ಮಾರುಕಟ್ಟೆಗೆ Tata Punch EV ಲಗ್ಗೆ; ಬೆಲೆಗಳು ರೂ 10.99 ಲಕ್ಷದಿಂದ ಪ್ರಾರಂಭ
ಟಾಟಾ ಪಂಚ್ ಇವಿ ಗಾಗಿ ansh ಮೂಲಕ ಜನವರಿ 17, 2024 04:19 pm ರಂದು ಪ್ರಕಟಿಸಲಾಗಿದೆ
- 190 Views
- ಕಾಮೆಂಟ್ ಅನ್ನು ಬರೆಯಿರಿ
ಪಂಚ್ EV ಯು 25kWh ಮತ್ತು 35kWh ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ, ಮತ್ತು 421 ಕಿಮೀ ವ್ಯಾಪ್ತಿಯನ್ನು ಪಡೆಯುತ್ತದೆ.
- ಅಗಲವಾಗಿರುವ ಎಲ್‌ಇಡಿ ಡಿಆರ್‌ಎಲ್‌ಗಳು, ಏರೋಡೈನಾಮಿಕ್ ಆಲಾಯ್ ವೀಲ್‌ಗಳು ಮತ್ತು ಲಂಬವಾಗಿ ಇರಿಸಲಾದ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಪಡೆಯುತ್ತದೆ.
- ಕ್ಯಾಬಿನ್ ಡ್ಯುಯಲ್-ಟೋನ್ ಥೀಮ್, ಡ್ಯುಯಲ್ 10.25-ಇಂಚಿನ ಡಿಸ್‌ಪ್ಲೇಗಳು ಮತ್ತು ಲೆಥೆರೆಟ್ ಆಪ್‌ಹೋಲ್ಸ್‌ಟೆರಿಯನ್ನು ಪಡೆಯುತ್ತದೆ.
- ಸೌಕರ್ಯಗಳಲ್ಲಿ ವೇಂಟಿಲೇಶನ್ ಹೊಂದಿರುವ ಮುಂಭಾಗದ ಆಸನಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಟಚ್‌ನಲ್ಲಿ ಆಕ್ಟಿವ್ ಮಾಡಬಹುದಾದ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್‌ಗಳು ಸೇರಿವೆ.
- ಪರಿಚಯಾತ್ಮಕ, ಎಕ್ಸ್ ಶೋ ರೂಂ ಬೆಲೆಗಳು 10.99 ಲಕ್ಷ ರೂ.ನಿಂದ 14.49 ಲಕ್ಷ ರೂ.ವರೆಗೆ ಇರಲಿದೆ.
ಸುದೀರ್ಘ ಕಾಯುವಿಕೆಯ ನಂತರ ಟಾಟಾ ಪಂಚ್ EV ಅನ್ನು ಬಿಡುಗಡೆ ಮಾಡಲಾಗಿದೆ ಮತ್ತು ಅದರ ಪರಿಚಯಾತ್ಮಕ, ಎಕ್ಸ್ ಶೋ ರೂಂ ಬೆಲೆಗಳು 10.99 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ. ಎಲೆಕ್ಟ್ರಿಕ್ ಮೈಕ್ರೋ-ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಮೊದಲನೆಯದಾಗಿರುವ ಇದು, ಫೇಸ್‌ಲಿಫ್ಟೆಡ್ ಟಾಟಾ ನೆಕ್ಸಾನ್ ಇವಿಯಿಂದ ವಿನ್ಯಾಸ ಸೂಚನೆಗಳನ್ನು ಪಡೆಯುತ್ತದೆ. ಇದು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ, ಇದರೊಂದಿಗೆ ಪ್ರೀಮಿಯಂ ಕ್ರಿಯೇಚರ್ ಸೌಕರ್ಯಗಳು ಮತ್ತು 421 ಕಿಮೀ ವ್ಯಾಪ್ತಿಯನ್ನು ಒಳಗೊಂಡಿದೆ.
ಪಂಚ್ EV ಯ ವೇರಿಯಂಟ್-ವಾರು ಬೆಲೆಗಳಿಂದ ಪ್ರಾರಂಭವಾಗಿ ಇದರ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ.
ಬೆಲೆಗಳು
ಪರಿಚಯಾತ್ಮಕ ಎಕ್ಸ್ ಶೋ ರೂಂ ಬೆಲೆಗಳು |
||
ವೇರಿಯಂಟ್ |
ಮಧ್ಯಮ ಶ್ರೇಣಿ |
ಲಾಂಗ್ ರೇಂಜ್ |
ಸ್ಮಾರ್ಟ್ |
10.99 ಲಕ್ಷ ರೂ |
ಇಲ್ಲ |
ಸ್ಮಾರ್ಟ್ + |
11.49 ಲಕ್ಷ ರೂ |
ಇಲ್ಲ |
ಅಡ್ವೆಂಚರ್ |
11.99 ಲಕ್ಷ ರೂ |
12.99 ಲಕ್ಷ ರೂ. |
ಎಂಪವರ್‌ಡ್ |
12.79 ಲಕ್ಷ ರೂ |
13.99 ಲಕ್ಷ ರೂ. |
ಎಂಪವರ್‌ಡ್ + |
13.29 ಲಕ್ಷ ರೂ |
14.49 ಲಕ್ಷ ರೂ. |
ಗಮನಿಸಿ:- ನೀವು ಅಡ್ವೆಂಚರ್, ಎಂಪವರ್ಡ್ ಮತ್ತು ಎಂಪವರ್ಡ್ + ವೇರಿಯೆಂಟ್‌ನೊಂದಿಗೆ ಸನ್‌ರೂಫ್ ಬಯಸಿದರೆ, ನೀವು 50,000 ರೂಪಾಯಿಗಳವರೆಗೆ ಹೆಚ್ಚು ಖರ್ಚು ಮಾಡಬೇಕಾಗುತ್ತದೆ.
ಪಂಚ್ EV ಆರಂಭಿಕ ಬೆಲೆ ಅದರ ICE (ಆಂತರಿಕ ದಹನಕಾರಿ ಎಂಜಿನ್) ಆವೃತ್ತಿಗಿಂತ 5 ಲಕ್ಷ ರೂ. ನಷ್ಟು ಹೆಚ್ಚಾಗಿರುತ್ತದೆ, ಬ್ಯಾಟರಿ ಪ್ಯಾಕ್ ಇದಕ್ಕೆ ಮುಖ್ಯ ಕಾರಣವಾಗಲಿದೆ. ಟಾಟಾದ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕೊಡುಗೆಯಾದ ಟಾಟಾ ಟಿಯಾಗೊ ಇವಿಗೆ ಹೋಲಿಸಿದರೆ, ಪಂಚ್ ಇವಿ 2.3 ಲಕ್ಷ ರೂಪಾಯಿಗಳಷ್ಟು ದುಬಾರಿಯಾಗಿದೆ. ಪಂಚ್ EV ಯ ಲಾಂಗ್ ರೇಂಜ್ ಆವೃತ್ತಿಯು ಹೆಚ್ಚುವರಿ 50,000 ರೂಗಳಿಗೆ 7.2 kW AC ಚಾರ್ಜರ್‌ನ ಆಯ್ಕೆಯನ್ನು ಸಹ ಪಡೆಯುತ್ತದೆ.
ಪವರ್‌ಟ್ರೇನ್ ವಿವರಗಳು
ಟಾಟಾ ತನ್ನ ಎಲ್ಲಾ ಇತರ Tata.ev ಉತ್ಪನ್ನಗಳಂತೆಯೇ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಪಂಚ್ EV ಅನ್ನು ನೀಡುತ್ತಿದೆ. ಅವುಗಳನ್ನು MR (ಮಿಡ್ ರೇಂಜ್) ಮತ್ತು LR (ಲಾಂಗ್ ರೇಂಜ್) ಎಂದು ವಿಭಜಿಸಲಾಗಿದೆ, ರೇಂಜ್ ಮತ್ತು ಕಾರ್ಯಕ್ಷಮತೆಯ ವಿಶೇಷಣಗಳ ಕುರಿತು ಕೆಳಗೆ ಪಟ್ಟಿ ಮಾಡಿ ತಿಳಿಸಲಾಗಿದೆ.
ಟಾಟಾ ಪಂಚ್ EV ವೇರಿಯೆಂಟ್‌ಗಳು |
ಮಿಡಿಯಂ ರೇಂಜ್ |
ಲಾಂಗ್ ರೇಂಜ್ |
ಬ್ಯಾಟರಿ ಪ್ಯಾಕ್ |
25 kWh |
35 kWh |
ಪವರ್ |
82 ಪಿಎಸ್ |
122 ಪಿಎಸ್ |
ಟಾರ್ಕ್ |
114 ಎನ್‌ಎಮ್ |
190 ಎನ್‌ಎಮ್ |
ಘೋಷಿಸಿರುವ ರೇಂಜ್ ( ಎನ್‌ಇಡಿಸಿ) |
315 ಕಿ.ಮೀ |
421 ಕಿ.ಮೀ |
ಟಾಪ್ ಸ್ಪೀಡ್ |
110 kmph |
140 kmph |
ಚಾರ್ಜಿಂಗ್ ಆಯ್ಕೆಗಳಿಗಾಗಿ, ಪಂಚ್ EV 50 kW DC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ, ಇದನ್ನು ಬಳಸಿಕೊಂಡು ಅದರ ಬ್ಯಾಟರಿ ಪ್ಯಾಕ್ ಅನ್ನು 56 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು. ಮನೆಯಲ್ಲಿ ಚಾರ್ಜ್ ಮಾಡಲು, ಪಂಚ್ EV ಯು 7.2 kW ಮತ್ತು 3.3 kW ಎಂಬ ಎರಡು AC ಚಾರ್ಜರ್‌ಗಳ ಆಯ್ಕೆಯೊಂದಿಗೆ ಬರುತ್ತದೆ ಮತ್ತು ಅವುಗಳು ತೆಗೆದುಕೊಳ್ಳುವ ಚಾರ್ಜಿಂಗ್ ಸಮಯಗಳು ಕೆಳಗಿವೆ.
ಚಾರ್ಜರ್ |
ಮೀಡಿಯಂ ರೇಂಜ್ (25 kWh) |
ಲಾಂಗ್ ರೇಂಜ್ (35 kWh) |
50 kW ಡಿಸಿ ಫಾಸ್ಟ್ ಚಾರ್ಜರ್ (10-80%) |
56 ನಿಮಿಷಗಳು |
56 ನಿಮಿಷಗಳು |
7.2 kW ಎಸಿ ಹೋಂ ಚಾರ್ಜರ್ (10-100%) |
3.6 ಗಂಟೆಗಳು |
5 ಗಂಟೆಗಳು |
3.3 kW ಎಸಿ ಹೋಂ ಚಾರ್ಜರ್ (10-100%) |
9.4 ಗಂಟೆಗಳು |
13.5 ಗಂಟೆಗಳು |
ವಿನ್ಯಾಸ
ಹೊರಭಾಗವನ್ನು ಗಮನಿಸುವಾಗ, ಪಂಚ್ EV ಯು ಟಾಟಾದ ಹೊಸ ವಿನ್ಯಾಸದ ಪರಿಕಲ್ಪನೆಗೆ ಅವಲಂಬಿತಗೊಂಡಂತೆ ಇದೆ. ಮುಂಭಾಗದ ವಿನ್ಯಾಸವು ಅಗಲವಾಗಿರುವ ಎಲ್‌ಇಡಿ ಡಿಆರ್‌ಎಲ್‌ಗಳು, ಲಂಬವಾಗಿ ಇರಿಸಲಾದ ಎಲ್‌ಇಡಿ ಹೆಡ್‌ಲೈಟ್‌ಗಳು, ದೊಡ್ಡ ಬಂಪರ್ ಮತ್ತು ನಯವಾದ ಸ್ಕಿಡ್ ಪ್ಲೇಟ್ ಅನ್ನು ಪಡೆಯುತ್ತದೆ. ಸೈಡ್ ಪ್ರೊಫೈಲ್ 16-ಇಂಚಿನ ಏರೋಡೈನಾಮಿಕ್ ಅಲಾಯ್ ವೀಲ್‌ಗಳನ್ನು ಹೊಂದಿದೆ ಮತ್ತು ಹಿಂಭಾಗದ ಬಾಗಿಲುಗಳಿಗೆ ಡೋರ್ ಹ್ಯಾಂಡಲ್ ಅನ್ನು ಸಿ ಪಿಲ್ಲರ್‌ನಲ್ಲಿ ಇರಿಸಲಾಗಿದೆ. ಹಿಂಭಾಗದ ಪ್ರೊಫೈಲ್ ಹೆಚ್ಚು ಕಡಿಮೆ ಪೆಟ್ರೋಲ್ ಚಾಲಿತ ಪಂಚ್‌ನಂತೆಯೇ ಕಾಣುತ್ತದೆ.
ಒಳಭಾಗದಲ್ಲಿ, ಎಲೆಕ್ಟ್ರಿಕ್ ಎಸ್‌ಯುವಿ ಲೇಯರ್ಡ್ ಡ್ಯಾಶ್‌ಬೋರ್ಡ್ ವಿನ್ಯಾಸದೊಂದಿಗೆ ಡ್ಯುಯಲ್-ಟೋನ್ ಕಪ್ಪು ಮತ್ತು ಗ್ರೇ ಕ್ಯಾಬಿನ್ ಅನ್ನು ಪಡೆಯುತ್ತದೆ. ಇದು ಬ್ಯಾಕ್‌ಲಿಟ್ ಟಾಟಾ ಲೋಗೋದೊಂದಿಗೆ ಟಾಟಾದ ಹೊಸ ಟು-ಸ್ಪೋಕ್ ಸ್ಟೀರಿಂಗ್ ವೀಲ್, ಗ್ಲೋಸ್ ಬ್ಲ್ಯಾಕ್‌ನಲ್ಲಿ ಫಿನಿಶ್ ಮಾಡಲಾಗಿರುವ ಸೆಂಟರ್ ಕನ್ಸೋಲ್ ಮತ್ತು ಲೆಥೆರೆಟ್ ಅಪ್ಹೋಲ್‌ಸ್ಟರಿಯನ್ನು ಒಳಗೊಂಡಿದೆ.
ತಂತ್ರಜ್ಞಾನ ಮತ್ತು ಸುರಕ್ಷತೆ
ಕ್ಯಾಬಿನ್ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ರೈವರ್ ಸೈಡ್‌ನಲ್ಲಿ 10.25-ಇಂಚಿನ ಡಿಜಿಟಲ್ ಡಿಸ್ಪ್ಲೇ, ಟಚ್-ಎನೇಬಲ್ಡ್ ಪ್ಯಾನೆಲ್‌ನೊಂದಿಗೆ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಒಳಗೊಂಡಿದೆ. ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಟಿವಿ ಶೋಗಳು/ಚಲನಚಿತ್ರಗಳನ್ನು ವೀಕ್ಷಿಸಲು Arcade.ev, ಹಾಗೆಯೇ ಕ್ರೂಸ್ ಕಂಟ್ರೋಲ್ ಮತ್ತು ಸಿಂಗಲ್ ಪೇನ್ ಸನ್‌ರೂಫ್ ಅನ್ನು ಸಹ ಪಡೆಯುತ್ತದೆ.
ಇದನ್ನೂ ಓದಿ: ಹುಂಡೈ ಕ್ರೆಟಾ ಫೇಸ್‌ಲಿಫ್ಟ್ Vs ಕಿಯಾ ಸೆಲ್ಟೋಸ್ Vs ಮಾರುತಿ ಗ್ರ್ಯಾಂಡ್ ವಿಟಾರಾ Vs ಹೋಂಡಾ ಎಲಿವೇಟ್: ಬೆಲೆ ಚರ್ಚೆ
ಸುರಕ್ಷತೆಯ ದೃಷ್ಟಿಯಿಂದ, ಇದು 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 360-ಡಿಗ್ರಿ ಕ್ಯಾಮೆರಾ ಮತ್ತು ಬ್ಲೈಂಡ್ ವ್ಯೂ ಮಾನಿಟರ್ ಅನ್ನು ನೀಡುತ್ತದೆ.
ಪ್ರತಿಸ್ಪರ್ಧಿಗಳು
ಟಾಟಾ ಪಂಚ್ EV ಯು ಮಾರುಕಟ್ಟೆಯಲ್ಲಿ ಸಿಟ್ರೊಯೆನ್ eC3 ಗೆ ನೇರ ಪ್ರತಿಸ್ಪರ್ಧಿಯಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ಟಾಟಾ ಟಿಯಾಗೊ ಇವಿ, ಟಾಟಾ ಟಿಗೊರ್ ಇವಿ ಮತ್ತು ಎಂಜಿ ಕಾಮೆಟ್ ಇವಿಗಳಿಗೆ ಪ್ರೀಮಿಯಂ ಪರ್ಯಾಯವಾಗಿ ಪರಿಗಣಿಸಬಹುದು.
ಹೆಚ್ಚು ಓದಿ: ಪಂಚ್ EV ಎಎಮ್‌ಟಿ
0 out of 0 found this helpful