Choose your suitable option for better User experience.
  • English
  • Login / Register

ಭಾರತದಲ್ಲಿ ನಿಮ್ಮ ದೊಡ್ಡ ಕುಟುಂಬಕ್ಕೆ ಸೂಕ್ತವಾದ ಸಿಗುವ 7 ಅತ್ಯಂತ ಕೈಗೆಟುಕುವ ಬೆಲೆಯ 7-ಸೀಟರ್ SUV ಗಳು

published on ಮೇ 28, 2024 08:57 pm by dipan for ಮಹೀಂದ್ರ ಬೊಲೆರೊ

  • 26 Views
  • ಕಾಮೆಂಟ್‌ ಅನ್ನು ಬರೆಯಿರಿ

ಭಾರತದಲ್ಲಿ SUV ಗಳ ಜನಪ್ರಿಯತೆಯು 7-ಸೀಟರ್ SUV ಗಳನ್ನು ಮಾಸ್ ಮಾರುಕಟ್ಟೆಗೆ ತರುವಲ್ಲಿ ಯಶಸ್ವಿಯಾಗಿದೆ.

7 most affordable 7-seater SUVs

SUV ಗಳು ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿವೆ, ಹೀಗಾಗಿ ಇಲ್ಲಿ ಮೈಕ್ರೋದಿಂದ ಹಿಡಿದು ಫುಲ್ ಸೈಜ್ ಮಾಡೆಲ್ ಗಳವರೆಗಿನ ವ್ಯಾಪಕ ಶ್ರೇಣಿಯ ಆಯ್ಕೆಗಳಿವೆ. SUV ಗಳ ಹೆಚ್ಚುತ್ತಿರುವ ಜನಪ್ರಿಯತೆಯು ಮಾಸ್ ಮಾರುಕಟ್ಟೆಗೆ ಮೂರು-ಸಾಲಿನ SUV ಗಳನ್ನು ಕೂಡ ತಂದಿದೆ, ಇದರಿಂದ ಈಗ ದೊಡ್ಡ ಕುಟುಂಬಗಳು ಸಹ SUV ಅನುಭವವನ್ನು ಆನಂದಿಸಬಹುದು.

 ಭಾರತದಂತಹ ವೈವಿಧ್ಯಮಯ ದೇಶದಲ್ಲಿ, ಗ್ರಾಹಕರ ಅಗತ್ಯತೆಗಳು ವ್ಯಾಪಕವಾಗಿ ಬದಲಾಗುತ್ತವೆ ಮತ್ತು ಇದರಲ್ಲಿ ಸೀಟಿಂಗ್ ಸಾಮರ್ಥ್ಯವು ಒಂದು ಪ್ರಮುಖ ಅವಶ್ಯಕತೆಯಾಗಿದೆ. ಭಾರತದಲ್ಲಿನ SUVಗಳು ಈ ಅಗತ್ಯವನ್ನು ಪೂರೈಸಲು ನಾಲ್ಕರಿಂದ ಏಳು ಸೀಟರ್ ಗಳ ಆಯ್ಕೆಗಳನ್ನು ನೀಡುವ ಮೂಲಕ ವಿವಿಧ ಸೆಗ್ಮೆಂಟ್ ಗಳಲ್ಲಿ ಹಲವಾರು ಆಯ್ಕೆಗಳನ್ನು ಒದಗಿಸುತ್ತಿವೆ. ನೀವು 7-ಸೀಟರ್ SUV ಆಯ್ಕೆಗಳನ್ನು ಹುಡುಕುತ್ತಿದ್ದರೆ, ನಾವು ನಿಮಗಾಗಿ ಭಾರತದಲ್ಲಿ ಏಳು ಅತ್ಯಂತ ಕೈಗೆಟುಕುವ ಬೆಲೆಯ SUV ಗಳ ಪಟ್ಟಿಯನ್ನು ಇಲ್ಲಿ ನೀಡಿದ್ದೇವೆ. ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಲು ನಿಮಗೆ ಸಹಾಯ ಮಾಡಲು ಈ ಪಟ್ಟಿಯನ್ನು ಕಡಿಮೆ ಬೆಲೆಯಿಂದ ಶುರುಮಾಡಿ ಹೆಚ್ಚಿನ ಬೆಲೆಯವರೆಗೆ ಜೋಡಿಸಲಾಗಿದೆ.

1. ಮಹೀಂದ್ರಾ ಬೊಲೆರೊ ನಿಯೊ: ರೂ. 9.95 ಲಕ್ಷ 

ಮಹೀಂದ್ರಾ ಬೊಲೆರೊ ನಿಯೋ ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಯ ಏಳು ಸೀಟರ್ SUV ಆಗಿದೆ. ಎಂಟ್ರಿ ಲೆವೆಲ್ N4 ವೇರಿಯಂಟ್ ನ ಬೆಲೆಯು ರೂ 9.95 ಲಕ್ಷದಿಂದ ಶುರುವಾಗುತ್ತದೆ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು 100 PS ಮತ್ತು 260 Nm ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಟಾಪ್ ಲೆವೆಲ್ ಮಾಡೆಲ್ ಗಳು ಹಿಂಭಾಗದಲ್ಲಿ ಮೆಕಾನಿಕಲ್ ಲಾಕಿಂಗ್ ಡಿಫರೆನ್ಷಿಯಲ್ ಅನ್ನು ಕೂಡ ಹೊಂದಿವೆ.

Mahindra Bolero Neo Front Left Side

2. ಮಹೀಂದ್ರಾ ಬೊಲೆರೊ: ರೂ. 9.98 ಲಕ್ಷ 

 ಮಹೀಂದ್ರಾ ಬೊಲೆರೊ ಕಳೆದ ಎರಡು ದಶಕಗಳಿಂದ ಭಾರತದಲ್ಲಿ ಮಾರಾಟವಾಗುತ್ತಿದೆ ಮತ್ತು ಅದೇ ಬೆಲೆಗೆ ಸಿಗುವ ಇತರ ಮೊನೊಕೊಕ್ SUVಗಳ ಬದಲಿಗೆ ಸ್ಟೈಲಿಶ್ ಆಗಿರುವ ಪರ್ಯಾಯ ಆಯ್ಕೆಯನ್ನು ಬಯಸುವ ಖರೀದಿದಾರರಲ್ಲಿ ಇದು ಜನಪ್ರಿಯ ಆಯ್ಕೆಯಾಗಿದೆ. ಈ 7 ಸೀಟರ್ ಬೊಲೆರೊದ ಇತ್ತೀಚಿನ ಹೊಸ ವರ್ಷನ್ ಬೆಲೆಯು ರೂ.9.98 ಲಕ್ಷದಿಂದ ಶುರುವಾಗುತ್ತದೆ. ಇದು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು ಅದು 76 PS ಮತ್ತು 210 Nm ಅನ್ನು ಉತ್ಪಾದಿಸುತ್ತದೆ. ಇದನ್ನು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಗೆ ಜೋಡಿಸಲಾಗಿದೆ. ಆದರೆ, ಅದರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಬೊಲೆರೊ ಈಗ ಸಾಕಷ್ಟು ಹಳೆಯದಾಗಿದೆ ಮತ್ತು 2026 ರ ವೇಳೆಗೆ ಜನರೇಷನ್ ಅಪ್ಡೇಟ್ ಪಡೆಯುವ ನಿರೀಕ್ಷೆಯಿದೆ.

Mahindra Bolero Front Left Side

3. ಸಿಟ್ರೊಯೆನ್ C3 ಏರ್‌ಕ್ರಾಸ್: ರೂ. 11.96 ಲಕ್ಷ

 ಸಿಟ್ರೊಯೆನ್ C3 ಏರ್‌ಕ್ರಾಸ್ ತನ್ನದೇ ಆದ ಒಂದು ವಿಶಿಷ್ಟತೆಯನ್ನು ಹೊಂದಿದೆ. ಹೆಚ್ಚಿನ ಕಾಂಪ್ಯಾಕ್ಟ್ SUV ಗಳಲ್ಲಿ ಐದು ಜನರು ಮಾತ್ರ ಕುಳಿತುಕೊಳ್ಳಬಹುದು. ಆದರೆ ಸಿಟ್ರೊಯೆನ್ ಕೈಗೆಟುಕುವ ಬೆಲೆಯಲ್ಲೇ ಹಿಂಭಾಗದಲ್ಲಿ ಇನ್ನೂ ಎರಡು ಸೀಟ್ ಗಳನ್ನು ಸೇರಿಸುವ ಮೂಲಕ ವಿಭಿನ್ನವಾಗಿ ಡಿಸೈನ್ ಮಾಡಿದೆ. 5-ಸೀಟರ್ ವೇರಿಯಂಟ್ ರೂ 9.99 ಲಕ್ಷದಿಂದ ಪ್ರಾರಂಭವಾದರೆ, 7-ಸೀಟರ್ ರೂ. 11.96 ಲಕ್ಷದಿಂದ ಪ್ರಾರಂಭವಾಗುತ್ತವೆ, ಆ ಮೂಲಕ ಈ ಪಟ್ಟಿಯಲ್ಲಿ ಮೂರನೇ ಅತ್ಯಂತ ಕೈಗೆಟುಕುವ SUVಯ ಸ್ಥಾನವನ್ನು ಪಡೆದುಕೊಂಡಿದೆ. ಇದು 110 PS ಮತ್ತು 206 Nm ಉತ್ಪಾದಿಸುವ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ (ಆಟೋಮ್ಯಾಟಿಕ್) ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. 

Citroen C3 Aircross Front Left Side

4. ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್: ರೂ. 13.59 ಲಕ್ಷ

SUV ಯ ಮೂರನೇ ಜನರೇಷನ್ ಮಹೀಂದ್ರಾ ಸ್ಕಾರ್ಪಿಯೋ ಅನ್ನು ಭಾರತದಲ್ಲಿ ಸ್ಕಾರ್ಪಿಯೋ N ಎಂದು ಬಿಡುಗಡೆ ಮಾಡಿದರೂ ಕೂಡ, ಹಳೆಯ ವರ್ಷನ್ ಆಗಿರುವ ಎರಡನೇ-ಜೆನ್ ಮಾಡೆಲ್ ಅನ್ನು ಮಾರುಕಟ್ಟೆಗೆ ತರಲಾಗಿದೆ. ಮಹೀಂದ್ರಾ ಅದಕ್ಕೆ ಕೆಲವು ಬದಲಾವಣೆಗಳನ್ನು ಮಾಡಿದೆ ಮತ್ತು ಸ್ಕಾರ್ಪಿಯೋ ಕ್ಲಾಸಿಕ್ ಎಂಬ ಹೊಸ ಹೆಸರನ್ನು ನೀಡಿದೆ. ವಿವಿಧ ರೀತಿಯ ಖರೀದಿದಾರರ ಅಗತ್ಯಗಳಿಗೆ ಅನುಗುಣವಾಗಿ ಮಹಿಂದ್ರಾ ಇನ್ನೂ ಕೂಡ ಹಳೆಯ ಸ್ಕಾರ್ಪಿಯೋವನ್ನು ಮಾರಾಟ ಮಾಡುತ್ತಿದೆ. ಇಲ್ಲಿ, 7 ಮತ್ತು 9-ಸೀಟರ್ ಕಾನ್ಫಿಗರೇಶನ್‌ಗಳೊಂದಿಗೆ ಕೇವಲ ಎರಡು ವೇರಿಯಂಟ್ ಗಳು ಮಾತ್ರ ಲಭ್ಯವಿವೆ. ಇದು 132 PS ಮತ್ತು 300 Nm ನೊಂದಿಗೆ 2.2-ಲೀಟರ್ ಡೀಸೆಲ್ ಎಂಜಿನ್‌ ಅನ್ನು ಪಡೆಯುತ್ತದೆ ಮತ್ತು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿದೆ.

Mahindra Scorpio Front Left Side

5. ಮಹೀಂದ್ರಾ ಸ್ಕಾರ್ಪಿಯೋ N: ರೂ. 13.85 ಲಕ್ಷ

ಮಹೀಂದ್ರ ಸ್ಕಾರ್ಪಿಯೊ N, ಸ್ಕಾರ್ಪಿಯೊ SUVಯ ಹೊಚ್ಚಹೊಸ ವರ್ಷನ್ ಆಗಿದೆ. ಇದು ಮೊದಲ ವರ್ಷನ್ ಗೆ ಹೋಲಿಸಿದರೆ ಹೊಸ ಫೀಚರ್ ಗಳು ಮತ್ತು ಉತ್ತಮ ಎಂಜಿನ್‌ಗಳನ್ನು ಹೊಂದಿದೆ. ಇದು 6 ಮತ್ತು 7-ಸೀಟ್ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ. ಏಳು ಸೀಟರ್ ಸ್ಕಾರ್ಪಿಯೊ N ಬೆಲೆಯು ರೂ. 13.85 ಲಕ್ಷದಿಂದ ಪ್ರಾರಂಭವಾಗುತ್ತದೆ. ಈ ಬೆಲೆಗೆ, ನೀವು 2.2-ಲೀಟರ್ ಡೀಸೆಲ್ ಎಂಜಿನ್ (132 PS/300 Nm) ಮತ್ತು 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (203 PS/380 Nm) ಆಯ್ಕೆಯನ್ನು ಪಡೆಯುತ್ತೀರಿ. ಇಲ್ಲಿ ಎರಡು ಡ್ರೈವ್‌ಟ್ರೇನ್ ಆಯ್ಕೆಗಳೂ ಕೂಡ ಲಭ್ಯವಿದೆ: ರಿಯರ್-ವೀಲ್-ಡ್ರೈವ್ (RWD) ಮತ್ತು ಫೋರ್-ವೀಲ್-ಡ್ರೈವ್ (4WD).

Mahindra Scorpio N Front Left Side

6. ಟಾಟಾ ಸಫಾರಿ: ರೂ. 16.19 ಲಕ್ಷ

 ಟಾಟಾ ಸಫಾರಿ ಪ್ರಸ್ತುತ ಮೂರು-ಸಾಲಿನ ವಾಹನದಲ್ಲಿ ಕಾರು ತಯಾರಕರ ಟಾಪ್ ಮಾಡೆಲ್ ಆಗಿದೆ. ಇದು 6 ಮತ್ತು 7-ಸೀಟರ್ ಎರಡೂ ಲೇಔಟ್ ಗಳಲ್ಲಿ ಲಭ್ಯವಿದೆ, ಮತ್ತು ಬೆಲೆಯು ರೂ 16.19 ಲಕ್ಷದಿಂದ ಪ್ರಾರಂಭವಾಗುತ್ತವೆ. ಇದು 2-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದ್ದು ಅದು 170 PS ಮತ್ತು 350 Nm ಅನ್ನು ಉತ್ಪಾದಿಸುತ್ತದೆ, ಇಲ್ಲಿ ನೀವು 6-ಸ್ಪೀಡ್ ಮ್ಯಾನ್ಯುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು, ಇವೆರಡೂ ಮುಂಭಾಗದ ವೀಲ್ ಗಳಿಗೆ ಶಕ್ತಿಯನ್ನು ನೀಡುತ್ತದೆ. ಇಲ್ಲಿಯವರೆಗೆ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ನೀಡಲಾಗಿಲ್ಲ ಆದರೆ ಇದು ಶೀಘ್ರದಲ್ಲೇ ಬರುವ ನಿರೀಕ್ಷೆಯಿದೆ. ಈ SUVಯ EV ವರ್ಷನ್ ಕೂಡ ಸಿದ್ಧವಾಗುತ್ತಿದೆ, ಮತ್ತು 2025 ರ ಆರಂಭದಲ್ಲಿ ಬಿಡುಗಡೆಯನ್ನು ನಿರೀಕ್ಷಿಸಲಾಗಿದೆ.

Tata Safari Front Left Side

7. ಹುಂಡೈ ಅಲ್ಕಾಜರ್: ರೂ. 16.78 ಲಕ್ಷ

 ಹ್ಯುಂಡೈ ಅಲ್ಕಾಜರ್ ಆರು ಅಥವಾ ಏಳು ಜನರನ್ನು ಸಾಗಿಸಲು ಬಯಸುವ ಜನರಿಗೆ ಕ್ರೆಟಾದ ಬದಲಿಗೆ ಖರೀದಿಸಬಹುದಾದ ದೊಡ್ಡ SUV ಆಯ್ಕೆಯಾಗಿದೆ. ಇದು ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ: 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಪೀಡ್ DCT (ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್) ಆಯ್ಕೆಯೊಂದಿಗೆ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (160 PS / 253 Nm), ಮತ್ತು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾದ 1.5-ಲೀಟರ್ ಡೀಸೆಲ್ ಎಂಜಿನ್ (116 PS / 250 Nm).

Hyundai Alcazar Front Left Side

 ಮಹೀಂದ್ರಾ XUV700 (ರೂ.16.89 ಲಕ್ಷ  ಬೆಲೆ), MG ಹೆಕ್ಟರ್ ಪ್ಲಸ್ (ರೂ.17 ಲಕ್ಷ ) ಮತ್ತು 5-ಡೋರ್ ಫೋರ್ಸ್ ಗೂರ್ಖಾ (ರೂ.18 ಲಕ್ಷ ಬೆಲೆ) ಸೇರಿದಂತೆ ಕೆಲವು SUVಗಳು ಬಹುತೇಕ ಹತ್ತಿರದಲ್ಲಿದ್ದರೂ ಕೂಡ ಪಟ್ಟಿಯಲ್ಲಿ ಸ್ಥಾನ ಪಡೆಯಲಿಲ್ಲ.

 ಹಾಗಾದರೆ, ಈ ಪಟ್ಟಿಯಿಂದ ನೀವು ಯಾವ SUVಯನ್ನು ಆಯ್ಕೆ ಮಾಡಲು ಬಯಸುತ್ತೀರಿ? ಕೆಳಗೆ ಕಾಮೆಂಟ್‌ ಮಾಡಿ ನಮಗೆ ತಿಳಿಸಿ.

 ಇನ್ನಷ್ಟು ಓದಿ: ಬೊಲೆರೊ ಡೀಸೆಲ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಹೀಂದ್ರ ಬೊಲೆರೊ

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience