Login or Register ಅತ್ಯುತ್ತಮ CarDekho experience ಗೆ
Login

Mahindra Bolero Neo Plus ವರ್ಸಸ್ Mahindra Bolero Neo: ನಿಮಗಾಗಿ ತಂದಿದ್ದೇವೆ ಟಾಪ್ 3 ವ್ಯತ್ಯಾಸಗಳ ವಿವರ

ಏಪ್ರಿಲ್ 18, 2024 05:10 pm ರಂದು shreyash ಮೂಲಕ ಪ್ರಕಟಿಸಲಾಗಿದೆ
34 Views

ಎಕ್ಸ್‌ಟ್ರಾ ಸೀಟ್ ಗಳ ಜೊತೆಗೆ, ಬೊಲೆರೊ ನಿಯೋ ಪ್ಲಸ್ ದೊಡ್ಡ ಟಚ್‌ಸ್ಕ್ರೀನ್ ಮತ್ತು ದೊಡ್ಡ ಡೀಸೆಲ್ ಎಂಜಿನ್ ಅನ್ನು ಕೂಡ ನೀಡುತ್ತಿದೆ

ಮಹೀಂದ್ರ ಬೊಲೆರೊ ನಿಯೊದ 9 ಸೀಟರ್ ವೇರಿಯಂಟ್ ಆಗಿರುವ ಮಹೀಂದ್ರ ಬೊಲೆರೊ ನಿಯೊ ಪ್ಲಸ್ ಅನ್ನು ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಮಹೀಂದ್ರ ಬೊಲೆರೊ ನಿಯೊದ ಈ ವರ್ಷನ್ ಎರಡು ವೇರಿಯಂಟ್ ಗಳಲ್ಲಿ ಲಭ್ಯವಿದೆ: P4 ಮತ್ತು P10. ದೊಡ್ಡದಾದ ಸೈಜ್ ಮತ್ತು ಹೆಚ್ಚುವರಿ ಸೀಟ್ ಗಳ ಜೊತೆಗೆ, ಬೊಲೆರೊ ನಿಯೋ ಪ್ಲಸ್ ಅದರ ಸಣ್ಣ 7-ಸೀಟರ್ ಎಡಿಷನ್ ಗೆ ಹೋಲಿಸಿದರೆ ಫೀಚರ್ ಗಳು ಮತ್ತು ಎಂಜಿನ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಬನ್ನಿ, ಅವುಗಳ ವಿವರಗಳನ್ನು ನೋಡೋಣ:

ಡೈಮೆನ್ಷನ್ ಗಳು ಮತ್ತು ಸೀಟಿಂಗ್ ಡಿಸೈನ್

ಡೈಮೆನ್ಷನ್ ಗಳು

ಮಹೀಂದ್ರ ಬೊಲೆರೊ ನಿಯೋ ಪ್ಲಸ್

ಮಹೀಂದ್ರ ಬೊಲೆರೊ ನಿಯೋ

ಉದ್ದ

4400 ಮಿ.ಮೀ

3995 ಮಿ.ಮೀ

ಅಗಲ

1795 ಮಿ.ಮೀ

1795 ಮಿ.ಮೀ

ಎತ್ತರ

1812 ಮಿ.ಮೀ

1817 ಮಿ.ಮೀ

ವೀಲ್ ಬೇಸ್

2680 ಮಿ.ಮೀ

2680 ಮಿ.ಮೀ

ಸೀಟ್ ಗಳ ಕಾಂಫಿಗರೇಷನ್

7-ಸೀಟರ್

9-ಸೀಟರ್

ಮಹೀಂದ್ರ ಬೊಲೆರೊ ನಿಯೊ ಪ್ಲಸ್ ಬೊಲೆರೊ ನಿಯೊಗಿಂತ 515 ಎಂಎಂ ಉದ್ದವಾಗಿದೆ, ಆದರೆ ಅಗಲ ಮತ್ತು ವೀಲ್‌ಬೇಸ್ ನಲ್ಲಿ ಯಾವುದೇ ಬದಲಾವಣೆಯಿಲ್ಲ. ಇದು ಉದ್ದವಾಗಿರುವುದರಿಂದ, ಬೊಲೆರೊ ನಿಯೊ ಪ್ಲಸ್ ಹೆಚ್ಚುವರಿ ಸೈಡ್-ಫೇಸಿಂಗ್ ಸೀಟ್‌ಗಳನ್ನು ಹೊಂದಿದ್ದು, ಹಾಗಾಗಿ ಇದು 9 ಸೀಟರ್ SUVಯಾಗಿದೆ. ಆದರೆ, ನಿಯೋ ಅದರ 9-ಸೀಟರ್ ವರ್ಷನ್ ಗಿಂತ ಸ್ವಲ್ಪ ಎತ್ತರವಾಗಿದೆ.

ಫೀಚರ್ ಗಳಲ್ಲಿ ಏನೇನು ಬದಲಾಗಿದೆ?

SUV ಗಳ ನಡುವಿನ ಫೀಚರ್ ಗಳಲ್ಲಿನ ಪ್ರಮುಖ ವ್ಯತ್ಯಾಸವೆಂದರೆ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಕ್ರೂಸ್ ಕಂಟ್ರೋಲ್. ಬೊಲೆರೊ ನಿಯೋ ಪ್ಲಸ್ ದೊಡ್ಡ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಬರುತ್ತದೆ ಆದರೆ ಕ್ರೂಸ್ ಕಂಟ್ರೋಲ್ ಇಲ್ಲಿ ಲಭ್ಯವಿಲ್ಲ. ಮತ್ತೊಂದೆಡೆ, ಬೊಲೆರೊ ನಿಯೋ ಕ್ರೂಸ್ ಕಂಟ್ರೋಲ್ ಜೊತೆಗೆ ಸಣ್ಣದಾದ 7-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ ಅನ್ನು ಪಡೆಯುತ್ತದೆ, ಇದು ಹೆದ್ದಾರಿಯಲ್ಲಿ ದೀರ್ಘಕಾಲ ಪ್ರಯಾಣ ಮಾಡುವವರಿಗೆ ಸೂಕ್ತವಾಗಿದೆ.

ಇದನ್ನು ಕೂಡ ಓದಿ: ಮಹೀಂದ್ರಾ XUV 3XO (XUV300 ಫೇಸ್‌ಲಿಫ್ಟ್) ಚಿತ್ರಗಳು ಮತ್ತೆ ಲೀಕ್ ಆಗಿವೆ, ಕನೆಕ್ಟೆಡ್ ಕಾರ್ ಟೆಕ್ ಪಡೆಯಲಿದೆ

ಎಂಜಿನ್ ಮತ್ತು ಟ್ರಾನ್ಸ್‌ಮಿಷನ್

ಬೊಲೆರೊ ನಿಯೋ ಪ್ಲಸ್ ತನ್ನ 7-ಸೀಟರ್ ವರ್ಷನ್ ಗೆ ಹೋಲಿಸಿದರೆ ದೊಡ್ಡ ಡೀಸೆಲ್ ಎಂಜಿನ್ ಹೊಂದಿದೆ. ಎರಡೂ SUVಗಳ ಎಂಜಿನ್ ಸ್ಪೆಸಿಫಿಕೇಷನ್ ಗಳನ್ನು ಕೆಳಗೆ ವಿವರಿಸಲಾಗಿದೆ:

ಸ್ಪೆಸಿಫಿಕೇಷನ್

ಬೊಲೆರೊ ನಿಯೋ ಪ್ಲಸ್

ಬೊಲೆರೊ ನಿಯೋ

ಇಂಜಿನ್

2.2-ಲೀಟರ್ ಡೀಸೆಲ್

1.5-ಲೀಟರ್ ಡೀಸೆಲ್

ಪವರ್

120 ಪಿಎಸ್‌

100 ಪಿಎಸ್‌

ಟಾರ್ಕ್

280 ಎನ್‌ಎಮ್‌

260 ಎನ್‌ಎಮ್‌

ಟ್ರಾನ್ಸ್‌ಮಿಷನ್‌

6-ಸ್ಪೀಡ್ MT

5-ಸ್ಪೀಡ್ MT

9-ಸೀಟರ್ ಬೊಲೆರೊ ನಿಯೊ ಶಕ್ತಿಶಾಲಿಯಾದ ಡೀಸೆಲ್ ಎಂಜಿನ್ ಅನ್ನು ಹೊಂದಿದೆ ಮತ್ತು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಕೂಡ ಬರುತ್ತದೆ.

ಬೆಲೆ ಮತ್ತು ವೇರಿಯಂಟ್ ಗಳು

ಬೊಲೆರೊ ನಿಯೋ ಪ್ಲಸ್

ಬೊಲೆರೊ ನಿಯೋ

ರೂ. 11.39 ಲಕ್ಷದಿಂದ ರೂ. 12.49 ಲಕ್ಷ

ರೂ. 9.90 ಲಕ್ಷದಿಂದ ರೂ. 12.15 ಲಕ್ಷ

ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಯಾಗಿವೆ

ಬೊಲೆರೊ ನಿಯೋ ಪ್ಲಸ್ ಎರಡು ವೇರಿಯಂಟ್ ಗಳಲ್ಲಿ ಬರುತ್ತದೆ - P4 ಮತ್ತು P10 - ಮತ್ತು ಬೊಲೆರೊ ನಿಯೋ ನಾಲ್ಕು ವೇರಿಯಂಟ್ ಗಳಲ್ಲಿ ಲಭ್ಯವಿದೆ: N4, N8, N10, ಮತ್ತು N10 (O). ಮಹೀಂದ್ರ ಸ್ಕಾರ್ಪಿಯೊ N ಮತ್ತು ಮಹೀಂದ್ರ ಸ್ಕಾರ್ಪಿಯೊ ಕ್ಲಾಸಿಕ್‌ಗೆ ಹೋಲಿಸಿದರೆ ಈ ಎರಡೂ SUVಗಳು ಕಡಿಮೆ ಬೆಲೆಯ ಪರ್ಯಾಯ ಆಯ್ಕೆಗಳಾಗಿವೆ.

ಇನ್ನಷ್ಟು ಓದಿ: ಮಹೀಂದ್ರ ಬೊಲೆರೊ ನಿಯೋ ಡೀಸೆಲ್

Share via

Write your Comment on Mahindra ಬೊಲೆರೊ Neo

explore similar ಕಾರುಗಳು

ಮಹೀಂದ್ರ ಬೊಲೆರೋ ನಿಯೋ

4.5216 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.9.95 - 12.15 ಲಕ್ಷ* get ಆನ್-ರೋಡ್ ಬೆಲೆ
ಡೀಸಲ್17.29 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

ಸಂಬಂಧಿತ ಸುದ್ದಿ

ಟ್ರೆಂಡಿಂಗ್ ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
Rs.11.50 - 21.50 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.67.65 - 73.24 ಲಕ್ಷ*
ಫೇಸ್ ಲಿಫ್ಟ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ