Login or Register ಅತ್ಯುತ್ತಮ CarDekho experience ಗೆ
Login

Hyundai Verna S ವರ್ಸಸ್ Honda City SV: ನೀವು ಯಾವ ಕಾಂಪ್ಯಾಕ್ಟ್ ಸೆಡಾನ್ ಖರೀದಿಸಬೇಕು?

ಹುಂಡೈ ವೆರ್ನಾ ಗಾಗಿ dipan ಮೂಲಕ ಜೂನ್ 03, 2024 12:35 pm ರಂದು ಪ್ರಕಟಿಸಲಾಗಿದೆ

ಈ ಎರಡು ಕಾಂಪ್ಯಾಕ್ಟ್ ಸೆಡಾನ್‌ಗಳು ಒಂದೇ ರೀತಿಯ ಬೆಲೆಯನ್ನು ಹೊಂದಿದ್ದರೂ ಕೂಡ, ವಿಭಿನ್ನ ರೀತಿಯ ಗ್ರಾಹಕರನ್ನು ಆಕರ್ಷಿಸುತ್ತವೆ. ಹಾಗಾದರೆ, ನೀವು ಯಾವುದನ್ನು ಆರಿಸಬೇಕು?

ಹೊಸ ಜನರೇಷನ್ ಹುಂಡೈ ವೆರ್ನಾ 2023 ರಲ್ಲಿ ಬಿಡುಗಡೆಯಾದಾಗ, ಇದು ಜನರನ್ನು ಆಕರ್ಷಿಸುವ ಹಲವಾರು ಫೀಚರ್ ಗಳನ್ನು ಹೊಂದಿತ್ತು. ಇದು ಸೆಡಾನ್ ಖರೀದಿದಾರರಿಗೆ ಜನಪ್ರಿಯ ಆಯ್ಕೆಯಾಗಿರುವ ಹೋಂಡಾ ಸಿಟಿಯೊಂದಿಗೆ ಇನ್ನೂ ಕೂಡ ಸ್ಪರ್ಧಿಸುತ್ತದೆ. ನಿಮ್ಮ ಬಜೆಟ್ ಸುಮಾರು 12 ಲಕ್ಷ ರೂ ಆಗಿದ್ದರೆ, ನೀವು ಬೇಸ್‌ ಮಾಡೆಲ್ ನಿಂದ ಎರಡು ವರ್ಷನ್ ಮೇಲೆ ಇರುವ ಹ್ಯುಂಡೈ ವೆರ್ನಾ S ಅಥವಾ ಎಂಟ್ರಿ ಲೆವೆಲ್ ಮಟ್ಟದ ಹೋಂಡಾ ಸಿಟಿ SV ಅನ್ನು ಆಯ್ಕೆ ಮಾಡಬೇಕೇ? ಬನ್ನಿ, ನೋಡೋಣ.

ಬೆಲೆ

ವೇರಿಯಂಟ್

ಹ್ಯುಂಡೈ ವೆರ್ನಾ S

ಹೋಂಡಾ ಸಿಟಿ SV

ಬೆಲೆ

ರೂ. 11.99 ಲಕ್ಷ

ರೂ. 12.08 ಲಕ್ಷ

ಬೆಲೆಗಳು ಎಕ್ಸ್ ಶೋರೂಂ, ಪ್ಯಾನ್ ಇಂಡಿಯಾ ಆಗಿದೆ

ಹೋಂಡಾ ಸಿಟಿ ಬೇಸ್ ವೇರಿಯಂಟ್ ವೆರ್ನಾ ಸೆಕೆಂಡ್ ಫ್ರಮ್ ಬೇಸ್ S ವೇರಿಯಂಟ್ ಗಿಂತ ಸ್ವಲ್ಪ ಹೆಚ್ಚು ಬೆಲೆ ಹೊಂದಿದೆ.

ಪವರ್‌ಟ್ರೇನ್

ವೇರಿಯಂಟ್

ಹ್ಯುಂಡೈ ವೆರ್ನಾ S

ಹೋಂಡಾ ಸಿಟಿ SV

ಇಂಜಿನ್

1.5-ಲೀಟರ್ N/A ಪೆಟ್ರೋಲ್ l

1.5-ಲೀಟರ್ N/A ಪೆಟ್ರೋಲ್

ಪವರ್

115 PS

121 PS

ಟಾರ್ಕ್

144 Nm

145 Nm

ಟ್ರಾನ್ಸ್‌ಮಿಷನ್

6 MT

5 MT

ಹ್ಯುಂಡೈ ವೆರ್ನಾದ S ವೇರಿಯಂಟ್ ಮತ್ತು ಹೋಂಡಾ ಸಿಟಿಯ SV ಎರಡೂ ಕೂಡ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿರುವ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್ ಅನ್ನು ಹೊಂದಿದೆ (ವೆರ್ನಾದಲ್ಲಿ 6-ಸ್ಪೀಡ್ ಯುನಿಟ್). ಈ ವೇರಿಯಂಟ್ ಗಳಲ್ಲಿ ಯಾವುದೇ ಆಟೋಮ್ಯಾಟಿಕ್ ಆಯ್ಕೆ ಲಭ್ಯವಿಲ್ಲ. ಆದರೆ, ಸಿಟಿಯ ಎಂಜಿನ್ ಹುಂಡೈ ಸೆಡಾನ್ ನ ಎಂಜಿನ್ ಗಿಂತ ಸ್ವಲ್ಪ ಹೆಚ್ಚು ಶಕ್ತಿಶಾಲಿಯಾಗಿದೆ.

ಫೀಚರ್ ಗಳು

ಫೀಚರ್ ಗಳು

ಹುಂಡೈ ವೆರ್ನಾ S

ಹೋಂಡಾ ಸಿಟಿ SV

ಹೊರಭಾಗ

  • ಆಟೋ-ಪ್ರೊಜೆಕ್ಟರ್ ಹೆಡ್ ಲೈಟ್ ಗಳು

  • LED DRL ಗಳು

  • LED ಕನೆಕ್ಟೆಡ್ ಟೈಲ್ ಲೈಟ್‌ಗಳು

  • ಬಾಡಿ ಕಲರ್ ಡೋರ್ ಹ್ಯಾಂಡಲ್ ಗಳು ಮತ್ತು ORVM ಗಳು

  • ORVM ಗಳಲ್ಲಿ ಟರ್ನ್ ಇಂಡಿಕೇಟರ್ ಗಳು

  • 15-ಇಂಚಿನ ಅಲೊಯ್ ವೀಲ್ಸ್

  • ಪ್ರೊಜೆಕ್ಟರ್ ಹೆಡ್ ಲೈಟ್ ಗಳು

  • LED DRL ಗಳು

  • LED ಟೈಲ್ ಲೈಟ್‌ಗಳು

  • ORVM ಗಳಲ್ಲಿ LED ಟರ್ನ್ ಇಂಡಿಕೇಟರ್ ಗಳು

  • ಕವರ್ ನೊಂದಿಗೆ 15-ಇಂಚಿನ ಸ್ಟೀಲ್ ವೀಲ್ಸ್

  • ಬಾಡಿ ಕಲರ್ ಡೋರ್ ಹ್ಯಾಂಡಲ್ ಗಳು ಮತ್ತು ORVM ಗಳು

ಒಳಭಾಗ

  • ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್

  • ಬ್ಲಾಕ್ ಮತ್ತು ಬೀಜ್ ಕ್ಯಾಬಿನ್ ಥೀಮ್

  • ಫ್ಯಾಬ್ರಿಕ್ ಅಪ್ಹೋಲ್ಸ್ಟರಿ

  • ಮುಂಭಾಗ ಮತ್ತು ಹಿಂಭಾಗದ ಪ್ರಯಾಣಿಕರಿಗೆ ಅಡ್ಜಸ್ಟ್ ಮಾಡಬಹುದಾದ ಹೆಡ್‌ರೆಸ್ಟ್‌ಗಳು

  • ಸ್ಟೋರೇಜ್ ನೊಂದಿಗೆ ಫ್ರಂಟ್ ಸೆಂಟರ್ ಆರ್ಮ್‌ರೆಸ್ಟ್

  • ಕಪ್‌ಹೋಲ್ಡರ್‌ಗಳೊಂದಿಗೆ ರಿಯರ್ ಸೆಂಟರ್ ಆರ್ಮ್‌ರೆಸ್ಟ್

  • ಡೇ/ನೈಟ್ IRVM

  • ಲಗೇಜ್ ಲ್ಯಾಂಪ್

  • 4.2-ಇಂಚಿನ ಕಲರ್ TFT MID

  • ಬ್ಲಾಕ್ ಮತ್ತು ಬೀಜ್ ಥೀಮ್ ನ ಇಂಟೀರಿಯರ್

  • ಫ್ಯಾಬ್ರಿಕ್ ಅಪ್ಹೋಲ್ಸ್ಟರಿ

  • ಲೆದರ್ ಸುತ್ತಿದ ಗೇರ್ ಶಿಫ್ಟರ್ ಲಿವರ್

  • ಸ್ಟೋರೇಜ್ ನೊಂದಿಗೆ ಫ್ರಂಟ್ ಸೆಂಟರ್ ಆರ್ಮ್‌ರೆಸ್ಟ್

  • ಕಪ್‌ಹೋಲ್ಡರ್‌ಗಳೊಂದಿಗೆ ರಿಯರ್ ಸೆಂಟರ್ ಆರ್ಮ್‌ರೆಸ್ಟ್

  • ಡೇ/ನೈಟ್ IRVM

ಇನ್ಫೋಟೈನ್ಮೆಂಟ್

  • 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್

  • ವೈರ್ಡ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ

  • 4 ಸ್ಪೀಕರ್‌ಗಳು

  • ವಾಯ್ಸ್ ರೆಕಗ್ನಿಷನ್

  • 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್

  • ವೈರ್ಡ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ

  • 4 ಸ್ಪೀಕರ್‌ಗಳು

  • ವಾಯ್ಸ್ ರೆಕಗ್ನಿಷನ್

ಆರಾಮ ಮತ್ತು ಅನುಕೂಲತೆ

  • ಸ್ಟೀರಿಂಗ್-ಮೌಂಟೆಡ್ ಆಡಿಯೊ ಮತ್ತು ಕಾಲಿಂಗ್ ಕಂಟ್ರೊಲ್ಸ್

  • ಆಲ್ ಪವರ್ ವಿಂಡೋಗಳು

  • ಡ್ರೈವರ್ ಸೀಟಿಗಾಗಿ ಮಾನ್ಯುಯಲ್ ಹೈಟ್ ಅಡ್ಜಸ್ಟ್ಮೆಂಟ್

  • ಹಿಂಭಾಗದ ವೆಂಟ್ ಗಳೊಂದಿಗೆ ಆಟೋಮ್ಯಾಟಿಕ್ AC

  • ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಅಡ್ಜಸ್ಟ್ ಮಾಡಬಹುದಾದ ಸ್ಟೀರಿಂಗ್ ವೀಲ್

  • ಕೂಲ್ಡ್ ಗ್ಲೋವ್‌ಬಾಕ್ಸ್

  • ಮುಂಭಾಗ ಮತ್ತು ಹಿಂಭಾಗದಲ್ಲಿ USB-C ಚಾರ್ಜರ್

  • ಕ್ರೂಸ್ ಕಂಟ್ರೋಲ್

  • ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ORVM ಗಳು

  • ಕೀ ಲೆಸ್ ಎಂಟ್ರಿ

  • ಪುಶ್ ಬಟನ್ ಸ್ಟಾರ್ಟ್/ಸ್ಟಾಪ್

  • ಡ್ರೈವರ್ ಸೈಡ್ ಆಟೋ ಓಪನ್/ಕ್ಲೋಸ್ ಆಗುವ ಎಲ್ಲಾ ಪವರ್ ವಿಂಡೋಗಳು

  • ಸ್ಟೀರಿಂಗ್-ಮೌಂಟೆಡ್ ಆಡಿಯೋ ಮತ್ತು ಕಾಲಿಂಗ್ ಕಂಟ್ರೊಲ್ಸ್

  • ಇಲೆಕ್ಟ್ರಾನಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಹೊಂದಾಣಿಕೆ ಮತ್ತು ಫೋಲ್ಡ್ ಮಾಡಬಹುದಾದ ORVM ಗಳು

  • ಹಿಂಭಾಗದ ವೆಂಟ್ ಗಳೊಂದಿಗೆ ಆಟೋಮ್ಯಾಟಿಕ್ AC

  • PM2.5 ಏರ್ ಫಿಲ್ಟರ್

  • ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಅಡ್ಜಸ್ಟ್ ಮಾಡಬಹುದಾದ ಸ್ಟೀರಿಂಗ್

  • ಡ್ರೈವರ್ ಸೀಟಿಗಾಗಿ ಮಾನ್ಯುಯಲ್ ಸೀಟ್ ಅಡ್ಜಸ್ಟ್ಮೆಂಟ್

  • ಆಂಬಿಯೆಂಟ್ ಲೈಟಿಂಗ್

ಸುರಕ್ಷತೆ

  • 6 ಏರ್ ಬ್ಯಾಗ್ ಗಳು
  • ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು

  • ಹಿಲ್ ಸ್ಟಾರ್ಟ್ ಅಸಿಸ್ಟ್

  • ಎಲ್ಲಾ ಸೀಟ್ ಗಳಲ್ಲಿ 3-ಪಾಯಿಂಟರ್ ಸೀಟ್‌ಬೆಲ್ಟ್‌ಗಳು

  • EBD ಜೊತೆಗೆ ABS

  • ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ಮೆಂಟ್ (VSM)

  • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC)

  • ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS)

  • ರಿಯರ್ ಡಿಫಾಗರ್

  • ISOFIX ಚೈಲ್ಡ್ ಸೀಟ್ ಮೌಂಟ್ಸ್

  • 6 ಏರ್ ಬ್ಯಾಗ್ ಗಳು
  • ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ

  • ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು

  • ಹಿಲ್ ಸ್ಟಾರ್ಟ್ ಅಸಿಸ್ಟ್

  • ಎಲ್ಲಾ ಸೀಟ್ ಗಳಲ್ಲಿ 3-ಪಾಯಿಂಟರ್ ಸೀಟ್‌ಬೆಲ್ಟ್‌ಗಳು

  • EBD ಜೊತೆಗೆ ABS

  • ● ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC)
  • ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS)

  • ರಿಯರ್ ಡಿಫಾಗರ್

  • ISOFIX ಚೈಲ್ಡ್ ಸೀಟ್ ಮೌಂಟ್ಸ್

ಹುಂಡೈ ವೆರ್ನಾ S ಮತ್ತು ಹೋಂಡಾ ಸಿಟಿ SV, ಎರಡೂ ಅವುಗಳ ಬೆಲೆಗೆ ತಕ್ಕಂತೆ ಫೀಚರ್ ಗಳನ್ನು ಹೊಂದಿವೆ. ಆದರೆ, ಸಿಟಿಯು ಗೈಡ್ ಲೈನ್ಸ್ ಮತ್ತು ಎಲೆಕ್ಟ್ರಿಕ್ ಆಗಿ ಫೋಲ್ಡ್ ಮಾಡಬಹುದಾದ ORVM ಗಳು ಮತ್ತು PM 2.5 ಫಿಲ್ಟರ್‌ನೊಂದಿಗೆ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾದ ರೂಪದಲ್ಲಿ ಕೆಲವು ಪ್ರಯೋಜನಗಳನ್ನು ಹೊಂದಿದೆ. ಮತ್ತೊಂದೆಡೆ ವೆರ್ನಾ S, ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು, ಕೂಲ್ಡ್ ಗ್ಲೋವ್‌ಬಾಕ್ಸ್, ಮುಂಭಾಗ ಮತ್ತು ಹಿಂಭಾಗದಲ್ಲಿ ಟೈಪ್-C USB ಚಾರ್ಜರ್‌ಗಳು ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಹೊಂದಿದೆ, ಇವೆಲ್ಲವೂ ಸಿಟಿ SV ಯಲ್ಲಿ ಲಭ್ಯವಿಲ್ಲ.

ತೀರ್ಪು

ಹೋಂಡಾ ಸಿಟಿ SV ಹ್ಯುಂಡೈ ವೆರ್ನಾ Sಗಿಂತ ಸ್ವಲ್ಪ ದುಬಾರಿಯಾಗಿದೆ. ಫೀಚರ್ ಗಳು ಮತ್ತು ಸುರಕ್ಷತಾ ತಂತ್ರಜ್ಞಾನದ ವಿಷಯದಲ್ಲಿ ಎರಡೂ ವೇರಿಯಂಟ್ ಗಳು ಬಹುತೇಕ ಸಮಾನವಾಗಿವೆ. ಎರಡೂ ಮಾಡೆಲ್ ಗಳು ಒಂದೇ ರೀತಿಯ ಪವರ್‌ಟ್ರೇನ್‌ಗಳನ್ನು ಕೂಡ ಹೊಂದಿವೆ. ಸ್ವಲ್ಪ ಹೆಚ್ಚು ಶಕ್ತಿಶಾಲಿ ಎಂಜಿನ್ ಜೊತೆಗೆ ರಿವರ್ಸಿಂಗ್ ಕ್ಯಾಮೆರಾ ಮತ್ತು ಏರ್ ಫಿಲ್ಟರ್‌ನಂತಹ ಫೀಚರ್ ಗಳು ನಿಮಗೆ ಮುಖ್ಯವಾದರೆ ನೀವು ಸಿಟಿಯನ್ನು ಆಯ್ಕೆಮಾಡಿಕೊಳ್ಳಬಹುದು.

ಆದರೆ, ನೀವು ಹೆಚ್ಚು ಆರಾಮ ನೀಡುವ ಫೀಚರ್ ಗಳನ್ನು ಮತ್ತು 6-ಸ್ಪೀಡ್ ಟ್ರಾನ್ಸ್‌ಮಿಷನ್ ಬೇಕಾದರೆ, ವೆರ್ನಾ S ಹೆಚ್ಚು ಸೂಕ್ತವಾಗಿದೆ ಏಕೆಂದರೆ ಇದು ಕೂಲಿಂಗ್ ಗ್ಲೋವ್‌ಬಾಕ್ಸ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಒಳಗೊಂಡಿದೆ.

ಈ ಕಾಂಪ್ಯಾಕ್ಟ್ ಸೆಡಾನ್‌ಗಳಲ್ಲಿ ನೀವು ಯಾವುದನ್ನು ಆಯ್ಕೆ ಮಾಡಲು ಬಯಸುತ್ತೀರಿ? ಕೆಳಗೆ ಕಾಮೆಂಟ್‌ ಮಾಡಿ ನಮಗೆ ತಿಳಿಸಿ.

ಇನ್ನಷ್ಟು ಓದಿ: ವೆರ್ನಾ ಆನ್ ರೋಡ್ ಬೆಲೆ

Share via

Write your Comment on Hyundai ವೆರ್ನಾ

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.6.54 - 9.11 ಲಕ್ಷ*
ಫೇಸ್ ಲಿಫ್ಟ್
ಹೊಸ ವೇರಿಯೆಂಟ್
Rs.11.82 - 16.55 ಲಕ್ಷ*
ಹೊಸ ವೇರಿಯೆಂಟ್
Rs.6 - 9.50 ಲಕ್ಷ*
ಹೊಸ ವೇರಿಯೆಂಟ್
Rs.11.07 - 17.55 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ