Login or Register ಅತ್ಯುತ್ತಮ CarDekho experience ಗೆ
Login

2 ಲಕ್ಷಕ್ಕೂ ಹೆಚ್ಚು ಆರ್ಡರ್‌ಗಳನ್ನು ಬಾಕಿ ಉಳಿಸಿಕೊಂಡಿರುವ Mahindra, ಇದರಲ್ಲಿ 50,000 ಕ್ಕೂ ಹೆಚ್ಚು ಬುಕಿಂಗ್‌ಗಳು XUV 3XOದ್ದೇ ಆಗಿದೆ..!

published on ಮೇ 20, 2024 02:56 pm by shreyash for ಮಹೀಂದ್ರ ಸ್ಕಾರ್ಪಿಯೋ

ಸ್ಕಾರ್ಪಿಯೋ ಎನ್ ಮತ್ತು ಸ್ಕಾರ್ಪಿಯೋ ಕ್ಲಾಸಿಕ್ ಹೆಚ್ಚಿನ ಸಂಖ್ಯೆಯ ಬುಕಿಂಗ್‌ಗಳನ್ನು ಹೊಂದಿದೆ

ಇತ್ತೀಚಿನ ಹಣಕಾಸು ವರದಿಯ ಸಮಯದಲ್ಲಿ ಮಹೀಂದ್ರಾವು 2024ರ ಮೇ ತಿಂಗಳಿನಲ್ಲಿ ಬಾಕಿ ಉಳಿದಿರುವ ಆರ್ಡರ್‌ಗಳ ಮೊಡೆಲ್‌-ವಾರು ಲೆಕ್ಕಾಚಾರವನ್ನು ಬಹಿರಂಗಪಡಿಸಿದೆ. ಮಹೀಂದ್ರಾ ಸ್ಕಾರ್ಪಿಯೋ, ಥಾರ್, ಎಕ್ಸ್‌ಯುವಿ700 ಮತ್ತು ಬೊಲೆರೊದಂತಹ ಮೊಡೆಲ್‌ಗಳು ಸೇರಿದಂತೆ ಒಟ್ಟು ಆರ್ಡರ್‌ಗಳ ಬಾಕಿ ಉಳಿದಿರುವ ಸಂಖ್ಯೆಯು ಪ್ರಸ್ತುತ 2.2 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳಷ್ಟಿದೆ. ಮಹೀಂದ್ರಾ ಎಸ್‌ಯುವಿಗಳಿಗಾಗಿ ಮಾಡೆಲ್‌ವಾರು ಬಾಕಿಇರುವ ಬುಕಿಂಗ್‌ಗಳ ಪಟ್ಟಿ ಇಲ್ಲಿದೆ:

ಮೊಡೆಲ್-ವಾರು ಬಾಕಿ ಇರುವ ಆರ್ಡರ್‌ಗಳು

ಮಹೀಂದ್ರಾ ಸ್ಕಾರ್ಪಿಯೋ ಎನ್ ಮತ್ತು ಸ್ಕಾರ್ಪಿಯೋ ಕ್ಲಾಸಿಕ್

86,000

ಮಹೀಂದ್ರಾ ಥಾರ್ (RWD ಸೇರಿದಂತೆ)

59,000

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ

50,000

ಮಹೀಂದ್ರಾ ಎಕ್ಸ್‌ಯುವಿ700

16,000

ಮಹೀಂದ್ರಾ ಬೊಲೆರೊ ನಿಯೋ ಮತ್ತು ಬೊಲೆರೊ

10,000

ಮಹೀಂದ್ರಾ ಸ್ಕಾರ್ಪಿಯೋ ಎನ್, ಸ್ಕಾರ್ಪಿಯೋ ಕ್ಲಾಸಿಕ್ ಮತ್ತು ಥಾರ್ ಒಟ್ಟು ಬಾಕಿ ಆರ್ಡರ್‌ಗಳ ಶೇಕಡಾ 65 ಕ್ಕಿಂತ ಹೆಚ್ಚಿದೆ, ಹೌದು, ಇದು 1.45 ಲಕ್ಷದಷ್ಟು ಓಪನ್‌ ಬುಕಿಂಗ್‌ಗಳನ್ನು ಹೊಂದಿದೆ. ಸ್ಕಾರ್ಪಿಯೊ ಎನ್ ಮತ್ತು ಸ್ಕಾರ್ಪಿಯೊ ಕ್ಲಾಸಿಕ್ ತಿಂಗಳಿಗೆ ಸರಾಸರಿ 17,000 ಬುಕಿಂಗ್‌ಗಳನ್ನು ಸ್ವೀಕರಿಸಿದರೆ, ಥಾರ್ ತಿಂಗಳಿಗೆ ಸರಾಸರಿ 7,000 ಬುಕಿಂಗ್‌ಗಳನ್ನು ಪಡೆಯುತ್ತದೆ. ಬೊಲೆರೊ ಮತ್ತು ಬೊಲೆರೊ ನಿಯೊ ಕಡಿಮೆ ಸಂಖ್ಯೆಯ ಆರ್ಡರ್‌ಗಳನ್ನು ಹೊಂದಿದ್ದರೂ, ಅವುಗಳ ಸರಾಸರಿ ಮಾಸಿಕ ಬುಕಿಂಗ್‌ಗಳು 9,500 ಯುನಿಟ್‌ಗಳಾಗಿವೆ, ಇದು ಸ್ಕಾರ್ಪಿಯೋಗಿಂತ ನಂತರ ಅತ್ಯಧಿಕವಾಗಿದೆ.

ಮಹೀಂದ್ರಾ ಹೊಸದಾಗಿ ಬಿಡುಗಡೆಯಾದ XUV 3XO ನಿಂದಾಗಿ ಬುಕ್ಕಿಂಗ್‌ಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ಕಂಡಿತು, ಕೇವಲ ಒಂದು ಗಂಟೆಯೊಳಗೆ 50,000 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಪಡೆಯಿತು. XUV 3XO ಗಾಗಿ ಡೆಲಿವರಿಗಳು 2024ರ ಮೇ 26ರಿಂದ ಪ್ರಾರಂಭವಾಗಲಿದ್ದು, ನಂತರ ಬಾಕಿ ಇರುವ ಆರ್ಡರ್‌ಗಳ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆಯಿದೆ.

ಇದನ್ನು ಸಹ ಓದಿ: Mahindra XUV 3XO: ಬುಕಿಂಗ್‌ ಶುರುವಾದ 1 ಗಂಟೆಯಲ್ಲಿ ಬರೋಬ್ಬರಿ 50,000 ಕ್ಕೂ ಮಿಕ್ಕಿ ಆರ್ಡರ್‌..!

ಮಹೀಂದ್ರಾ ಎಸ್‌ಯುವಿಗಳಿಗೆ ಸರಾಸರಿ ವೈಟಿಂಗ್‌ ಪಿರೇಡ್‌

ಎಕ್ಸ್‌ಯುವಿ700

7 ತಿಂಗಳುಗಳು

ಮಹೀಂದ್ರಾ ಸ್ಕಾರ್ಪಿಯೊ ಎನ್‌

6 ತಿಂಗಳುಗಳು

ಮಹೀಂದ್ರಾ ಥಾರ್

4 ತಿಂಗಳುಗಳು

ಮಹೀಂದ್ರಾ ಎಕ್ಸ್‌ಯುವಿ400 ಇವಿ

4 ತಿಂಗಳುಗಳು

ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್

3 ತಿಂಗಳುಗಳು

ಬೊಲೆರೋ

3 ತಿಂಗಳುಗಳು

ಬೊಲೆರೋ ನಿಯೋ

3 ತಿಂಗಳುಗಳು

ಕೋಷ್ಟಕದಲ್ಲಿ ನೋಡಿದಂತೆ, ಮಹೀಂದ್ರಾ ಎಕ್ಸ್‌ಯುವಿ700 ಭಾರತದಲ್ಲಿನ ಟಾಪ್‌ 20 ನಗರಗಳಲ್ಲಿ 7 ತಿಂಗಳವರೆಗೆ ಗರಿಷ್ಠ ಸರಾಸರಿ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿದೆ. ಎಕ್ಸ್‌ಯುವಿ700 ನಂತರ, ಸ್ಕಾರ್ಪಿಯೋ N 6 ತಿಂಗಳವರೆಗೆ ಗರಿಷ್ಠ ಸರಾಸರಿ ವೈಟಿಂಗ್‌ ಪಿರೇಡ್‌ಗೆ ಸಾಕ್ಷಿಯಾಗಿದೆ.

ಸ್ಕಾರ್ಪಿಯೊ ಎನ್, ಸ್ಕಾರ್ಪಿಯೊ ಕ್ಲಾಸಿಕ್, ಥಾರ್ ಮತ್ತು ಎಕ್ಸ್‌ಯುವಿ700 ನಂತಹ ಕೆಲವು ಮಹೀಂದ್ರಾ ಎಸ್‌ಯುವಿಗಳಿಗೆ ಬಾಕಿ ಉಳಿದಿರುವ ಆರ್ಡರ್ ಪ್ರಮಾಣವು 2024ರ ಫೆಬ್ರವರಿಗೆ ಹೋಲಿಸಿದರೆ ಸ್ಪಷ್ಟವಾಗಿ ಕಡಿಮೆಯಾಗಿದೆ, ಇದು ಇನ್ನೂ 2 ಲಕ್ಷ ಯೂನಿಟ್‌ಗಳಿಗಿಂತ ಹೆಚ್ಚು ಇತ್ತು. ಉತ್ಪಾದನೆ ಮತ್ತು ಪೂರೈಕೆ ವ್ಯವಸ್ಥೆಯಲ್ಲಿನ ನಿರ್ಬಂಧಗಳು ಸೇರಿದಂತೆ ವಿವಿಧ ಅಂಶಗಳಿಂದಾಗಿ ನಿಧಾನಗತಿಯ ಡೆಲಿವರಿಗಳು ಇದಕ್ಕೆ ಕಾರಣವಾಗಿರಬಹುದು. ಸರಾಸರಿಯಾಗಿ, ಮಹೀಂದ್ರಾ ಪ್ರಸ್ತುತ ಪ್ರತಿ ತಿಂಗಳು 48,000 ಹೊಸ ಬುಕಿಂಗ್‌ಗಳನ್ನು ಪಡೆಯುತ್ತಿದೆ, ಆದರೆ ಇದರಲ್ಲಿ ಕ್ಯಾನ್ಸಲ್‌ ಆಗುವ ಸಂಖ್ಯೆಯು ಒಂದು ತಿಂಗಳಲ್ಲಿ 10 ಪ್ರತಿಶತವಾಗಿದೆ.

ಇನ್ನಷ್ಟು ಓದಿ: ಸ್ಕಾರ್ಪಿಯೋ ಡೀಸೆಲ್

s
ಅವರಿಂದ ಪ್ರಕಟಿಸಲಾಗಿದೆ

shreyash

  • 31 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment on Mahindra ಸ್ಕಾರ್ಪಿಯೋ

Read Full News

explore similar ಕಾರುಗಳು

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ