Login or Register ಅತ್ಯುತ್ತಮ CarDekho experience ಗೆ
Login

ಟಾಟಾ Curvv EV ಯ ಹೆಮ್ಮೆಯ ಮಾಲೀಕರಾದ ಒಲಿಂಪಿಯನ್ ಸ್ಟಾರ್‌ ಮನು ಭಾಕರ್

ಟಾಟಾ ಕರ್ವ್‌ ಇವಿ ಗಾಗಿ dipan ಮೂಲಕ ಸೆಪ್ಟೆಂಬರ್ 11, 2024 08:07 pm ರಂದು ಪ್ರಕಟಿಸಲಾಗಿದೆ

ಮಾಜಿ ಹಾಕಿ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ನಂತರ ಮನು ಭಾಕರ್ ಟಾಟಾ ಕರ್ವ್ EV ಪಡೆಯುತ್ತಿರುವ ಎರಡನೇ ಭಾರತೀಯ ಒಲಿಂಪಿಯನ್ ಆಗಿದ್ದಾರೆ

ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಡಬಲ್ ಕಂಚಿನ ಪದಕಗಳನ್ನು ಗೆದ್ದ ಭಾರತೀಯ ಪ್ರೊಫೆಷನಲ್ ಶೂಟರ್ ಮನು ಭಾಕರ್ ಈಗ ಟಾಟಾ ಕರ್ವ್ EVಯ ಹೆಮ್ಮೆಯ ಮಾಲೀಕರಾಗಿದ್ದಾರೆ. ಭಾರತದ ಮಾಜಿ ಫೀಲ್ಡ್ ಹಾಕಿ ಗೋಲ್‌ಕೀಪರ್ P.R. ಶ್ರೀಜೇಶ್ ನಂತರ ಕರ್ವ್ EV ಪಡೆದ ಎರಡನೇ ಒಲಿಂಪಿಕ್ ಪದಕ ವಿಜೇತೆಯಾಗಿದ್ದಾರೆ. ಬನ್ನಿ, ಮನು ಭಾಕರ್ ಅವರ ಟಾಟಾ ಕರ್ವ್ EVಯ ವಿವರಗಳನ್ನು ನೋಡೋಣ.

ಮನು ಭಾಕರ್ ಅವರ ಟಾಟಾ ಕರ್ವ್ ಇವಿ

ಮನು ಭಾಕರ್ ಅವರ ಟಾಟಾ ಕರ್ವ್ EV ಪ್ಯೂರ್ ಗ್ರೇ ಕಲರ್ ಅನ್ನು ಹೊಂದಿದೆ. ಪನರೋಮಿಕ್ ಸನ್‌ರೂಫ್, ವಿಂಡ್‌ಶೀಲ್ಡ್‌ನಲ್ಲಿ ADAS (ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್) ಕ್ಯಾಮೆರಾ ಮತ್ತು ಡ್ಯುಯಲ್-ಸ್ಕ್ರೀನ್ ಡ್ಯಾಶ್‌ಬೋರ್ಡ್‌ನಂತಹ ಫೀಚರ್ ಗಳನ್ನು ನಾವು ನೋಡಬಹುದು. 18-ಇಂಚಿನ ಏರೋಡೈನಾಮಿಕ್ ಅಲೊಯ್ ವೀಲ್ ಗಳು ಮತ್ತು ಮುಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ಕೂಡ ನೋಡಲಾಗಿದೆ. ಹಾಗಾಗಿ ಇದು ಟಾಪ್-ಎಂಡ್ ಎಂಪವರ್ಡ್ ಪ್ಲಸ್ A ವೇರಿಯಂಟ್ ಎಂಬುದು ಖಚಿತವಾಗಿದೆ.

ಈ EV ಅನ್ನು ಭಾಕರ್‌ಗಾಗಿ ಕಸ್ಟಮೈಸ್ ಮಾಡಲಾಗಿದೆ, ಅವರ ಹೆಸರನ್ನು ಮುಂಭಾಗದ ಸೀಟ್ ಗಳ ಬ್ಲಾಕ್ ಹೆಡ್ ಕುಶನ್‌ಗಳಿಗೆ ಮತ್ತು ಸೀಟ್‌ಬೆಲ್ಟ್‌ಗಳಲ್ಲಿ ನೀಡಲಾಗಿದೆ.

ಕರ್ವ್ EV ಕುರಿತು ಹೇಳುವುದಾದರೆ, ಎಂಪವರ್ಡ್ ಪ್ಲಸ್ A ವೇರಿಯಂಟ್ 55 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ, ಮತ್ತು ಇದು 585 ಕಿಮೀ ರೇಂಜ್ ಅನ್ನು ನೀಡುತ್ತದೆ. ಎಲೆಕ್ಟ್ರಿಕ್ ಕೂಪ್‌ನ ಬೇಸ್-ಸ್ಪೆಕ್ ವೇರಿಯಂಟ್ ಗಳಲ್ಲಿ ಚಿಕ್ಕದಾದ 45 kWh ಪ್ಯಾಕ್ ಆಯ್ಕೆಯನ್ನು ಕೂಡ ನೀಡಲಾಗುತ್ತದೆ, ಮತ್ತು ಇದು 502 ಕಿಮೀ ಕ್ಲೈಮ್ ಮಾಡಲಾದ ಕಡಿಮೆ ರೇಂಜ್ ಅನ್ನು ಹೊಂದಿದೆ.

ಈ ಟಾಪ್-ಸ್ಪೆಕ್ ಮಾಡೆಲ್ ನಲ್ಲಿ 9-ಸ್ಪೀಕರ್ JBL ಸೌಂಡ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, 12.3-ಇಂಚಿನ ಟಚ್‌ಸ್ಕ್ರೀನ್ ಮತ್ತು 10.25-ಇಂಚಿನ ಡ್ರೈವರ್‌ ಡಿಸ್ಪ್ಲೇಯನ್ನು ನೀಡಲಾಗಿದೆ. ಇದು ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಲೆವೆಲ್-2 ADAS ನಂತಹ ಸುಧಾರಿತ ಸುರಕ್ಷತಾ ಫೀಚರ್ ಗಳನ್ನು ಹೊಂದಿದೆ.

ಇದನ್ನು ಕೂಡ ಓದಿ: ಟಾಟಾದ ಹಬ್ಬಗಳ ಸೀಸನ್ 2024 ಶುರು: ಕೆಲವು ಟಾಟಾ ಕಾರುಗಳು ಪಡೆದಿವೆ 2.05 ಲಕ್ಷದವರೆಗೆ ಬೆಲೆ ಕಡಿತ, ಕೊಡುಗೆ EVಗಳಲ್ಲಿ ಲಭ್ಯವಿಲ್ಲ, ಪರಿಷ್ಕೃತ ಆರಂಭಿಕ ಬೆಲೆಗಳ ವಿವರ ಇಲ್ಲಿದೆ

ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು

ಈ ಎಂಪವರ್ಡ್ ಪ್ಲಸ್ A ವೇರಿಯಂಟ್ ಬೆಲೆಯು ರೂ. 21.99 ಲಕ್ಷವಾಗಿದೆ. ಈ ಪ್ರಮುಖ ಟಾಟಾ EV ಬೆಲೆಯು ರೂ 17.49 ಲಕ್ಷದಿಂದ ರೂ 21.99 ಲಕ್ಷದವರೆಗೆ ಇದೆ. ಟಾಟಾ ಕರ್ವ್ EVಯು MG ZS EV ಗೆ ಪ್ರತಿಸ್ಪರ್ಧಿಯಾಗಿದೆ ಮತ್ತು MG ವಿಂಡ್ಸರ್ EV ಗೆ ಹೋಲಿಸಿದರೆ ಪರ್ಯಾಯ ಆಯ್ಕೆಯಾಗಿದೆ. ಇದನ್ನು BYD ಆಟ್ಟೋ 3 ಗೆ ಹೋಲಿಸಿದರೆ ಕೈಗೆಟುಕುವ ಬೆಲೆಯ ಆಯ್ಕೆಯಾಗಿ ಕೂಡ ಪರಿಗಣಿಸಬಹುದು.

ಎಲ್ಲಾ ಬೆಲೆಗಳು ಪರಿಚಯಾತ್ಮಕ ಎಕ್ಸ್ ಶೋರೂಂ, ಪ್ಯಾನ್-ಇಂಡಿಯಾ ಬೆಲೆಯಾಗಿದೆ

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ: ಕರ್ವ್ EV ಆಟೋಮ್ಯಾಟಿಕ್

Share via

Write your Comment on Tata ಕರ್ವ್‌ EV

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ