ಮಹೀಂದ್ರಾ XUV400 ವರ್ಸಸ್ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ – ಯಾವ ಎಲೆಕ್ಟ್ರಿಕ್ ಎಸ್‌ಯುವಿ ಹೆಚ್ಚು ರಿಯಲ್ ರೇಂಜ್ ನೀಡುತ್ತದೆ?
ಮಹೀಂದ್ರ XUV400 EV ಗಾಗಿ tarun ಮೂಲಕ ಮಾರ್ಚ್ 16, 2023 08:59 pm ರಂದು ಮಾರ್ಪಡಿಸಲಾಗಿದೆ
- 20 Views
- ಕಾಮೆಂಟ್ ಅನ್ನು ಬರೆಯಿರಿ
ಎರಡೂ ಒಂದೇ ರೀತಿಯ ಬೆಲೆಗಳೊಂದಿಗೆ ನೇರ ಪ್ರತಿಸ್ಪರ್ಧಿಗಳಾಗಿವೆ ಮತ್ತು ಸುಮಾರು 450 ಕಿಲೋಮೀಟರ್ ರೇಂಜ್‌ಗಳಷ್ಟು ಕ್ಲೈಮ್ ಮಾಡಿವೆ.
ಟಾಟಾ ನೆಕ್ಸಾನ್ ಇವಿ ಭಾರತದಲ್ಲಿ ಪ್ರಸ್ತುತ ಅತ್ಯಂತ ಜನಪ್ರಿಯ ಕಾರ್ ಆಗಿದ್ದು ಇತ್ತೀಚೆಗೆ ಮಹೀಂದ್ರಾ XUV400 ಯ ರೂಪದಲ್ಲಿ ನೇರ ಪ್ರತಿಸ್ಪರ್ಧಿಯನ್ನು ಪಡೆದಿದೆ. ಇವೆರಡೂ ರೂ. 15-ಲಕ್ಷದಿಂದ ರೂ. 19-ಲಕ್ಷದ ರೇಂಜ್‌ನಲ್ಲಿವೆ ಮತ್ತು 450 ಕಿಲೋಮೀಟರ್‌ಗಳಿಗಿಂತ ಹೆಚ್ಚಿನ ಚಾಲನಾ ರೇಂಜ್ ಅನ್ನು ಕ್ಲೈಮ್ ಮಾಡುತ್ತವೆ.
ಈಗ, ಇವುಗಳ ವಾಸ್ತವಿಕ ರೇಂಜ್ ಅನ್ನು ಪರೀಕ್ಷಿಸಲು ಅವುಗಳ ಬ್ಯಾಟರಿಗಳನ್ನು ಒಂದೇ ದಿನ ಅಲ್ಲದಿದ್ದರೂ, ಶೇಕಡಾ ಒಂದಕ್ಕೆ ಬರಿದುಮಾಡಿ ಪರಿಶೀಲಿಸಿದ್ದೇವೆ. XUV400 ಮತ್ತು ನೆಕ್ಸಾನ್ ಇವಿ ಮ್ಯಾಕ್ಸ್ ತಮ್ಮ ಕ್ಲೈಮ್ ಮಾಡಿದ ಅಂಕಿಅಂಶಗಳಿಗೆ ಹತ್ತಿರವಿರಬಹುದೇ ಮತ್ತು ಯಾವುದು ಹೆಚ್ಚು ದೂರ ಕ್ರಮಿಸುತ್ತದೆ ಎಂಬುದನ್ನು ನೋಡೋಣ:
ರೇಂಜ್ ಪರಿಶೀಲನೆ
ನಗರದ ರಸ್ತೆಗಳು, ಹೆದ್ದಾರಿಗಳು ಮತ್ತು ಘಾಟ್‌ಗಳಲ್ಲಿ ಈ ಇವಿಗಳನ್ನು ಚಾಲನೆ ಮಾಡಿದ ನಂತರ ವಾಸ್ತವಿಕ ರೇಂಜ್ ಅನ್ನು ಲೆಕ್ಕಹಾಕಲಾಗಿದೆ.
ಎರಡೂ ಎಸ್‌ಯುವಿಗಳು 150km ಗಿಂತಲೂ ಹೆಚ್ಚು ರೇಂಜ್ ಅನ್ನು ಕ್ಲೈಮ್ ಮಾಡಿವೆ ಮತ್ತು ಮಿಶ್ರ ಚಾಲನಾ ಪರಿಸ್ಥಿತಿಗಳ ಮೂಲಕ 300-ಕಿಲೋಮೀಟರ್‌ಗಳ ಸಮೀಪಕ್ಕೆ ಬಂದವು. ಇನ್ನೂ ಹೆಚ್ಚು ರಕ್ಷಣಾತ್ಮಕ ಚಾಲನೆ ಅಥವಾ ನಗರ ಪ್ರದೇಶದ ಪ್ರಮಾಣವು ಹೆಚ್ಚಿದ್ದ ಸಂದರ್ಭದಲ್ಲಿ, ಮಾಲೀಕರು ಸಂಪೂರ್ಣ ಚಾರ್ಜ್‌ನಲ್ಲಿ 300 ಕಿಲೋಮೀಟರ್‌ಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ಮಹೀಂದ್ರಾ XUV400 ಇವಿ: ಪ್ರಥಮ ಚಾಲನಾ ವಿಮರ್ಶೆ
ಟಾಟಾ ನೆಕ್ಸಾನ್ ಇವಿ ಮ್ಯಾಕ್ ಮತ್ತು ಮಹೀಂದ್ರಾ XUV400, ಎರಡನ್ನೂ ಇಕೋ ಮೋಡ್‌ನಲ್ಲಿ ಚಾಲನೆ ಮಾಡಲಾಗಿದ್ದು, ಇದು ಈಗಾಗಲೇ ಎಲೆಕ್ಟ್ರಿಕ್ ಮೋಟಾರ್‌ನ ಕಾರ್ಯಕ್ಷಮತೆಯ ಸಾಮರ್ಥ್ಯಗಳಿಗಿಂತ ಹೆಚ್ಚಿನ ರೇಂಜ್‌ಗೆ ಆದ್ಯತೆ ನೀಡುತ್ತದೆ. ಆದ್ದರಿಂದ ನೀವು ಸಾಮಾನ್ಯ ಅಥವಾ ಸ್ಪೋರ್ಟ್ ಮೋಡ್‌ನಲ್ಲಿ ಚಾಲನೆ ಮಾಡಿದರೆ, ರೇಂಜ್ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಯಿದೆ.
ಈ ಅಂಕಿ-ಅಂಶಗಳೊಂದಿಗೆ, ಖರೀದಿದಾರರು ಮುಂಬೈನಿಂದ ಪುಣೆಗೆ ಮತ್ತು ಅಲ್ಲಿಂದ ಹಿಂತಿರುಗಲು ಅಥವಾ ಜೈಪುರ ಅಥವಾ ದೆಹಲಿಯಿಂದ ಆಗ್ರಾಗೆ ಏಕಮುಖವಾಗಿ ಪ್ರಯಾಣಿಸಲು ಸಾಧ್ಯವಾಗುತ್ತದೆ.
ಚಾರ್ಜ್ ಕಡಿಮೆಯಾದಾಗ ಏನಾಗುತ್ತದೆ?
ಮಹೀಂದ್ರಾ XUV400: ಚಾರ್ಜ್ ಶೇಕಡಾ 10 ಕ್ಕೆ ಇಳಿಯುವುದರಿಂದ, ಗರಿಷ್ಠ ವೇಗವು 50kmph ಇಳಿಯುತ್ತದೆ. ಒಮ್ಮೆ ಇದು ಶೇಕಡಾ ಎಂಟಕ್ಕೆ ತಲುಪಿದರೆ, ಗರಿಷ್ಠ ವೇಗವು 40kmph ಗೆ ಇಳಿಯುತ್ತದೆ, ಮತ್ತು ಶೇಕಡಾ ಮೂರುರಷ್ಟು ಚಾರ್ಜ್ ಇದ್ದಾಗ 30 kmph ಗೆ ಇಳಿಯುತ್ತದೆ. ಚಾರ್ಜ್ ಅತಿ ಕಡಿಮೆ ಸಂಖ್ಯೆಗೆ ಇಳಿದಾಗ ನೀವು 10kmph ಗಿಂತ ಹೆಚ್ಚು ವೇಗದಲ್ಲಿ ಓಡಿಸಲು ಸಾಧ್ಯವಿಲ್ಲ. ಶೇಕಡಾ 10 ರಷ್ಟು ಚಾರ್ಜ್ ಉಳಿದಾಗಲೂ ಖರೀದಿದಾರರ ಆದ್ಯತೆಗಳ ಪ್ರಕಾರ ಕ್ಲೈಮೆಟ್ ಕಂಟ್ರೋಲ್ ಸೆಟಿಂಗ್‌ಗಳು ಮತ್ತು ರಿಜನರೇಟಿಂಗ್ ಬ್ರೇಕಿಂಗ್ ಮಟ್ಟವನ್ನು ಸ್ಥಿರವಾಗಿರಿಸುತ್ತದೆ.
ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್: ಟಾಟಾದ ವಿಷಯದಲ್ಲಿ, ಚಾರ್ಜ್ ಶೇಕಡಾ 20 ಕ್ಕೆ ಇಳಿದ ನಂತರ ರಿಜನರೇಟಿವ್ ಬ್ರೇಕಿಂಗ್‌ನ ತೀವ್ರತೆಯು ಹೆಚ್ಚಾಗುತ್ತದೆ. ಇದು ಶೇಕಡಾ 10 ಕ್ಕೆ ತಲುಪಿದ ತಕ್ಷಣ, ಉಳಿದ ಡ್ರೈವಿಂಗ್ ರೇಂಜ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್‌ನಿಂದ ಕಣ್ಮರೆಯಾಗುತ್ತದೆ ಮತ್ತು ಗರಿಷ್ಠ ವೇಗವು 55kmph ಗೆ ಸೀಮಿತವಾಗಿರುತ್ತದೆ. ಈ ಸಮಯದಲ್ಲಿ ಸ್ಪೋರ್ಟ್ ಮೋಡ್ ಸಹ ನಿಷ್ಕ್ರಿಯಗೊಳಿಸಲಾಗುತ್ತದೆ.
ಇದನ್ನೂ ಓದಿ: ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಪ್ರಥಮ ಚಾಲನಾ ವಿಮರ್ಶೆ
ಬೆಲೆಗಳು ಮತ್ತು ಪರ್ಯಾಯಗಳು
ಮಾಡೆಲ್ |
ನೆಕ್ಸಾನ್ ಇವಿ ಪ್ರೈಮ್ |
ನೆಕ್ಸಾನ್ ಇವಿ ಮ್ಯಾಕ್ಸ್ |
XUV400 ಇವಿ |
ಬೆಲೆ ರೇಂಜ್ |
ರೂ. 14.49 ಲಕ್ಷದಿಂದ 17.50 ಲಕ್ಷ |
ರೂ. 16.49 ಲಕ್ಷದಿಂದ ರೂ. 18.99 ಲಕ್ಷ |
ರೂ. 15.99 ಲಕ್ಷದಿಂದ ರೂ. 18.99 ಲಕ್ಷ |
XUV400 ಇವಿಯ ಟಾಪ್-ಎಂಡ್ ವೇರಿಯೆಂಟ್ ನೆಕ್ಸಾನ್ ಇವಿ ಮ್ಯಾಕ್ಸ್‌ನ ಬೆಲೆಯಂತೆಯೇ ಇದೆ. ಮೊದಲಿನ ಬೇಸ್ ವೇರಿಯೆಂಟ್ ಎರಡನೆಯದ್ದಕ್ಕಿಂತ ರೂ. 50,000 ಗಳಷ್ಟು ಕಡಿಮೆ ಬೆಲೆಯನ್ನು ಹೊಂದಿದೆ. ನಿಮ್ಮ ಬಜೆಟ್ ಇನ್ನೂ ಸೀಮಿತವಾಗಿದ್ದರೆ, ನೆಕ್ಸಾನ್ ಇವಿ ಪ್ರೈಮ್ ಅನ್ನು ನೀವು ಆಯ್ದುಕೊಳ್ಳಬಹುದು, ಏಕೆಂದರೆ ಇದು 320 ಕಿಲೋಮೀಟರ್‌ಗಳಷ್ಟು ಕಡಿಮೆ ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡುತ್ತದೆ.
ಇದನ್ನೂ ಓದಿ : ಮಹೀಂದ್ರಾ XUV400 ಇವಿ ಆಟೋಮ್ಯಾಟಿಕ್
0 out of 0 found this helpful