Kia Carens ಫೇಸ್‌ಲಿಫ್ಟ್‌ನ ಫೋಟೊಗಳು ಮತ್ತೆ ಲೀಕ್, ಈ ಬಾರಿ 360-ಡಿಗ್ರಿ ಕ್ಯಾಮೆರಾದ ಮಾಹಿತಿ ಬಹಿರಂಗ
ಕಿಯಾ ಕೆರೆನ್ಸ್ 2025 ಗಾಗಿ dipan ಮೂಲಕ ಜೂನ್ 13, 2024 10:02 am ರಂದು ಪ್ರಕಟಿಸಲಾಗಿದೆ
- 27 Views
- ಕಾಮೆಂಟ್ ಅನ್ನು ಬರೆಯಿರಿ
ಮುಂಬರುವ ಕಿಯಾ ಕ್ಯಾರೆನ್ಸ್ ಪ್ರಸ್ತುತ ಲಭ್ಯವಿರುವ ಅದೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ
- ಫೇಸ್‌ಲಿಫ್ಟೆಡ್ ಕಿಯಾ ಕ್ಯಾರೆನ್ಸ್ ಕನೆಕ್ಟೆಡ್ ಎಲ್‌ಇಡಿ ಬಾರ್ ಮತ್ತು ಅಲಾಯ್ ವೀಲ್‌ಗಳೊಂದಿಗೆ ಹೊಸ ಟೈಲ್‌ಲೈಟ್‌ಗಳು ಮತ್ತು ಹೆಡ್‌ಲೈಟ್‌ಗಳನ್ನು ಪಡೆಯುತ್ತದೆ.
- ಸಂಪೂರ್ಣ ಕಪ್ಪು ಅಪ್ಹೋಲ್ಸ್‌ಟೆರಿ ಮತ್ತು ಪ್ರಸ್ತುತ ಮೊಡೆಲ್‌ನ ಅದೇ ಡ್ಯಾಶ್‌ಬೋರ್ಡ್ ವಿನ್ಯಾಸದೊಂದಿಗೆ ಒಂದೇ ರೀತಿಯ ಇಂಟಿರೀಯರ್‌ನ ಫೀಚರ್ ಅನ್ನು ನಿರೀಕ್ಷಿಸಲಾಗಿದೆ.
- ಹೊಸ ಫೀಚರ್‌ಗಳಾದ 360-ಡಿಗ್ರಿ ಕ್ಯಾಮರಾ ಮತ್ತು ಬಹುಶಃ ADAS ಅನ್ನು ಒಳಗೊಂಡಿವೆ.
- ಪ್ರಸ್ತುತ ಮೊಡೆಲ್‌ನಿಂದ ಅದೇ ಡ್ಯುಯಲ್ ಡಿಜಿಟಲ್ ಡಿಸ್‌ಪ್ಲೇಗಳು, ಸಿಂಗಲ್-ಪೇನ್ ಸನ್‌ರೂಫ್ ಮತ್ತು ಆರು ಏರ್‌ಬ್ಯಾಗ್‌ಗಳೊಂದಿಗೆ ಮುಂದುವರಿಯಬಹುದೆಂದು ನಿರೀಕ್ಷಿಸಲಾಗಿದೆ.
- ಭಾರತದಲ್ಲಿ 2025 ರಲ್ಲಿ ಬಿಡುಗಡೆಯಾಗಬಹುದೆಂದು ನಿರೀಕ್ಷಿಸಲಾಗಿದೆ, EV ಆವೃತ್ತಿಯು 2025ರ ದ್ವಿತೀಯಾರ್ಧದಲ್ಲಿ ಬರಲಿದೆ.
2022 ರಿಂದ ದೇಶದಲ್ಲಿ ಮಾರಾಟದಲ್ಲಿರುವ ಕಿಯಾ ಕ್ಯಾರೆನ್ಸ್ ಎಮ್‌ಪಿವಿಯು ಇಲ್ಲಿಯವರೆಗೆ ಕೆಲವು ಆವೃತ್ತಿಗಳು ಮತ್ತು ಫೀಚರ್‌ಗಳ ಆಪ್‌ಡೇಟ್‌ಗಳನ್ನು ಪಡೆದಿದ್ದರೂ, ಇದು ಎಂದಿಗೂ ಸಮಗ್ರ ರಿಫ್ರೆಶ್ ಆಗಿಲ್ಲ. ಆದಾಗಿಯೂ, ಈ ಎಮ್‌ಪಿವಿಯು ಶೀಘ್ರದಲ್ಲೇ ಫೇಸ್‌ಲಿಫ್ಟ್ ಅನ್ನು ಪಡೆಯಲಿದೆ, ಮತ್ತು ಇದರ ಪರೀಕ್ಷಾ ಆವೃತ್ತಿಯು ಈಗ ಭಾರತೀಯ ರಸ್ತೆಗಳಲ್ಲಿ ಕಂಡುಬಂದಿದೆ. ಈ ಬದಲಾವಣೆಗಳನ್ನು ನಾವು ವಿವರವಾಗಿ ನೋಡೋಣ:
ಬದಲಾವಣೆಯ ವಿವರ
ಕ್ಯಾರೆನ್ಸ್‌ನ ಮುಂಭಾಗದ ಭಾಗವು ಭಾಗಶಃ ಗೋಚರಿಸುತ್ತದೆ ಮತ್ತು ಡಿಆರ್‌ಎಲ್‌ನಂತೆ ಕಾರ್ಯನಿರ್ವಹಿಸುವ ಎಲ್‌ಇಡಿ ಲೈಟ್ ಬಾರ್‌ನಿಂದ ಕನೆಕ್ಟ್ ಮಾಡಿ ಬದಲಾವಣೆ ಮಾಡಿದ ಹೆಡ್‌ಲೈಟ್ ಸೆಟಪ್ ಅನ್ನು ಹೊಂದಿದೆ.
ಕ್ಯಾರೆನ್ಸ್‌ನ ಹಿಂಬದಿಯ ಭಾಗವೂ ಸಹ ಗುರುತಿಸಲ್ಪಟ್ಟಿದೆ, ಆದರೆ ಆದನ್ನು ಸಂಪೂರ್ಣವಾಗಿ ಕವರ್ ಮಾಡಲಾಗಿತ್ತು. ಮುಂಬರುವ ಕಿಯಾ EV9ನ ವಿನ್ಯಾಸಕ್ಕೆ ಹೋಲುವ ಹೊಸ ಎಲ್ಇಡಿ ಅಂಶಗಳೊಂದಿಗೆ ಟೈಲ್ ಲೈಟ್‌ಗಳು ಪರಿಷ್ಕೃತಗೊಂಡಂತೆ ಕಂಡುಬರುತ್ತವೆ. ಹೊಸ ಅಲಾಯ್ ವೀಲ್ ವಿನ್ಯಾಸವನ್ನು ಸಹ ಗುರುತಿಸಲಾಗಿದೆ, ಇದು ಮೊದಲಿನ ಗಾತ್ರದಲ್ಲಿಯೇ ಇರುತ್ತದೆ.
ಹೊರಗಿನ ರಿಯರ್‌ವ್ಯೂ ಮಿರರ್‌ಗಳಲ್ಲಿ (ORVMs) ಕ್ಯಾಮೆರಾಗಳನ್ನು ಸಹ ಗಮನಿಸಲಾಗಿದೆ, ಇದು ಈ ಎಮ್‌ಪಿವಿಯಲ್ಲಿ ಮೊದಲ ಬಾರಿಗೆ 360-ಡಿಗ್ರಿ ಸೆಟಪ್ ಇರಬಹುದೆಂದು ಖಾತ್ರಿಪಡಿಸುತ್ತದೆ.
ಒಳಭಾಗವನ್ನು ಹೆಚ್ಚಾಗಿ ಬಹಿರಂಗಪಡಿಸದಿದ್ದರೂ, ಪರೀಕ್ಷಾ ಆವೃತ್ತಿಯ ಸೀಟ್‌ಗಳ ಮೇಲೆ ಕಪ್ಪು ಫ್ಯಾಬ್ರಿಕ್‌ನ ಹೊದಿಕೆಯನ್ನು ಹೊಂದಿದೆ, ಇದು ಪ್ರಸ್ತುತ ಮೊಡೆಲ್‌ನಂತೆ ವೆಂಟಿಲೇಟೆಡ್ ಸೀಟ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ಹಾಗೆಯೇ ಇದು ಸಿಂಗಲ್ ಪೇನ್ ಸನ್‌ರೂಫ್ ಅನ್ನು ಸಹ ಪಡೆಯುತ್ತದೆ.
ನಿರೀಕ್ಷಿತ ಇಂಟಿರೀಯರ್‌ಗಳು ಮತ್ತು ಫೀಚರ್‌ಗಳು
ಮೇಲೆ ತಿಳಿಸಲಾದ ಇಂಟಿರೀಯರ್ ಬದಲಾವಣೆಗಳ ಜೊತೆಗೆ, ಎಮ್‌ಪಿವಿಯು ಮರುವಿನ್ಯಾಸಗೊಳಿಸಲಾದ ಎಸಿ ಪ್ಯಾನೆಲ್ ಮತ್ತು ವಿಭಿನ್ನ ಸೀಟ್ ಕವರ್ ಅನ್ನು ಪಡೆಯುವ ನಿರೀಕ್ಷೆಯಿದೆ. ಇದು ತನ್ನ ಪ್ರಸ್ತುತ ಲಭ್ಯವಿರುವ 6- ಮತ್ತು 7-ಸೀಟ್ ವಿನ್ಯಾಸವನ್ನು ಮುಂದುವರೆಸುವ ನಿರೀಕ್ಷೆಯಿದೆ. ಕ್ಯಾರೆನ್ಸ್ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಸೂಟ್ ಅನ್ನು ಸ್ವೀಕರಿಸುವ ನಿರೀಕ್ಷೆಯಿದೆ, ಏಕೆಂದರೆ ಇದು ಪ್ರಸ್ತುತ ಭಾರತದಲ್ಲಿ ADAS ಇಲ್ಲದ ಏಕೈಕ ಕಿಯಾ ಕಾರು ಆಗಿದೆ.
ಕ್ಯಾರೆನ್ಸ್ ಈಗಾಗಲೇ ಎರಡು 10.25-ಇಂಚಿನ ಡಿಸ್‌ಪ್ಲೇ (ಒಂದು ಇನ್ಸ್ಟ್ರುಮೆಂಟೇಶನ್‌ಗಾಗಿ ಮತ್ತು ಇನ್ನೊಂದು ಇನ್ಫೋಟೈನ್ಮೆಂಟ್‌ಗಾಗಿ), ವಯರ್‌ಲೆಸ್ ಫೋನ್ ಚಾರ್ಜಿಂಗ್, ವೇಂಟಿಲೇಟೆಡ್ ಫ್ರಂಟ್ ಸೀಟುಗಳು ಮತ್ತು ಸನ್‌ರೂಫ್‌ಗಳೊಂದಿಗೆ ಬರುತ್ತದೆ. ಸುರಕ್ಷತೆಯ ಭಾಗವನ್ನು ಗಮನಿಸುವಾಗ, ಇದು ಆರು ಏರ್‌ಬ್ಯಾಗ್‌ಗಳನ್ನು (ಎಲ್ಲಾ ಆವೃತ್ತಿಗಳಲ್ಲಿ), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ.
ಪವರ್‌ಟ್ರೇನ್ ಆಯ್ಕೆಗಳು
ಈ ಸಮಯದಲ್ಲಿ ಅದರ ಪವರ್‌ಟ್ರೇನ್ ಆಯ್ಕೆಗಳ ಬಗ್ಗೆ ವಿವರಗಳು ವಿರಳವಾಗಿದ್ದರೂ, ಫೇಸ್‌ಲಿಫ್ಟೆಡ್ ಕ್ಯಾರೆನ್ಸ್ ಪ್ರಸ್ತುತ ಇಂಡಿಯಾ-ಸ್ಪೆಕ್ ಮಾದರಿಯ ಅದೇ ಎಂಜಿನ್ ಆಯ್ಕೆಗಳನ್ನು ಉಳಿಸಿಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಕೆಳಗಿನ ಆಯ್ಕೆಗಳನ್ನು ಪಡೆಯುತ್ತದೆ:
ಎಂಜಿನ್ |
1.5-ಲೀಟರ್ ಎನ್/ಎ ಪೆಟ್ರೋಲ್ |
1.5-ಲೀಟರ್ ಟರ್ಬೋ ಪೆಟ್ರೋಲ್ |
1.5-lಲೀಟರ್ ಡೀಸೆಲ್ |
ಪವರ್ |
115 ಪಿಎಸ್ |
160 ಪಿಎಸ್ |
116 ಪಿಎಸ್ |
ಟಾರ್ಕ್ |
144 ಎನ್‌ಎಮ್ |
253 ಎನ್‌ಎಮ್ |
250 ಎನ್‌ಎಮ್ |
ಗೇರ್‌ಬಾಕ್ಸ್ |
6-ಸ್ಪೀಡ್ ಮ್ಯಾನುಯಲ್ |
7-ಸ್ಪೀಡ್ ಡಿಸಿಟಿ/6-ಸ್ಪೀಡ್ ಐ-ಎಮ್‌ಟಿ |
6-ಸ್ಪೀಡ್ ಮ್ಯಾನುಯಲ್/6-ಸ್ಪೀಡ್ ಐ-ಎಮ್‌ಟಿ/6-ಸ್ಪೀಡ್ ಆಟೋಮ್ಯಾಟಿಕ್ |
* ಡಿಸಿಟಿ - ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್
^ ಐ-ಎಮ್‌ಟಿ - ಇಂಟೆಲಿಜೆಂಟ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ (ಕ್ಲಚ್-ಲೆಸ್ ಮ್ಯಾನ್ಯುವಲ್ ಗೇರ್ ಬಾಕ್ಸ್)
ಕಿಯಾ 2025 ರ ದ್ವಿತೀಯಾರ್ಧದಲ್ಲಿ 400 ಕಿಮೀ ರೇಂಜ್ ಅನ್ನು ಹೊಂದಿರುವ ಕ್ಯಾರೆನ್ಸ್ ಇವಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಕಿಯಾ ಕ್ಯಾರೆನ್ಸ್ ಫೇಸ್‌ಲಿಫ್ಟ್ 2025 ರಲ್ಲಿ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ ಮತ್ತು ಪ್ರಸ್ತುತ ಮೊಡೆಲ್‌ಗಿಂತ ಬೆಲೆಯು ಹೆಚ್ಚಿರಲಿದೆ. ಪ್ರಸ್ತುತ ಲಭ್ಯವಿರುವ ಮೊಡೆಲ್‌ನ ಬೆಲೆಯು 10.52 ಲಕ್ಷ ರೂ.ನಿಂದ 19.22 ಲಕ್ಷ ರೂ.ವಿನ (ಎಕ್ಸ್ ಶೋರೂಂ-ದೆಹಲಿ) ನಡುವೆ ಇದೆ. ಇದು ಮಾರುಕಟ್ಟೆಯಲ್ಲಿ ಮಾರುತಿ ಎರ್ಟಿಗಾ, ಟೊಯೊಟಾ ರೂಮಿಯಾನ್ ಮತ್ತು ಮಾರುತಿ ಎಕ್ಸ್‌ಎಲ್ 6 ವಿರುದ್ಧ ಸ್ಪರ್ಧಿಸುತ್ತದೆ. ಇದು ಟೊಯೊಟಾ ಇನ್ನೋವಾ ಹೈಕ್ರಾಸ್, ಟೊಯೊಟಾ ಇನ್ನೋವಾ ಕ್ರಿಸ್ಟಾ ಮತ್ತು ಮಾರುತಿ ಇನ್ವಿಕ್ಟೊಗೆ ಹೆಚ್ಚು ಕೈಗೆಟುಕುವ ಪರ್ಯಾಯವಾಗಿದೆ.
ಇನ್ನಷ್ಟು ಓದಿ : ಕ್ಯಾರೆನ್ಸ್ ಡೀಸೆಲ್