ಸನ್‌ರೂಫ್ ಹೊಂದಿರುವ Kia Sonet ಈಗ ಇನ್ನಷ್ಟು ಕೈಗೆಟಕುವ ಬೆಲೆಯಲ್ಲಿ
ಕಿಯಾ ಸೊನೆಟ ್ 2020-2024 ಗಾಗಿ rohit ಮೂಲಕ ಆಗಸ್ಟ್ 29, 2023 07:03 pm ರಂದು ಪ್ರಕಟಿಸಲಾಗಿದೆ
- 36 Views
- ಕಾಮೆಂಟ್ ಅನ್ನು ಬರೆಯಿರಿ
ಸನ್‌ರೂಫ್ ಅನ್ನು ಈ ಹಿಂದೆ ಇದೇ ವೇರಿಯೆಂಟ್‌ನಲ್ಲಿ ಟರ್ಬೋ-ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡಲಾಗಿತ್ತು.
- ಕಿಯಾ ಸೊನೆಟ್ ಅನ್ನು 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಕೇವಲ ಮೂರು ವೇರಿಯೆಂಟ್‌ಗಳಲ್ಲಿ ನೀಡುತ್ತಿದೆ: HTE, HTK ಮತ್ತು HTK+.
- 1.2 ಲೀಟರ್ ಪೆಟ್ರೋಲ್ HTK+ ವೇರಿಯೆಂಟ್ ಈಗ ಸನ್‌ರೂಫ್ ಅನ್ನು ಪಡೆಯುತ್ತಿದ್ದು ಅದರ ಬೆಲೆಯು ರೂ. 9.76 ಲಕ್ಷ ಆಗಿರುತ್ತದೆ.
- ಈ ಸೊನೆಟ್ HTK+ ಆಟೋ ಎಸಿ, 8-ಇಂಚಿನ ಟಚ್‌ಸ್ಕ್ರೀನ್ ಮತ್ತು ನಾಲ್ಕು ಏರ್‌ಬ್ಯಾಗ್‌ಗಳನ್ನು ಪಡೆಯುತ್ತದೆ.
- 1.2-ಲೀಟರ್ ಯೂನಿಟ್ ಹೊರತಾಗಿ, ಸೊನೆಟ್ 1-ಲೀಟರ್ ಟರ್ಬೋ-ಪೆಟ್ರೋಲ್ ಮತ್ತು 1.5-ಲೀಟರ್ ಡಿಸೇಲ್ ಎಂಜಿನ್ ಅನ್ನು ಪಡೆಯುತ್ತದೆ.
- ಈ sub-4m ಎಸ್‌ಯುವಿಯ ಬೆಲೆಗಳು ರೂ. 7.79 ಲಕ್ಷದಿಂದ ರೂ. 14.89 ಲಕ್ಷ ರೇಂಜ್‌ನಲ್ಲಿವೆ.
ಈ ಕಿಯಾ ಸೊನೆಟ್ ಒಂದು ಸಣ್ಣ ಫೀಚರ್ ಅಪ್‌ಡೇಟ್ ಅನ್ನು ಪಡೆದಿದ್ದು, ಇದು ಸಿಂಗಲ್-ಪೇನ್ ಸನ್‌ರೂಫ್ ಅನ್ನು ಹೆಚ್ಚು ಕೈಗೆಟುಕವಂತೆ ಮಾಡುತ್ತದೆ. ಈಗ ಇದು HTK+ ವೇರಿಯೆಂಟ್‌ನೊಂದಿಗೆ 1.2-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ರೂ. 9.76 ಲಕ್ಷ (ಎಕ್ಸ್-ಶೋರೂಮ್) ಬೆಲೆಯಲ್ಲಿ ಲಭ್ಯವಿದೆ. ಈ ಎಂಜಿನ್ ಅನ್ನು ನೀಡಲಾದ ಇತರ ಸೊನೆಟ್ ವೇರಿಯೆಂಟ್‌ಗಳೆಂದರೆ HTE ಮತ್ತು HTK. 1-ಲೀಟರ್ ಟರ್ಬೋ-ಪೆಟ್ರೋಲ್‌ನೊಂದಿಗೆ ಅನುಗುಣವಾದ ವೇರಿಯೆಂಟ್ ಈಗಾಗಲೇ ಸನ್‌ರೂಫ್ ಅನ್ನು ಪಡೆದುಕೊಂಡಿದೆ. ಇದು ಸನ್‌ರೂಫ್ ಹೊಂದಿರುವ ಸೊನೆಟ್ ಅನ್ನು ರೂ. 70000 ರಷ್ಟು ಕಡಿಮೆ ಕೈಗೆಟಕುವಂತೆ ಮಾಡಿದೆ.
ಇನ್ನೇನಾದರೂ ಬದಲಾವಣೆಯಿದೆಯೇ?
HTK+ 1.2-ಲೀಟರ್ ಪೆಟ್ರೋಲ್ ವೇರಿಯೆಂಟ್‌ಗೆ ಸನ್‌ರೂಫ್ ಅನ್ನು ಸೇರಿಸುವುದರ ಹೊರತಾಗಿ, ಕಿಯಾ ಈ ಎಸ್‌ಯುವಿಯ ಸಲಕರಣಾ ಪಟ್ಟಿಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಈ ಸೊನೆಟ್ 1.2-ಲೀಟರ್ HTK+ ಇನ್ನೂ ಆಟೋ ಹೆಡ್‌ಲೈಟ್‌ಗಳು, ಆಟೋ ಎಸಿ, 8-ಇಂಚಿನ ಟಚ್‌ಸ್ಕ್ರೀನ್ ಯೂನಿಟ್, ಎತ್ತರ-ಹೊಂದಿಸಬಹುದಾದ ಡ್ರೈವರ್ ಸೀಟ್ ಮತ್ತು ಕೀರಹಿತ ಪ್ರವೇಶದಂತಹ ಫೀಚರ್‌ಗಳನ್ನು ಪಡೆಯುತ್ತದೆ.
ಈ sub-4m ಕಿಯಾ ಎಸ್‌ಯುವಿಯ ಹೆಚ್ಚಿನ ವೇರಿಯೆಂಟ್‌ಗಳು ದೊಡ್ಡ 10.25-ಇಂಚಿನ ಟಚ್‌ಸ್ಕ್ರೀನ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಮುಂಭಾಗದ ಸೀಟುಗಳು ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಪಡೆದಿವೆ.
ಸುರಕ್ಷತೆಯ ದೃಷ್ಟಿಯಿಂದ ನಾಲ್ಕು ಏರ್‌ಬ್ಯಾಗ್‌ಗಳು, ABS ಜೊತೆ EBD, ಟೈರ್ ಪ್ರೇಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹಿಂಭಾಗದ ಡಿಫಾಗರ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮಾರಾವನ್ನು ನೀಡಲಾಗಿದೆ. ಹೈಯರ್ ವೇರಿಯೆಂಟ್‌ಗಳು ಆರು ಏರ್‌ಬ್ಯಾಗ್‌ಗಳು, ಆಟೋ-ಡಿಮ್ಮಿಂಗ್ IRVM ಮತ್ತು ಹಿಂಭಾಗದ ವೈಪರ್ ಮತ್ತು ವಾಷರ್‌ಗಳನ್ನು ಪಡೆದಿವೆ.
ಇದನ್ನೂ ಓದಿ: ಪರೀಕ್ಷಾ ವೇಳೆಯಲ್ಲಿ ಮತ್ತೊಮ್ಮೆ ಕಂಡುಬಂದ ನವೀಕೃತ ಕಿಯಾ ಸೊನೆಟ್; 2024 ಆರಂಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆ
ಅದೇ ಎಂಜಿನ್‌ಗಳು
ಕಿಯಾ ಸೊನೆಟ್ ಮೂರು ಎಂಜಿನ್ ಆಯ್ಕೆಗಳನ್ನು ನೀಡುತ್ತಿದೆ: 1-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ (120PS/172Nm), 1.2-ಲೀಟರ್ ಪೆಟ್ರೋಲ್ ಎಂಜಿನ್ (83PS/115Nm) ಮತ್ತು 1.5-ಲೀಟರ್ ಡಿಸೇಲ್ ಯೂನಿಟ್ (115PS/250Nm). ಈ ಟರ್ಬೋ-ಪೆಟ್ರೋಲ್ ಎಂಜಿನ್ 6-ಸ್ಪೀಡ್ iMT (ಕ್ಲಚ್-ರಹಿತ ಮ್ಯಾನ್ಯುವಲ್) ಅಥವಾ 7-ಸ್ಪೀಡ್ DCT (ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್) ನೊಂದಿಗೆ ಜೊತೆಯಾಗಿದೆ, 5-ಸ್ಪೀಡ್ ಮ್ಯಾನ್ಯುವಲ್ 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿದೆ, ಮತ್ತು ಡೀಸೇಲ್ ಯೂನಿಟ್ 6-ಸ್ಪೀಡ್ iMT ಅಥವಾ 6-ಸ್ಪೀಡ್ ಆಟೋಮ್ಯಾಟಿಕ್‌ನೊಂದಿಗೆ ಜೊತೆಯಾಗಿದೆ. ಕಿಯಾ ಎಲ್ಲಾ ಮೂರು ಎಂಜಿನ್‌ಗಳಿಗೆ ಕೇವಲ ಮ್ಯಾನ್ಯುವಲ್ ಮತ್ತು iMT ಆಯ್ಕೆಗಳೊಂದಿಗೆ HTK+ ವೇರಿಯೆಂಟ್ ಅನ್ನು ನೀಡುತ್ತಿದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಕಿಯಾ ತನ್ನ sub-4m ಎಸ್‌ಯುವಿ ಅನ್ನು ರೂ. 7.79 ಲಕ್ಷದಿಂದ ರೂ. 14.89 ಲಕ್ಷದ (ಎಕ್ಸ್-ಶೋರೂಮ್ ದೆಹಲಿ) ನಡುವೆ ಮಾರಾಟ ಮಾಡುತ್ತಿದೆ. ಈ ಸೊನೆಟ್ ಟಾಟಾ ನೆಕ್ಸಾನ್, ನಿಸಾನ್ ಮ್ಯಾಗ್ನೈಟ್, ಹ್ಯುಂಡೈ ವೆನ್ಯು, ಮಹೀಂದ್ರಾ XUV300, ಮಾರುತಿ ಬ್ರೆಝಾ, ರೆನಾಲ್ಟ್ ಕೈಗರ್, ಮತ್ತು sub-4m ಕ್ರಾಸ್ಓವರ್, ಮಾರುತಿ ಫ್ರಾಂಕ್ಸ್‌ಗೆ ಪ್ರತಿಸ್ಪರ್ಧೆಯನ್ನೊಡ್ಡುತ್ತದೆ.
ಇನ್ನಷ್ಟು ಇಲ್ಲಿ ಓದಿ : ಸೊನೆಟ್ ಡಿಸೇಲ್