Mahindra XUV400: ಈ ಎಲೆಕ್ಟ್ರಿಕ್ ಎಸ್‌ಯುವಿಗೆ 5 ಹೊಸ ಸುರಕ್ಷಾ ಫೀಚರ್‌ಗಳ ಸೇರ್ಪಡೆ

published on ಆಗಸ್ಟ್‌ 10, 2023 04:14 pm by ansh for ಮಹೀಂದ್ರ ಎಕ್ಸ್‌ಯುವಿ 400 ಇವಿ

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಫೀಚರ್‌ಗಳು ಟಾಪ್-ಸ್ಪೆಕ್ ELಗೆ ಸೀಮಿತವಾಗಿದ್ದು ಇದರ ಬೆಲೆ ರೂ 19.19 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುತ್ತದೆ.

Mahindra XUV400 EV

XUV300 SUVಯ ಇಲೆಕ್ಟ್ರಿಕ್ ಆವೃತ್ತಿಯಾದ ಮಹೀಂದ್ರಾ XUV400 EV, ಈಗ ಹೊಸ ಸುರಕ್ಷತಾ ಫೀಚರ್‌ಗಳೊಂದಿಗೆ ಬಂದಿದೆ. ಈ ಕಾರುತಯಾರಕರು ಇಲೆಕ್ಟ್ರಿಕ್ SUVಯ ಟಾಪ್-ಸ್ಪೆಕ್ EL ವೇರಿಯೆಂಟ್‌ಗೆ ಐದು ಹೊಸ ಸುರಕ್ಷತಾ ಫೀಚರ್‌ಗಳನ್ನು ಸೇರಿಸಿದ್ದು, ಇದು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್(TPMS), ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್ ಹೋಲ್ಡ್ ಅಸಿಸ್ಟ್, ಆಟೋ-ಡಿಮ್ಮಿಂಗ್ IRVM ಮತ್ತು ಮುಂಭಾಗದ ಫಾಗ್‌ ಲ್ಯಾಂಪ್‌ಗಳನ್ನು ಒಳಗೊಂಡಿದೆ.

 

ಬೆಲೆಗಳು

ವೇರಿಯೆಂಟ್

ಹಳೆಯ ಬೆಲೆ

ಹೊಸ ಬೆಲೆ

ವ್ಯತ್ಯಾಸ

EC ಸ್ಟಾಂಡರ್ಡ್

ರೂ 15.99 ಲಕ್ಷ

ರೂ 15.99 ಲಕ್ಷ

ಬದಲಾವಣೆ ಇಲ್ಲ

EC ಫಾಸ್ಟ್ ಚಾರ್ಜ್

ರೂ 16.49 lakh

ರೂ 16.49 ಲಕ್ಷ

ಬದಲಾವಣೆ ಇಲ್ಲ

EL ಫಾಸ್ಟ್ ಚಾರ್ಜ್

ರೂ 18.99 lakh

ರೂ 19.19 ಲಕ್ಷ

+ ರೂ 20,000

EL ಡ್ಯುಯಲ್ ಟೋನ್ ಫಾಸ್ಟ್ ಚಾರ್ಜ್

ರೂ 19.19 ಲಕ್ಷ

ರೂ 19.39 ಲಕ್ಷ

+ ರೂ 20,000

ಕೇವಲ ಟಾಪ್-ಸ್ಪೆಕ್ EL ಟ್ರಿಮ್ ಮಾತ್ರ ಈ ಹೆಚ್ಚುವರಿ ಫೀಚರ್‌ಗಳನ್ನು ಹೊಂದಿದ್ದು, ರೂ 20,000ದಷ್ಟು ದುಬಾರಿಯಾಗುತ್ತದೆ. ಆರಂಭಿಕ-ಸ್ಪೆಕ್ EC ಬೆಲೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

 

ಹೆಚ್ಚುವರಿ ಫೀಚರ್‌ಗಳು

Mahindra XUV400 EV Cabin

ಹೊಸ ಸುರಕ್ಷತಾ ಫೀಚರ್‌ಗಳಿಗೆ ಹೊರತಾಗಿ, ಈ XUV400 EV ಈಗ ಎರಡು ಟ್ವೀಟರ್‌ಗಳು, ಕ್ರೂಸ್ ಕಂಟ್ರೋಲ್ ಮತ್ತು ಅನುಕೂಲಕ್ಕಾಗಿ ಬೂಟ್ ಲ್ಯಾಂಪ್‌ನೊಂದಿಗೆ ಸುಸಜ್ಜಿತವಾಗಿದೆ.

 ಇದನ್ನೂ ಓದಿ:   ಆಗಸ್ಟ್ 15 ರ ಇವೆಂಟ್‌ನಲ್ಲಿ ವೇದಿಕೆಗೆ ಬರಲಿದೆ ಇಲೆಕ್ಟ್ರಿಕ್ ಮಹೀಂದ್ರಾ ಥಾರ್ ಪರಿಕಲ್ಪನೆ 

 ಈ ಇಲೆಕ್ಟ್ರಿಕ್ SUV ಈಗಾಗಲೇ 7-ಇಂಚು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್, ಎತ್ತರ-ಹೊಂದಿಸಬಲ್ಲ ಡ್ರೈವರ್ ಸೀಟು, ಇಲೆಕ್ಟ್ರಿಕ್ ಸನ್‌ರೂಫ್, ಆರರ ತನಕದ ಏರ್‌ಬ್ಯಾಗ್‌ಗಳು, ರೈನ್ ಸೆನ್ಸಿಂಗ್ ವೈಪರ್‌ಗಳು ಮತ್ತು ರಿಯರ್ ವ್ಯೂ ಕ್ಯಾಮರಾವನ್ನು ಈಗಾಗಲೇ ಪಡೆದಿದೆ.

ಅದೇ ಪವರ್‌ಟ್ರೇನ್

Mahindra XUV400 EV Charging Port

ಇಲ್ಲಿ ಯಾವುದೇ ಬದಲಾವಣೆ ಇಲ್ಲ. ಇದು 34.5kWh ಮತ್ತು 39.4kWh ಸಾಮರ್ಥ್ಯದ ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಬರುತ್ತದೆ. ಎರಡೂ ಬ್ಯಾಟರಿ ಪ್ಯಾಕ್‌ಗಳನ್ನು 150PS ಮತ್ತು 310Nm ಉತ್ಪಾದಿಸುವ ಇಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಸಲಾಗಿದೆ ಮತ್ತು ಅನುಕ್ರಮವಾಗಿ 375km ಮತ್ತು 456km ಡ್ರೈವಿಂಗ್ ರೇಂಜ್ ಅನ್ನು ಕ್ಲೈಮ್ ಮಾಡುತ್ತದೆ.

ಪ್ರತಿಸ್ಪರ್ಧಿಗಳು

Mahindra XUV400 EV

 ಈ XUV400 EV ಬೆಲೆಯನ್ನು ಈಗ ರೂ 15.99 ಲಕ್ಷ ಮತ್ತು ರೂ 19.39 ಲಕ್ಷದ (ಎಕ್ಸ್-ಶೋರೂಂ) ತನಕ ನಿಗದಿಪಡಿಸಲಾಗಿದ್ದು ಇದು ಹ್ಯುಂಡೈ ಕೋನಾ ಇಲೆಕ್ಟ್ರಿಕ್ ಮತ್ತು MG ZS EV ಗೆ ಹೋಲಿಸಿದರೆ ಕೈಗೆಟುಕುವ ಪರ್ಯಾಯವಾಗಿದೆ.

 ಇನ್ನಷ್ಟು ಓದಿ : ಮಹೀಂದ್ರಾ XUV400 EV ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಹೀಂದ್ರ XUV400 EV

Read Full News

explore ಇನ್ನಷ್ಟು on ಮಹೀಂದ್ರ ಎಕ್ಸ್‌ಯುವಿ 400 ಇವಿ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience