• English
  • Login / Register

ದೀಪಾವಳಿ ಆಫರ್: ಮಹೀಂದ್ರಾ ಎಕ್ಸ್‌ಯುವಿ400 ಮೇಲೆ 3.5 ಲಕ್ಷ ರೂ.ವರೆಗಿನ ರಿಯಾಯಿತಿ

ಮಹೀಂದ್ರ XUV400 EV ಗಾಗಿ rohit ಮೂಲಕ ನವೆಂಬರ್ 06, 2023 05:05 pm ರಂದು ಪ್ರಕಟಿಸಲಾಗಿದೆ

  • 27 Views
  • ಕಾಮೆಂಟ್‌ ಅನ್ನು ಬರೆಯಿರಿ

ಎಲೆಕ್ಟ್ರಿಕ್ ಎಸ್‌ಯುವಿಯ ಟಾಪ್ ವೇರಿಯಂಟ್‌ಗಳಲ್ಲಿ ಗರಿಷ್ಠ ಉಳಿತಾಯವನ್ನು ಮಾಡಬಹುದು.

Mahindra XUV400

  •  ಮಹೀಂದ್ರಾ ಎಕ್ಸ್‌ಯುವಿ400 ನ ಕೆಲವು ಸುರಕ್ಷತಾ ಫೀಚರ್‌ಗಳನ್ನು ಆಗಸ್ಟ್ 2023 ರಲ್ಲಿ ಅಪ್‌ಡೇಟ್ ಮಾಡಿದೆ.
  •  ಆಗಸ್ಟ್‌ಗಿಂತ ಮೊದಲಿನ ಎಲೆಕ್ಟ್ರಿಕ್ ಎಸ್‌ಯುವಿಯ ಹಳೆಯ ಸ್ಟಾಕ್ ಒಟ್ಟಾರೆ ರೂ. 3.5 ಲಕ್ಷದವರೆಗೆ ರಿಯಾಯಿತಿಗಳನ್ನು ಪಡೆಯುತ್ತದೆ.
  •  ಅಪ್‌ಡೇಟ್ ಮಾಡಲಾದ ಎಕ್ಸ್‌ಯುವಿ400 ಗೆ ಕೂಡ ರೂ. 3 ಲಕ್ಷದವರೆಗೆ ಉಳಿತಾಯ ಮಾಡಬಹುದಾಗಿದೆ.
  •  ಈ ಕೊಡುಗೆಗಳು ಖರೀದಿಸುವ ನಗರವನ್ನು ಅವಲಂಬಿಸಿ ಬದಲಾಗಬಹುದು.
  •  ಎಲ್ಲಾ ಕೊಡುಗೆಗಳು ನವೆಂಬರ್ 2023 ರ ಅಂತ್ಯದವರೆಗೆ ಮಾನ್ಯವಾಗಿರುತ್ತವೆ.

ಜನರು ಹೊಸ ಕಾರುಗಳು ಸೇರಿದಂತೆ ಹೊಸ ಉತ್ಪನ್ನಗಳನ್ನು ಖರೀದಿಸಲು ಬಯಸುವ ವರ್ಷದ ಅತ್ಯಂತ ಆದ್ಯತೆಯ ಸಮಯಗಳಲ್ಲಿ ದೀಪಾವಳಿ ಒಂದಾಗಿದೆ, ಏಕೆಂದರೆ ಈ ಸಮಯದಲ್ಲಿ ಅವುಗಳಿಗೆ ಭಾರೀ ರಿಯಾಯಿತಿಗಳು ಮತ್ತು ಪ್ರಯೋಜನಗಳು ದೊರೆಯುವ ಸಾಧ್ಯತೆಯಿರುತ್ತದೆ. ಆದ್ದರಿಂದ, ನೀವು ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಎಸ್‌ಯುವಿ ಅನ್ನು ಖರೀದಿಸಲು ಯೋಜಿಸುತ್ತಿದ್ದರೆ, ನಿರ್ದಿಷ್ಟವಾಗಿ ಮಹೀಂದ್ರಾ ಎಕ್ಸ್‌ಯುವಿ400 ಅನ್ನು ಖರೀದಿಸಲು ಇದು ಉತ್ತಮ ಸಮಯವಾಗಿರಬಹುದು. ಎಲೆಕ್ಟ್ರಿಕ್ ಮಾಡೆಲ್‌ಗೆ ನವೆಂಬರ್ 2023 ರಲ್ಲಿ ಕನಿಷ್ಠ ಒಂದು ಲಕ್ಷದ ಉಳಿತಾಯವನ್ನು ಪಡೆದುಕೊಳ್ಳಬಹುದು.

  

ನಗರ ಮತ್ತು ವೇರಿಯಂಟ್‌ವಾರು ಕೊಡುಗೆಗಳು

ವೇರಿಯಂಟ್

ದೆಹಲಿ ಕೊಡುಗೆಗಳು

ಮುಂಬೈ ಕೊಡುಗೆಗಳು

ESP ಅಲ್ಲದ EC (3.2kW)

ಲಭ್ಯವಿಲ್ಲ

ರೂ. 1.5 ಲಕ್ಷ

ESP ಅಲ್ಲದ EL

ರೂ. 3 ಲಕ್ಷ

ರೂ. 3.5 ಲಕ್ಷ

ESP ಅಲ್ಲದ EL ಡ್ಯುಯಲ್ ಟೋನ್

ರೂ. 3 ಲಕ್ಷ

ರೂ. 3.5 ಲಕ್ಷ

ESP EC (3.2kW)

ರೂ. 1 ಲಕ್ಷ

ರೂ. 1.5 ಲಕ್ಷ

ESP EL

ರೂ. 2.5 ಲಕ್ಷ

ರೂ. 3 ಲಕ್ಷ

ESP EL ಡ್ಯುಯಲ್ ಟೋನ್

ರೂ. 2.5 ಲಕ್ಷ

ರೂ. 3 ಲಕ್ಷ

ಗಮನಿಸಿ: ಈ ಕೊಡುಗೆಗಳು ಮೇಲೆ ತಿಳಿಸಲಾದ ಎರಡು ನಗರಗಳಿಗೆ ಸೀಮಿತವಾಗಿವೆ ಮತ್ತು ನೀವು ವಾಸಿಸುವ ರಾಜ್ಯ ಮತ್ತು ಆಯ್ಕೆ ಮಾಡಿದ ವೇರಿಯಂಟ್ ಅನ್ನು ಆಧರಿಸಿ ಬದಲಾಗುವ ಸಾಧ್ಯತೆಯಿದೆ. ಹೆಚ್ಚಿನ ವಿವರಗಳಿಗಾಗಿ ಹತ್ತಿರದ ಮಹೀಂದ್ರಾ ಡೀಲರ್‌ಶಿಪ್ ಅನ್ನು ಸಂಪರ್ಕಿಸಲು ನಾವು ನಿಮ್ಮನ್ನು ವಿನಂತಿಸುತ್ತೇವೆ.

ಎಕ್ಸ್‌ಯುವಿ400 ಯ ಕೆಲವು ಸುರಕ್ಷತಾ ಫೀಚರ್‌ಗಳನ್ನು ಆಗಸ್ಟ್ 2023 ರಲ್ಲಿ ಅಪ್‌ಡೇಟ್ ಮಾಡಲಾಯಿತು, ಬಳಿಕ ಅದರ ಬೆಲೆಯನ್ನು ರೂ. 20,000 ವರೆಗೆ ಹೆಚ್ಚಿಸಲಾಯಿತು. ಆದ್ದರಿಂದ, ಪೂರ್ವ-ಅಪ್‌ಡೇಟ್ ಮಾಡೆಲ್‌ನ ಹಳೆಯ ದಾಸ್ತಾನನ್ನು ಗರಿಷ್ಠ ರೂ. 3.5 ಲಕ್ಷದವರೆಗಿನ ರಿಯಾಯಿತಿಗಳೊಂದಿಗೆ ಪಡೆದುಕೊಳ್ಳಬಹುದು.

 

ಎಲೆಕ್ಟ್ರಿಕ್ ಪವರ್‌ಟ್ರೇನ್ ಮತ್ತು ಚಾರ್ಜಿಂಗ್ ವಿವರಗಳು

Mahindra XUV400

ಮಹೀಂದ್ರಾ ಎಕ್ಸ್‌ಯುವಿ400 EV ಯು 34.5kWh ಮತ್ತು 39.4kWh ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳಲ್ಲಿ ಲಭ್ಯವಿದೆ. ಇದು ಎಲೆಕ್ಟ್ರಿಕ್ ಮೋಟಾರ್ ಅನ್ನು ಹೊಂದಿದ್ದು 150PS ಪವರ್ ಮತ್ತು 310Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ 34.5kWh ಬ್ಯಾಟರಿ ಪ್ಯಾಕ್ ಆವೃತ್ತಿಯು ಪೂರ್ಣ ಚಾರ್ಜ್‌ನಲ್ಲಿ 375 ಕಿಲೋಮೀಟರ್‌ಗಳ ಪ್ರಮಾಣೀಕೃತ ರೇಂಜ್ ಅನ್ನು ಹೊಂದಿದೆ, ಆದರೆ 39.4kWh ಬ್ಯಾಟರಿ ಪ್ಯಾಕ್ ಮಾದರಿಯು 456 ಕಿಲೋಮೀಟರ್‌ಗಳ ಪ್ರಮಾಣೀಕೃತ ರೇಂಜ್ ಅನ್ನು ಹೊಂದಿದೆ.

 ಈ ಎಲೆಕ್ಟ್ರಿಕ್ ಕಾರನ್ನು ಎಸಿ ಮತ್ತು ಡಿಸಿ ಫಾಸ್ಟ್ ಚಾರ್ಜರ್ ಎರಡರಿಂದಲೂ ಚಾರ್ಜ್ ಮಾಡಬಹುದು, ಅದರ ವಿವರಗಳನ್ನು ಕೆಳಗೆ ನೀಡಲಾಗಿದೆ:

  •  50kW ಡಿಸಿ ಫಾಸ್ಟ್ ಚಾರ್ಜರ್: 50 ನಿಮಿಷಗಳು (0-80 ಪ್ರತಿಶತ)
  •  7.2kW ಎಸಿ ಚಾರ್ಜರ್: 6.5 ಗಂಟೆಗಳು
  •  3.3kW ಡೊಮೆಸ್ಟಿಕ್ ಚಾರ್ಜರ್: 13 ಗಂಟೆಗಳು

ಇದನ್ನೂ ಓದಿ:  6 ಏರ್‌ಬ್ಯಾಗ್‌ಗಳನ್ನು ಪ್ರಮಾಣಿತವಾಗಿ ಪಡೆಯಲಿರುವ ರೂ. 10 ಲಕ್ಷದೊಳಗಿನ 8 ಕಾರುಗಳು

ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು

Mahindra XUV400 rear

 ಮಹೀಂದ್ರಾ ಎಕ್ಸ್‌ಯುವಿ400 ಯ ಬೆಲೆ ರೂ. 15.99 ಲಕ್ಷದಿಂದ ರೂ. 19.39 ಲಕ್ಷದವರೆಗೆ (ಎಕ್ಸ್ ಶೋರೂಂ ದೆಹಲಿ) ಇದೆ. ಇದು ನೇರವಾಗಿ ಟಾಟಾ ನೆಕ್ಸಾನ್ EVಯೊಂದಿಗೆ ಸ್ಪರ್ಧಿಸುತ್ತದೆ. ಆದರೆ ಇದನ್ನು MG ZS EVಮತ್ತು ನ ಕೈಗೆಟುಕುವ ಪರ್ಯಾಯವಾಗಿ ಆಯ್ಕೆ ಮಾಡಬಹುದು.

ಇನ್ನಷ್ಟು ಓದಿ: ಮಹೀಂದ್ರಾ ಎಕ್ಸ್‌ಯುವಿ400 EV ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Mahindra XUV400 EV

Read Full News

explore ಇನ್ನಷ್ಟು on ಮಹೀಂದ್ರ XUV400 EV

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience