• English
  • Login / Register

ಸನ್‌ರೂಫ್ ಇರುವ Hyundai Venue S(O) Plus ವೇರಿಯಂಟ್ 10 ಲಕ್ಷ ರೂ.ಗೆ ಬಿಡುಗಡೆ

published on ಆಗಸ್ಟ್‌ 02, 2024 08:00 pm by dipan for ಹುಂಡೈ ವೆನ್ಯೂ

  • 72 Views
  • ಕಾಮೆಂಟ್‌ ಅನ್ನು ಬರೆಯಿರಿ

ಹುಂಡೈನ ಇತ್ತೀಚಿನ ನಿರ್ಧಾರವು ವೆನ್ಯೂ ಎಸ್‌ಯುವಿಯಲ್ಲಿ ಸನ್‌ರೂಫ್ ಅನ್ನು 1.05 ಲಕ್ಷ ರೂ.ಗಳಷ್ಟು ಕಡಿಮೆ ಬೆಲೆಯಲ್ಲಿ ದೊರಕುವಂತೆ ಮಾಡುತ್ತದೆ 

Hyundai Venue S(O) Plus variant introduced

  • ಹ್ಯುಂಡೈ ಈಗ ಸನ್‌ರೂಫ್‌ನೊಂದಿಗೆ ಮಿಡ್-ಸ್ಪೆಕ್ ಎಸ್‌(ಒಪ್ಶನಲ್‌) ಪ್ಲಸ್ ಆವೃತ್ತಿಯನ್ನು ನೀಡುತ್ತಿದೆ, ಇದು ಮೊದಲು ಎಸ್‌ಎಕ್ಸ್‌ ಆವೃತ್ತಿಗೆ ಸೀಮಿತವಾಗಿತ್ತು.
  • ಇದು 1.2-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಎಕ್ಸ್‌ಕ್ಲೂಸಿವ್‌ ಆಗಿ ಲಭ್ಯವಿದೆ.
  • ಇದರ ಆವೃತ್ತಿಯ ಪಟ್ಟಿಯಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.
  • ಈ ಹೊಸ ಆವೃತ್ತಿಯು 8-ಇಂಚಿನ ಟಚ್‌ಸ್ಕ್ರೀನ್ ಮತ್ತು ಮ್ಯಾನುಯಲ್‌ ಎಸಿಯಂತಹ ಎಸ್‌(ಒಪ್ಶನಲ್‌) ಆವೃತ್ತಿಯ ಫೀಚರ್‌ನ ಸೂಟ್ ಅನ್ನು ಹೊಂದಿದೆ.
  • ಸುರಕ್ಷತಾ ಪ್ಯಾಕೇಜ್‌ 6 ಏರ್‌ಬ್ಯಾಗ್‌ಗಳು, ಒಂದು TPMS ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ಒಳಗೊಂಡಿದೆ.
  • ದೆಹಲಿಯಲ್ಲಿ ಹುಂಡೈ ವೆನ್ಯೂ ಎಕ್ಸ್‌ಶೋರೂಮ್‌ ಬೆಲೆಗಳು 7.94 ಲಕ್ಷ ರೂ.ನಿಂದ 13.44 ಲಕ್ಷ ರೂ.ವರೆಗೆ ಇದೆ. 

ಹ್ಯುಂಡೈ ವೆನ್ಯೂನ ಆವೃತ್ತಿಯ ಪಟ್ಟಿಯನ್ನು ಹೊಸ ಮಿಡ್-ಸ್ಪೆಕ್ ಎಸ್‌(ಒ) ಪ್ಲಸ್ ಆವೃತ್ತಿಯನ್ನು ಸನ್‌ರೂಫ್‌ನೊಂದಿಗೆ ನವೀಕರಿಸಲಾಗಿದೆ, ಇದರ ಬೆಲೆಯನ್ನು 10 ಲಕ್ಷ ರೂ.ಗೆ(ಎಕ್ಸ್-ಶೋರೂಮ್, ದೆಹಲಿ) ನಿಗದಿ ಪಡಿಸಲಾಗಿದೆ. ಎಸ್‌(O) ಮತ್ತು ಎಸ್‌ಎಕ್ಸ್‌ ಆವೃತ್ತಿಯ ನಡುವೆ ಇರುವ ಈ ಆವೃತ್ತಿಯು ಸನ್‌ರೂಫ್-ಸಜ್ಜಿತ ಆವೃತ್ತಿಯನ್ನು 1.05 ಲಕ್ಷ ರೂ.ಗಳಷ್ಟು ಕಡಿಮೆ ಬೆಲೆಗೆ ಲಭ್ಯವಾಗುವಂತೆ ಮಾಡಿದೆ. ಆದರೆ, ಇದು 1.2-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್‌ ಎಂಜಿನ್‌ನೊಂದಿಗೆ ಮಾತ್ರ ಬರುತ್ತದೆ, ಇದನ್ನು ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಸಂಯೋಜಿಸಲಾಗಿದೆ. ಈ ಹೊಸ ಆವೃತ್ತಿಯು ನೀಡುವ ಎಲ್ಲವನ್ನು ನಾವು ವಿವರವಾಗಿ ಗಮನಿಸೋಣ:

ವೆನ್ಯೂ ಎಸ್‌(ಒಪ್ಶನಲ್‌) ಪ್ಲಸ್ ಆವೃತ್ತಿಯಲ್ಲಿ ಹೊಸದೇನಿದೆ?

Hyundai Venue S(O) Plus variant

ಹ್ಯುಂಡೈ ವೆನ್ಯೂ ಎಸ್(ಒ) ಪ್ಲಸ್ ಈಗ ಹ್ಯುಂಡೈ ಎಸ್‌ಯುವಿ ಕಾರುಗಳಲ್ಲಿ ಸನ್‌ರೂಫ್‌ನೊಂದಿಗೆ ಅತ್ಯಂತ ಕೈಗೆಟುಕುವ ಆವೃತ್ತಿಯಾಗಿದೆ. ಇದು S(O) ವೇರಿಯಂಟ್ ಆಫರ್‌ನಲ್ಲಿರುವ ಎಲ್ಲವನ್ನೂ ಪಡೆಯುತ್ತದೆ, ಹಾಗೆಯೇ ಈ ಹೊಸ ಫೀಚರ್‌ನೊಂದಿಗೆ ಬರುತ್ತದೆ ಮತ್ತು ಹಿಂದಿನದಕ್ಕಿಂತ ಕೇವಲ 12,000 ರೂ.ನಷ್ಟು ಬೆಲೆ ಹೆಚ್ಚಳವನ್ನು ಹೊಂದಿದೆ. 

Hyundai Venue Sun Roof

ಇದು ಆಟೋ ಎಲ್‌ಇಡಿ ಹೆಡ್‌ಲೈಟ್‌ಗಳು, ಮುಂಭಾಗದಲ್ಲಿ ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಕನೆಕ್ಟಿಂಗ್ ಬಾರ್ ವಿನ್ಯಾಸದೊಂದಿಗೆ ಎಲ್ಇಡಿ ಟೈಲ್ ಲೈಟ್ ಅನ್ನು ಪಡೆಯುತ್ತದೆ. ಇದು 15-ಇಂಚಿನ ಸ್ಟೀಲ್‌ ವೀಲ್‌ಗಳು ಮತ್ತು ಬಾಡಿ ಕಲರ್‌ನ ಹೊರಗಿನ ರಿಯರ್‌ವ್ಯೂ ಮಿರರ್‌ಗಳನ್ನು (ORVMs) ಇದರಲ್ಲಿಯೂ  ಪಡೆಯುತ್ತದೆ, ಅದನ್ನು S(O) ಆವೃತ್ತಿಯಲ್ಲಿಯೂ ನೀಡಲಾಗುತ್ತದೆ.

Hyundai Venue LED tail lights

ವೆನ್ಯೂ S(O) ಪ್ಲಸ್ ಆವೃತ್ತಿಯು 1.2-ಲೀಟರ್ ನ್ಯಾಚುರಲಿ-ಆಸ್ಪಿರೇಟೆಡ್ ಎಂಜಿನ್‌ನೊಂದಿಗೆ ಮಾತ್ರ ಬರುತ್ತದೆ, ಇದನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಈ ಎಂಜಿನ್ 83 ಪಿಎಸ್ ಮತ್ತು 114 ಎನ್ಎಂ ಉತ್ಪಾದಿಸುತ್ತದೆ. ಹೆಚ್ಚುವರಿಯಾಗಿ, ಕೆಲವು ಇತರ ಆವೃತ್ತಿಗಳು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ (120 ಪಿಎಸ್‌/172 ಎನ್‌ಎಮ್‌) ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ (116 ಪಿಎಸ್‌/250 ಎನ್‌ಎಮ್‌) ಆಯ್ಕೆಯನ್ನು ಪಡೆಯುತ್ತವೆ. ಟರ್ಬೊ-ಪೆಟ್ರೋಲ್ ಎಂಜಿನ್‌ ಅನ್ನು 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ (DCT) ಆಯ್ಕೆಯೊಂದಿಗೆ ಹೊಂದಬಹುದಾದರೂ, ಡೀಸೆಲ್ 6-ಸ್ಪೀಡ್ ಮ್ಯಾನುಯಲ್‌ ಗೇರ್‌ ಬಾಕ್ಸ್‌ನೊಂದಿಗ ಮಾತ್ರ ಲಭ್ಯವಿದೆ.

ಇದನ್ನೂ ಓದಿ: ಈ ಆಗಸ್ಟ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ 8 ಕಾರುಗಳು

ಇಂಟಿರೀಯರ್‌ ರೆಗುಲರ್‌ ವೆನ್ಯೂನಿಂದ ಶುದ್ಧ ಬಿಳಿ ಅಲ್ಲದ ಮತ್ತು ಕಪ್ಪು ಥೀಮ್‌ ಅನ್ನು ಹೊಂದಿದೆ. ಫೀಚರ್‌ಗಳನ್ನು ಗಮನಿಸುವಾಗ, ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಕನೆಕ್ಷನ್‌ ಅನ್ನು ಬೆಂಬಲಿಸುವ 8-ಇಂಚಿನ ಟಚ್‌ಸ್ಕ್ರೀನ್ ಅನ್ನು ಪಡೆಯುತ್ತದೆ, ಸೆಮಿ-ಡಿಜಿಟಲ್ ಡ್ರೈವರ್‌ನ ಡಿಸ್‌ಪ್ಲೇ, ಸಿಂಗಲ್-ಪೇನ್ ಸನ್‌ರೂಫ್, ಎತ್ತರ-ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಮತ್ತು ಮ್ಯಾನುಯಲ್ ಎಸಿ ಯನ್ನು ಪಡೆಯುತ್ತದೆ.

ಇದರ ಸುರಕ್ಷತಾ ಪ್ಯಾಕೇಜ್‌ ಆರು ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, ಟೈರ್ ಪ್ರೆಶರ್‌ ಮಾನಿಟರಿಂಗ್ ಸಿಸ್ಟಮ್ (ಟಿಪಿಎಮ್‌ಎಸ್‌) ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ಅನ್ನು ಒಳಗೊಂಡಿದೆ.

ಹ್ಯುಂಡೈ ವೆನ್ಯೂ ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಇತರ ಆವೃತ್ತಿಯ ಬೆಲೆಗಳು ಈ ಅಪ್‌ಡೇಟ್‌ನಿಂದ ಪ್ರಭಾವಿತವಾಗಿಲ್ಲ ಮತ್ತು  7.94 ಲಕ್ಷ ರೂ.ನಿಂದ 13.44 ಲಕ್ಷ ರೂ.ನ (ಎಕ್ಸ್-ಶೋ ರೂಂ, ದೆಹಲಿ) ರೇಂಜ್‌ನಲ್ಲಿದೆ. ಈ ಸಬ್-4ಎಮ್‌ ಎಸ್‌ಯುವಿಯು ಕಿಯಾ ಸೋನೆಟ್, ಮಹೀಂದ್ರಾ ಎಕ್ಸ್‌ಯುವಿ 3XO, ಟಾಟಾ ನೆಕ್ಸಾನ್‌, ಮಾರುತಿ ಸುಜುಕಿ ಬ್ರೆಝಾ, ರೆನಾಲ್ಟ್ ಕೈಗರ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ಮುಂಬರುವ ಸ್ಕೋಡಾ ಸಬ್-4ಎಮ್‌ ಎಸ್‌ಯುವಿಗೆ ಪ್ರತಿಸ್ಪರ್ಧಿಯಾಗಿದೆ. ಇದು ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ ಮತ್ತು ಮಾರುತಿ ಫ್ರಾಂಕ್ಸ್ ಸಬ್-4ಎಮ್‌ ಕ್ರಾಸ್‌ಒವರ್‌ಗಳಿಗೂ ಸ್ಪರ್ಧೆಯನ್ನು ಒಡ್ಡುತ್ತದೆ. 

ಕಾರು ಜಗತ್ತಿನ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್‌ ಚಾನೆಲ್‌ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ : ಹ್ಯುಂಡೈ ವೆನ್ಯೂ ಆನ್‌ರೋಡ್‌ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Hyundai ವೆನ್ಯೂ

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience