Login or Register ಅತ್ಯುತ್ತಮ CarDekho experience ಗೆ
Login

Hyundai-Kia; EV ಬ್ಯಾಟರಿ ಉತ್ಪಾದನೆಯನ್ನು ಭಾರತದಲ್ಲೆ ಪ್ರಾರಂಭಿಸಲು ಎಕ್ಸೈಡ್ ಎನರ್ಜಿ ಜೊತೆ ಸಹಭಾಗಿತ್ವ

published on ಏಪ್ರಿಲ್ 12, 2024 10:30 pm by ansh

ಭಾರತದಲ್ಲೇ ಇವಿ ಬ್ಯಾಟರಿಗಳ ಉತ್ಪಾದನೆ ಮಾಡುವುದರಿಂದ ಇನ್‌ಪುಟ್ ವೆಚ್ಚವನ್ನು ಕಡಿಮೆ ಆಗುತ್ತದೆ ಮತ್ತು ಎಲೆಕ್ಟ್ರಿಕ್ ವಾಹನಗಳ ಬೆಲೆಯಲ್ಲಿಯೂ ಕಡಿತ ಕಾಣಬಹುದು

  • EV ಬ್ಯಾಟರಿಗಳ ಸ್ಥಳೀಯ ಉತ್ಪಾದನೆಯು ಲಿಥಿಯಂ-ಐರನ್-ಫಾಸ್ಫೇಟ್ (LFP) ಬ್ಯಾಟರಿಗಳ ಮೇಲೆ ಕೇಂದ್ರೀಕರಿಸುತ್ತದೆ.
  • ಈ ಪಾಲುದಾರಿಕೆಯು ತಮ್ಮ ಮುಂಬರುವ EVಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಹುಂಡೈ ಮತ್ತು ಕಿಯಾ ಎರಡಕ್ಕೂ ಸಹಾಯ ಮಾಡುತ್ತದೆ.
  • ಎರಡೂ ಕಾರು ತಯಾರಕರು ಹ್ಯುಂಡೈ ಕ್ರೆಟಾ ಇವಿ ಮತ್ತು ಕಿಯಾ ಇವಿ9ನಂತೆ ಹೆಚ್ಚು EV ಗಳನ್ನು ಪರಿಚಯಿಸಲು ಯೋಜಿಸುತ್ತಿದ್ದಾರೆ.

Hyundai ಮತ್ತು Kiaವು ಭಾರತದಲ್ಲಿ ಹೆಚ್ಚು ಕೈಗೆಟುಕುವ ಮಾಸ್‌-ಮಾರ್ಕೆಟ್‌ EV ಸೆಗ್ಮೆಂಟ್‌ ಅನ್ನು ಪ್ರವೇಶಿಸಲು ತಯಾರಿ ನಡೆಸುತ್ತಿದ್ದು, ಈ ಮೊಡೆಲ್‌ಗಳು 20 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ (ಎಕ್ಸ್ ಶೋರೂಂ) ಬಿಡುಗಡೆ ಮಾಡಲಿದೆ. ಅದೇ ಉದ್ದೇಶಕ್ಕಾಗಿ, ಕೊರಿಯಾದ ಕಾರು ತಯಾರಕರು ಇವಿ ಬ್ಯಾಟರಿ ಪ್ಯಾಕ್‌ಗಳ ಉತ್ಪಾದನೆಯನ್ನು ಸ್ಥಳೀಯವಾಗಿ ಮಾಡಲು ಭಾರತದಲ್ಲಿನ ಬ್ಯಾಟರಿ ತಯಾರಕರಾದ ಎಕ್ಸೈಡ್ ಎನರ್ಜಿ ಸೊಲ್ಯೂಷನ್ಸ್‌ನೊಂದಿಗೆ ಮೆಮೊರಂಡಮ್‌ ಆಫ್‌ ಆಂಡರ್‌ಸ್ಟ್ಯಾಂಡಿಂಗ್‌ಗೆ (MoU) ಸಹಿ ಹಾಕಿದ್ದಾರೆ.

ಭಾರತ ಕೇಂದ್ರಿತವಾಗಿದ್ದರೂ, ಇದು ಜಾಗತಿಕ ಮಟ್ಟದ ಪಾಲುದಾರಿಕೆಯಾಗಿದೆ. ದಕ್ಷಿಣ ಕೊರಿಯಾದಲ್ಲಿ ಈ MoUಗೆ ಸಹಿ ಹಾಕಲಾಗಿದ್ದು, ಈ ಸಂದರ್ಭದಲ್ಲಿ ಹ್ಯುಂಡೈ ಮೋಟಾರ್ ಮತ್ತು ಕಿಯಾದ RD ವಿಭಾಗದ ಅಧ್ಯಕ್ಷ ಮತ್ತು ಮುಖ್ಯಸ್ಥ ಹೆಯು ವಾನ್ ಯಾಂಗ್, ಎಲೆಕ್ಟ್ರಿಫಿಕೇಶನ್ ಎನರ್ಜಿ ಸೊಲ್ಯೂಷನ್ಸ್‌ನ ಮುಖ್ಯಸ್ಥ ಚಾಂಗ್ ಹ್ವಾನ್ ಕಿಮ್, ಎಲೆಕ್ಟ್ರಿಕ್ ವಾಹನ ಬಿಡಿಭಾಗಗಳನ್ನು ಖರೀದಿಸುವ ಸಬ್‌-ಡಿವಿಷನ್‌ನ ಮುಖ್ಯಸ್ಥ ಡ್ಯೂಕ್ ಗ್ಯೋ ಜಿಯೋಂಗ್, ಮತ್ತು ಎಕ್ಸೈಡ್ ಎನರ್ಜಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಂದರ್ ವಿ. ಡಿಯೊ ಉಪಸ್ಥಿತರಿದ್ದರು.

ವೀಕ್ಷಿಸಿ: ಕಿಯಾ EV9 ಎಲೆಕ್ಟ್ರಿಕ್ ಎಸ್‌ಯುವಿಯ ಬೆಲೆಯು ಸುಮಾರು 1 ಕೋಟಿ ರೂಪಾಯಿ ಆಗಲು ಇಲ್ಲಿದೆ 5 ಕಾರಣಗಳು

ಈ ಪಾಲುದಾರಿಕೆಯೊಂದಿಗೆ, ಹ್ಯುಂಡೈ ಮತ್ತು ಕಿಯಾ ತಮ್ಮ ಭವಿಷ್ಯದ ಎಲೆಕ್ಟ್ರಿಕ್ ವಾಹನಗಳಿಗಾಗಿ ಲಿಥಿಯಂ-ಐರನ್-ಫಾಸ್ಫೇಟ್ (LFP) ಬ್ಯಾಟರಿಗಳ ಮೇಲೆ ಕೇಂದ್ರೀಕರಿಸಿ ಸ್ಥಳೀಯವಾಗಿ ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ. ಸದ್ಯಕ್ಕೆ, ಈ ಎರಡು ಬ್ರ್ಯಾಂಡ್‌ಗಳು ಭಾರತದಲ್ಲಿ ಒಟ್ಟು 3 EVಗಳನ್ನು ಹೊಂದಿವೆ ಅವುಗಳೆಂದರೆ ಹುಂಡೈ ಕೋನಾ, ಹುಂಡೈ IONIQ 5 ಮತ್ತು Kia EV6. ಹಾಗೆಯೇ, ಕಿಯಾ EV9 ಪೂರ್ಣ-ಗಾತ್ರದ ಎಲೆಕ್ಟ್ರಿಕ್ ಎಸ್‌ಯುವಿನಂತಹ ಹೆಚ್ಚಿನ ಅಂತರರಾಷ್ಟ್ರೀಯ EVಗಳನ್ನು ದೇಶಕ್ಕೆ ತರಲು ಇಬ್ಬರೂ ಯೋಜಿಸುತ್ತಿದ್ದಾರೆ.

EV ಬ್ಯಾಟರಿಗಳ ಸ್ಥಳೀಯ ಉತ್ಪಾದನೆಯೊಂದಿಗೆ, ಹ್ಯುಂಡೈ ಮತ್ತು ಕಿಯಾ ಎರಡೂ ತಮ್ಮ ಮುಂಬರುವ ಉತ್ಪನ್ನಗಳಿಗೆ ಅತೀ ಕಡಿಮೆ ಬೆಲೆಯಲ್ಲಿ ಬ್ಯಾಟರಿ ಪ್ಯಾಕ್‌ಗಳನ್ನು ಸಿದ್ಧಗೊಳಿಸಲು ಸಾಧ್ಯವಾಗುತ್ತದೆ, ಇದು ಅದರ ಭವಿಷ್ಯದ ಉತ್ಪನ್ನಗಳ ಬೆಲೆಯನ್ನು ಕಡಿಮೆ ಮಾಡುತ್ತದೆ. ನಾವು ಹ್ಯುಂಡೈ ಕ್ರೆಟಾ EV ಯಂತಹ ಸ್ಥಳೀಯ ಎಲೆಕ್ಟ್ರಿಕ್ ಕಾರುಗಳನ್ನು ನಿರೀಕ್ಷಿಸುತ್ತಿದ್ದೇವೆ ಮತ್ತು 2026 ರ ವೇಳೆಗೆ ಆಲ್-ಎಲೆಕ್ಟ್ರಿಕ್ ಕಿಯಾ ಕ್ಯಾರೆನ್ಸ್ MPV ಅನ್ನು ಎದುರು ನೋಡುತ್ತಿದ್ದೇವೆ. ಮುಂಬರುವ ಯಾವ ಹುಂಡೈ-ಕಿಯಾ ಇವಿ ಬಗ್ಗೆ ನೀವು ಉತ್ಸುಕರಾಗಿದ್ದೀರಿ? ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.

a
ಅವರಿಂದ ಪ್ರಕಟಿಸಲಾಗಿದೆ

ansh

  • 121 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your ಕಾಮೆಂಟ್

Read Full News

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
Rs.10.99 - 15.49 ಲಕ್ಷ*
Rs.7.99 - 11.89 ಲಕ್ಷ*
Rs.6.99 - 9.40 ಲಕ್ಷ*
Rs.60.95 - 65.95 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ