Login or Register ಅತ್ಯುತ್ತಮ CarDekho experience ಗೆ
Login

Mahindra Thar Roxx ನ ಮತ್ತೊಂದು ಟೀಸರ್‌ ಬಿಡುಗಡೆ, ಪನೋರಮಿಕ್ ಸನ್‌ರೂಫ್ ಇರುವುದು ಕನ್ಫರ್ಮ್‌..!

ಮಹೀಂದ್ರ ಥಾರ್‌ ರಾಕ್ಸ್‌ ಗಾಗಿ rohit ಮೂಲಕ ಜುಲೈ 30, 2024 04:53 pm ರಂದು ಪ್ರಕಟಿಸಲಾಗಿದೆ

ಪ್ಯಾನರೋಮಿಕ್‌ ಸನ್‌ರೂಫ್ ಮತ್ತು ಮರಳು ಬಣ್ಣದ ಫ್ಯಾಬ್ರಿಕ್‌ ಕವರ್‌ನೊಂದಿಗೆ, ಥಾರ್ ರೋಕ್ಸ್ ಡ್ಯುಯಲ್ 10.25-ಇಂಚಿನ ಡಿಸ್‌ಪ್ಲೇಗಳನ್ನು ಮತ್ತು ಅದರ ಒಟ್ಟಾರೆ ಕ್ಯಾಬಿನ್‌ನ ಒಳಗಿನ ಅನುಭವವನ್ನು ಸುಧಾರಿಸಲು ಕೆಲವು ಪ್ರೀಮಿಯಂ ಫೀಚರ್‌ಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ

  • ಮಹೀಂದ್ರಾ ಥಾರ್ 5-ಡೋರ್‌ಗೆ ಥಾರ್ ರಾಕ್ಸ್ ಎಂದು ನಾಮಕರಣ ಮಾಡಲಾಗಿದೆ.

  • ಇದರ ಇತ್ತೀಚಿನ ಟೀಸರ್ ಚಿತ್ರವು 5-ಸೀಟರ್ ಲೇಔಟ್ ಮತ್ತು ಮರಳು ಬಣ್ಣದ ಕ್ಯಾಬಿನ್ ಥೀಮ್ ಅನ್ನು ತೋರಿಸುತ್ತದೆ.

  • 10.25-ಇಂಚಿನ ಟಚ್‌ಸ್ಕ್ರೀನ್, 360-ಡಿಗ್ರಿ ಕ್ಯಾಮೆರಾ ಮತ್ತು ADAS ಅನ್ನು ಪಡೆಯಬಹುದೆಂದು ನಿರೀಕ್ಷಿಸಲಾಗಿದೆ.

  • ಇದರ 3-ಡೋರ್ ಮೊಡೆಲ್‌ನಂತೆ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳನ್ನು ಪಡೆಯುವ ಸಾಧ್ಯತೆಯಿದೆ.

  • 15 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಬೆಲೆಗಳು ಪ್ರಾರಂಭವಾಗುವ ನಿರೀಕ್ಷೆಯಿದೆ.

ಮಹೀಂದ್ರಾ ಥಾರ್ ರಾಕ್ಸ್‌ನ ವೀಡಿಯೊ ಟೀಸರ್ ಅನ್ನು ಬಿಡುಗಡೆ ಮಾಡಿದ ಸ್ವಲ್ಪ ಸಮಯದ ನಂತರ, ಭಾರತೀಯ ಮೂಲದ ಈ ಎಸ್‌ಯುವಿಯ ಹೊಸ ಟೀಸರ್ ಚಿತ್ರವನ್ನು ಮಹೀಂದ್ರಾ ಬಿಡುಗಡೆ ಮಾಡಿದೆ. ಚಿತ್ರದಲ್ಲಿ, ನಿಮ್ಮ ಗಮನವನ್ನು ಸೆಳೆಯುವ ದೊಡ್ಡ ವಿವರವೆಂದರೆ ಪ್ಯಾನರೋಮಿಕ್‌ ಸನ್‌ರೂಫ್ ಇರುವಿಕೆ, ಇದು ಇತ್ತೀಚಿನ ಒಂದೆರಡು ಸ್ಪೈ ಶಾಟ್‌ಗಳಲ್ಲಿಯೂ ಸೆರೆಹಿಡಿಯಲಾಗಿತ್ತು. ಕಾರು ತಯಾರಕರು 2024ರ ಆಗಸ್ಟ್ 15 ರಂದು ಈ ಉದ್ದವಾದ ಥಾರ್ ಅನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಇತ್ತೀಚೆಗೆ ಬಹಿರಂಗಪಡಿಸಲಾಯಿತು.

ಗಮನಿಸಿದ ಇತರ ಅಂಶಗಳು

ಪ್ಯಾನರೋಮಿಕ್‌ ಸನ್‌ರೂಫ್‌ನ ಉಪಸ್ಥಿತಿಯು ಥಾರ್ ರೋಕ್ಸ್‌ನ ನಿರೀಕ್ಷಿತ ವೈಶಿಷ್ಟ್ಯಗಳ ಸೆಟ್ಅನ್ನು ಬಲಪಡಿಸುವುದು ಮಾತ್ರವಲ್ಲದೆ, ಇದು ಅದರ ನೇರ ಪ್ರತಿಸ್ಪರ್ಧಿಗಳಾದ ಫೋರ್ಸ್ ಗೂರ್ಖಾ ಮತ್ತು ಮಾರುತಿ ಸುಜುಕಿ ಜಿಮ್ನಿಯ ಮೇಲೆ ಹಿಡಿತವನ್ನು ಸಾಧಿಸಲಿದೆ, ಏಕೆಂದರೆ ಇವೆರಡೂ ಸನ್‌ರೂಫ್‌ನೊಂದಿಗೆ ಬರುವುದಿಲ್ಲ. ಮರೆಮಾಚದ ಮೊಡೆಲ್‌ನ ಸ್ಪೈ ಶಾಟ್‌ಗಳಲ್ಲಿ ಗಮನಿಸಿದಂತೆ ಕ್ಯಾಬಿನ್‌ನ ಒಳಗಿನ ಮರಳು ಬಣ್ಣದ ಕವರ್‌ಗಳನ್ನು ಸಹ ನೀವು ಗಮನಿಸಬಹುದು. ಥಾರ್ ರೋಕ್ಸ್ 5-ಆಸನಗಳ ಕೊಡುಗೆಯಾಗಿರಬಹುದೆಂದು ನಾವು ನಂಬಿದ್ದು, ಟೀಸರ್‌ನ ಸನರೂಫ್‌ ಕುರಿತ ಟೀಸರ್‌ ರೋಕ್ಸ್‌ ಮೂರನೇ ಸಾಲಿನ ಸೀಟನ್ನು ಹೊಂದಿರುವ ಕುರಿತು ಯಾವುದೇ ಮಾಹಿತಿ ನೀಡಿಲ್ಲ.

ಫೀಚರ್‌ಗಳ ಕುರಿತು ಏನು?

ಟೀಸರ್‌ನಿಂದ, ಫ್ರೀ-ಫ್ಲೋಟಿಂಗ್ ಟಚ್‌ಸ್ಕ್ರೀನ್ ಯೂನಿಟ್ (ಎಕ್ಸ್‌ಯುವಿ400 ನಿಂದ 10.25-ಇಂಚಿನ ಡಿಸ್‌ಪ್ಲೇ ) ಒದಗಿಸುವುದನ್ನು ನಾವು ಗಮನಿಸಬಹುದು. ಇತರ ನಿರೀಕ್ಷಿತ ಫೀಚರ್‌ಗಳಲ್ಲಿ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ (ಎಕ್ಸ್‌ಯುವಿ 3XO ಮತ್ತು ಎಕ್ಸ್‌ಯುವಿ400 ನಂತೆ), ಡ್ಯುಯಲ್-ಜೋನ್ AC, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಸೇರಿವೆ.

ಸುರಕ್ಷತಾ ಫೀಚರ್‌ಗಳನ್ನು ಗಮನಿಸುವಾಗ, ಮಹೀಂದ್ರಾ ಇದನ್ನು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), 360-ಡಿಗ್ರಿ ಕ್ಯಾಮೆರಾ ಮತ್ತು ಕೆಲವು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳೊಂದಿಗೆ (ADAS) ನೀಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.

ಸಂಬಂಧಿತ: Mahindra Thar Roxx ಹೆಸರಿನ ಇನ್ಸ್ಟಾಗ್ರಾಮ್ ಸಮೀಕ್ಷೆ: ಇಲ್ಲಿದೆ ನಮಗೆ ಸಿಕ್ಕಿರುವ ಕುತೂಹಲಕಾರಿ ಫಲಿತಾಂಶಗಳು!

ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಎರಡನ್ನೂ ಪಡೆಯುವ ಸಾಧ್ಯತೆ

ಮಹೀಂದ್ರಾವು ಸ್ಟ್ಯಾಂಡರ್ಡ್‌ 3-ಡೋರ್ ಮೊಡೆಲ್‌ನಂತೆಯೇ ಅದೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಪರಿಷ್ಕೃತ ಔಟ್‌ಪುಟ್‌ಗಳ ಸಾಧ್ಯತೆಯೊಂದಿಗೆ ಇದನ್ನು ನೀಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಈ ಆಯ್ಕೆಗಳು 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ಅನ್ನು ಒಳಗೊಂಡಿವೆ, ಇದು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಲಭ್ಯವಿದೆ. ಹಿಂಬದಿ-ಚಕ್ರ-ಡ್ರೈವ್ (RWD) ಮತ್ತು ನಾಲ್ಕು-ಚಕ್ರ-ಡ್ರೈವ್‌ (4WD) ಎರಡೂ ಸಂರಚನೆಗಳು ಸಹ ನೀಡಬಹುದು.

ಇದರ ಬೆಲೆ ಎಷ್ಟು?

ಮಹೀಂದ್ರಾ ಥಾರ್ ರೋಕ್ಸ್‌ನ ಆರಂಭಿಕ ಬೆಲೆ 15 ಲಕ್ಷ ರೂ.(ಎಕ್ಸ್ ಶೋರೂಂ) ಇರಬಹುದೆಂದು ಅಂದಾಜಿಸಲಾಗಿದೆ. ಇದು ಫೋರ್ಸ್ ಗೂರ್ಖಾ 5-ಡೋರ್‌ಗೆ ನೇರ ಸ್ಪರ್ದೆಯನ್ನು ಒಡ್ಡಲಿದ್ದು, ಹಾಗೆಯೇ ಮಾರುತಿ ಜಿಮ್ನಿಗೆ ದೊಡ್ಡ ಪರ್ಯಾಯವಾದ ಆಯ್ಕೆಯಾಗಲಿದೆ.

ಮಹೀಂದ್ರಾ ಥಾರ್‌ ಕುರಿತ ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ತಪ್ಪದೆ ಫಾಲೋ ಮಾಡಿ

ಇನ್ನಷ್ಟು ಓದಿ: ಮಹೀಂದ್ರಾ ಥಾರ್ ಆಟೋಮ್ಯಾಟಿಕ್

Share via

Write your Comment on Mahindra ಥಾರ್‌ ROXX

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.11.69 - 16.73 ಲಕ್ಷ*
ಹೊಸ ವೇರಿಯೆಂಟ್
Rs.8 - 15.80 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
ಎಲೆಕ್ಟ್ರಿಕ್
ಹೊಸ ವೇರಿಯೆಂಟ್
Rs.7.94 - 13.62 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ