Login or Register ಅತ್ಯುತ್ತಮ CarDekho experience ಗೆ
Login

ಮಹೀಂದ್ರಾ ಎಕ್ಸ್‌ಯುವಿ400 ಪರಿಣಾಮ: ಟಾಟಾ ಕಡಿತಗೊಳಿಸಿದೆ ನೆಕ್ಸಾನ್ ಇವಿ ಪ್ರೈಮ್ ಮತ್ತು ಮ್ಯಾಕ್ಸ್‌ನ ಬೆಲೆ

ಜನವರಿ 19, 2023 04:57 pm ರಂದು rohit ಮೂಲಕ ಪ್ರಕಟಿಸಲಾಗಿದೆ
63 Views

ನೆಕ್ಸಾನ್ ಇವಿ ಮ್ಯಾಕ್ಸ್ ಈಗ ಸುಮಾರು ರೂ 2 ಲಕ್ಷದಷ್ಟು ಕಡಿಮೆ ಮತ್ತು ರೇಂಜ್ 437ಕಿಮೀ ನಿಂದ 453ಕಿಮೀ ತನಕ

  • ರೇಂಜ್ ನವೀಕರಣವನ್ನು ಜನವರಿ 25 ರಿಂದ ಪ್ರಾರಂಭಿಸಲಾಗುವುದು.
  • ಟಾಟಾ ಈಗ ಮ್ಯಾಕ್ಸ್‌ನ ಶ್ರೇಣಿಯಲ್ಲಿ ಹೊಸ ಬೇಸ್-ಸ್ಪೆಕ್ ಎಕ್ಸ್ಎಂ ಟ್ರಿಮ್ ನೀಡುತ್ತಿದೆ.
  • ಅದರ ಬುಕಿಂಗ್‌ಗಳು ಈಗ ನಡೆಯುತ್ತಿದೆ ಮತ್ತು ಡೆಲಿವರಿಗಳು ಏಪ್ರಿಲ್‌ನಿಂದ ಪ್ರಾರಂಭವಾಗುತ್ತದೆ.
  • ನೆಕ್ಸಾನ್ ಇವಿ ಪ್ರೈಮ್ ರೂ. 50,000 ರಷ್ಟು ಕಡಿಮೆಯಾಗಿದೆ.
  • ನೆಕ್ಸಾನ್ ಇವಿ ಮ್ಯಾಕ್ಸ್‌ನ ಬೆಲೆಯನ್ನು ಏಕರೂಪವಾಗಿ ರೂ.85,000 ರಷ್ಟು ಕಡಿತಗೊಳಿಸಲಾಗಿದೆ.
  • ಪ್ರಸಕ್ತ ನೆಕ್ಸಾನ್ ಇವಿ ಮ್ಯಾಕ್ ಮಾಲೀಕರು ಫೆಬ್ರವರಿ 15 ರಿಂದ ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಹೆಚ್ಚಿದ ರೇಂಜ್ ಲಾಭವನ್ನು ಪಡೆಯಲಿದ್ದಾರೆ.
  • ನೆಕ್ಸಾನ್ ಇವಿ ಪ್ರೈಮ್ 30.2 kWh ಬ್ಯಾಟರಿ ಹೊಂದಿದ್ದು, ಮ್ಯಾಕ್ಸ್ 40.5 kWh
  • ಯೂನಿಟ್ ಹೊಂದಿದೆ

ಟಾಟಾ ನೆಕ್ಸಾನ್ ಇವಿ ಪ್ರೈಮ್ ಮತ್ತು ಮ್ಯಾಕ್ಸ್‌ನ ಬೆಲೆಗಳನ್ನು ಪರಿಷ್ಕರಿಸಿದೆ. ಇದಿಷ್ಟೇ ಈ ಕಾರುತಯಾರಕರು ಮಾಡಿದ ಬದಲಾವಣೆ ಎಂದು ಭಾವಿಸಬೇಡಿ, ಅದು ಮ್ಯಾಕ್ಸ್‌ನ ಶ್ರೇಣಿಯಲ್ಲಿ ಹೊಸ ಬೇಸ್-ಸ್ಪೆಕ್ ಎಕ್ಸ್ಎಂ ಟ್ರಿಮ್ ಅನ್ನು ಪರಿಚಯಿಸಿದೆ ಮತ್ತು ಅದರ ರೇಂಜ್ 437 ಕಿಮೀ ನಿಂದ 453 ಕಿಮೀ ವರೆಗೆ ಏರಿಕೆಯಾಗಿದೆ.

ಪ್ರೈಮ್ ಮತ್ತು ಮ್ಯಾಕ್ಸ್ ಎರಡರ ಪರಿಷ್ಕೃತ ವೇರಿಯೆಂಟ್‌ವಾರು ಬೆಲೆಗಳನ್ನು ಇಲ್ಲಿ ನೋಡಿ:

ನೆಕ್ಸಾನ್ ಇವಿ ಪ್ರೈಮ್

ವೇರಿಯೆಂಟ್

ಹಳೆಯ ಬೆಲೆ

ಹೊಸ ಬೆಲೆ

ವ್ಯತ್ಯಾಸ

XM

ರೂ 14.99 ಲಕ್ಷ

ರೂ 14.49 ಲಕ್ಷ

-ರೂ 50,000

XZ+

ರೂ 16.30 ಲಕ್ಷ

ರೂ 15.99 ಲಕ್ಷ

- ರೂ 31,000

XZ+ Lux

ರೂ 17.30 ಲಕ್ಷ

ರೂ 16.99 ಲಕ್ಷ

- ರೂ 31,000

ಇದನ್ನು ಓದಿ: ಟಾಟಾ ಆಲ್ಟ್ರೋಝ್ ರೇಸರ್ ಸೆಟ್ ಶೀಘ್ರದಲ್ಲೇ ಮಾರಾಟಕ್ಕೆ ಬರಲಿದೆ

ನೆಕ್ಸಾನ್ ಇವಿ ಮ್ಯಾಕ್ಸ್

ವೇರಿಯೆಂಟ್

ಹಳೆಯ ಬೆಲೆ

ಹೊಸ ಬೆಲೆ

ವ್ಯತ್ಯಾಸ

3.3kW ಚಾರ್ಜರ್

XM (new)

ರೂ 16.49 ಲಕ್ಷ

XZ+

ರೂ 18.34 ಲಕ್ಷ

ರೂ 17.49 ಲಕ್ಷ

- ರೂ 85,000

XZ+ Lux

ರೂ 19.34 ಲಕ್ಷ

ರೂ 18.49 ಲಕ್ಷ

- ರೂ 85,000

7.2kW ಚಾರ್ಜರ್

XM (new)

ರೂ 16.99 ಲಕ್ಷ

XZ+

ರೂ 18.84 ಲಕ್ಷ

ರೂ 17.99 ಲಕ್ಷ

- ರೂ 85,000

XZ+ Lux

ರೂ 19.84 ಲಕ್ಷ

ರೂ 18.99 ಲಕ್ಷ

- ರೂ 85,000

ನೆಕ್ಸಾನ್ ಇವಿ ಪ್ರೈಮ್‌ನ ಬೆಲೆಗಳನ್ನು ಅರ್ಧ ಲಕ್ಷ ರೂಪಾಯಿಗಳವರೆಗೆ ಕಡಿತಗೊಳಿಸಲಾಗಿದ್ದು, ನೆಕ್ಸಾನ್ ಇವಿ ವೇರಿಯೆಂಟ್‌ಗಳು ಈಗ ಏಕರೂಪವಾಗಿ ರೂ.85,000ದಷ್ಟು ಕಡಿಮೆಯಾಗಿದೆ. ಎರಡನೆಯದು ಎರಡೂ ಚಾರ್ಜರ್ ಆಯ್ಕೆಗಳೊಂದಿಗೆ ಹೊಸ ಪ್ರವೇಶ-ಹಂತದ ಎಕ್ಸ್ಎಂ ಟ್ರಿಮ್ ಅನ್ನು ಹೊಂದಿದ್ದು ಇದು ಹಿಂದಿಗಿಂತ ರೂ. 1.85 ಲಕ್ಷದಷ್ಟು ಕಡಿಮೆಯಾಗಿದೆ.

ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್‌ನ ಹೊಸ ಎಕ್ಸ್ಎಂ ಟ್ರಿಮ್, ಆಟೋ ಎಸಿ, ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಪ್ರಾಜೆಕ್ಟರ್ ಹೆಡ್‌ಲೈಟ್‌ಗಳು,ಎಲ್‌ಇಡಿ ಟೈಲ್‌ಲೈಟ್‌ಗಳು, ಪುಶ್-ಬಟನ್ ಸ್ಟಾರ್ಟ್‌/ಸ್ಟಾಪ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಕನೆಕ್ಟಡ್ ಕಾರ್ ಟೆಕ್ ಫೀಚರ್‌ಗಳೊಂದಿಗೆ ನೀಡುತ್ತಿದೆ. ಸುರಕ್ಷತೆಯ ನಿಟ್ಟಿನಲ್ಲಿ, ಇದು ಇಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಮತ್ತು ರಿಯರ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

ಬೆಲೆ ಪರಿಷ್ಕರಣೆಗಳ ಹೊರತಾಗಿ, ನೆಕ್ಸಾನ್ ಇವಿ ಮ್ಯಾಕ್ಸ್ ತನ್ನ ಕ್ಲೈಮ್ ಮಾಡಿದ ರೇಂಜ್‌ಗೆ ಗಮನಾರ್ಹ ಏರಿಕೆಯನ್ನೂ ಪಡೆದಿದೆ. ಇಲೆಕ್ಟ್ರಿಕ್ ಎಸ್‌ಯುವಿ ನಲ್ಲಿ 437 ಕಿಮೀ ನ ಎ ARAI- ರೇಟ್ ಮಾಡಲಾದ ರೇಂಜ್ ಹೊಂದಿತ್ತು, ಆದರೆ ಈಗ ಇದು 453 ಕಿಮೀ (MIDC-ರೇಟ್ ಮಾಡಲಾದ) ಕ್ರಮಿಸುತ್ತದೆ. ಈ ನವೀಕರಣವು ಜನವರಿ 25 ರಿಂದ ಜಾರಿಗೆ ಬರಲಿದ್ದು ಈಗ ಇರುವ ನೆಕ್ಸಾನ್ ಇವಿ ಮ್ಯಾಕ್ಸ್‌ನ ಮಾಲೀಕರು ಫೆಬ್ರವರಿ 15 ರಿಂದ ಟಾಟಾ ಡೀಲರ್‌ಶಿಪ್‌ಗಳಲ್ಲಿ ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಇದೇ ಲಾಭವನ್ನು ಪಡೆಯಲಿದ್ದಾರೆ.

ಇದನ್ನೂ ಪರಿಶೀಲಿಸಿ: ಟಾಟಾ ಹ್ಯಾರಿಯರ್ ಮತ್ತು ಹ್ಯಾರಿಯರ್ ಇವಿ ಪರಿಕಲ್ಪನೆಯ ನಡುವಿನ ಡಿಸೈನ್ ವ್ಯತ್ಯಾಸಗಳನ್ನು 12 ಚಿತ್ರಗಳಲ್ಲಿ ಅನ್ವೇಷಿಸಿ

ನೆಕ್ಸಾನ್ ಇವಿ ಪ್ರೈಮ್ ಮತ್ತು ಮ್ಯಾಕ್ಸ್‌ನ ತಾಂತ್ರಿಕ ನಿರ್ದಿಷ್ಟತೆಗಳ ಒಳನೋಟ ಇಲ್ಲಿದೆ:

ನಿರ್ದಿಷ್ಟತೆಗಳು

ನೆಕ್ಸಾನ್ ಇವಿ ಪ್ರೈಮ್

ನೆಕ್ಸಾನ್ ಇವಿ ಮ್ಯಾಕ್ಸ್

ಬ್ಯಾಟರಿ ಪ್ಯಾಕ್

ಇಲೆಕ್ಟ್ರಿಕ್ ಮೋಟರ್ ಪವರ್

129PS

143PS

ಇಲೆಕ್ಟ್ರಿಕ್ ಮೋಟರ್ ಟಾರ್ಕ್

245Nm

250Nm

ಚಾರ್ಜಿಂಗ್ ಸಮಯ

8.5 ಗಂಟೆಗಳು (3.3kW)

8.5 ಗಂಟೆಗಳು (3.3kW)/ 6 ಗಂಟೆಗಳು (7.2kW)

50kW DC ಫಾಸ್ಟ್ ಚಾರ್ಜಿಂಗ್

60 ನಿಮಿಷಗಳಲ್ಲಿ 0-80 ಪ್ರತಿಶತ

56 ನಿಮಿಷಗಳಲ್ಲಿ 0-80 ಪ್ರತಿಶತ

ಟಾಟಾ ಈಗ ಹೊಸ ಇವಿ ಮ್ಯಾಕ್ಸ್ ಟ್ರಿಮ್‌ಗೆ ಇಂದಿನಿಂದ ಬುಕಿಂಗ್‌ಗಳನ್ನು ಸ್ವೀಕರಿಸುತ್ತಿದೆ ಮತ್ತು ಡೆಲಿವರಿಗಳು ಏಪ್ರಿಲ್‌ನಿಂದ ಪ್ರಾರಂಭವಾಗುತ್ತದೆ. ನೆಕ್ಸಾನ್ ಇವಿ ಪ್ರೈಮ್ ಮತ್ತು ಮ್ಯಾಕ್ಸ್‌ನ ಪ್ರತಿಸ್ಪರ್ಧಿ ಹೊಸದಾಗಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್‌ಯುವಿ400 ಹ್ಯುಂಡೈ ಕೋನಾ ಇಲೆಕ್ಟ್ರಿಕ್ ಮತ್ತು MG ZS ಇವಿಗಿಂತ ಹೆಚ್ಚು ಕೈಗೆಟುಕುವ ಬೆಲೆಯ ಆಯ್ಕೆಯಾಗಿದೆ.

ಇನ್ನಷ್ಟು ಓದಿ: ನೆಕ್ಸಾನ್ ಇವಿ ಪ್ರೈಮ್ ಆಟೋಮ್ಯಾಟಿಕ್

Share via

Write your Comment on Tata ನೆಕ್ಸಾನ್ ಇವಿ Prime 2020-2023

explore similar ಕಾರುಗಳು

ಓಲಾ ಎಲೆಕ್ಟ್ರಿಕ್ ಕಾರ್

4.311 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.40 ಲಕ್ಷ* Estimated Price
ಡಿಸೆಂಬರ್ 16, 2036 Expected Launch
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

ಟಾಟಾ ನೆಕ್ಸಾನ್‌ ಇವಿ prime 2020-2023

4.3167 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
ಟಾಟಾ ನೆಕ್ಸಾನ್‌ ಇವಿ prime 2020-2023 IS discontinued ಮತ್ತು no longer produced.

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ