• English
  • Login / Register

ಬಿಡುಗಡೆಗೊಂಡಿದೆ ಹೊಸ ಡ್ಯಾಶ್‌ಬೋರ್ಡ್ ಮತ್ತು ದೊಡ್ಡ ಟಚ್‌ಸ್ಕ್ರೀನ್‌ನೊಂದಿಗೆ ಮಹೀಂದ್ರಾ ಎಕ್ಸ್‌ಯುವಿ400 ಪ್ರೊ ವೇರಿಯಂಟ್, ಬೆಲೆ ರೂ. 15.49 ಲಕ್ಷದಿಂದ ಪ್ರಾರಂಭ

ಮಹೀಂದ್ರ XUV400 EV ಗಾಗಿ rohit ಮೂಲಕ ಜನವರಿ 11, 2024 06:53 pm ರಂದು ಪ್ರಕಟಿಸಲಾಗಿದೆ

  • 205 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೊಸ ವೇರಿಯಂಟ್‌ಗಳ ಬೆಲೆ ರೂ. 15.49 ಲಕ್ಷದಿಂದ ರೂ. 17.49 ಲಕ್ಷದವರೆಗೆ ಇದೆ (ಎಕ್ಸ್ ಶೋರೂಂ ದೆಹಲಿ)

2024 Mahindra XUV400

  • ಮಹೀಂದ್ರಾ ಎಕ್ಸ್‌ಯುವಿ400 ಅನ್ನು ಜನವರಿ 2023 ರಲ್ಲಿ ಪರಿಚಯಿಸಿತು.

  • ಎಕ್ಸ್‌ಯುವಿ400 ಈಗ ಪ್ರೊ ವೇರಿಯಂಟ್ ಲೈನ್‌ಅಪ್‌ನಲ್ಲಿ ಮಾತ್ರ ಲಭ್ಯವಿದೆ ಮತ್ತು ಮೊದಲಿಗಿಂತ 1.5 ಲಕ್ಷ ರೂ.ವರೆಗೆ ಅಗ್ಗವಾಗಿದೆ.

  • ಕ್ಯಾಬಿನ್‌ನಲ್ಲಿ ಹೊಸ ಡ್ಯುಯಲ್-ಟೋನ್ ಡ್ಯಾಶ್‌ಬೋರ್ಡ್ ಮತ್ತು ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಅನ್ನು ಒದಗಿಸಲಾಗಿದೆ.

  • ಡ್ಯುಯಲ್-ಝೋನ್ ಎಸಿ ಮತ್ತು ಡ್ಯುಯಲ್ 10.25-ಇಂಚಿನ ಡಿಸ್‌ಪ್ಲೇಯಂತಹ ಹೊಸ ಫೀಚರ್‌ಗಳನ್ನು ಇದರಲ್ಲಿ ನೀಡಲಾಗಿದೆ.  

  • ಇದು ವೈರ್‌ಲೆಸ್ ಫೋನ್ ಚಾರ್ಜರ್, ಆರು ಏರ್‌ಬ್ಯಾಗ್‌ಗಳು ಮತ್ತು ಸನ್‌ರೂಫ್‌ನಂತಹ ಫೀಚರ್‌ಗಳನ್ನು ಹೊಂದಿದೆ.

  • ಟಾಪ್-ಸ್ಪೆಕ್ EL ಪ್ರೊ ವೇರಿಯಂಟ್ 34.5kWh (375 km) ಮತ್ತು 39.4kWh (456 km) ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಪಡೆಯುತ್ತದೆ.

  • ಇದರ ಬೆಲೆ ಈಗ 15.49 ಲಕ್ಷದಿಂದ (ಎಕ್ಸ್ ಶೋರೂಂ ದೆಹಲಿ) ಪ್ರಾರಂಭವಾಗುತ್ತದೆ.

ಮಹೀಂದ್ರಾ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿಯ ಹೊಸ ವೇರಿಯಂಟ್‌ಗಳನ್ನು ಬಿಡುಗಡೆ ಮಾಡಿದೆ, ಇವುಗಳನ್ನು 'ಪ್ರೊ' ಬ್ಯಾಡ್ಜಿಂಗ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ. ಎಲೆಕ್ಟ್ರಿಕ್ ಎಸ್‌ಯುವಿ ಈಗ ಹೆಚ್ಚು ಫೀಚರ್‌ಗಳನ್ನು ಹೊಂದಿದ್ದು  ಮತ್ತು ಅದರ ಕ್ಯಾಬಿನ್ ಅನ್ನು ಸಹ ನವೀಕರಿಸಲಾಗಿದೆ. ಹೊಸ ಮಹೀಂದ್ರ ಎಕ್ಸ್‌ಯುವಿ400 ಬುಕ್ಕಿಂಗ್‌ಗಳು ಜೂನ್ 12 ರಂದು ಮಧ್ಯಾಹ್ನ 2pm ಗೆ ಪ್ರಾರಂಭವಾಗುತ್ತವೆ. ಆಸಕ್ತ ಗ್ರಾಹಕರು ರೂ. 21,000 ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಅದನ್ನು ಬುಕ್ ಮಾಡಬಹುದಾಗಿದೆ ಮತ್ತು ಅದರ ಡೆಲಿವರಿಯು ಫೆಬ್ರವರಿ 2024 ರಿಂದ ಪ್ರಾರಂಭವಾಗುತ್ತದೆ.

ಹೊಸ ಪ್ರೊ ವೇರಿಯಂಟ್‍ಗಳ ಬೆಲೆಗಳು

ವೇರಿಯಂಟ್

ಬೆಲೆ

ಎಕ್ಸ್‌ಯುವಿ400 EC ಪ್ರೊ

ರೂ. 15.49 ಲಕ್ಷ

ಎಕ್ಸ್‌ಯುವಿ400 EL ಪ್ರೊ (34.5 kWh)

ರೂ. 16.74 ಲಕ್ಷ

ಎಕ್ಸ್‌ಯುವಿ400 EL ಪ್ರೊ (39.4 kWh)

ರೂ. 17.49 ಲಕ್ಷ

ಈ ಅಪ್‌ಡೇಟ್‌ನೊಂದಿಗೆ, ಮಹೀಂದ್ರಾ ಎಕ್ಸ್‌ಯುವಿ400 ರೂ. 1.5 ಲಕ್ಷದಷ್ಟು ಅಗ್ಗವಾಗಿದೆ ಮತ್ತು ಸದ್ಯಕ್ಕೆ ಪ್ರೊ ವೇರಿಯಂಟ್ ಲೈನ್‌ಅಪ್‌ನಲ್ಲಿ ಮಾತ್ರ ಲಭ್ಯವಿದೆ. ಇದರ ಪರಿಚಯಾತ್ಮಕ ಬೆಲೆಯು ಮೇ 2024 ರ ಅಂತ್ಯದೊಳಗೆ ಮಾಡಲಾಗುವ ಡೆಲಿವರಿಗಳಿಗೆ ಮಾತ್ರ ಮಾನ್ಯವಾಗಿರುತ್ತದೆ.

ಹೊಸತೇನಿದೆ?

2024 Mahindra XUV400 dashboard

ಪ್ರೊ ವೇರಿಯಂಟ್ ಅಪ್‌ಡೇಟ್‌ನೊಂದಿಗೆ, ಎಕ್ಸ್‌ಯುವಿ400 ವಿನ್ಯಾಸದಲ್ಲಿ ಮಹೀಂದ್ರಾ ಕೆಲವು ಪ್ರಮುಖ ನವೀಕರಣಗಳನ್ನು ಮಾಡಿದೆ. ಅದರ ಡ್ಯಾಶ್‌ಬೋರ್ಡ್ ಮತ್ತು ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್‌ನ ವಿನ್ಯಾಸವು ಈಗ ಮೊದಲಿಗಿಂತ ಹೆಚ್ಚು ಸೊಗಸಾಗಿದೆದ ಮತ್ತು ಹೆಚ್ಚು ಆಧುನಿಕವಾಗಿದೆ. ಡ್ಯಾಶ್‌ಬೋರ್ಡ್‌ನ ಪ್ಯಾಸೆಂಜರ್ ಸೈಡ್ ಸ್ಟೋರೇಜ್ ಏರಿಯಾದ ಬದಲಿಗೆ ಪಿಯಾನೋ ಬ್ಲ್ಯಾಕ್ ಇನ್ಸರ್ಟ್ ಅನ್ನು ಪಡೆದರೆ, ಕ್ಲೈಮೇಟ್ ಕಂಟ್ರೋಲ್‌ಗಳು ಈಗ ಎಕ್ಸ್‌ಯುವಿ700 ಮತ್ತು ಸ್ಕಾರ್ಪಿಯೋ N ನಲ್ಲಿರುವಂತಹ ಕ್ಲೈಮೇಟ್ ಕಂಟ್ರೋಲ್‌ಗಳನ್ನು ಹೋಲುತ್ತವೆ. ಇದರ ಅಪ್‌ಹೋಲೆಸ್ಟರಿಯನ್ನು ಕೂಡ ಅಪ್‌ಡೇಟ್ ಮಾಡಲಾಗಿದೆ. ಪ್ರೊ ವೇರಿಯಂಟ್‌ಗಳು ಸಂಪೂರ್ಣ-ಬ್ಲ್ಯಾಕ್ ಕ್ಯಾಬಿನ್ ಥೀಮ್‌ನಿಂದ ಬ್ಲ್ಯಾಕ್ ಮತ್ತು ಬೀಜ್‌ವರೆಗಿನ ಆಯ್ಕೆಗಳನ್ನು ಹೊಂದಿವೆ.

ಎಕ್ಸ್‌ಯುವಿ400 ಎಲೆಕ್ಟ್ರಿಕ್‌ನಲ್ಲಿ ದೊಡ್ಡದಾದ ಟಚ್‌ಸ್ಕ್ರೀನ್ ಸಿಸ್ಟಮ್‌ನ ಸೇರ್ಪಡೆಯಿಂದಾಗಿ, ಅದರ ಸೆಂಟ್ರಲ್ ಎಸಿ ವೆಂಟ್‌ಗಳ ಸ್ಥಾನವನ್ನು ಬದಲಾಯಿಸಲಾಗಿದೆ. ಹಾಗೆಯೇ, ಇದರ ಸ್ಟೀರಿಂಗ್ ವ್ಹೀಲ್ ಅನ್ನು ಎಕ್ಸ್‌ಯುವಿ700 ನಿಂದ ಎರವಲು ಪಡೆದುಕೊಳ್ಳಲಾಗಿದೆ. ಮುಂಬರುವ ಎಕ್ಸ್‌ಯುವಿ300 ಫೇಸ್‌ಲಿಫ್ಟ್‌ ಇದೇ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಹೊಂದಿರುವ ನಿರೀಕ್ಷೆಯಿದೆ.

ಫೀಚರ್‌ಗಳು ಮತ್ತು ಸುರಕ್ಷತೆ

2024 Mahindra XUV400 10.25-inch touchscreen
2024 Mahindra XUV400 rear AC vents

ಎಕ್ಸ್‌ಯುವಿ400 ಕ್ಯಾಬಿನ್ ದೊಡ್ಡದಾದ 10.25-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಡ್ಯುಯಲ್-ಝೋನ್ ಎಸಿ, ಹಿಂಬದಿಯ ಪ್ರಯಾಣಿಕರಿಗೆ ಟೈಪ್-ಸಿ ಯುಎಸ್‌ಬಿ ಚಾರ್ಜರ್ ಮತ್ತು ಹೊಸದಾಗಿ ಸೇರಿಸಲಾದ ಹಿಂಭಾಗದ ಎಸಿ ವೆಂಟ್‌ಗಳಂತಹ ಹೊಸ ಫೀಚರ್‌ಗಳನ್ನು ಪಡೆದುಕೊಂಡಿದೆ. ಇವುಗಳಷ್ಟೇ ಅಲ್ಲದೇ, ಇದು ವೈರ್‌ಲೆಸ್ ಫೋನ್ ಚಾರ್ಜಿಂಗ್, ಸನ್‌ರೂಫ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಮತ್ತು ಎತ್ತರ-ಹೊಂದಾಣಿಕೆ ಡ್ರೈವರ್ ಸೀಟ್‌ನಂತಹ ಫಾರ್ವರ್ಡ್ ಫೀಚರ್‌ಗಳನ್ನು ಹೊಂದಿದೆ.

ಮಹೀಂದ್ರಾದ ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಸುರಕ್ಷತಾ ಫೀಚರ್‌ಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದು ಮೊದಲಿನಂತೆ ಆರು ಏರ್‌ಬ್ಯಾಗ್‌ಗಳು, ರಿವರ್ಸ್ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ನಂತಹ ಫೀಚರ್‌ಗಳನ್ನು ಹೊಂದಿದೆ.

ಇದನ್ನೂ ನೋಡಿ: ಪರೀಕ್ಷೆಯ ಸಮಯದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡ ಸ್ಕೋಡಾ ಎನ್ಯಾಕ್ EV, 2024 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆ

ಬ್ಯಾಟರಿ ಮತ್ತು ರೇಂಜ್

ಎಕ್ಸ್‌ಯುವಿ400 ನ ಎಲೆಕ್ಟ್ರಿಕ್ ಪವರ್‌ಟ್ರೇನ್‌ನಲ್ಲಿ ಮಹೀಂದ್ರಾ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಈ ಎಲೆಕ್ಟ್ರಿಕ್ ಕಾರು 34.5 kWh ಮತ್ತು 39.4 kWh ಎಂಬ ಎರಡು ಬ್ಯಾಟರಿ ಪ್ಯಾಕ್‌ಗಳ ಆಯ್ಕೆಯನ್ನು ಹೊಂದಿದೆ. ಪೂರ್ಣ ಚಾರ್ಜ್‌ನಲ್ಲಿ 34.5 kWh ಬ್ಯಾಟರಿ ಪ್ಯಾಕ್‌ನ ಪ್ರಮಾಣೀಕೃತ ರೇಂಜ್ 375 km ಮತ್ತು 39.4 kWh ಬ್ಯಾಟರಿ ಪ್ಯಾಕ್‌ನ ಪ್ರಮಾಣೀಕೃತ ರೇಂಜ್ 456 km ಆಗಿದೆ. ಎರಡೂ ಬ್ಯಾಟರಿ ಪ್ಯಾಕ್ ಮಾದರಿಗಳೊಂದಿಗೆ ಅಳವಡಿಸಲಾಗಿರುವ ಎಲೆಕ್ಟ್ರಿಕ್ ಮೋಟಾರ್ 150 PS/310 Nm ಪವರ್ ಔಟ್‌ಪುಟ್ ಅನ್ನು ಹೊಂದಿದೆ. EL ಪ್ರೊ ವೇರಿಯಂಟ್ ಎರಡೂ ಬ್ಯಾಟರಿ ಪ್ಯಾಕ್‌ಗಳ ಆಯ್ಕೆಯನ್ನು ಹೊಂದಿದೆ ಆದರೆ EC ಪ್ರೊ ಕೇವಲ ಬೇಸ್ ಪ್ಯಾಕ್ ಅನ್ನು ಪಡೆಯುತ್ತದೆ.

ಪ್ರತಿಸ್ಪರ್ಧಿಗಳು

2024 Mahindra XUV400 rear

ಮಹೀಂದ್ರಾ ಎಕ್ಸ್‌ಯುವಿ400 ಯು ಟಾಟಾ ನೆಕ್ಸಾನ್ EV ನ ನೇರ ಪ್ರತಿಸ್ಪರ್ಧಿಯಾಗಿದೆ. ಇದನ್ನು MG ZS EVಮತ್ತು ಹುಂಡೈ ಕೋನಾ ಎಲೆಕ್ಟ್ರಿಕ್ ಗಳಿಗೆ ಕೈಗೆಟುಕುವ ಪರ್ಯಾಯವಾಗಿ ಆಯ್ಕೆ ಮಾಡಬಹುದು.

ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ದೆಹಲಿಯ ಬೆಲೆಗಳಾಗಿವೆ.

ಇನ್ನಷ್ಟು ಓದಿ: ಎಕ್ಸ್‌ಯುವಿ400 EV ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Mahindra XUV400 EV

Read Full News

explore ಇನ್ನಷ್ಟು on ಮಹೀಂದ್ರ XUV400 EV

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience