯುವಲ್‌ನೊಂದಿಗೆ ಲಭ್ಯವಾಗುವಂತೆ ಮಾಡುತ್ತದೆ, ಇದು ಡ್ರೈವಿಂಗ್ ಪ್ಯೂರಿಸ್ಟ್‌ಗಳನ್ನು ಪೂರೈಸುತ್ತದೆ.

Hyundai Creta N Line rear

ಆದಾಗಿಯೂ, ಕ್ರೆಟಾ ಎನ್ ಲೈನ್ ಅನ್ನು ಅದರ ಸಾಮಾನ್ಯ ಎಸ್‌ಯುವಿ ಆವೃತ್ತಿಗಿಂತ ಹೆಚ್ಚು ಡೈನಾಮಿಕ್ ಆಗಿ ಮಾಡಲು ಸಸ್ಪೆನ್ಸನ್‌ ಮತ್ತು ಸ್ಟೀರಿಂಗ್‌ಗೆ ಸಣ್ಣ ಮೆಕ್ಯಾನಿಕಲ್ ಬದಲಾವಣೆಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಹೊಸ ಡ್ಯುಯಲ್-ಟಿಪ್ ಸೆಟಪ್‌ನಿಂದಾಗಿ ಇದು ಸ್ಪೋರ್ಟಿ ಸೌಂಡಿಂಗ್ ಎಕ್ಸಾಸ್ಟ್ ಅನ್ನು ಪಡೆಯುವ ನಿರೀಕ್ಷೆಯಿದೆ.

ನಿರೀಕ್ಷಿತ ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು

Hyundai Creta N Line

 ಹ್ಯುಂಡೈ ಕ್ರೆಟಾ ಎನ್ ಲೈನ್ ಮಾರ್ಚ್ 11 ರಂದು 17.5 ಲಕ್ಷ ರೂ.ಗಳಿಂದ ಎಕ್ಸ್ ಶೋರೂಂ ಬೆಲೆಯಲ್ಲಿ ಬಿಡುಗಡೆಯಾಗಲಿದೆ. ಇದು ಫೋಕ್ಸ್‌ವ್ಯಾಗನ್ ಟೈಗನ್ ಜಿಟಿ ಲೈನ್ ವೇರಿಯೆಂಟ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ ಮತ್ತು ಕಿಯಾ ಸೆಲ್ಟೋಸ್, ಸ್ಕೋಡಾ ಕುಶಾಕ್ ಮತ್ತು ಎಂಜಿ ಆಸ್ಟರ್‌ನ ಟಾಪ್‌-ಎಂಡ್‌ ವೇರಿಯೆಂಟ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಇನ್ನಷ್ಟು ಓದಿ: ಕ್ರೇಟಾ ಆನ್‌ರೋಡ್‌ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Hyundai ಕ್ರೇಟಾ ಎನ್ ಲೈನ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience