Login or Register ಅತ್ಯುತ್ತಮ CarDekho experience ಗೆ
Login

Mahindra XUV 3XO ನ ಬುಕಿಂಗ್‌ಗಳು ಪ್ರಾರಂಭ, ಮೇ 26ರಿಂದ ಡೆಲಿವರಿಗಳು ಸ್ಟಾರ್ಟ್‌

XUV 3XOವು MX1, MX2, MX3, AX5, ಮತ್ತು AX7 ಎಂಬ ಐದು ವಿಶಾಲ ಆವೃತ್ತಿಗಳಲ್ಲಿ ಲಭ್ಯವಿದೆ.

  • ಎಕ್ಸ್‌ಯುವಿ 3ಎಕ್ಸ್‌ಒವು ಮಹೀಂದ್ರಾ XUV300ನ ಫೇಸ್‌ಲಿಫ್ಟೆಡ್ ಆವೃತ್ತಿಯಾಗಿದೆ.
  • ಆನ್‌ಲೈನ್ ಮತ್ತು ಮಹೀಂದ್ರಾ ಡೀಲರ್‌ಶಿಪ್‌ಗಳಲ್ಲಿ 21,000 ರೂ.ನೀಡಿ ಬುಕ್ಕಿಂಗ್‌ಗಳನ್ನು ಮಾಡಬಹುದು.
  • ಹೊರಭಾಗದ ಆಪ್‌ಡೇಟ್‌ಗಳಲ್ಲಿ ಎಲ್ಲಾ ಎಲ್ಇಡಿ ಲೈಟಿಂಗ್, ಹೊಸ ಆಲಾಯ್‌ ವೀಲ್‌ಗಳು ಮತ್ತು ರಿಫ್ರೆಶ್ ಮಾಡಿದ ಬಂಪರ್‌ಗಳನ್ನು ಒಳಗೊಂಡಿವೆ.
  • ಒಳಗೆ, ಇದು ಡ್ಯುಯಲ್-ಟೋನ್ ಥೀಮ್, ತಾಜಾ ಸ್ಟೀರಿಂಗ್ ವೀಲ್‌ ಮತ್ತು ಆಪ್‌ಡೇಟ್‌ ಮಾಡಿದ ಕ್ಲೈಮೇಟ್‌ ಕಂಟ್ರೋಲ್‌ ಪ್ಯಾನೆಲ್‌ ಅನ್ನು ಹೊಂದಿದೆ.
  • ಈಗ ಡ್ಯುಯಲ್-ಝೋನ್ AC, ADAS ಮತ್ತು ಈ ಸೆಗ್ಮೆಂಟ್-ಮೊದಲ ಪನೋರಮಿಕ್ ಸನ್‌ರೂಫ್‌ನೊಂದಿಗೆ ಬರುತ್ತದೆ.
  • ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಎರಡನ್ನೂ ಪಡೆಯುತ್ತದೆ.
  • ಭಾರತದಾದ್ಯಂತ ಪರಿಚಯಾತ್ಮಕ ಬೆಲೆಗಳು 7.49 ಲಕ್ಷ ರೂ.ನಿಂದ 15.49 ಲಕ್ಷ ರೂ.ವರೆಗೆ (ಎಕ್ಸ್ ಶೋರೂಂ) ಇದೆ.

ಮಹೀಂದ್ರಾ XUV300 ನ ಫೇಸ್‌ಲಿಫ್ಟೆಡ್‌ ಆವೃತ್ತಿಯಾಗಿರುವ ಮಹೀಂದ್ರಾ XUV 3XOವು 2024ರ ಏಪ್ರಿಲ್ ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಆಪ್‌ಗ್ರೇಡ್‌ ಮಾಡಲಾದ ಈ ಎಸ್‌ಯುವಿಯು ಈಗ ಭಾರತದಾದ್ಯಂತ ಅನೇಕ ಡೀಲರ್‌ಶಿಪ್‌ಗಳನ್ನು ತಲುಪಿದೆ ಮತ್ತು 21,000 ರೂ.ಗೆ ಇದರ ಬುಕಿಂಗ್‌ಗಳನ್ನು ಆನ್‌ಲೈನ್ ಮತ್ತು ಮಹೀಂದ್ರಾ ಶೋರೂಮ್‌ಗಳಲ್ಲಿ ಈಗ ಅಧಿಕೃತವಾಗಿ ಪ್ರಾರಂಭಿಸಲಾಗಿದೆ. XUV 3XO ನಲ್ಲಿ ಹೊಸದೇನಿದೆ ಎಂಬುದರ ತ್ವರಿತ ರೌಂಡ್‌ಅಪ್‌ ಇಲ್ಲಿದೆ;

ಬಾಹ್ಯ ಮತ್ತು ಇಂಟಿರೀಯರ್‌ ಬದಲಾವಣೆಗಳ ಕುರಿತು

XUV 3XO ಇದು ತನ್ನ ಹಿಂದಿನ ಮೊಡೆಲ್‌ಗಿಂತ ಹೆಚ್ಚು ಆಧುನಿಕವಾಗಿ ಕಾಣುತ್ತದೆ, ಶಾರ್ಪ್‌ ಆದ LED ಹೆಡ್‌ಲೈಟ್‌ಗಳು ಮತ್ತು C- ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳು, ಗ್ರಿಲ್‌ನಲ್ಲಿರುವ ಪಿಯಾನೋ-ಕಪ್ಪು ಅಪ್ಲಿಕ್ ಮತ್ತು ಆಕ್ರಮಣಕಾರಿಯಾಗಿ ವಿನ್ಯಾಸಗೊಳಿಸಲಾದ ಬಂಪರ್‌ಗೆ ಇದರ ಲುಕ್‌ ಅನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇತರ ಗಮನಾರ್ಹ ವಿನ್ಯಾಸ ಬದಲಾವಣೆಗಳಲ್ಲಿ ರಿಫ್ರೆಶ್ ಮಾಡಿದ 17-ಇಂಚಿನ ಅಲಾಯ್‌ ವೀಲ್‌ಗಳು ಮತ್ತು ಕನೆಕ್ಟೆಡ್‌ ಎಲ್‌ಇಡಿ ಟೈಲ್ ಲೈಟ್‌ಗಳು ಸೇರಿವೆ.

ಒಳಭಾಗದಲ್ಲಿ ಹೆಚ್ಚು ಮಹತ್ವದ್ದಾದ ಬದಲಾವಣೆಗಳನ್ನು ಮಾಡಲಾಗಿದೆ, ಏಕೆಂದರೆಎಂಟ್ರಿ-ಲೆವೆಲ್‌ನ ಮಹೀಂದ್ರಾ ಎಸ್‌ಯುವಿ ಈಗ ಡ್ಯುಯಲ್-ಟೋನ್ ಥೀಮ್, ಆಪ್‌ಡೇಟೆಡ್‌ ಕ್ಲೈಮೇಟ್‌ ಕಂಟ್ರೋಲ್‌ ಪ್ಯಾನೆಲ್‌ ಮತ್ತು ಡ್ಯುಯಲ್ ಡಿಜಿಟಲ್ ಡಿಸ್‌ಪ್ಲೇಯೊಂದಿಗೆ ಹೆಚ್ಚು ಪ್ರೀಮಿಯಂ ಆದ ಕ್ಯಾಬಿನ್‌ನೊಂದಿಗೆ ಬರುತ್ತದೆ.

ಇದಕ್ಕೆ ಕುರಿತಂತೆ: Mahindra XUV 3XO ವಿಮರ್ಶೆ: ಫಸ್ಟ್‌ ಡ್ರೈವ್‌ನ ಅನುಭವ

XUV 3XO ವೈಶಿಷ್ಟ್ಯಗಳು: ಇದು ಏನು ಪಡೆಯುತ್ತದೆ?

ಮಹೀಂದ್ರಾ XUV 3XO ಅನ್ನು ಪ್ಯಾನರೋಮಿಕ್‌ ಸನ್‌ರೂಫ್ (ಸೆಗ್ಮೆಂಟ್‌ನಲ್ಲಿ ಮೊದಲು), ಡ್ಯುಯಲ್-ಜೋನ್ ಆಟೋ ಎಸಿ, ಡ್ಯುಯಲ್ 10.25-ಇಂಚಿನ ಡಿಸ್‌ಪ್ಲೇಗಳು (ಒಂದು ಇನ್ಫೋಟೈನ್‌ಮೆಂಟ್ ಮತ್ತು ಇನ್ನೊಂದು ಇನ್‌ಸ್ಟ್ರುಮೆಂಟೇಶನ್‌ಗಾಗಿ) ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್‌ನಂತಹ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ.

ಮಹೀಂದ್ರ XUV 3XO ನ ಸುರಕ್ಷತಾ ಪ್ಯಾಕೇಜ್‌ ಆರು ಏರ್‌ಬ್ಯಾಗ್‌ಗಳನ್ನು (ಎಲ್ಲಾ ಆವೃತ್ತಿಗಳಲ್ಲಿ), 360-ಡಿಗ್ರಿ ಕ್ಯಾಮೆರಾ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್-ಕೀಪ್ ಅಸಿಸ್ಟ್ ಮತ್ತು ಆಟೋ ಎಮರ್ಜೆನ್ಸಿ ಬ್ರೇಕಿಂಗ್ ನಂತಹ ಕೆಲವು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಒಳಗೊಂಡಿದೆ.

ಆಫರ್‌ನಲ್ಲಿರುವ ಪವರ್‌ಟ್ರೇನ್‌ಗಳು

ಸ್ಪೆಸಿಫಿಕೇಷನ್

1.2-ಲೀಟರ್ ಟರ್ಬೊ-ಪೆಟ್ರೋಲ್

1.2-ಲೀಟರ್ TGDi ಟರ್ಬೊ-ಪೆಟ್ರೋಲ್

1.5-ಲೀಟರ್ ಡೀಸೆಲ್

ವರ್‌

112 ಪಿಎಸ್‌

130 ಪಿಎಸ್‌

117 ಪಿಎಸ್‌

ಟಾರ್ಕ್‌

200 ಎನ್‌ಎಮ್‌

250 ಎನ್‌ಎಮ್‌ವರೆಗೆ

300 ಎನ್ಎಮ್‌

ಟ್ರಾನ್ಸ್‌ಮಿಷನ್‌

6-ಸ್ಪೀಡ್ ಮ್ಯಾನುಯಲ್‌, 6-ಸ್ಪೀಡ್ ಆಟೋಮ್ಯಾಟಿಕ್‌

6-ಸ್ಪೀಡ್ ಮ್ಯಾನುಯಲ್‌, 6-ಸ್ಪೀಡ್ ಆಟೋಮ್ಯಾಟಿಕ್‌

6-ಸ್ಪೀಡ್ ಮ್ಯಾನುಯಲ್‌, 6-ಸ್ಪೀಡ್ ಎಎಮ್‌ಟಿ

ಕ್ಲೈಮ್‌ ಮಾಡಲಾದ ಮೈಲೇಜ್‌

ಪ್ರತಿ ಲೀ.ಗೆ 18.89 ಕಿ.ಮೀ., ಪ್ರತಿ ಲೀ.ಗೆ 17.96 ಕಿ.ಮೀ

ಪ್ರತಿ ಲೀ.ಗೆ 20.1 ಕಿ.ಮೀ., ಪ್ರತಿ ಲೀ.ಗೆ 18.2 ಕಿ.ಮೀ

ಪ್ರತಿ ಲೀ.ಗೆ 20.6 ಕಿ.ಮೀ., ಪ್ರತಿ ಲೀ.ಗೆ 21.2 ಕಿ.ಮೀ

ಮಹೀಂದ್ರಾ ಎಕ್ಸ್‌ಯುವಿ700 ನಂತೆ, ಫೇಸ್‌ಲಿಫ್ಟೆಡ್ ಸಬ್-4ಎಮ್‌ ಎಸ್‌ಯುವಿಯು Zip, Zap ಮತ್ತು ಜೂಮ್ ಎಂಬ ಮೂರು ಡ್ರೈವ್ ಮೋಡ್‌ಗಳೊಂದಿಗೆ ಬರುತ್ತದೆ, ಆದರೆ ಇವುಗಳು ಪೆಟ್ರೋಲ್-ಆಟೋಮ್ಯಾಟಿಕ್‌ ಆವೃತ್ತಿಗಳಿಗೆ ಸೀಮಿತವಾಗಿವೆ.

ಇದರ ಬೆಲೆಯೆಷ್ಟು?

ಭಾರತದಾದ್ಯಂತ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒನ ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆಯು 7.49 ಲಕ್ಷ ರೂ.ನಿಂದ 15.49 ಲಕ್ಷದವರೆಗೆ ಇದೆ. ಇದು ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಕಿಯಾ ಸೋನೆಟ್, ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕೈಗರ್ ಮತ್ತು ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್‌ನಂತಹ ಸಬ್ -4 ಮೀ ಕ್ರಾಸ್‌ಒವರ್‌ಗಳೊಂದಿಗೆ ಸ್ಪರ್ಧಿಸುತ್ತದೆ.

ಇನ್ನಷ್ಟು ಓದಿ : ಎಕ್ಸ್‌ಯುವಿ 3ಎಕ್ಸ್‌ಒ ಎಎಮ್‌ಟಿ

r
ಅವರಿಂದ ಪ್ರಕಟಿಸಲಾಗಿದೆ

rohit

  • 30 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment on Mahindra ಎಕ್ಸ್ ಯುವಿ 3ಎಕ್ಸ್ ಒ

Read Full News

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ