2024ರ Hyundai Creta N ಲೈನ್ ಒರಿಜಿನಲ್ ಸ್ಪೈ ಶಾಟ್‌ಗಳು ಆನ್‌ಲೈನ್ ನಲ್ಲಿ ಲೀಕ್..!
ಹುಂಡೈ ಕ್ರೇಟಾ ಎನ್ ಲೈನ್ ಗಾಗಿ rohit ಮೂಲಕ ಜನವರಿ 30, 2024 07:36 pm ರಂದು ಪ್ರಕಟಿಸಲಾಗಿದೆ
- 67 Views
- ಕಾಮೆಂಟ್ ಅನ್ನು ಬರೆಯಿರಿ
ಸ್ಪೈ ಮಾಡಿರುವ ಚಿತ್ರಗಳು SUV ಯ ಸ್ಪೋರ್ಟಿಯರ್ ವರ್ಷನ್ ನ ರಿವೈಸ್ ಆಗಿರುವ ಫೇಸ್ ಅನ್ನು ತೋರಿಸುತ್ತವೆ ಮತ್ತು ಒಳಗೆ ಮತ್ತು ಹೊರಗೆ ರೆಡ್ ಹೈಲೈಟ್ ಗಳನ್ನು ಹೊಂದಿವೆ
- ಕ್ರೆಟಾ N ಲೈನ್ ಹೊಸದಾಗಿ ಬಿಡುಗಡೆಯಾದ ಫೇಸ್‌ಲಿಫ್ಟ್ ಆಗಿರುವ ಕ್ರೆಟಾವನ್ನು ಆಧರಿಸಿದೆ.
- ಹೊರಭಾಗದ ಹೈಲೈಟ್ ಗಳಲ್ಲಿ ರೆಡ್ ಸ್ಕರ್ಟ್‌ಗಳು, N ಲೈನ್ ಬ್ಯಾಡ್ಜ್‌ಗಳು ಮತ್ತು ದೊಡ್ಡ 18-ಇಂಚಿನ ಅಲಾಯ್ ವೀಲ್ಸ್ ಅನ್ನು ಒಳಗೊಂಡಿರುತ್ತದೆ.
- ರೆಡ್ ಇನ್ಸರ್ಟ್ಸ್ ಮತ್ತು ಕಾಂಟ್ರಾಸ್ಟ್ ರೆಡ್ ಸ್ಟಿಚಿಂಗ್ ಹೊಂದಿರುವ ಆಲ್ ಬ್ಲಾಕ್ ಕ್ಯಾಬಿನ್‌ನೊಂದಿಗೆ ಬರುತ್ತದೆ.
- ಕ್ರೆಟಾದ ಫೀಚರ್ ಗಳ ಪಟ್ಟಿಯಲ್ಲಿ ಡ್ಯುಯಲ್ 10.25-ಇಂಚಿನ ಡಿಸ್ಪ್ಲೇಗಳು ಮತ್ತು ADAS ಸೇರಿವೆ.
- ಇದು 6-ಸ್ಪೀಡ್ MT ಮತ್ತು 7-ಸ್ಪೀಡ್ DCT ಆಯ್ಕೆಗಳೊಂದಿಗೆ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಪಡೆಯುವ ಸಾಧ್ಯತೆಯಿದೆ.
- ಶೀಘ್ರದಲ್ಲೇ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ, ಬೆಲೆಗಳು ರೂ 17.50 ಲಕ್ಷದಿಂದ ಪ್ರಾರಂಭವಾಗಬಹುದು (ಎಕ್ಸ್ ಶೋರೂಂ).
ಫೇಸ್‌ಲಿಫ್ಟ್ ಆಗಿರುವ ಹ್ಯುಂಡೈ ಕ್ರೆಟಾವನ್ನು ಬಿಡುಗಡೆ ಮಾಡಿದ ನಂತರ, ಅತಿ ಹೆಚ್ಚು ಮಾರಾಟವಾಗುತ್ತಿರುವ ಈ ಹುಂಡೈ SUVಯು ಭಾರತದಲ್ಲಿ N ಲೈನ್ ವರ್ಷನ್ ಅನ್ನು ಪಡೆಯುವ ಬಲವಾದ ಸಾಧ್ಯತೆಯ ಬಗ್ಗೆ ನಾವು ಚರ್ಚಿಸಿದ್ದೇವೆ. ಈಗ, ಹ್ಯುಂಡೈ ಕ್ರೆಟಾ N ಲೈನ್ ಅನ್ನು ಒರಿಜಿನಲ್ ಆಗಿ ತೋರಿಸುವ ಹೊಸ ಸ್ಪೈ ಶಾಟ್‌ಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ, ಇದು ಬಹುಶಃ ಅದರ TVC (ಟೆಲಿವಿಷನ್ ಕಮರ್ಷಿಯಲ್) ಚಿತ್ರೀಕರಣದ ಭಾಗವಾಗಿರಬಹುದು.
ಚಿತ್ರಗಳು ಏನನ್ನು ತೋರಿಸುತ್ತವೆ?
i20 ಮತ್ತು ವೆನ್ಯೂನ ಈಗಾಗಲೇ ಇರುವ N ಲೈನ್ ವರ್ಷನ್ ಗಳು ತಮ್ಮ ಸ್ಟ್ಯಾಂಡರ್ಡ್ ವರ್ಷನ್ ಗಳಿಗೆ ಹೋಲಿಸಿದರೆ ಅಂತಹ ಯಾವುದೇ ಪ್ರಮುಖ ಡಿಸೈನ್ ಅಪ್ಡೇಟ್ ಗಳನ್ನು ಪಡೆದಿಲ್ಲ. ಆದರೆ ಹ್ಯುಂಡೈ ತನ್ನ ಅತ್ಯಂತ ಜನಪ್ರಿಯ SUV ವಿಷಯದಲ್ಲಿ ಕೆಲವು ಹೊಸ ಫೀಚರ್ ಅಪ್ಡೇಟ್ ಗಳನ್ನು ನೀಡಿದೆ. ಇಲ್ಲಿ ಕ್ರೆಟಾ N ಲೈನ್ ಸ್ಪ್ಲಿಟ್-LED ಹೆಡ್‌ಲೈಟ್ ಸೆಟಪ್ (LED DRL ಸ್ಟ್ರಿಪ್ ಅನ್ನು ಮೇಲಕ್ಕೆ ಇರಿಸಲಾಗಿದೆ), ಟ್ವೀಕ್ ಮಾಡಲಾದ ಸಣ್ಣ ಗ್ರಿಲ್ ಮತ್ತು ದಪ್ಪವಿರುವ ಬಂಪರ್‌ನೊಂದಿಗೆ ವಿಭಿನ್ನ ಮುಂಭಾಗವನ್ನು ಪಡೆಯುತ್ತದೆ.


ಪ್ರೊಫೈಲ್‌ನಲ್ಲಿ, ರೆಡ್ ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ ಕೆಂಪು ಸ್ಕರ್ಟ್‌ಗಳು ಮತ್ತು ದೊಡ್ಡದಾದ 18-ಇಂಚಿನ N ಲೈನ್ ನಲ್ಲಿ ಮಾತ್ರ ಇರುವ ಅಲಾಯ್ ವೀಲ್ಸ್ ಗಳ ಸೇರ್ಪಡೆಯನ್ನು ನೀವು ಗಮನಿಸಬಹುದು. ಹಿಂಭಾಗದಲ್ಲಿ, ಅಪ್ಡೇಟ್ ಆಗಿರುವ ಬಂಪರ್ ಅನ್ನು ಹೊರತುಪಡಿಸಿ, ಮಿಕ್ಕಿದ ಎಲಿಮೆಂಟ್ ಗಳು ಹಾಗೆಯೇ ಇವೆ. ಅಲ್ಲದೆ, ಈ ಸ್ಪೋರ್ಟಿಯರ್ SUVಯ ಹೊರಭಾಗದ ಸುತ್ತಲೂ 'N ಲೈನ್' ಬ್ಯಾಡ್ಜ್‌ಗಳನ್ನು ನೀವು ನಿರೀಕ್ಷಿಸಬಹುದು.
ಇಂಟೀರಿಯರ್ ವಿವರಗಳನ್ನು ಕೂಡ ತೋರಿಸಲಾಗಿದೆ
ಸ್ಪೈ ಶಾಟ್‌ಗಳ ಪ್ರಮುಖ ಹೈಲೈಟ್ ಗಳಲ್ಲಿ ಅಪ್ಡೇಟ್ ಆಗಿರುವ ಕ್ಯಾಬಿನ್ ಥೀಮ್ ಕೂಡ ಒಂದಾಗಿದೆ. ಹುಂಡೈ ತನ್ನ ಇತರ N ಲೈನ್ ಮಾಡೆಲ್ ಗಳಿಗೆ ನೀಡಿರುವ ಆಲ್ ಬ್ಲಾಕ್ ಥೀಮ್ ಅನ್ನು ಇಲ್ಲಿ ಒಳಭಾಗಕ್ಕೆ ನೀಡಿದೆ. ಇದು ಡ್ಯಾಶ್‌ಬೋರ್ಡ್‌ನಲ್ಲಿ ಸೆಂಟ್ರಲ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇಯ ಸುತ್ತಲೂ ರೆಡ್ ಹೈಲೈಟ್‌ಗಳನ್ನು ಹೊಂದಿದೆ ಮತ್ತು ಗೇರ್ ಲಿವರ್ ಮತ್ತು ಅಪ್ಹೋಲ್ಸ್ಟರಿಯಲ್ಲಿ ಕಾಂಟ್ರಾಸ್ಟ್ ರೆಡ್ ಸ್ಟಿಚಿಂಗ್ ಅನ್ನು ನೀಡಲಾಗಿದೆ. ಹ್ಯುಂಡೈ ಇದನ್ನು N ಲೈನ್ ಮಾಡೆಲ್ ನ ಸ್ಟೀರಿಂಗ್ ವೀಲ್‌ನೊಂದಿಗೆ ಸಜ್ಜುಗೊಳಿಸಲಿದೆ.
ಇದು ಯಾವ ಯಾವ ಫೀಚರ್ ಗಳನ್ನು ಪಡೆದಿದೆ?
ಹುಂಡೈ ಕ್ರೆಟಾ N ಲೈನ್ ಅದರ ರೆಗ್ಯುಲರ್ SUV ಯ ಸುಸಜ್ಜಿತ ಟಾಪ್ ವೇರಿಯಂಟ್ ಗಳನ್ನು ಆಧರಿಸಿದೆ. ಹಾಗಾಗಿ, ಇದು ಸ್ಟ್ಯಾಂಡರ್ಡ್ ಮಾಡೆಲ್‌ನಲ್ಲಿ ಇರುವ ಅದೇ ಡ್ಯುಯಲ್ 10.25-ಇಂಚಿನ ಡಿಸ್‌ಪ್ಲೇಗಳನ್ನು (ಒಂದು ಇನ್‌ಸ್ಟ್ರುಮೆಂಟೇಶನ್‌ಗಾಗಿ ಮತ್ತು ಇನ್ನೊಂದು ಇನ್ಫೋಟೈನ್‌ಮೆಂಟ್‌ಗಾಗಿ), ಡ್ಯುಯಲ್-ಝೋನ್ AC, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಪಡೆಯುತ್ತದೆ.
ಸುರಕ್ಷತಾ ತಂತ್ರಜ್ಞಾನದ ವಿಷಯದಲ್ಲಿ, ಇದು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಆಟೋ-ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ನೊಂದಿಗೆ (ADAS) ಬರುವ ನಿರೀಕ್ಷೆಯಿದೆ.
ನೀಡಲಾಗಿರುವ ಪವರ್‌ಟ್ರೇನ್
2024 ಹ್ಯುಂಡೈ ಕ್ರೆಟಾ N ಲೈನ್, ಸ್ಟ್ಯಾಂಡರ್ಡ್ ಮಾಡೆಲ್ ನಲ್ಲಿ ಇರುವ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು (160 PS/ 253 Nm) ಪಡೆಯುತ್ತದೆ. ಆದರೆ, ಇದು 7-ಸ್ಪೀಡ್ DCT (ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್) ಜೊತೆಗೆ 6-ಸ್ಪೀಡ್ ಮಾನ್ಯುಯಲ್ ಆಯ್ಕೆಯನ್ನು ಸೇರಿಸಬಹುದು. N ಲೈನ್ ವರ್ಷನ್ ನಲ್ಲಿ ಇದನ್ನು ರೆಗ್ಯುಲರ್ ಕ್ರೆಟಾದಿಂದ ಪ್ರತ್ಯೇಕಗೊಳಿಸಲು, ಸ್ವಲ್ಪ ವಿಭಿನ್ನವಾದ ಸಸ್ಪೆನ್ಶನ್ ಸೆಟಪ್ ಮತ್ತು ಶಾರ್ಪ್ ಹ್ಯಾಂಡಲಿಂಗ್ ಗಾಗಿ ಕ್ವಿಕ್ ಸ್ಟೀರಿಂಗ್ ರಾಕ್ ಅನ್ನು ಪಡೆಯಬಹುದು. ಇದು ಸ್ಪೋರ್ಟಿಯರ್ ಎಕ್ಸಾಸ್ಟ್ ನೋಟ್ ಅನ್ನು ಹೊರಹಾಕುವ ಸ್ವಲ್ಪ ವಿಭಿನ್ನ ಎಕ್ಸಾಸ್ಟ್ ಸೆಟಪ್ ಅನ್ನು ಕೂಡ ನೀಡಬಹುದು.
ನಿರೀಕ್ಷಿಸಲಾಗಿರುವ ಲಾಂಚ್ ದಿನಾಂಕ ಮತ್ತು ಬೆಲೆ
ಹ್ಯುಂಡೈ ಕ್ರೆಟಾ N ಲೈನ್ ಅನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು ಎಂದು ನಾವು ಅಂದುಕೊಂಡಿದ್ದೇವೆ, ಮತ್ತು ಬೆಲೆಗಳು ರೂ 17.50 ಲಕ್ಷದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್ ಶೋರೂಂ). ಇದು ಕಿಯಾ ಸೆಲ್ಟೋಸ್ GTX+ ಮತ್ತು X-ಲೈನ್‌ನೊಂದಿಗೆ ನೇರವಾಗಿ ಸ್ಪರ್ಧಿಸಲಿದ್ದು, ಸ್ಕೋಡಾ ಕುಶಾಕ್, ಫೋಕ್ಸ್ ವ್ಯಾಗನ್ ಟೈಗನ್ GT ಲೈನ್ ಮತ್ತು MG ಆಸ್ಟರ್‌ಗೆ ಸ್ಪೋರ್ಟಿಯರ್ ಆಗಿ ಕಾಣುವ ಪರ್ಯಾಯ ಆಯ್ಕೆಯಾಗಲಿದೆ.
ಇನ್ನಷ್ಟು ಓದಿ: ಹ್ಯುಂಡೈ ಕ್ರೆಟಾ ಆನ್ ರೋಡ್ ಬೆಲೆ