Lamborghini ಪ್ರಸ್ತುತಪಡಿಸುತ್ತಿದೆ Urus SE - 800 ಪಿಎಸ್ ಶಕ್ತಿಯ ಹೈಬ್ರಿಡ್ ಸ್ಪೋರ್ಟ್ಸ್ ಎಸ್‌ಯುವಿ
ಇದು 29.5 kWh ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟಾರ್‌ಗಳೊಂದಿಗೆ ಶಕ್ತಿಯುತ 4-ಲೀಟರ್ V8 ಎಂಜಿನ್ ಹೊಂದಿದೆ. ಇದು ಕೇವಲ 3.4 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿಲೋಮೀಟರ್‌ಗಳವರೆಗೆ ತಲುಪುತ್ತದೆ.
- ಇದು 620 PS ಮತ್ತು 800 Nm ನೀಡುವ 4-ಲೀಟರ್ V8 ಅನ್ನು ಪಡೆಯುತ್ತದೆ.
- ಹೆಚ್ಚುವರಿ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿರುವ ಇದು 800 PS ಮತ್ತು 950 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
- ಇದು ಕೇವಲ ವಿದ್ಯುತ್‌ನೊಂದಿಗೆ ಆಲ್-ವೀಲ್ ಡ್ರೈವ್ ಬಳಸಿ 60 ಕಿಲೋಮೀಟರ್‌ಗಳವರೆಗೆ ಓಡುತ್ತದೆ.
- ಉರುಸ್ SE ಒಳಭಾಗದಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಲಾಗಿದೆ ಮತ್ತು ದೊಡ್ಡ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ನೀಡಲಾಗಿದೆ.
- 2025 ರ ಮೊದಲ ಭಾಗದಲ್ಲಿ ಭಾರತದ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ.
ಲಂಬೋರ್ಘಿನಿ ಉರುಸ್ SE ಅನ್ನು ಮೊದಲ ಪ್ಲಗ್-ಇನ್ ಹೈಬ್ರಿಡ್ ಸ್ಪೋರ್ಟ್ಸ್ SUVಯಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಾಗಿದೆ ಮತ್ತು ಇದು ಟ್ವಿನ್-ಟರ್ಬೊ V8 ಎಂಜಿನ್‌ನೊಂದಿಗೆ ಶಕ್ತಿಶಾಲಿ 800 PS ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಬರುತ್ತದೆ. ಉರುಸ್ SE ಕೆಲವು ಹೊಸ ಅಪ್ಡೇಟ್ ಗಳನ್ನು ಕೂಡ ಪಡೆದುಕೊಂಡಿದೆ, ಅದರ ಎಲ್ಲಾ ವಿವರಗಳು ಇಲ್ಲಿವೆ:
ಪವರ್‌ಟ್ರೇನ್
ಲಂಬೋರ್ಘಿನಿ ಈಗ ತನ್ನ ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಗೆ ತರುತ್ತಿದೆ ಮತ್ತು ಅದರ ಅತ್ಯಂತ ಜನಪ್ರಿಯ ಮಾಡೆಲ್ ಕೂಡ ಈ ಅಪ್ಡೇಟ್ ಅನ್ನು ಪಡೆಯುತ್ತಿದೆ. ಉರುಸ್ SE ಇಲ್ಲಿ ಕೂಡ ತನ್ನ ಶಕ್ತಿಶಾಲಿ 4-ಲೀಟರ್ ಟರ್ಬೋಚಾರ್ಜ್ ಆಗಿರುವ V8 ಎಂಜಿನ್ ಅನ್ನು ಬಳಸುತ್ತದೆ, ಆದರೆ ಇದು ಈಗ 620 PS ಮತ್ತು 800 Nm ಟಾರ್ಕ್ ಅನ್ನು ನೀಡುತ್ತದೆ. ಇದನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ ಮತ್ತು ಆಲ್-ವೀಲ್-ಡ್ರೈವ್ ಸಿಸ್ಟಮ್‌ಗೆ ಕನೆಕ್ಟ್ ಮಾಡಲಾಗಿದೆ. ಈ ಎಂಜಿನ್ ಗೆ ಹೈಬ್ರಿಡ್ ಸಿಸ್ಟಮ್ ಅನ್ನು ಸೇರಿಸಲಾಗಿದೆ. ಇದು ದೊಡ್ಡ ಬ್ಯಾಟರಿ ಮತ್ತು ವಿದ್ಯುತ್ ಮೋಟರ್ ಅನ್ನು ಹೊಂದಿದೆ. ಇದನ್ನು ಎಂಜಿನ್‌ನೊಂದಿಗೆ ಜೋಡಿಸಿದಾಗ, ಈ ಹೈಬ್ರಿಡ್ ಸೆಟಪ್ ಕಾರಿಗೆ 800 PS ಮತ್ತು 950 Nm ಟಾರ್ಕ್ ನೀಡುತ್ತದೆ.
ಇದನ್ನು ಕೂಡ ಓದಿ: 2024 ಜೀಪ್ ರಾಂಗ್ಲರ್ ಮಾರುಕಟ್ಟೆಗೆ, ಬೆಲೆಯು ರೂ 67.65 ಲಕ್ಷದಿಂದ ಪ್ರಾರಂಭ
ಈ ಇಟಾಲಿಯನ್ ಬ್ರಾಂಡ್ ನ ಹೊಸ ಉರುಸ್ SE ಕೇವಲ 3.4 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿಲೋಮೀಟರ್ ವೇಗವನ್ನು ತಲುಪುತ್ತದೆ, ಇದು ಉರಸ್ S ಗಿಂತ 0.1 ಸೆಕೆಂಡುಗಳಷ್ಟು ಹೆಚ್ಚು ವೇಗವಾಗಿದೆ. ಇದರ ಜೊತೆಗೆ, ಇದು ಪ್ಲಗ್-ಇನ್ ಹೈಬ್ರಿಡ್ ಆಗಿರುವುದರಿಂದ, ಸಂಪೂರ್ಣವಾಗಿ ಎಲೆಕ್ಟ್ರಿಕ್ ಆಗಿ ಓಡುತ್ತದೆ. ಈ ಮೋಡ್ ನಲ್ಲಿ, ಇದು ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿ 60 ಕಿಲೋಮೀಟರ್‌ಗಳವರೆಗೆ ಹೋಗಬಹುದು. ವಿದ್ಯುತ್ ಮೋಟರ್ ಅನ್ನು ಟ್ರಾನ್ಸ್‌ಮಿಷನ್ ಒಳಗೆ ಇಟ್ಟಿರುವ ಕಾರಣ, ಅದು ತನ್ನ ಶಕ್ತಿಯನ್ನು (192 PS / 483 Nm) ಎಲ್ಲಾ ನಾಲ್ಕು ಚಕ್ರಗಳಿಗೆ ನೀಡುತ್ತದೆ.
ಡಿಸೈನ್
ಕಾರುಗಳ ಬಗ್ಗೆ ಹೆಚ್ಚು ತಿಳಿಯದವರಿಗೆ, ಉರಸ್ SE ಉರಸ್ S ನಂತೆ ಕಾಣುತ್ತದೆ. ಆದರೆ, ಕಂಪನಿಯು ಕೆಲವು ಸಣ್ಣ ಬದಲಾವಣೆಗಳನ್ನು ಮಾಡಿದೆ. ಮೊದಲನೆಯದಾಗಿ, ಉರುಸ್ SE ಏರ್ ಸ್ಕೂಪ್‌ಗಳಿಲ್ಲದೆ ಸಣ್ಣ ಮಟ್ಟಿಗೆ ರೀಡಿಸೈನ್ ಮಾಡಲಾದ ಬೊನೆಟ್ ಅನ್ನು ಹೊಂದಿದೆ ಮತ್ತು ಹೆಡ್‌ಲೈಟ್‌ನಲ್ಲಿ DRL ಗಳಿಗೆ ಹೊಸ ಡಿಸೈನ್ ಅನ್ನು ನೀಡಲಾಗಿದೆ. ಸಾಂಪ್ರದಾಯಿಕ Y-ಸಿಗ್ನೇಚರ್ ಬದಲಿಗೆ, ಈಗ C- ಆಕಾರದ ಔಟ್ ಲೈನ್ ಅನ್ನು ನೀಡಲಾಗಿದೆ. ಮುಂಭಾಗದ ಗ್ರಿಲ್ ಮತ್ತು ಬಂಪರ್ ಅನ್ನು ಕೂಡ ಸ್ವಲ್ಪ ಮರುವಿನ್ಯಾಸಗೊಳಿಸಲಾಗಿದೆ.
ಸೈಡ್ ಗಳಲ್ಲಿ ಉರುಸ್ SE ಗೆ ಹೊಚ್ಚ ಹೊಸ ಆಲ್-ಬ್ಲಾಕ್ ವೀಲ್ ಗಳನ್ನು ನೀವು ನೋಡಬಹುದು. ಇದು 21 ಇಂಚುಗಳಿಂದ 23 ಇಂಚುಗಳವರೆಗಿನ ವಿವಿಧ ವೀಲ್ ಆಯ್ಕೆಗಳನ್ನು ಕೂಡ ನೀಡುತ್ತದೆ. ಹಿಂಭಾಗದಲ್ಲಿ, ಹೊಸ ಬೂಟ್ ಲಿಪ್ ಮತ್ತು ವಿಭಿನ್ನ ಬಂಪರ್ ಮತ್ತು ಡಿಫ್ಯೂಸರ್ ಸೇರಿದಂತೆ ದೊಡ್ಡ ಡಿಸೈನ್ ಬದಲಾವಣೆಗಳನ್ನು ಮಾಡಲಾಗಿದೆ. ಲಂಬೋರ್ಘಿನಿ ಹೇಳುವಂತೆ ಈ ಹೊಸ ವಿನ್ಯಾಸಗಳಲ್ಲಿ ಹೆಚ್ಚಿನವುಗಳು ರೆವಲ್ಟೊ ನಿಂದ ಸ್ಫೂರ್ತಿ ಪಡೆದಿವೆ.
ಹಿಂಭಾಗದಲ್ಲಿ ಮಾಡಿರುವ ಬದಲಾವಣೆಗಳಿಂದ ಇದನ್ನು ಉರುಸ್ S ಗೆ ಹೋಲಿಸಿದರೆ ಹೆಚ್ಚಿನ ವೇಗದಲ್ಲಿ ಕೆಳಮುಖ ಶಕ್ತಿಯನ್ನು 35 ಪ್ರತಿಶತದಷ್ಟು ಇದು ಹೆಚ್ಚಿಸುತ್ತದೆ.
ಕ್ಯಾಬಿನ್ ಮತ್ತು ಫೀಚರ್ ಗಳು
ಉರುಸ್ SE ನ ಕ್ಯಾಬಿನ್ ಕೂಡ ರೆವಲ್ಟೊ ನಿಂದ ಸ್ಫೂರ್ತಿ ಪಡೆದಿದೆ ಮತ್ತು ಸ್ವಲ್ಪ ವಿಭಿನ್ನವಾದ ಡ್ಯಾಶ್‌ಬೋರ್ಡ್ ಅನ್ನು ಹೊಂದಿದೆ. ಜೊತೆಗೆ ಡ್ಯಾಶ್‌ಬೋರ್ಡ್, ಡೋರ್ ಗಳು ಮತ್ತು ಸೆಂಟರ್ ಕನ್ಸೋಲ್‌ನಲ್ಲಿ ಆರೆಂಜ್ ಅಕ್ಸೆಂಟ್ ಗಳನ್ನು ನೀಡಲಾಗಿದೆ. ಕ್ಯಾಬಿನ್ ಡಿಸೈನ್ ನಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗಿಲ್ಲ, ಆದರೆ ಡ್ಯಾಶ್‌ಬೋರ್ಡ್ ಅನ್ನು ದೊಡ್ಡ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಗಾಗಿ ಮರುಹೊಂದಿಸಲಾಗಿದೆ. ಕಾರಿನ ಒಳಭಾಗವನ್ನು ವಿವಿಧ ಬಣ್ಣಗಳಲ್ಲಿ ಆಯ್ಕೆ ಮಾಡಬಹುದು ಮತ್ತು ಖರೀದಿದಾರರು ತಮ್ಮ ಇಷ್ಟದಂತೆ ಅದನ್ನು ವೈಯಕ್ತೀಕರಿಸಬಹುದು.
ಇದನ್ನು ಕೂಡ ಓದಿ: BYD ಸೀಲ್ ಪ್ರೀಮಿಯಂ ರೇಂಜ್ ವರ್ಸಸ್ ಹುಂಡೈ ಅಯೋನಿಕ್ 5: ಸ್ಪೆಸಿಫಿಕೇಷನ್ ಗಳ ಹೋಲಿಕೆ
ಹೊಸ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನ ಜೊತೆಗೆ, ಉರುಸ್ SE 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಮಲ್ಟಿ-ಜೋನ್ ಕ್ಲೈಮೇಟ್ ಕಂಟ್ರೋಲ್, ಪವರ್ಡ್ ಸೀಟ್ ಗಳು, ವೆಂಟಿಲೇಟೆಡ್ ಸೀಟ್ ಗಳು ಮತ್ತು ಪನೋರಮಿಕ್ ಸನ್‌ರೂಫ್ ಅನ್ನು ಕೂಡ ಪಡೆಯುತ್ತದೆ. ಸುರಕ್ಷತೆಯ ವಿಷಯದಲ್ಲಿ, ಎಸ್ಯೂಮ್ ಕ್ಲೆವರ್ ಟ್ರಾಕ್ಷನ್ ಮತ್ತು ಸ್ಟೆಬಿಲಿಟಿ ಕಂಟ್ರೋಲ್ ಸಿಸ್ಟಮ್ ಗಳು, ಮಲ್ಟಿಪಲ್ ಏರ್‌ಬ್ಯಾಗ್‌ಗಳ ಜೊತೆಗೆ ರಿಯರ್‌ವ್ಯೂ ಕ್ಯಾಮೆರಾ ಮತ್ತು ಡ್ರೈವ್ ಅಸ್ಸಿಸ್ಟಂಸ್ ಫೀಚರ್ ಗಳಂತಹ ಐಚ್ಛಿಕ ಹೆಚ್ಚುವರಿ ಫೀಚರ್ ಗಳನ್ನು ಕೂಡ ಪಡೆಯಬಹುದು.
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಲಾಂಚ್
ಲಂಬೋರ್ಘಿನಿ ಉರುಸ್ SE ಮುಂಬರುವ ತಿಂಗಳುಗಳಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಮತ್ತು ಒಂದು ವರ್ಷದೊಳಗೆ ಭಾರತೀಯ ಮಾರುಕಟ್ಟೆಯಲ್ಲಿ ಇದನ್ನು ನಿರೀಕ್ಷಿಸಬಹುದು. ಭಾರತದಲ್ಲಿ ಬಿಡುಗಡೆಯಾದಾಗ, ಉರುಸ್ SE ಬೆಲೆಯು ರೂ. 4.5 ಕೋಟಿಯಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ.
ಇನ್ನಷ್ಟು ಓದಿ: ಲಂಬೋರ್ಘಿನಿ ಉರುಸ್ ಆಟೋಮ್ಯಾಟಿಕ್