ಈ ಮಾರ್ಚ್‌ನಲ್ಲಿ Maruti Arena ಮಾಡೆಲ್‌ಗಳ ಮೇಲೆ 67,000 ರೂ.ವರೆಗೆ ರಿಯಾಯಿತಿ

published on ಮಾರ್ಚ್‌ 08, 2024 08:28 pm by rohit for ಮಾರುತಿ ಆಲ್ಟೊ 800

  • 37 Views
  • ಕಾಮೆಂಟ್‌ ಅನ್ನು ಬರೆಯಿರಿ

ಸ್ವಿಫ್ಟ್ ಮತ್ತು ವ್ಯಾಗನ್ ಆರ್‌ ನಂತಹ ಮೊಡೆಲ್‌ಗಳ ಎಎಮ್‌ಟಿ ಆವೃತ್ತಿಗಳಿಗೆ ಈ ತಿಂಗಳ ಹೆಚ್ಚಿನ ರಿಯಾಯಿತಿಗಳು ಇರಲಿದೆ.

Offers on Maruti Arena cars in March 2024

  • Alto K10 ನಲ್ಲಿ ಗರಿಷ್ಠ 67,000 ರೂ.ವರೆಗಿನ ರಿಯಾಯಿತಿಗಳು ಲಭ್ಯವಿದೆ.
  • ಎಸ್-ಪ್ರೆಸ್ಸೊ ಮತ್ತು ವ್ಯಾಗನ್ ಆರ್ 66,000 ರೂ.ವರೆಗಿನ ಪ್ರಯೋಜನಗಳನ್ನು ಪಡೆಯುತ್ತವೆ.
  • ಮಾರುತಿಯು ಆಲ್ಟೊ 800 ರ ಮಾರಾಟಕ್ಕೆ ಉಳಿದಿರುವ ಕಾರುಗಳ ಮೇಲೆ ರೂ 15,000 ಉಳಿತಾಯವನ್ನು ನೀಡುತ್ತಿದೆ.
  • ಮಾರುತಿ ಬ್ರೆಝಾ ಅಥವಾ ಮಾರುತಿ ಎರ್ಟಿಗಾ ಮೇಲೆ ಯಾವುದೇ ರಿಯಾಯಿತಿಗಳಿಲ್ಲ.
  • ಎಲ್ಲಾ ಕೊಡುಗೆಗಳು ಮಾರ್ಚ್ 31, 2024 ರವರೆಗೆ ಮಾನ್ಯವಾಗಿರುತ್ತವೆ.

 ನಾವು ಇತ್ತೀಚೆಗೆ ಮಾರುತಿ ಸುಜುಕಿ ನೆಕ್ಸಾ ಕಾರುಗಳ ಮೇಲಿನ ಕೊಡುಗೆಗಳನ್ನು ನಿಮಗೆ ತಿಳಿಸಿದ್ದೆವು.  ಆದರೆ, ನೀವು ಮಾರುತಿ ಅರೆನಾ ಕಾರನ್ನು ಖರೀದಿಸಲು ಬಯಸಿದರೆ, ಬ್ರೆಜ್ಜಾ ಎಸ್‌ಯುವಿ ಮತ್ತು ಎರ್ಟಿಗಾ ಎಂಪಿವಿ ಹೊರತುಪಡಿಸಿ, ಉಳಿದ ಮೊಡೆಲ್‌ಗಳ ಮೇಲೆ ವಿವಿಧ ಉಳಿತಾಯಗಳಿವೆ. ಮಾರುತಿ ಸುಜುಕಿ ಅರೆನಾ ಕಾರುಗಳ ಮೇಲೆ 2024ರ ಮಾರ್ಚ್ ಅಂತ್ಯದವರೆಗೆ ಮಾನ್ಯವಾಗಿರುವ ರಿಯಾಯಿತಿಗಳ ಕುರಿತು ವಿವರವಾಗಿ ನೋಡೋಣ:

ಅಲ್ಟೋ 800

Maruti Alto 800

ಆಫರ್

ಮೊತ್ತ

ಎಕ್ಸ್‌ಚೇಂಜ್‌ ಬೋನಸ್

15,000 ರೂ.

ಒಟ್ಟು ಪ್ರಯೋಜನಗಳು

15,000 ರೂ.


  • ಮಾರುತಿ ಆಲ್ಟೊ 800 ಯ ಉತ್ಪಾದನೆಯನ್ನು ಈಗಾಗಲೇ ಸ್ಥಗಿತಗೊಳಿಸಿರುವುದರಿಂದ, ಮೇಲೆ ತಿಳಿಸಲಾದ ಪ್ರಯೋಜನಗಳು ಮಾರಾಟವಾಗದೆ ಉಳಿದ ಕಾರುಗಳಿಗೆ ಮಾತ್ರ ಅನ್ವಯಿಸುತ್ತವೆ.

  • ಎಕ್ಸ್ಚೇಂಜ್ ಬೋನಸ್ ಅದರ ಬೇಸ್‌ ಮೊಡೆಲ್‌ ಸ್ಟ್ಯಾಂಡರ್ಡ್‌ನ ಹೊರತುಪಡಿಸಿ, ಈ ಎಂಟ್ರಿ ಲೆವೆಲ್‌ ಹ್ಯಾಚ್‌ಬ್ಯಾಕ್‌ನ ಎಲ್ಲಾ  ಆವೃತ್ತಿಗಳಲ್ಲಿ (CNG ಸೇರಿದಂತೆ) ಲಭ್ಯವಿದೆ.

  • ಅದರ ಸ್ಥಗಿತ ಘೋಷಣೆಯ ವೇಳೆಗೆ, ಆಲ್ಟೊ 800ನ ಬೆಲೆಯು 3.54 ಲಕ್ಷ ರೂ.ನಿಂದ  5.13 ಲಕ್ಷ ರೂ.ವರೆಗೆ ಇತ್ತು.

ಆಲ್ಟೋ ಕೆ10

Maruti Alto K10

ಆಫರ್

ಮೊತ್ತ

ನಗದು ರಿಯಾಯಿತಿ

45,000 ರೂ.ವರೆಗೆ

ಎಕ್ಷ್‌ಚೇಂಜ್‌ ಬೋನಸ್

15,000 ರೂ.

ಕಾರ್ಪೊರೇಟ್ ರಿಯಾಯಿತಿ

7,000 ರೂ.

ಒಟ್ಟು ಪ್ರಯೋಜನಗಳು

67,000 ರೂ.ವರೆಗೆ

  • ಮಾರುತಿ ಆಲ್ಟೊ ಕೆ10ನ ಎಎಮ್‌ಟಿ ವೇರಿಯೆಂಟ್‌ಗಳಲ್ಲಿ ನೀವು ಈ ರಿಯಾಯಿತಿಗಳನ್ನು ಪಡೆದುಕೊಳ್ಳಬಹುದು.

  • ಮಾರುತಿ ಹ್ಯಾಚ್‌ಬ್ಯಾಕ್‌ನ ಮ್ಯಾನುವಲ್ ವೇರಿಯೆಂಟ್‌ಗಳನ್ನು ರೂ 40,000 ನಗದು ರಿಯಾಯಿತಿಯೊಂದಿಗೆ ನೀಡುತ್ತಿದೆ. ಆದರೆ ಇತರ ಕೊಡುಗೆಗಳು ಬದಲಾಗದೆ ಉಳಿದಿವೆ.

  • ನೀವು ಆಲ್ಟೊ ಕೆ10 ಸಿಎನ್‌ಜಿ ಅನ್ನು ಆರಿಸಿದರೆ, ಅದೇ ಎಕ್ಸ್‌ಚೇಂಜ್‌ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಯೊಂದಿಗೆ 25,000 ರೂ ನಗದು ರಿಯಾಯಿತಿಯೊಂದಿಗೆ ಬರುತ್ತದೆ.

  • ಆಲ್ಟೊ ಕೆ10ನ ಬೆಲೆಗಳು 3.99 ಲಕ್ಷ ರೂ.ನಿಂದ ಪ್ರಾರಂಭವಾಗಿ  5.96 ಲಕ್ಷ ರೂ. ವರೆಗೆ ಇದೆ.

ಎಸ್‌-ಪ್ರೆಸ್ಸೋ

Maruti S-Presso

ಆಫರ್

ಮೊತ್ತ

ನಗದು ರಿಯಾಯಿತಿ

45,000 ರೂ.ವರೆಗೆ

ಎಕ್ಷ್‌ಚೇಂಜ್‌ ಬೋನಸ್

15,000 ರೂ.

ಕಾರ್ಪೊರೇಟ್ ರಿಯಾಯಿತಿ

6,000 ರೂ.

ಒಟ್ಟು ಪ್ರಯೋಜನಗಳು

66,000 ರೂ.ವರೆಗೆ

 

  • ಮಾರುತಿ S-ಪ್ರೆಸ್ಸೊದ ಎಎಮ್‌ಟಿ ಆವೃತ್ತಿಗಳನ್ನು ಮಾತ್ರ ಈ ಉಳಿತಾಯದೊಂದಿಗೆ ಹೊಂದಬಹುದು.

  • ಹ್ಯಾಚ್‌ಬ್ಯಾಕ್‌ನ ಮ್ಯಾನುಯಲ್‌ ಆವೃತ್ತಿಗಳನ್ನು ಆಯ್ಕೆ ಮಾಡಲು ಬಯಸುವವರಿಗೆ, ನಗದು ರಿಯಾಯಿತಿಯು ರೂ 40,000 ಕ್ಕೆ ಇಳಿಯುತ್ತದೆ, ಆದರೆ ಇತರ ಪ್ರಯೋಜನಗಳು ಒಂದೇ ಆಗಿರುತ್ತವೆ.

  • ಎಸ್‌-ಪ್ರೆಸ್ಸೋದ ಸಿಎನ್‌ಜಿ ಆವೃತ್ತಿಗಳು 25,000 ರೂಪಾಯಿಗಳ ನಗದು ರಿಯಾಯಿತಿಯನ್ನು ಪಡೆಯುತ್ತವೆ ಆದರೆ ಒಟ್ಟು ಕೊಡುಗೆಗಳಲ್ಲಿ ಬೇರೆ ಯಾವುದೇ ಬದಲಾವಣೆಗಳಿಲ್ಲ.

  •  ಮಾರುತಿಯು ಈ ಹ್ಯಾಚ್‌ಬ್ಯಾಕ್ ಅನ್ನು 4.27 ಲಕ್ಷ ರೂ.ದಿಂದ  6.12 ಲಕ್ಷ ರೂ.ವರೆಗೆ ಮಾರಾಟ ಮಾಡುತ್ತದೆ.

ಈಕೋ

Maruti Eeco

ಆಫರ್

ಮೊತ್ತ

ನಗದು ರಿಯಾಯಿತಿ

20,000 ರೂ.ವರೆಗೆ

ಎಕ್ಷ್‌ಚೇಂಜ್‌ ಬೋನಸ್

10,000 ರೂ

ಕಾರ್ಪೊರೇಟ್ ರಿಯಾಯಿತಿ

4,000 ರೂ

ಒಟ್ಟು ಪ್ರಯೋಜನಗಳು

34,000 ರೂ.ವರೆಗೆ

  • ಮಾರುತಿ ಇಕೋದ ಪೆಟ್ರೋಲ್ ಆವೃತ್ತಿಗಳನ್ನು ಈ ರಿಯಾಯಿತಿಗಳೊಂದಿಗೆ ಹೊಂದಬಹುದು.

  • ಮಾರುತಿ ಎಮ್‌ಪಿಯ ಸಿಎನ್‌ಜಿ ಆವೃತ್ತಿಗಳನ್ನು ಕೇವಲ 10,000 ರೂಪಾಯಿಗಳ ನಗದು ರಿಯಾಯಿತಿಯೊಂದಿಗೆ ಅದೇ ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಯೊಂದಿಗೆ ನೀಡುತ್ತಿದೆ.

  • ಈಕೋದ ಬೆಲೆಯು 5.32 ಲಕ್ಷ ರೂ.ನಿಂದ 6.58 ಲಕ್ಷ ರೂ.ವರೆಗೆ ಇದೆ.

 ಇದನ್ನು ಸಹ ಓದಿ: ಮಾರುತಿ ಇಕೋ: ಉತ್ತಮವಾದುದನ್ನು ಮಾಡುವುದರಲ್ಲಿ ಉತ್ತಮವಾಗಿದೆ

ಸೆಲಾರಿಯೊ

Maruti Celerio

ಆಫರ್

ಮೊತ್ತ

ನಗದು ರಿಯಾಯಿತಿ

40,000 ರೂ.ವರೆಗೆ

ಎಕ್ಷ್‌ಚೇಂಜ್‌ ಬೋನಸ್

15,000 ರೂ

ಕಾರ್ಪೊರೇಟ್ ರಿಯಾಯಿತಿ

6,000 ರೂ

ಒಟ್ಟು ಪ್ರಯೋಜನಗಳು

61,000 ರೂ. ವರೆಗೆ

  • ಮಾರುತಿ ಸೆಲೆರಿಯೊದ ಎಎಮ್‌ಟಿ ಆವೃತ್ತಿಗಳಲ್ಲಿ ನೀವು ಈ ಹೆಚ್ಚಿನ ಉಳಿತಾಯವನ್ನು ಪಡೆಯಬಹುದು.

  • ನೀವು ಸೆಲೆರಿಯೊದ ಮ್ಯಾನುಯಲ್‌ ವೇರಿಯೆಂಟ್‌ಅನ್ನು ಖರೀದಿಸಲು ಬಯಸಿದರೆ, ಮಾರುತಿ ಅದನ್ನು 35,000 ರೂ. ನಗದು ರಿಯಾಯಿತಿಯೊಂದಿಗೆ ನೀಡುತ್ತಿದೆ ಮತ್ತು ಇತರ ಪ್ರಯೋಜನಗಳು ಬದಲಾಗದೆ ಉಳಿಯುತ್ತವೆ.

  • ಸೆಲೆರಿಯೊ ಸಿಎನ್‌ಜಿ ಆವೃತ್ತಿಯು 25,000 ರೂಪಾಯಿಗಳ ನಗದು ರಿಯಾಯಿತಿಯೊಂದಿಗೆ ಬರುತ್ತದೆ ಮತ್ತು ಮೇಲೆ ತಿಳಿಸಿದ ಅದೇ ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಯನ್ನು ಪಡೆಯುತ್ತದೆ.

  • ಮಾರುತಿಯು ಈ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಬೆಲೆಯನ್ನು 5.37 ಲಕ್ಷ ರೂ.ನಿಂದ 7.09 ಲಕ್ಷ ರೂಪಾಯಿಗಳವರೆಗೆ ನಿಗದಿಪಡಿಸಿದೆ.

ವ್ಯಾಗನ್ ಆರ್

Maruti Wagon R

ಆಫರ್

ಮೊತ್ತ

ನಗದು ರಿಯಾಯಿತಿ

40,000 ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್

15,000 ರೂ

ಹೆಚ್ಚುವರಿ ಎಕ್ಸ್‌ಚೇಂಜ್‌ ಬೋನಸ್

5,000 ರೂ

ಕಾರ್ಪೊರೇಟ್ ರಿಯಾಯಿತಿ

6,000 ರೂ

ಒಟ್ಟು ಪ್ರಯೋಜನಗಳು

66,000 ವರೆಗೆ

  • ಮಾರುತಿ ವ್ಯಾಗನ್ R ನ ಎಎಮ್‌ಟಿ ಆವೃತ್ತಿಗಳನ್ನು ಮಾತ್ರ ಈ ರಿಯಾಯಿತಿಗಳೊಂದಿಗೆ ಹೊಂದಬಹುದು.

  • ಹೊಸ ವ್ಯಾಗನ್ ಆರ್‌ಗಾಗಿ ನೀವು ಮಾರಾಟ ಮಾಡುತ್ತಿರುವ ಕಾರು ಏಳು ವರ್ಷಕ್ಕಿಂತ ಕಡಿಮೆ ಹಳೆಯದಾಗಿದ್ದರೆ ಮಾತ್ರ ಮಾರುತಿ ಹೆಚ್ಚುವರಿ ವಿನಿಮಯ ಬೋನಸ್ ಅನ್ನು ನೀಡುತ್ತಿದೆ.

  • ಇದರ ಮ್ಯಾನುಯಲ್‌ ಆವೃತ್ತಿಗಳು 35,000 ರೂಪಾಯಿಗಳ ನಗದು ರಿಯಾಯಿತಿಯೊಂದಿಗೆ ಬರುತ್ತವೆ. ಆದರೆ ಸಿಎನ್‌ಜಿ ಟ್ರಿಮ್‌ಗಳ ಸಂದರ್ಭದಲ್ಲಿ ಇದು 30,000 ರೂಪಾಯಿಗಳಿಗೆ ಇಳಿಯುತ್ತದೆ. ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಯು ಬದಲಾಗದೆ ಉಳಿಯುತ್ತದೆ.

  • ವ್ಯಾಗನ್ ಆರ್ ಬೆಲೆ 5.55 ಲಕ್ಷ ರೂ.ನಿಂದ 7.38 ಲಕ್ಷ ರೂ. ವರೆಗೆ ಇದೆ. 

ಇದನ್ನು ಸಹ ಓದಿ: CNG ಆಟೋಮ್ಯಾಟಿಕ್ ಆಯ್ಕೆಯು ಈಗ ಅಸ್ತಿತ್ವದಲ್ಲಿದೆ, ಇದನ್ನು ಕಾರುಗಳಲ್ಲಿ ಪರಿಚಯಿಸಲು ಏಕೆ ಹೆಚ್ಚು ಸಮಯ ತೆಗೆದುಕೊಂಡಿತು ಎಂಬುದನ್ನು ತಿಳಿಯೋಣ

ಸ್ಟಿಫ್ಟ್‌

Maruti Swift

ಆಫರ್

ಮೊತ್ತ

ನಗದು ರಿಯಾಯಿತಿ

20,000 ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್

15,000 ರೂ

ಹೆಚ್ಚುವರಿ ಎಕ್ಸ್‌ಚೇಂಜ್‌ ಬೋನಸ್

5,000 ರೂ

ಕಾರ್ಪೊರೇಟ್ ರಿಯಾಯಿತಿ

7,000  ರೂ

ಒಟ್ಟು ಪ್ರಯೋಜನಗಳು

47,000 ರೂ.ವರೆಗೆ

  • ಮೇಲೆ ತಿಳಿಸಿದ ಪ್ರಯೋಜನಗಳು ಮಾರುತಿ ಸ್ವಿಫ್ಟ್‌ನ ಎಎಮ್‌ಟಿ ಆವೃತ್ತಿಗಳಲ್ಲಿ ಮಾತ್ರ ಲಭ್ಯವಿವೆ.

  • ಹೊಸ ಸ್ವಿಫ್ಟ್‌ಗಾಗಿ ನೀವು ಮಾರಾಟ ಮಾಡುತ್ತಿರುವ ಕಾರು ಏಳು ವರ್ಷಕ್ಕಿಂತ ಕಡಿಮೆ ಹಳೆಯದಾಗಿದ್ದರೆ ಮಾತ್ರ ಮಾರುತಿ ಹೆಚ್ಚುವರಿ ವಿನಿಮಯ ಬೋನಸ್ ಅನ್ನು ನೀಡುತ್ತಿದೆ.

  • ಹ್ಯಾಚ್‌ಬ್ಯಾಕ್‌ನ ಮ್ಯಾನುವಲ್ ವೇರಿಯೆಂಟ್‌ಗಳನ್ನು ಖರೀದಿಸಲು ಬಯಸುವವರಿಗೆ, ನಗದು ರಿಯಾಯಿತಿಯು ರೂ 15,000 ಕ್ಕೆ ಇಳಿಯುತ್ತದೆ. ಮತ್ತೊಂದೆಡೆ, ಸ್ವಿಫ್ಟ್ ಸಿಎನ್‌ಜಿಯನ್ನು 15,000 ರೂಪಾಯಿಗಳ ವಿನಿಮಯ ಬೋನಸ್ ಮತ್ತು 7,000 ರೂಪಾಯಿಗಳ ಕಾರ್ಪೊರೇಟ್ ರಿಯಾಯಿತಿಯೊಂದಿಗೆ ಮಾತ್ರ ನೀಡಲಾಗುತ್ತಿದೆ.

  • ನೀವು ಸ್ವಿಫ್ಟ್ ವಿಶೇಷ ಆವೃತ್ತಿಯನ್ನು ಖರೀದಿಸಲು ಬಯಸಿದರೆ, ನೀವು ರೂ 18,400 ಹೆಚ್ಚುವರಿ ಪಾವತಿಸಬೇಕಾಗುತ್ತದೆ. ಇದು ಇನ್ನೂ ರೂ 20,000 ವರೆಗಿನ ವಿನಿಮಯ ಬೋನಸ್ (ಹೆಚ್ಚುವರಿ ವಿನಿಮಯ ಬೋನಸ್ ಸೇರಿದಂತೆ) ಮತ್ತು ರೂ 7,000 ರ ಕಾರ್ಪೊರೇಟ್ ರಿಯಾಯಿತಿಯನ್ನು ಪಡೆಯುತ್ತದೆ.

  • ಮಾರುತಿಯ ಈ  ಮಧ್ಯಮ ಗಾತ್ರದ ಹ್ಯಾಚ್‌ಬ್ಯಾಕ್ ಬೆಲೆಯನ್ನು 5.99 ಲಕ್ಷ ರೂ.ನಿಂದ 9.03 ಲಕ್ಷ ರೂ.ವರೆಗೆ ಹೊಂದಿದೆ.

ಡಿಸೈರ್‌

Maruti Dzire

ಆಫರ್

ಮೊತ್ತ

ನಗದು ರಿಯಾಯಿತಿ

15,000 ರೂ.ವರೆಗೆ

ಎಕ್ಷ್‌ಚೇಂಜ್‌ ಬೋನಸ್

15,000 ರೂ.

ಕಾರ್ಪೊರೇಟ್ ರಿಯಾಯಿತಿ

7,000 ರೂ

ಒಟ್ಟು ಪ್ರಯೋಜನಗಳು

37,000 ರೂ.ವರೆಗೆ

  • ಮಾರುತಿ ಡಿಜೈರ್‌ನ ಎಎಮ್‌ಟಿ ವೇರಿಯೆಂಟ್‌ಗಳು ಮಾತ್ರ ಈ ಪ್ರಯೋಜನದೊಂದಿಗೆ ಬರುತ್ತವೆ.

  • ನೀವು ಸಬ್-4ಮೀ ಸೆಡಾನ್‌ನ ಮ್ಯಾನುಯಲ್‌ ಆವೃತ್ತಿಗಳನ್ನು ಬಯಸಿದರೆ, ನಗದು ರಿಯಾಯಿತಿಯು ರೂ 10,000 ಕ್ಕೆ ಇಳಿಯುತ್ತದೆ. ಆದರೆ ಇತರ ಕೊಡುಗೆಗಳು ಬದಲಾಗದೆ ಉಳಿಯುತ್ತವೆ.

  • ಮಾರುತಿ ಡಿಜೈರ್‌ನ ಬೆಲೆಗಳು 6.57 ಲಕ್ಷ ರೂ.ನಿಂದ ಪ್ರಾರಂಭವಾಗಿ  9.39 ಲಕ್ಷ ರೂ.ವರೆಗೆ ಇರುತ್ತದೆ.

ಗಮನಿಸಿ: ರಾಜ್ಯ ಮತ್ತು ನಗರವನ್ನು ಅವಲಂಬಿಸಿ ರಿಯಾಯಿತಿಗಳು ಬದಲಾಗಬಹುದು. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಮಾರುತಿ ಅರೆನಾ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.

ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಗಳಾಗಿವೆ

ಇನ್ನಷ್ಟು ಓದಿ: ಆಲ್ಟೋ ಆನ್‌ರೋಡ್‌ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ Alto 800

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience