ಟಾಟಾದಿಂದ ಹಬ್ಬಗಳ ಸೀಸನ್ ಶುರು: ಆಯ್ದ ಟಾಟಾ ಕಾರುಗಳ ಮೇಲೆ 2.05 ಲಕ್ಷದವರೆಗೆ ಬೆಲೆ ಕಡಿತ
ಟಾಟಾ ಟಿಯಾಗೋ ಗಾಗಿ dipan ಮೂಲಕ ಸೆಪ್ಟೆಂಬರ್ 10, 2024 08:48 pm ರಂದು ಪ್ರಕಟಿಸಲಾಗಿದೆ
- 39 Views
- ಕಾಮೆಂಟ್ ಅನ್ನು ಬರೆಯಿರಿ
ಈ ಕಡಿಮೆ ಬೆಲೆಗಳು ಮತ್ತು ರಿಯಾಯಿತಿಗಳು ಅಕ್ಟೋಬರ್ 2024 ರ ಅಂತ್ಯದವರೆಗೆ ಲಭ್ಯವಿದೆ
ಈ ಹಬ್ಬದ ಸಮಯದಲ್ಲಿ, ಟಾಟಾ ಮೋಟಾರ್ಸ್ ತನ್ನ ಕೆಲವು ICE (ಇಂಟರ್ನಲ್ ಕಮ್ಬಾಷನ್ ಎಂಜಿನ್) ಕಾರುಗಳ ಬೆಲೆಯನ್ನು 1.80 ಲಕ್ಷ ರೂಪಾಯಿಗಳವರೆಗೆ ಕಡಿಮೆ ಮಾಡಿದೆ ಮತ್ತು 45,000 ರೂಪಾಯಿಗಳ ಹೆಚ್ಚುವರಿ ರಿಯಾಯಿತಿಯನ್ನು ಕೂಡ ನೀಡುತ್ತಿದೆ. ಈ ರಿಯಾಯಿತಿಯು ಟಾಟಾ ಕಾರುಗಳ ಬೆಲೆಗಳನ್ನು ಇನ್ನಷ್ಟು ಕೈಗೆಟುಕುವಂತೆ ಮಾಡಿದೆ, ಆದರೆ ಈ ಕೊಡುಗೆಗಳು ಹೊಸ ಟಾಟಾ ಕರ್ವ್, ಟಾಟಾ ಪಂಚ್, ಟಾಟಾ ಆಲ್ಟ್ರೋಜ್ ರೇಸರ್ ಅಥವಾ ಟಾಟಾ EVಗಳಿಗೆ ಅನ್ವಯಿಸುವುದಿಲ್ಲ. ಈ ವಿಶೇಷ ಬೆಲೆಯು ಅಕ್ಟೋಬರ್ 2024 ರ ಅಂತ್ಯದವರೆಗೆ ಲಭ್ಯವಿರುತ್ತದೆ. ಟಾಟಾದ ICE ಕಾರುಗಳ ಅಪ್ಡೇಟ್ ಆಗಿರುವ ಬೆಲೆಗಳ ವಿವರ ಇಲ್ಲಿದೆ.
ಟಾಟಾ ಟಿಯಾಗೊ
ಟಾಟಾದ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಆಗಿರುವ ಟಿಯಾಗೊ, ಆರು ವೇರಿಯಂಟ್ ಗಳಲ್ಲಿ ಲಭ್ಯವಿದೆ: XE, XM, XT(O), XT, XZ, ಮತ್ತು XZ+. ಇದರ ಪರಿಷ್ಕೃತ ಆರಂಭಿಕ ಬೆಲೆ ಈ ಕೆಳಗಿನಂತಿದೆ:
ಮಾಡೆಲ್ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
ಟಾಟಾ ಟಿಯಾಗೊ XE |
ರೂ. 5.65 ಲಕ್ಷ |
ರೂ. 5 ಲಕ್ಷ |
(-ರೂ 65,000) |
ಬೇಸ್ XE ವೇರಿಯಂಟ್ ಆರಂಭಿಕ ಬೆಲೆಯು 5.65 ಲಕ್ಷದಿಂದ 5 ಲಕ್ಷಕ್ಕೆ ಇಳಿದಿದೆ, ಆ ಮೂಲಕ ರೂ. 65,000 ರಿಯಾಯಿತಿ ನೀಡಲಾಗಿದೆ. ಈ ಬೆಲೆ ಕಡಿತವು ಇತರ ವೇರಿಯಂಟ್ ಗಳ ಮೇಲೆ ಕೂಡ ಪರಿಣಾಮ ಬೀರಬಹುದು.
ಟಾಟಾ ಟಿಯಾಗೋ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಆಟೋ AC ಮತ್ತು ಕೂಲ್ಡ್ ಗ್ಲೋವ್‌ಬಾಕ್ಸ್‌ನೊಂದಿಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ನಂತಹ ಹಲವಾರು ಫೀಚರ್ ಗಳನ್ನು ನೀಡುತ್ತದೆ. ಇದನ್ನು 86 PS ಮತ್ತು 113 Nm ಅನ್ನು ಉತ್ಪಾದಿಸುವ 1.2-ಲೀಟರ್ ಪೆಟ್ರೋಲ್ ಎಂಜಿನ್ ಅಥವಾ 73.5 PS ಮತ್ತು 95 Nm ಉತ್ಪಾದಿಸುವ CNG ವರ್ಷನ್ ನೊಂದಿಗೆ ಜೋಡಿಸಲಾಗಿದೆ. ಎರಡೂ ಪವರ್‌ಟ್ರೇನ್‌ಗಳು 5-ಸ್ಪೀಡ್ ಮ್ಯಾನುವಲ್ ಅಥವಾ AMT ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತವೆ. ಸುರಕ್ಷತೆಯ ವಿಷಯದಲ್ಲಿ, ಎರಡು ಮುಂಭಾಗದ ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು, EBD ಜೊತೆಗೆ ABS ಅನ್ನು ಒಳಗೊಂಡಿದೆ ಮತ್ತು 4-ಸ್ಟಾರ್ ಗ್ಲೋಬಲ್ NCAP ಕ್ರ್ಯಾಶ್ ಸೇಫ್ಟಿ ರೇಟಿಂಗ್ ಅನ್ನು ಕೂಡ ಪಡೆದಿದೆ.
ಟಾಟಾ ಟಿಗೋರ್
ಟಾಟಾ ಟಿಗೊರ್ ಒಂದು ಸಬ್‌ಕಾಂಪ್ಯಾಕ್ಟ್ ಸೆಡಾನ್ ಆಗಿದ್ದು ನಾಲ್ಕು ವೇರಿಯಂಟ್ ಗಳಲ್ಲಿ ಲಭ್ಯವಿದೆ: XE, XM, XZ, ಮತ್ತು XZ+. ಇದರ ಪರಿಷ್ಕೃತ ಆರಂಭಿಕ ಬೆಲೆಯನ್ನು ಈ ಕೆಳಗೆ ನೀಡಲಾಗಿದೆ:
ಮಾಡೆಲ್ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
ಟಾಟಾ ಟಿಗೋರ್ XE |
ರೂ. 6.30 ಲಕ್ಷ |
ರೂ. 6 ಲಕ್ಷ |
(-ರೂ 30,000) |
ಮೇಲಿನ ಟೇಬಲ್ ನಲ್ಲಿ ತೋರಿಸಿರುವಂತೆ, ಬೇಸ್-ಸ್ಪೆಕ್ ಟಾಟಾ ಟಿಗೊರ್ ರೂ. 30,000 ಬೆಲೆ ಕಡಿತವನ್ನು ಪಡೆದಿದೆ, ಮತ್ತು ಇದು ಇತರ ವೇರಿಯಂಟ್ ಗಳ ಮೇಲೆ ಕೂಡ ಪರಿಣಾಮ ಬೀರಬಹುದು.
ಟಿಯಾಗೋನಲ್ಲಿರುವ ಹಲವಾರು ಫೀಚರ್ ಗಳು ಟಿಗೋರ್ ನಲ್ಲಿ ಕೂಡ ನೀಡಲಾಗಿದೆ, ಆದರೆ ಇದು ದೊಡ್ಡ ಗಾತ್ರದ 419-ಲೀಟರ್ ಟ್ರಂಕ್‌ನೊಂದಿಗೆ ಬರುತ್ತದೆ, ಮತ್ತು ಟಿಯಾಗೋ ಕೇವಲ 242 ಲೀಟರ್ ಟ್ರಂಕ್ ಅನ್ನು ಪಡೆಯುತ್ತದೆ. ಇದರ ಜೊತೆಗೆ, ಟಿಯಾಗೊ ಗ್ರೇ ಕಲರ್ ನ ಫ್ಯಾಬ್ರಿಕ್ ಅಪ್ಹೋಲಿಸ್ಟ್ರೀಯನ್ನು ಹೊಂದಿದ್ದರೆ, ಟಿಗೊರ್ ವೈಟ್ ಲೆಥೆರೆಟ್ ಸೀಟ್‌ಗಳೊಂದಿಗೆ ಬರುತ್ತದೆ. ಟಾಟಾದ ಈಗಿರುವ ಲೈನ್ ಅಪ್ ನ ಏಕೈಕ ಸೆಡಾನ್‌ನಲ್ಲಿ ಫೀಚರ್ ಗಳು ಅಥವಾ ಎಂಜಿನ್‌ಗಳಲ್ಲಿ ಬೇರೆ ಯಾವುದೇ ಬದಲಾವಣೆಗಳಿಲ್ಲ.
ಇದನ್ನು ಕೂಡ ಓದಿ: ಬಾಲಿವುಡ್ ನಟ ಜಾನ್ ಅಬ್ರಹಾಂ ಮತ್ತು ಭಾರತೀಯ ಹಾಕಿ ಸ್ಟಾರ್ ಪಿ.ಆರ್. ಶ್ರೀಜೇಶ್ ಗ್ಯಾರೇಜ್ ಗೆ ಬಂದಿದೆ ಹೊಚ್ಚ ಹೊಸ ಕಾರುಗಳು, ಆದರೆ ಯಾವುದೂ ಕೂಡ ಐಷಾರಾಮಿ ಮಾಡೆಲ್ ಗಳಲ್ಲ
ಟಾಟಾ ಆಲ್ಟ್ರೋಝ್
ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿರುವ ಟಾಟಾ ಆಲ್ಟ್ರೋಝ್, ಆರು ಪ್ರಮುಖ ವೇರಿಯಂಟ್ ಗಳಲ್ಲಿ ಲಭ್ಯವಿದೆ: XE, XM, XM+, XT, XZ, ಮತ್ತು XZ+. ಇದರ ಬೇಸ್-ಸ್ಪೆಕ್ ಮಾಡೆಲ್ ಗಳ ಅಪ್ಡೇಟ್ ಆಗಿರುವ ಬೆಲೆಗಳು ಈ ಕೆಳಗಿನಂತಿವೆ:
ಮಾಡೆಲ್ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
ಟಾಟಾ ಆಲ್ಟ್ರೋಝ್ XE |
ರೂ. 6.65 ಲಕ್ಷ |
ರೂ. 6.50 ಲಕ್ಷ |
(-ರೂ 15,000) |
ಟಾಟಾ ಆಲ್ಟ್ರೋಝ್ ಬೇಸ್ ಮಾಡೆಲ್ ಈಗ ರೂ. 15,000 ಮತ್ತು ಕೆಲವು ಆಯ್ದ ವೇರಿಯಂಟ್ ಗಳಲ್ಲಿ ರೂ. 45,000 ವರೆಗೆ ರಿಯಾಯಿತಿಗಳೊಂದಿಗೆ ಲಭ್ಯವಿದೆ.
ಫೀಚರ್ ಗಳ ವಿಷಯದಲ್ಲಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ಸಿಂಗಲ್-ಪೇನ್ ಸನ್‌ರೂಫ್ ಅನ್ನು ಒಳಗೊಂಡಿದೆ. ಎಂಜಿನ್ ಆಯ್ಕೆಗಳಲ್ಲಿ 88 PS 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 110 PS 1.2-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 90 PS 1.5-ಲೀಟರ್ ಡೀಸೆಲ್ ಲಭ್ಯವಿದೆ. ಇದು 1.2-ಲೀಟರ್ ಪೆಟ್ರೋಲ್ ಎಂಜಿನ್ (73.5 PS/103 Nm) ಗೆ ಜೋಡಿಸಿದ CNG ವರ್ಷನ್ ಅನ್ನು ಕೂಡ ಪಡೆಯುತ್ತದೆ. ಸುರಕ್ಷತೆಯ ವಿಷಯದಲ್ಲಿ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ISOFIX ಆಂಕರ್‌ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ (DCT ಮಾತ್ರ) ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳನ್ನು ನೀಡಲಾಗಿದೆ.
ಟಾಟಾ ಹ್ಯಾರಿಯರ್
ಟಾಟಾ ಹ್ಯಾರಿಯರ್ ನಾಲ್ಕು ಪ್ರಮುಖ ವೇರಿಯಂಟ್ ಗಳಲ್ಲಿ ಲಭ್ಯವಿದೆ: ಸ್ಮಾರ್ಟ್, ಪ್ಯೂರ್, ಅಡ್ವೆಂಚರ್ ಮತ್ತು ಫಿಯರ್‌ಲೆಸ್. ಇದರ ಪರಿಷ್ಕೃತ ಆರಂಭಿಕ ಬೆಲೆ ಹೀಗಿದೆ:
ಮಾಡೆಲ್ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
ಟಾಟಾ ಹ್ಯಾರಿಯರ್ ಸ್ಮಾರ್ಟ್ |
ರೂ. 14.99 ಲಕ್ಷ |
ರೂ. 14.99 ಲಕ್ಷ |
ಯಾವುದೇ ವ್ಯತ್ಯಾಸವಿಲ್ಲ |
ಟಾಟಾ ಹ್ಯಾರಿಯರ್‌ನ ಬೇಸ್ ಮಾಡೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ, ಆದರೆ ಇತರ ವರ್ಷನ್ ಗಳು ರೂ 1.60 ಲಕ್ಷದವರೆಗೆ ರಿಯಾಯಿತಿಯನ್ನು ಪಡೆದಿವೆ.
ಹ್ಯಾರಿಯರ್ 12.3-ಇಂಚಿನ ಟಚ್‌ಸ್ಕ್ರೀನ್ ಮತ್ತು 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಅನ್ನು ಹೊಂದಿದೆ. ಇದು 170 PS/350 Nm 2-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನಡುವೆ ಆಯ್ಕೆಯನ್ನು ನೀಡಲಾಗಿದೆ. ಸುರಕ್ಷತೆಯ ವಿಷಯದಲ್ಲಿ, ಏಳು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ ಆರು), 360-ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸೇರಿದಂತೆ ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ (ADAS) ಫೀಚರ್ ಗಳನ್ನು ಒಳಗೊಂಡಿದೆ.
ಇದನ್ನು ಕೂಡ ಓದಿ: ಟಾಟಾ ಹ್ಯಾರಿಯರ್ ಮತ್ತು ಸಫಾರಿ ಮಾಲೀಕರಿಗೆ ಇಲ್ಲಿದೆ ಸಿಹಿ ಸುದ್ದಿ, SUVಗಳು ಪಡೆದುಕೊಂಡಿವೆ ಗ್ಲೋಬಲ್ NCAP ಸೇಫರ್ ಚಾಯ್ಸ್ ಪ್ರಶಸ್ತಿ
ಟಾಟಾ ಸಫಾರಿ
ಟಾಟಾ ಸಫಾರಿಯು ಟಾಟಾ ಹ್ಯಾರಿಯರ್ ಆಧಾರಿತ ಮೂರು ಸಾಲು ಸೀಟಿಂಗ್ ಇರುವ SUVಯಾಗಿದೆ. ಇದನ್ನು ನಾಲ್ಕು ಪ್ರಮುಖ ವೇರಿಯಂಟ್ ಗಳಲ್ಲಿ ನೀಡಲಾಗುತ್ತದೆ: ಸ್ಮಾರ್ಟ್, ಪ್ಯೂರ್, ಅಡ್ವೆಂಚರ್ ಮತ್ತು ಅಕಾಂಪ್ಲಿಶ್ಡ್. ಟಾಟಾ ಸಫಾರಿಯ ಪರಿಷ್ಕೃತ ಬೆಲೆಗಳು ಈ ಕೆಳಗೆ ತೋರಿಸಿದಂತೆ ಪ್ರಾರಂಭವಾಗುತ್ತವೆ:
ಮಾಡೆಲ್ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
ಟಾಟಾ ಸಫಾರಿ ಸ್ಮಾರ್ಟ್ |
ರೂ. 15.49 ಲಕ್ಷ |
ರೂ. 15.49 ಲಕ್ಷ |
ಯಾವುದೇ ವ್ಯತ್ಯಾಸವಿಲ್ಲ |
ಟಾಟಾ ಸಫಾರಿಯ ಬೇಸ್ ಮಾಡೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ, ಆದರೆ ಇತರ ವರ್ಷನ್ ಗಳು ಈಗ 1.80 ಲಕ್ಷದವರೆಗೆ ರಿಯಾಯಿತಿಯನ್ನು ಹೊಂದಿವೆ.
ಸಫಾರಿಯು ಟಾಟಾ ಹ್ಯಾರಿಯರ್‌ನಲ್ಲಿರುವ ಅನೇಕ ಫೀಚರ್ ಗಳು ಮತ್ತು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರ ಜೊತೆಗೆ ಹೆಚ್ಚಿನ ಫೀಚರ್ ಗಳಾದ ಗೆಸ್ಚರ್-ಎನೇಬಲ್ ಮಾಡಿರುವ ಪವರ್ಡ್ ಟೈಲ್‌ಗೇಟ್, ವೆಂಟಿಲೇಟೆಡ್ ಫ್ರಂಟ್ ಮತ್ತು ಎರಡನೇ ಸಾಲಿನ ಸೀಟ್ ಗಳು (6-ಸೀಟರ್ ವರ್ಷನ್ ನಲ್ಲಿ) ಮತ್ತು ಬಾಸ್ ಮೋಡ್ ಫೀಚರ್ ನೊಂದಿಗೆ 4-ವೇ ಪವರ್ಡ್ ಕೋ ಡ್ರೈವರ್ ಸೀಟ್ ಗಳನ್ನು ನೀಡಲಾಗಿದೆ.
ಎಲ್ಲಾ ಬೆಲೆಗಳು ಎಕ್ಸ್ ಶೋರೂಂ, ಪ್ಯಾನ್-ಇಂಡಿಯಾ ಬೆಲೆಯಾಗಿದೆ
ಪ್ರತಿಸ್ಪರ್ಧಿಗಳು
ಟಾಟಾ ಟಿಯಾಗೊ ಮಾರುತಿ ಸೆಲೆರಿಯೊ, ಮಾರುತಿ ವ್ಯಾಗನ್ R ಮತ್ತು ಸಿಟ್ರೊಯೆನ್ C3 ಗಳೊಂದಿಗೆ ಸ್ಪರ್ಧಿಸುತ್ತದೆ. ಟಾಟಾ ಟಿಗೋರ್ ಮಾರುತಿ ಡಿಜೈರ್, ಹ್ಯುಂಡೈ ಔರಾ ಮತ್ತು ಹೋಂಡಾ ಅಮೇಜ್‌ಗೆ ಪ್ರತಿಸ್ಪರ್ದಿಯಾಗಿದೆ. ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿರುವ ಟಾಟಾ ಆಲ್ಟ್ರೋಜ್ ಅನ್ನು ನೋಡುತ್ತಿರುವವರಿಗೆ, ಹ್ಯುಂಡೈ i20, ಮಾರುತಿ ಬಲೆನೊ ಮತ್ತು ಟೊಯೊಟಾ ಗ್ಲಾನ್ಜಾ ಅದರ ಪ್ರತಿಸ್ಪರ್ಧಿಯಾಗಿದೆ.
ಮಿಡ್ ಸೈಜ್ SUV ಸೆಗ್ಮೆಂಟ್ ನಲ್ಲಿ, ಟಾಟಾ ಹ್ಯಾರಿಯರ್ ಮಹೀಂದ್ರ XUV700, MG ಹೆಕ್ಟರ್, ಜೀಪ್ ಕಂಪಾಸ್ ಮತ್ತು ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ನ ಟಾಪ್ ಎಂಡ್ ಮಾಡೆಲ್ ಗಳಿಗೆ ಪ್ರತಿಸ್ಪರ್ಧಿಯಾಗಿದೆ. ಹಾಗೆಯೇ, ಟಾಟಾ ಸಫಾರಿ MG ಹೆಕ್ಟರ್ ಪ್ಲಸ್, ಹುಂಡೈ ಅಲ್ಕಾಜರ್ ಮತ್ತು ಮಹೀಂದ್ರ XUV700 ನೊಂದಿಗೆ ಸ್ಪರ್ಧಿಸುತ್ತದೆ.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ: ಟಿಯಾಗೊ AMT