• English
  • Login / Register

10.15 ಲಕ್ಷ ರೂ.ಬಲೆಗೆ Hyundai Venue Adventure ಎಡಿಷನ್‌ ಬಿಡುಗಡೆ

ಹುಂಡೈ ವೆನ್ಯೂ ಗಾಗಿ dipan ಮೂಲಕ ಸೆಪ್ಟೆಂಬರ್ 16, 2024 09:13 pm ರಂದು ಪ್ರಕಟಿಸಲಾಗಿದೆ

  • 47 Views
  • ಕಾಮೆಂಟ್‌ ಅನ್ನು ಬರೆಯಿರಿ

ವೆನ್ಯೂ ಅಡ್ವೆಂಚರ್ ಎಡಿಷನ್‌ನ ರಗಡ್‌ ಆದ ಸಂಪೂರ್ಣ ಕಪ್ಪಾದ ವಿನ್ಯಾಸ ಅಂಶಗಳನ್ನು ಮತ್ತು ಹೊಸ ಕಪ್ಪು ಮತ್ತು ಹಸಿರು ಸೀಟ್ ಕವರ್‌ ಅನ್ನು ಸಹ ಒಳಗೊಂಡಿದೆ

Hyundai Venue Adventure Edition Launched, Prices Start From Rs 10.15 Lakh

  • ಹ್ಯುಂಡೈ ವೆನ್ಯೂ ಅಡ್ವೆಂಚರ್ ಆವೃತ್ತಿಯ ಎಕ್ಸ್ ಶೋರೂಂ ಬೆಲೆಯು 10.15 ಲಕ್ಷ ರೂ.ನಿಂದ 13.38 ಲಕ್ಷ ರೂ.ವರೆಗೆ ಇದೆ.
  • ಹೊಸ ಎಡಿಷನ್‌ ಡ್ಯಾಶ್‌ಕ್ಯಾಮ್ ಮತ್ತು ನಾಲ್ಕು ಬಾಡಿ ಕಲರ್‌ನ ಆಯ್ಕೆಗಳೊಂದಿಗೆ ಬರುತ್ತದೆ.
  • ಇತರ ಫೀಚರ್‌ಗಳಲ್ಲಿ 8 ಇಂಚಿನ ಟಚ್‌ಸ್ಕ್ರೀನ್, 6 ಏರ್‌ಬ್ಯಾಗ್‌ಗಳು ಮತ್ತು ಚಾಲಿತ ಡ್ರೈವರ್ ಸೀಟ್ ಸೇರಿವೆ.
  • ಪವರ್‌ಟ್ರೇನ್ ಆಯ್ಕೆಗಳಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಸೇರಿವೆ.

 ಹ್ಯುಂಡೈ ವೆನ್ಯೂ ಅಡ್ವೆಂಚರ್ ಎಡಿಷನ್ ಅನ್ನು ಬಿಡುಗಡೆ ಮಾಡಲಾಗಿದೆ, ನವದೆಹಲಿಯಲ್ಲಿ ಇದರ ಎಕ್ಸ್ ಶೋರೂಂ ಬೆಲೆಯು 10.15 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ. ಈ ಹೊಸ ಎಡಿಷನ್‌ ಅನ್ನು 1.2-ಲೀಟರ್ ಪೆಟ್ರೋಲ್ ಎಂಜಿನ್‌ಗಾಗಿ ಟಾಪ್‌-ಸ್ಪೆಕ್ ಎಸ್‌(ಒಪ್ಶನಲ್‌) ಪ್ಲಸ್ ಮತ್ತು ಎಸ್‌ಎಕ್ಸ್‌ ಆವೃತ್ತಿಗಳೊಂದಿಗೆ ಮತ್ತು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನ ಸಂಪೂರ್ಣ-ಲೋಡ್ ಮಾಡಿದ ಎಸ್‌ಎಕ್ಸ್‌(ಒಪ್ಶನಲ್‌) ಆವೃತ್ತಿಯೊಂದಿಗೆ ನೀಡಲಾಗುತ್ತದೆ. ಬೆಲೆಗಳು ಈ ಕೆಳಗಿನಂತಿವೆ: 

ಎಂಜಿನ್‌ ಆಯ್ಕೆ

ವೇರಿಯೆಂಟ್‌

ಸ್ಟ್ಯಾಂಡರ್ಡ್ ವೇರಿಯಂಟ್ ಬೆಲೆ

ಎಡ್ವಂಚರ್‌ ಎಡಿಷನ್‌ ಬೆಲೆ

ವ್ಯತ್ಯಾಸ

1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್

ಎಸ್(ಒಪ್ಶನಲ್‌) ಪ್ಲಸ್

10 ಲಕ್ಷ ರೂ.

10.15 ಲಕ್ಷ ರೂ.

+ 15,000 ರೂ.

ಎಸ್ಎಕ್ಸ್

11.05 ಲಕ್ಷ ರೂ.

11.21 ಲಕ್ಷ ರೂ.

+ 16,000 ರೂ

1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್

ಎಸ್‌ಎಕ್ಸ್(ಒಪ್ಶನಲ್‌)

13.23 ಲಕ್ಷ ರೂ.

13.38 ಲಕ್ಷ ರೂ.

+15,000 ರೂ.

ಇವುಗಳು ಭಾರತದಾದ್ಯಂತದ ಎಕ್ಸ್ ಶೋರೂಂ ಬೆಲೆಗಳು

ಒಟ್ಟಾರೆ ಬಾಡಿಯ ಆಕೃತಿ ಒಂದೇ ಆಗಿರುವಾಗ, ವೆನ್ಯೂ ಅಡ್ವೆಂಚರ್ ಎಡಿಷನ್‌ ಹೊರಗೆ ಕೆಲವು ಒರಟಾದ ವಿನ್ಯಾಸ ಅಂಶಗಳನ್ನು ಮತ್ತು ಹೊಸ ಇಂಟೀರಿಯರ್‌ ಥೀಮ್ ಅನ್ನು ಪಡೆಯುತ್ತದೆ. ಈ ಹೊಸ ವೆನ್ಯೂ ಅಡ್ವೆಂಚರ್ ಎಡಿಷನ್‌ನಲ್ಲಿ ನೀಡಲಾಗುವ ಹೊಸದನ್ನು ನೋಡೋಣ:

ಆಡ್ವೆಂಚರ್‌ ಎಡಿಷನ್‌: ಹೊಸದೇನಿದೆ ?

Hyundai Venue Adventure Edition blacked out grille
Hyundai Venue Adventure Edition blacked out alloy wheels

 

ಹ್ಯುಂಡೈ ವೆನ್ಯೂ ಅಡ್ವೆಂಚರ್ ಎಡಿಷನ್‌ನ ಬಹಳಷ್ಟು ಸಂಪೂರ್ಣ ಕಪ್ಪಾದ ವಿನ್ಯಾಸ ಅಂಶಗಳನ್ನು ಪಡೆಯುತ್ತದೆ. ಇದು ಕಪ್ಪು-ಬಣ್ಣದ ಗ್ರಿಲ್ ಮತ್ತು ಕಪ್ಪು-ಬಣ್ಣದ ಅಲಾಯ್‌ ವೀಲ್‌ಗಳನ್ನು ಹೊಂದಿದೆ. ಇದು ಮತ್ತಷ್ಟು ದಪ್ಪನಾದ ಕಪ್ಪು ಡೋರ್ ಕ್ಲಾಡಿಂಗ್, ಕಪ್ಪು ಮುಂಭಾಗ ಮತ್ತು ಹಿಂಭಾಗದ ಸ್ಕಿಡ್ ಪ್ಲೇಟ್‌ಗಳು, ಕಪ್ಪು ORVM ಗಳು (ಹೊರಗಿನ ಹಿಂಬದಿಯ ನೋಟದ ಮಿರರ್‌ಗಳು) ಮತ್ತು ಕಪ್ಪು ರೂಫ್‌ ರೇಲ್ಸ್‌ಗಳನ್ನು ಪಡೆಯುತ್ತದೆ. ವೆನ್ಯೂ ಅಡ್ವೆಂಚರ್ ಎಡಿಷನ್‌ ಕೆಂಪು ಬಣ್ಣದ ಮುಂಭಾಗದ ಬ್ರೇಕ್ ಕ್ಯಾಲಿಪರ್‌ನೊಂದಿಗೆ ಬರುತ್ತದೆ.

Hyundai Venue Adventure Edition blacked out interior
Hyundai Venue Adventure Edition black and green semi-leatherette seat upholstery

 

ಒಳಭಾಗದಲ್ಲಿ, ಇದು ಹಸಿರು ಬಣ್ಣದ ಇನ್ಸರ್ಟ್ಸ್‌ನೊಂದಿಗೆ ಸಂಪೂರ್ಣ ಕಪ್ಪು ಥೀಮ್ ಅನ್ನು ಹೊಂದಿದೆ. ಸೀಟ್‌ಗಳು ಡ್ಯುಯಲ್-ಟೋನ್ ಕಪ್ಪು ಮತ್ತು ಹಸಿರು ಥೀಮ್‌ನಲ್ಲಿ ವ್ಯತಿರಿಕ್ತ ಹಸಿರು ಸ್ಟಿಚ್ಚಿಂಗ್‌ನೊಂದಿಗೆ ಬರುತ್ತವೆ, ಇದು ಡೋರ್ ಪ್ಯಾಡ್‌ಗಳಲ್ಲಿಯೂ ಕಂಡುಬರುತ್ತದೆ. ಎಸ್‌ಯುವಿಯು ಕಪ್ಪು 3D ಮ್ಯಾಟ್‌ಗಳು ಮತ್ತು ಮೆಟಲ್‌ನ ಪೆಡಲ್‌ಗಳನ್ನು ಸಹ ಹೊಂದಿದೆ. ಫೀಚರ್‌ಗಳ ವಿಷಯದಲ್ಲಿ, ಈ ಸ್ಪೆಷಲ್‌ ಎಡಿಷನ್‌ ವೆನ್ಯೂವು ಅದರ ಮೂಲ ವೇರಿಯೆಂಟ್‌ಗಳಲ್ಲಿ ನೀಡಲಾದ ಅಸ್ತಿತ್ವದಲ್ಲಿರುವ ಸೌಕರ್ಯಗಳ ಜೊತೆಗೆ ಡ್ಯುಯಲ್ ಕ್ಯಾಮೆರಾದೊಂದಿಗೆ ಡ್ಯಾಶ್‌ಕ್ಯಾಮ್ ಅನ್ನು ಮಾತ್ರ ಪಡೆಯುತ್ತದೆ.

Hyundai Venue Adventure Edition badge

ಹ್ಯುಂಡೈ ವೆನ್ಯೂ ಅಡ್ವೆಂಚರ್ ಎಡಿಷನ್‌ ರೇಂಜರ್ ಖಾಕಿ, ಅಬಿಸ್ ಬ್ಲ್ಯಾಕ್, ಅಟ್ಲಾಸ್ ವೈಟ್ ಮತ್ತು ಟೈಟಾನ್ ಗ್ರೇ ಎಂಬ ನಾಲ್ಕು ಮೊನೊಟೋನ್ ಬಾಡಿ ಕಲರ್‌ನ ಆಯ್ಕೆಗಳಲ್ಲಿ ಲಭ್ಯವಿದೆ. ಅಬಿಸ್ ಬ್ಲ್ಯಾಕ್ ಬಣ್ಣವನ್ನು ಹೊರತುಪಡಿಸಿ ಎಲ್ಲಾ ಬಣ್ಣಗಳು ಈ ಎಡಿಷನ್‌ನ ಎಸ್‌ಎಕ್ಸ್‌ ಮತ್ತು ಎಸ್‌ಎಕ್ಸ್‌(ಒಪ್ಶನಲ್‌) ಆವೃತ್ತಿಗಳು ಸಂಪೂರ್ಣ ಕಪ್ಪಾದ ರೂಫ್‌ಅನ್ನು ಹೊಂದಬಹುದು, ಇದಕ್ಕೆ ಹೆಚ್ಚುವರಿಯಾಗಿ 15,000 ರೂ.ನಷ್ಟು ಬೆಲೆಯನ್ನು ತೆರಬೇಕಾಗುತ್ತದೆ. 

ಇದನ್ನೂ ಓದಿ: ಎಷ್ಟಿರಬಹುದು Hyundai Alcazar ಫೇಸ್‌ಲಿಫ್ಟ್ ಮೈಲೇಜ್? ಇಲ್ಲಿದೆ ಕ್ಲೇಮ್ ಮಾಡಿರುವ ಇಂಧನ ದಕ್ಷತೆ

ಫೀಚರ್‌ಗಳ ಪಟ್ಟಿ

ಹ್ಯುಂಡೈ ವೆನ್ಯೂನ ಎಸ್‌(ಒಪ್ಶನಲ್‌) ಆವೃತ್ತಿಯು ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಎಲ್‌ಇಡಿ ಟೈಲ್‌ಲೈಟ್‌ಗಳು ಮತ್ತು ಕವರ್‌ಗಳೊಂದಿಗೆ 15-ಇಂಚಿನ ಸ್ಟೀಲ್ ಚಕ್ರಗಳನ್ನು ಹೊಂದಿದೆ. ಒಳಭಾಗದಲ್ಲಿ, ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 8 ಇಂಚಿನ ಟಚ್‌ಸ್ಕ್ರೀನ್, ಸನ್‌ರೂಫ್ ಮತ್ತು ಎತ್ತರ-ಹೊಂದಾಣಿಕೆ ಮಾಡಬಹುದಾದ ಚಾಲಕ ಸೀಟನ್ನು ಹೊಂದಿದೆ. ಸುರಕ್ಷತೆಗಾಗಿ, ಇದು ಆರು ಏರ್‌ಬ್ಯಾಗ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಒಳಗೊಂಡಿದೆ.

Hyundai Venue Glovebox

ಎಸ್‌ಎಕ್ಸ್‌ ಆವೃತ್ತಿಯು ವೈರ್‌ಲೆಸ್ ಫೋನ್ ಚಾರ್ಜರ್, ಕೂಲ್ಡ್ ಗ್ಲೋವ್‌ಬಾಕ್ಸ್ ಮತ್ತು ಪಡಲ್‌ ಲ್ಯಾಂಪ್‌ಗಳನ್ನು ಫೀಚರ್‌ಗಳ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಳಿಸುತ್ತದೆ. ಇದು ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಜೊತೆಗೆ ಹಿಂಬದಿಯ ಆಸನಗಳನ್ನು ಒರಗಿಸಬಹುದಾದ ಫಂಕ್ಷನ್‌ ಮತ್ತು 60:40 ವಿಭಜಿಸಬಹುದಾದ ಕಾರ್ಯದೊಂದಿಗೆ ಮತ್ತಷ್ಟು ಆಪ್‌ಗ್ರೇಡ್‌ ಆಗುತ್ತದೆ. ಎಸ್‌ಎಕ್ಸ್‌ ಆವೃತ್ತಿಯು ಎಸ್‌(ಒಪ್ಶನಲ್‌) ನಲ್ಲಿ ಕಂಡುಬರುವ 15-ಇಂಚಿನ ಸ್ಟೀಲ್‌ನ ಚಕ್ರಗಳನ್ನು ಉಳಿಸಿಕೊಂಡಿದೆ, ಹಾಗೆಯೇ ಈ ಹೆಚ್ಚುವರಿ ಅನುಕೂಲಗಳನ್ನು ನೀಡುತ್ತದೆ.

ಸಂಪೂರ್ಣ ಲೋಡ್ ಆಗಿರುವ ಎಸ್‌ಎಕ್ಸ್‌(ಒಪ್ಶನಲ್‌) ಆವೃತ್ತಿಯು ಸೆಮಿ-ಲೆಥೆರೆಟ್ ಸೀಟ್ ಕವರ್‌, ಆಂಬಿಯೆಂಟ್ ಲೈಟಿಂಗ್ ಮತ್ತು ಹೆಚ್ಚು ಪ್ರೀಮಿಯಂ ಅನುಭವಕ್ಕಾಗಿ ಚಾಲಿತ ಡ್ರೈವರ್ ಸೀಟ್‌ನೊಂದಿಗೆ ವೆನ್ಯೂವನ್ನು ಇನ್ನಷ್ಟು ಆಪ್‌ಗ್ರೇಡ್‌ ಮಾಡುತ್ತದೆ. ಇದು ಏರ್ ಪ್ಯೂರಿಫೈಯರ್ ಅನ್ನು ಸಹ ಒಳಗೊಂಡಿದೆ.

ಪವರ್‌ಟ್ರೈನ್‌ ಆಯ್ಕೆಗಳು

Hyundai Venue 1-litre turbo-petrol engine

ಹ್ಯುಂಡೈ ವೆನ್ಯೂ ಅಡ್ವೆಂಚರ್ ಎಡಿಷನ್‌ ಅದರ ಬಾನೆಟ್‌ನ ಅಡಿಯಲ್ಲಿ ಯಾವುದೇ ಯಾಂತ್ರಿಕ ಬದಲಾವಣೆಗಳನ್ನು ಪಡೆಯುವುದಿಲ್ಲ. ಇದನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಬೇಸ್‌ ಆಯ್ಕೆಯು 83 ಪಿಎಸ್‌ ಮತ್ತು 114 ಎನ್‌ಎಮ್‌ನೊಂದಿಗೆ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್ ಆಗಿದ್ದು, 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಹೆಚ್ಚಿನ ಪರ್ಫಾರ್ಮೆನ್ಸ್‌ಗಾಗಿ, 120 ಪಿಎಸ್‌ ಮತ್ತು 172 ಎನ್‌ಎಮ್‌ ಉತ್ಪಾದಿಸುವ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಇದೆ, ಇದು ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ (DCT) ನೊಂದಿಗೆ ಬರುತ್ತದೆ ಆದರೆ ಇತರ ಟ್ರಿಮ್‌ಗಳಲ್ಲಿ 6-ಸ್ಪೀಡ್ ಮ್ಯಾನುವಲ್‌ನೊಂದಿಗೆ ಲಭ್ಯವಿದೆ.

ವೆನ್ಯೂನ ಇತರ ಆವೃತ್ತಿಗಳು 116 ಪಿಎಸ್‌ ಮತ್ತು 250 ಎನ್‌ಎಮ್‌ಅನ್ನು ಒದಗಿಸುವ 1.5-ಲೀಟರ್ ಡೀಸೆಲ್ ಎಂಜಿನ್‌ನ ಆಯ್ಕೆಯನ್ನು ಪಡೆಯುತ್ತವೆ ಮತ್ತು ಈ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಲಭ್ಯವಿದೆ.

ಇದನ್ನೂ ಓದಿ: ಈಗ Hyundai Venueನಲ್ಲಿ ಇನ್ನಷ್ಟು ಕಡಿಮೆ ಬೆಲೆಗೆ ಸನ್‌ರೂಫ್‌ ಸೌಕರ್ಯ ಲಭ್ಯ

ಪ್ರತಿಸ್ಪರ್ಧಿಗಳು

Hyundai Venue Adventure Edition rear

ಹ್ಯುಂಡೈ ವೆನ್ಯೂ ಸಬ್‌-4 ಮೀಟರ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಸ್ಪರ್ಧಿಸುತ್ತದೆ, ಮಾರುತಿ ಬ್ರೆಝಾ, ಕಿಯಾ ಸೋನೆಟ್, ಟಾಟಾ ನೆಕ್ಸಾನ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ನಂತಹ ಪ್ರತಿಸ್ಪರ್ಧಿಗಳ ವಿರುದ್ಧ ಸ್ಪರ್ಧಿಸುತ್ತದೆ. ಇದು ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಟೈಸರ್‌ನಂತಹ ಸಬ್‌-4 ಮೀಟರ್ ಕ್ರಾಸ್‌ಒವರ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.

ನಿರಂತರ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.

ಇನ್ನಷ್ಟು ಓದಿ : ವೆನ್ಯೂನ ಆನ್‌-ರೋಡ್‌ ಬೆಲೆ 

was this article helpful ?

Write your Comment on Hyundai ವೆನ್ಯೂ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience