ಮಾರುತಿ ವರ್ಷದ ಕೊನೆಯ ಕೊಡುಗೆಗಳು: ರೂ 90,000 ವರೆಗೂ ಉಳಿತಾಯ ಮಾಡಿರಿ ಸಿಯಾಜ್, ವಿಟಾರಾ ಬ್ರೆಝ, ಮತ್ತು ಅಧಿಕ!
ಮಾರುತಿ ಸಿಯಾಜ್ ಗಾಗಿ rohit ಮೂಲಕ ಡಿಸೆಂಬರ್ 16, 2019 03:19 pm ರಂದು ಪ್ರಕಟಿಸಲಾಗಿದೆ
- 19 Views
- ಕಾಮೆಂಟ್ ಅನ್ನು ಬರೆಯಿರಿ
ಈ ಕೊಡುಗೆಗಳು ಮಾಡೆಲ್ ಗಳಾದ ಎರ್ಟಿಗಾ, ಎಸ್ -ಪ್ರೆಸ್ಸೋ ಮತ್ತು XL6 ಗಳಿಗೆ ಇರುವುದಿಲ್ಲ.
- ವಿಟಾರಾ ಬ್ರೆಝ ಕೊಡುಗೆ ಗರಿಷ್ಟ ಉಪಯುಕ್ತತೆಗಳು ರೂ 89,500 ವರೆಗೆ.
- ಮಾರುತಿ ಸುಜುಕಿ ಕೊಡುತ್ತಿದೆ 5- ವರ್ಷ ಎಕ್ಸ್ಟೆಂಡೆಡ್ ವಾರಂಟಿ ತನ್ನ ಎಲ್ಲ ಡೀಸೆಲ್ ಮಾಡೆಲ್ ಗಳ ಮೇಲೆ.
- ಈ ಕೊಡುಗೆಗಳು ಪೆಟ್ರೋಲ್ ಮತ್ತು CNG ವೇರಿಯೆಂಟ್ ಗಳಿಗೆ ಒಂದೇ ಆಗಿದೆ ಆಲ್ಟೊ 800, ಆಲ್ಟೊ K10, ಸೆಲೆರಿಯೊ, ಸೆಲೆರಿಯೊ X ಮತ್ತು ಎಕೋ
- ಎಲ್ಲ ಕೊಡುಗೆಗಳು ಡಿಸೆಂಬರ್ 31 ವರೆಗೆ ಮಾತ್ರ ಲಭ್ಯವಿರುತ್ತದೆ.
- ಜೊತೆಗೆ , ಮಾರುತಿ ಲಾಯಲ್ಟಿ ಬೋನಸ್ ಸಹ ಕೊಡುತ್ತಿದೆ.
ಈ ವರ್ಷ ಶೀಘ್ರದಲ್ಲೇ ಕೊನೆಯಾಗಲಿದ್ದು, ಬಹಳಷ್ಟು ಬ್ರಾಂಡ್ ಗಳು ವರ್ಷದ ಕೊನೆಯ ರಿಯಾಯಿತಿಯನ್ನು ಬಹಳಷ್ಟು ಮಾಡೆಲ್ ಗಳ ಮೇಲೆ ಕೊಡಲಿದೆ. ಆರಿಸುಮಾರು ಎಲ್ಲ ಮಾರುತಿ ಕೊಡುಗೆಗಳು ತನ್ನ ಎರೆಡು ವಿಭಾಗಗಳಲ್ಲಿ ಅರೇನಾ ಮತ್ತು ನೆಕ್ಸಾ ಗಳಲ್ಲಿ ಉಪಯುಕ್ತತೆಗಳನ್ನು ನಗದು ರಿಯಾಯಿತಿ ಮತ್ತು ಎಕ್ಸ್ಚೇಂಜ್ ಬೋನಸ್ ರೂಪದಲ್ಲಿ ಕೊಡುತ್ತಿದೆ. ತಮ್ಮ ಅನುಕೂಲಕ್ಕಾಗಿ ವಿವರಗಳನ್ನು ಕೊಡಲಾಗಿದೆ:
ಅರೇನಾ ಕೊಡುಗೆಗಳು
ಮಾರುತಿ ಆಲ್ಟೊ 800 ಹಾಗು ಮಾರುತಿ ಆಲ್ಟೊ K10
ಮಾರುತಿಯ ಆರಂಭಿಕ ಹಂತದ ಹ್ಯಾಚ್ ಬ್ಯಾಕ್, ಆಲ್ಟೊ 800, ಯಲ್ಲಿ ಕೊಡುಗೆಗಳಾಗಿ ಒಟ್ಟಾರೆ ಉಪಯುಕ್ತತೆಗಳಾದ ರೂ 60,000.ವರೆಗೂ ಕೊಡಲಾಗಿದೆ. ಅದರಲ್ಲಿ ಗ್ರಾಹಕ ಕೊಡುಗೆ ಆಗಿ ರೂ 40,000 ಸೇರಿದೆ, ಎಕ್ಸ್ಚೇಂಜ್ ಬೋನಸ್ ರೂ 15,000, ಮತ್ತು ಕಾರ್ಪೊರೇಟ್ ಬೋನಸ್ ರೂ 5,000 ಸೇರಿದೆ.
ಆಲ್ಟೊ K10 ವಿಚಾರದಲ್ಲಿ, ನಗದು ರಿಯಾಯಿತಿ ರೂ 30,000 ವರೆಗೂ ಇದೆ ಆದರೆ ಇತರ ಕೂಡುಗೆಗಳು ಹಾಗೆಯೆ ಉಳಿದಿದೆ. ಆಲ್ಟೊ 800 ಹಾಗು ಆಲ್ಟೊ K10 ಗಳು ಪೆಟ್ರೋಲ್ ವೇರಿಯೆಂತ್ ಕೊಡುಗೆಗಳೊಂದಿಗೆ ಬರುತ್ತದೆ.
ಇತ್ತೀಚಿನ ಕಾರ್ ಡೀಲ್ ಮತ್ತು ರಿಯಾಯಿತಿ ಬಗ್ಗೆ ತಿಳಿಯಿರಿ ಇಲ್ಲಿ.
ಮಾರುತಿ ಸೆಲೆರಿಯೊ
ಸೆಲೆರಿಯೊ ಪೆಟ್ರೋಲ್ ಹಾಗು CNG ವೇರಿಯೆಂಟ್ ಗಳು ನಗದು ರಿಯಾಯಿತಿ ರೂ 30,000 ವರೆಗೆ ಲಭ್ಯವಿದೆ. ಯಾವ ಗ್ರಾಹಕರು ತಮ್ಮ ಹಳೆಯ ಕಾರ್ ಅನ್ನು ಹೊಸ ಸೆಲೆರಿಯೊ ಪಡೆಯಲು ಮಾರಾಟ ಮಾಡ ಬಯಸುತ್ತಾರೋ ಅವರಿಗೆ ಮಾರುತಿ ಎಕ್ಸ್ಚೇಂಜ್ ಬೋನಸ್ 15,000 ಕೊಡುತ್ತಿದೆ, ಹಾಗು ಆಯ್ದ ಉದ್ಯೋಗಿಗಳಿಗೆ ಕಾರ್ಪೊರೇಟ್ ಕೊಡುಗೆಗಳಾಗಿ ರೂ
5,000 ವರೆಗೂ ಕೊಡುತ್ತಿದೆ. ಒಟ್ಟಾರೆ ಉಪಯುಕ್ತತೆಗಳು ರೂ 50,000 ವರೆಗೂ ಮತ್ತು ಅದೇ ಕೊಡುಗೆಗಳು ಸೆಲೆರಿಯೊ 50,000 ಗೆ ಸಹ ಕೊಡಲಾಗಿದೆ.
ಮಾರುತಿ ವ್ಯಾಗನ್ R
ಮಾರುತಿ ಕಾಂಪ್ಯಾಕ್ಟ್ ಹ್ಯಾಚ್ ಬ್ಯಾಕ್ ವ್ಯಾಗನ್ R, ಅನ್ನು ನಗದು ರಿಯಾಯಿತಿ ರೂ 10,000 ವರೆಗೂ, ಎಕ್ಸ್ಚೇಂಜ್ ಬೋನಸ್ ರೂ 20,000,ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ರೂ 5,000 ವರೆಗೂ ಕೊಡಲಾಗಿದೆ. ಹಾಗಾಗಿ, ನೀವು ಒಟ್ಟಾರೆ ರೂ 35,000 ವರೆಗೂ ಉಳಿಸಬಹುದು ನೀವು ವ್ಯಾಗನ್ R ಕೊಳ್ಳಬಯಸಿದರೆ.
ಮಾರುತಿ ಸ್ವಿಫ್ಟ್
ಯಾವ ಗ್ರಾಹಕರು ಡೀಸೆಲ್ ವೇರಿಯೆಂಟ್ ಸ್ವಿಫ್ಟ್ ಕೊಳ್ಳಲು ಚಿಂತಿಸುತ್ತಿದ್ದರೋ ಅವರಿಗೆ ನಗದು ರಿಯಾಯಿತಿ ರೂ 25,000 ವರೆಗೂ ಲಭ್ಯವಿದೆ. ಜೊತೆಗೆ, ನೀವು 5-ವರ್ಷ ಎಕ್ಸ್ಟೆಂಡೆಡ್ ವಾರಂಟಿ ಪಡೆಯಬಹುದು ಅಥವಾ ಹೆಚ್ಚಿನ ನಗದು ರಿಯಾಯಿತಿ ರೂ 15,750 ವರೆಗೆ ಪಡೆಯಬಹುದು. ಮಾರುತಿ ಎಕ್ಸ್ಚೇಂಜ್ ಬೋನಸ್ ಆಗಿ ರೂ 20,000 ವರೆಗೆ ಜೊತೆಗೆ ಕಾರ್ಪೊರೇಟ್ ರಿಯಾಯಿತಿ ರೂ 10,000 ವರೆಗೆ ಕೊಡುತ್ತಿದೆ ಹಾಗಾಗಿ ಒಟ್ಟಾರೆ ಉಳಿತಾಯ ರೂ 70,750 ಆಗಿರುತ್ತದೆ.
ನೀವು ಸ್ವಿಫ್ಟ್ ಸ್ಪೆಷಲ್ ಎಡಿಷನ್ (ಪೆಟ್ರೋಲ್ ) ಕೊಳ್ಳಬೇಕೆಂದಿದ್ದರೆ, ನೀವು ಕ್ಯಾಶ್ ಡಿಸ್ಕೌಂಟ್ ಆಗಿ ರೂ 6,500 ವರೆಗೂ ಪಡೆಯಬಹುದು, ಎಕ್ಸ್ಚೇಂಜ್ ಕೊಡುಗೆ ರೂ 20,000, ಮತ್ತು ಕಾರ್ಪೊರೇಟ್ ರಿಯಾಯಿತಿ ರೂ 5,000. ಸ್ಪೆಷಲ್ ಎಡಿಷನ್ ಹೊರತಾಗಿ ಇತರ ಎಲ್ಲ ವೇರಿಯೆಂಟ್ ಗಳಿಗೆ ನಗದು ರಿಯಾಯಿತಿ ರೂ 35,000 ವರೆಗೆ ಕೊಳಲಾಗುತ್ತಿದೆ. ಯಾವ ಗ್ರಾಹಕರು ತಮ್ಮ ಹಳೆಯ ಕಾರ್ ಅನ್ನು ಮಾರಾಟ ಮಾಡ ಬಯಸುತ್ತಾರೋ ಅವರಿಗೆ ಮಾರುತಿ ಎಕ್ಸ್ಚೇಂಜ್ ಬೋನಸ್ ಆಗಿ ರೂ 20,000 ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ರೂ 5,000. ಕೊಡುತ್ತಿದೆ.
ಮಾರುತಿ ಡಿಸೈರ್
ಸ್ವಿಫ್ಟ್ ನಲ್ಲಿದ್ದಂತೆ,ಡಿಸೈರ್ ಡೀಸೆಲ್ ವೇರಿಯೆಂಟ್ ಗಳಿಗೂ ಸಹ ನಗದು ರಿಯಾಯಿತಿ ಕೊಡಲಾಗುತ್ತಿದೆ ನಗದು ರಿಯಯಾಯಿತಿ ರೂ 30,000 ವರೆಗೆ. ಹಾಗು ನೀವು ಪಡೆಯಬಹುದು 5-ವರ್ಷ ಎಕ್ಸ್ಟೆಂಡೆಡ್ ವಾರಂಟಿ ಉಚಿತವಾಗಿ ಅಥವಾ ಹೆಚ್ಚುವರಿ ನಗದು ರಿಯಾಯಿತಿ 17,000 ವರೆಗೆ ಪಡೆಯಬಹುದು. ಹೆಚ್ಚಾಗಿ , ನಿಮಗೆ ಎಕ್ಸ್ಚೇಂಜ್ ಬೋನಸ್ ರೂ 20,000 ವರೆಗೆ ದೊರೆಯುತ್ತದೆ ಮತ್ತು ಕಾರ್ಪೊರೇಟ್ ರಿಯಾಯಿತಿ ರೂ 10,000 ದೊರೆಯುತ್ತದೆ. ಹಾಗಾಗಿ ಒಟ್ಟಾರೆ ಉಳಿತಾಯ ರೂ 77,000 ವರೆಗೆ.
ಡಿಸೈರ್ ಸ್ಪೆಷಲ್ ಎಡಿಷನ್ (ಪೆಟ್ರೋಲ್ ) ನಲ್ಲಿ ನಗದು ರಿಯಾಯಿತಿ ರೂ 11,500 ವರೆಗೆ, ಎಕ್ಸ್ಚೇಂಜ್ ಬೋನಸ್ ರೂ 20,000, ಮತ್ತು ಕಾರ್ಪೊರೇಟ್ ಕೊಡುಗೆ ರೂ 5,000 ದೊರೆಯುತ್ತದೆ. ಎಲ್ಲ ವೇರಿಯೆಂಟ್ ಗಳಿಗೆ ನಗದು ರಿಯಾಯಿತಿ ರೂ 40,000 ವರೆಗೆ, ಎಕ್ಸ್ಚೇಂಜ್ ಕೊಡುಗೆ ರೂ 20,000, ಮತ್ತು ಕಾರ್ಪೊರೇಟ್ ಬೋನಸ್ ರೂ 5,000 ದೊರೆಯುತ್ತದೆ.
ಮಾರುತಿ ವಿಟಾರಾ ಬ್ರೆಝ
ಮಾರುತಿ ವಿಟಾರಾ ಬ್ರೆಝ ಗಾಗಿ ನಿಮಗೆ ನಗದು ರಿಯಾಯಿತಿ ರೂ 40,000 ವರೆಗೆ ದೊರೆಯುತ್ತದೆ. ಮಾರುತಿ ಆಯ್ಕೆಯಾಗಿ ನೀವು 5-ವರ್ಷ ಎಕ್ಸ್ಟೆಂಡೆಡ್ ವಾರಾಂಟಿ ಅನ್ನು ಉಚಿತವಾಗಿ ನಿಮಗೆ ಕೊಡುತ್ತಿದೆ ಅಥವಾ ಹೆಚ್ಚಿನ ನಗದು ರಿಯಾಯಿತಿ ರೂ 19,500 ಕೊಡುತ್ತಿದೆ. ವಿಟಾರಾ ಬ್ರೆಝ ಜೊತೆಗೆ ಎಕ್ಸ್ಚೇಂಜ್ ಬೋನಸ್ ರೂ 20,000 ಕೊಡುತ್ತಿದೆ ಯಾವ ಗ್ರಾಹಕರು ತಮ್ಮ ಹಳೆಯ ಕಾರ್ ಅನ್ನು ಈ ಸಬ್ -4m SU ಕೊಳ್ಳುವುದಕ್ಕಾಗಿ ಮಾರಾಟ ಮಾಡಲು ಬಯಸುತ್ತಾರೆ ಅವರಿಗೆ. ಕಾರ್ಪೊರೇಟ್ ಬೋನಸ್ ಆಗಿ ರೂ 10,000 ಅನ್ನು ಆಯ್ದ ಉದ್ಯೋಗಿಗಳಿಗೆ ಕೊಡಲಾಗುತ್ತಿದೆ
ಮಾರುತಿ ಎಕೋ
ಎಕೋ ಎಲ್ಲ ವೇರಿಯೆಂಟ್ ಗಳು ( ಎಕೋ ಕಾರ್ಗೋ ಹಾಗು ಆಂಬುಲೆನ್ಸ್ ಸೇರಿ ) ಗಳಿಗೆ ನಗದು ರಿಯಾಯಿತಿ ರೂ 15,000 ವರೆಗೆ, ಎಕ್ಸ್ಚೇಂಜ್ ಬೋನಸ್ ರೂ 20,000, ಮತ್ತು ಕಾರ್ಪೊರೇಟ್ ರಿಯಾಯಿತಿ ರೂ 5,000 ವರೆಗೆ ಕೊಡುತ್ತಿದೆ
ನೆಕ್ಸಾ ಕೊಡುಗೆಗಳು
ಮಾರುತಿ ಬಲೆನೊ
ಮಾರುತಿ ಯ ಪ್ರೀಮಿಯಂ ಹ್ಯಾಚ್ ಬ್ಯಾಕ್ , ಬಲೆನೊ ದಲ್ಲಿ ಒಟ್ಟಾರೆ ಉಪಯುಕ್ತತೆಗಳು ರೂ 45,000 ವರೆಗೆ ಕೊಡಲಾಗುತ್ತಿದೆ. ಅದರಲ್ಲಿ ನಗದು ರಿಯಾಯಿತಿ, ಎಕ್ಸ್ಚೇಂಜ್ ಬೋನಸ್, ಕಾರ್ಪೊರೇಟ್ ಬೋನಸ್ ಮತ್ತು ಎಕ್ಸ್ಟೆಂಡೆಡ್ ವಾರಂಟಿ (ಡೀಸೆಲ್ ವೇರಿಯೆಂಟ್ ) ಸೇರಿದೆ.
ಮಾರುತಿ ಇಗ್ನಿಸ್
ಬಲೆನೊ ನಲ್ಲಿರುವಂತೆ, ಇಗ್ನಿಸ್ ಗು ಸಹ ಒಟ್ಟಾರೆ ಉಳಿತಾಯ ರೂ 65,000 ವರೆಗೆ ಕೊಡಲಾಗಿದೆ. ಇದರಲ್ಲಿ ಗ್ರಾಹಕರಿಗಾಗಿ ಕೊಡುಗೆ, ಎಕ್ಸ್ಚೇಂಜ್ ಬೋನಸ್ ಹಾಗು ಕಾರ್ಪೊರೇಟ್ ರಿಯಾಯಿತಿ ಸೇರಿದೆ.
ಮಾರುತಿ ಎಸ್ -ಕ್ರಾಸ್
ಎಸ್ -ಕ್ರಾಸ್ ಕೊಳ್ಳಲು ಬಯಸುವ ಗ್ರಾಹಕರು ಒಟ್ಟಾರೆ ರೂ 90,000 ವರೆಗೂ ಉಳಿಸಬಹುದು. ಮಾರುತಿ ಉಪಯುಕ್ತತೆಗಳಾಗಿ ನಗದು ರಿಯಾಯಿತಿ, ಎಕ್ಸ್ಚೇಂಜ್ ಕೊಡುಗೆ, ಕಾರ್ಪೊರೇಟ್ ಬೋನಸ್ ಹಾಗು 5-ವರ್ಷ ಎಕ್ಸ್ಟೆಂಡೆಡ್ ವಾರಾಂಟಿ ಕೊಡುತ್ತಿದೆ.
ಮಾರುತಿ ಸಿಯಾಜ್
ಮಾರುತಿ ಕಾಂಪ್ಯಾಕ್ಟ್ ಸೆಡಾನ್ ಸಿಯಾಜ್ ಕೊಳ್ಳಬಯಸುವವರಿಗೆ , ಭಾರತದ ಕಾರ್ ಮೇಕರ್ ಕೊಡುತ್ತಿದೆ ಗ್ರಾಹಕರಿಗಾಗಿ ಕೊಡುಗೆಗಳು, ಎಕ್ಸ್ಚೇಂಜ್ ಬೋನಸ್, ಕಾರ್ಪೊರೇಟ್ ರಿಯಾಯಿತಿ ಮತ್ತು 5-ವರ್ಷ ಎಕ್ಸ್ಟೆಂಡೆಡ್ ವಾರಂಟಿ, ಹಾಗಾಗಿ ಒಟ್ಟಾರೆ ಉಳಿತಾಯ ರೂ 90,000
ಹೆಚ್ಚು ಓದಿರಿ: ಮಾರುತಿ ಸಿಯಾಜ್ ಡೀಸೆಲ್
0 out of 0 found this helpful