ಅಕ್ಟೋಬರ್ ತಿಂಗಳ ಕಾಂಪ್ಯಾಕ್ಟ್ ಎಸ್‌ಯುವಿ ಮಾರಾಟದ ಅಂಕಿ-ಆಂಶ: ಹ್ಯುಂಡೈ ಕ್ರೆಟಾವನ್ನು ಹಿಂದಿಕ್ಕಿದ ಮಹೀಂದ್ರಾ ಸ್ಕಾರ್ಪಿಯೊ ಎನ್ ಮತ್ತು ಕ್ಲಾಸಿಕ್
ಹುಂಡೈ ಕ್ರೆಟಾ 2020-2024 ಗಾಗಿ sonny ಮೂಲಕ ನವೆಂಬರ್ 14, 2023 04:46 pm ರಂದು ಪ್ರಕಟಿಸಲಾಗಿದೆ
- 63 Views
- ಕಾಮೆಂಟ್ ಅನ್ನು ಬರೆಯಿರಿ
ಕಳೆದ ತಿಂಗಳಿನಲ್ಲಿ ಕಿಯಾ ಸೆಲ್ಟೋಸ್‌ನ ಮಾರಾಟದಲ್ಲಿ ಉತ್ತಮವಾದ ಬೆಳವಣಿಗೆಯನ್ನು ಕಂಡಿತ್ತು ಮತ್ತು ಇದು ಮಾರಾಟದಲ್ಲಿ ಮೂರನೇ ಸ್ಥಾನವನ್ನು ಪಡೆದ ಕಾಂಪ್ಯಾಕ್ಟ್ ಎಸ್‌ಯುವಿ ಆಗಿತ್ತು.
2023 ರ ಅಕ್ಟೋಬರ್ ನಲ್ಲಿ ದಸರಾ ಹಬ್ಬದ ಸಮಯದಲ್ಲಿ ಕಾರು ಮಾರಾಟದ ಅಂಕಿ-ಅಂಶಗಳನ್ನು ಗಮನಿಸುವಾಗ ಇದು ಕೆಲವು ಕಾರು ತಯಾರಕರು ನಿರೀಕ್ಷಿಸಿದಷ್ಟು ಶುಭಕರವಾಗಿರಲಿಲ್ಲ. ಮತ್ತು ಇದು ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ನ ಕಾರ್ಯಕ್ಷಮತೆಯಲ್ಲಿ ನಮಗೆ ಸ್ಪಷ್ಟ ಚಿತ್ರಣ ಸಿಗುತ್ತದೆ. ಸಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ, ಅಕ್ಟೋಬರ್‌ನಲ್ಲಿ 5 ಪ್ರತಿಶತದಷ್ಟು ಸುಧಾರಣೆಯನ್ನು ಕಂಡಿದೆ. ಕಳೆದ ತಿಂಗಳಿನಲ್ಲಿ ಲಾಭ ಗಳಿಸಿದವರಲ್ಲಿ ಮಹೀಂದ್ರಾ ಸ್ಕಾರ್ಪಿಯೊ ಎನ್ ಮತ್ತು ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಜೋಡಿಯಾಗಿ ಮೊದಲನೆಯ ಸ್ಥಾನದಲ್ಲಿದ್ದರೆ, ಹ್ಯುಂಡೈ ಕ್ರೆಟಾ ಕೆಲವೇ ಕೆಲವು ಸಂಖ್ಯೆಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
2023 ರ ಅಕ್ಟೋಬರ್‌ನ ಮೊಡೆಲ್-ವಾರು ವಿವರಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ:
ಕಾಂಪ್ಯಾಕ್ಟ್ ಎಸ್‌ಯುವಿಗಳು ಮತ್ತು ಕ್ರಾಸ್ಒವರ್‌ಗಳು |
|||||||
|
ಅಕ್ಟೋಬರ್ 2023 |
ಸೆಪ್ಟೆಂಬರ್ 2023 |
ತಿಂಗಳಿನಿಂದ ತಿಂಗಳಿಗೆ ಏರಿಕೆ |
ಪ್ರಸ್ತುತ ಮಾರ್ಕೆಟ್ ಪಾಲು(%) |
ಮಾರ್ಕೆಟ್ ಪಾಲು (% ಕಳೆದ ವರ್ಷ) |
ವರ್ಷದಿಂದ ವರ್ಷಕ್ಕೆ ಮಾರ್ಕೆಟ್ ಪಾಲು (%) |
ಸರಾಸಾರಿ ಮಾರಾಟ (6 ತಿಂಗಳಿನಲ್ಲಿ) |
ಮಹೀಂದ್ರಾ ಸ್ಕಾರ್ಪಿಯೊ |
13578 |
11846 |
14.62 |
21.09 |
19.15 |
1.94 |
9975 |
ಹುಂಡೈ ಕ್ರೆಟಾ |
13077 |
12717 |
2.83 |
20.32 |
30.58 |
-10.26 |
13949 |
ಕಿಯಾ ಸೆಲ್ಟೋಸ್ |
12362 |
10558 |
17.08 |
19.21 |
25.17 |
-5.96 |
7642 |
ಮಾರುತಿ ಗ್ರಾಂಡ್ ವಿಟಾರ |
10834 |
11736 |
-7.68 |
16.83 |
20.73 |
-3.9 |
9956 |
ಹೋಂಡಾ ಎಲಿವೆಟ್ |
4957 |
5685 |
-12.8 |
7.7 |
N.A. |
N.A. |
1418 |
ಟೊಯೋಟಾ ಹೈರೈಡರ್ |
3987 |
3804 |
4.81 |
6.19 |
243.1 |
-236.91 |
3307 |
ಸ್ಕೋಡಾ ಕುಶಾಕ್ |
2447 |
2260 |
8.27 |
3.8 |
4.35 |
-0.55 |
2174 |
ಫೊಕ್ಸ್‌ವಾಗನ್ ಟೈಗುನ್ |
2219 |
1586 |
39.91 |
3.44 |
6.06 |
-2.62 |
1709 |
ಎಂಜಿ ಎಸ್ಟಾರ್ |
890 |
901 |
-1.22 |
1.38 |
4.56 |
-3.18 |
826 |
ಒಟ್ಟು |
64351 |
61093 |
5.33 |
|
|
|
|
ಪ್ರಮುಖ ಸಾರಾಂಶ
-
ಮೇಲೆ ತಿಳಿಸಿದಂತೆ, ಮಹೀಂದ್ರ ಸ್ಕಾರ್ಪಿಯೊದ ಮಾರಾಟದ ಅಂಕಿ-ಅಂಶವು ಅದನ್ನು ಈ ಸೆಗ್ಮೆಂಟ್‌ನಲ್ಲಿ ಹೆಚ್ಚು ಸೇಲ್ ಆದ ಎಸ್‌ಯುವಿಯ ಪಟ್ಟಿಯಲ್ಲಿ ಟಾಪ್‌ನಲ್ಲಿ ಇರಿಸುತ್ತದೆ. ಆದರೆ ಆ ಸಂಖ್ಯೆಗಳು ಸ್ಕಾರ್ಪಿಯೋ N ಮತ್ತು ಸ್ಕಾರ್ಪಿಯೋ ಕ್ಲಾಸಿಕ್‌ನ ಎರಡೂ ಎಸ್‌ಯುವಿ ಆವೃತ್ತಿಗಳನ್ನು ಒಳಗೊಂಡಿವೆ. ಸಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಅಕ್ಟೋಬರ್ ತಿಂಗಳಿನ ಮಾರಾಟದಲ್ಲಿ ಇದು ಸುಮಾರು 15 ಪ್ರತಿಶತದಷ್ಟು ಬೆಳವಣಿಗೆಗೆ ಸಾಕ್ಷಿಯಾಗಿದೆ ಮತ್ತು 13,000 ಕಾರುಗಳ ಮಾರಾಟದ ಮೈಲುಗಲ್ಲನ್ನು ಅನ್ನು ದಾಟಿದೆ.
-
ಈ ವಿಭಾಗದ ಎರಡನೇ ಟಾಪರ್ ಹ್ಯುಂಡೈ ಕ್ರೆಟಾ ಅಕ್ಟೋಬರ್ ತಿಂಗಳಿನಲ್ಲಿ ತುಲನಾತ್ಮಕವಾಗಿ ಸ್ಥಿರವಾದ ಮಾರಾಟವನ್ನು ಕಂಡಿದೆ. ಇದು ಸಹ 13,000 ಯುನಿಟ್ ಮಾರಾಟದ ಮಾರ್ಕ್ ಅನ್ನು ಸಹ ದಾಟಿದೆ. ಅದರ MoM (ತಿಂಗಳಿನಿಂದ ತಿಂಗಳಿಗೆ) ಮಾರಾಟವು ಕೇವಲ 3 ಪ್ರತಿಶತದಷ್ಟು ಹೆಚ್ಚಾಗಿದೆ.
-
ಫೇಸ್‌ಲಿಫ್ಟ್‌ನ ಬಿಡುಗಡೆಯ ನಂತರ, ಕಿಯಾ ಸೆಲ್ಟೋಸ್ ಮಾರಾಟದ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಅಕ್ಟೋಬರ್‌ನಲ್ಲಿ ಸುಮಾರು 12,000 ಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡುವುದರೊಂದಿಗೆ ತನ್ನ ಮೇಲಿರುವ ಬೇಡಿಕೆಯನ್ನು ಮತ್ತೆ ಹೆಚ್ಚಿಸಿಕೊಂಡಿದೆ. ಇದು ಇದರ ಹಿಂದಿನ 6 ತಿಂಗಳ ಸರಾಸರಿ ಮಾಸಿಕ ಬೇಡಿಕೆಗಿಂತ ಹೆಚ್ಚಾಗಿದೆ.
ಈ ಕುರಿತಂತೆ: ಹುಂಡೈ ಕ್ರೆಟಾ Vs ಕಿಯಾ ಸೆಲ್ಟೋಸ್
-
ಮುಂದಿನ ಮತ್ತು SIAM ಡೇಟಾದ ಪ್ರಕಾರ 5-ಅಂಕಿಯ ಮಾಸಿಕ ಬೇಡಿಕೆಯನ್ನು ಪಡೆದಿರುವ ಕೊನೆಯ ಕಾಂಪ್ಯಾಕ್ಟ್ ಎಸ್‌ಯುವಿ ಎಂದರೆ ಅದು ಮಾರುತಿ ಗ್ರ್ಯಾಂಡ್ ವಿಟಾರಾ ಆಗಿದೆ. ಆದಾಗಿಯೂ, ಅದರ ಅಕ್ಟೋಬರ್ ಅಂಕಿಅಂಶಗಳನ್ನು ಗಮನಿಸುವಾಗ ಇದು ಸುಮಾರು 8 ಪ್ರತಿಶತದಷ್ಟು MoM ಕುಸಿತಕ್ಕೆ ಸಾಕ್ಷಿಯಾಗಿದೆ.
-
ಇದರೊಂದಿಗೆ, ಅದರ ತದ್ರೂಪಿಯಾಗಿರುವ ಟೊಯೋಟಾ ಹೈರೈಡರ್ ಸುಮಾರು 4,000 ಯುನಿಟ್‌ಗಳು ಮಾರಾಟವಾಗುವುದರೊಂದಿಗೆ ಕೇವಲ 5 ಪ್ರತಿಶತಕ್ಕಿಂತ ಕಡಿಮೆ MoM ಬೆಳವಣಿಗೆಯನ್ನು ಕಂಡಿತು.
-
ಅಕ್ಟೋಬರ್‌ನಲ್ಲಿ ಐದನೇ-ಅತ್ಯುತ್ತಮ ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಯ ಸ್ಥಾನವು ಮಾರುಕಟ್ಟೆಗೆ ಹೊಸದಾಗಿ ಪ್ರವೇಶವನ್ನು ಪಡೆದಿರುವ ಹೋಂಡಾ ಎಲಿವೇಟ್ ಪಾಲಾಗಿದೆ. ಆದಾಗಿಯೂ, ಇದರ ಮಾರಾಟ 5,000 ಯೂನಿಟ್‌ಗಳ ಮಾರ್ಕ್‌ಗಿಂತ ಕೆಳಗಿಳಿದ ಕಾರಣ ಅದರ MoM ಅಂಕಿಅಂಶಗಳಲ್ಲಿ ಕುಸಿತಕ್ಕೆ ಸಾಕ್ಷಿಯಾಗಿದೆ.
-
ಸ್ಕೋಡಾ ಕುಶಾಕ್ ಮತ್ತು ಫೋಕ್ಸ್‌ವ್ಯಾಗನ್ ಟೈಗುನ್‌ನ ಹಿಂದಿನ ತಿಂಗಳು ಒಂದೇ ರೀತಿಯ ಮಾರಾಟವನ್ನು ಕಂಡಿದೆ, ಆದರೆ ಇದು ಸುಮಾರು 40 ಪ್ರತಿಶತದಷ್ಟು MoM ಬೆಳವಣಿಗೆಯನ್ನು ಪಡೆದಿರುವುದು ನಂತರದ ದೊಡ್ಡ ಸುಧಾರಣೆಯಾಗಿದೆ.
-
MG ಆಸ್ಟರ್‌ನ ಮಾರಾಟವು ಸ್ಥಿರವಾಗಿ ಮತ್ತು ಕಡಿಮೆ ಮಟ್ಟದಲ್ಲಿದೆ, ಇನ್ನೂ 1,000 ಮಾಸಿಕ ಮಾರಾಟದ ಅಂಕವನ್ನು ದಾಟಿಲ್ಲ.
ಇನ್ನಷ್ಟು ಓದಿ: ಕ್ರೆಟಾ ಆಟೋಮ್ಯಾಟಿಕ್