• English
  • Login / Register

ಮಾರುತಿಯು ಬಲೊನೊ, ಎರ್ಟಿಗಾ ಮತ್ತು ಎಕ್ಸ್‌ಎಲ್6 ಗೆ ನೀಡುತ್ತಿದೆ ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಹಾಗೂ ಇನ್ನಷ್ಟು ಟೆಕ್

ಮಾರುತಿ ಎರ್ಟಿಗಾ ಗಾಗಿ shreyash ಮೂಲಕ ಫೆಬ್ರವಾರಿ 08, 2023 02:00 pm ರಂದು ಪ್ರಕಟಿಸಲಾಗಿದೆ

  • 24 Views
  • ಕಾಮೆಂಟ್‌ ಅನ್ನು ಬರೆಯಿರಿ

ಹ್ಯಾಚ್‌ಬ್ಯಾಕ್‌ ಮತ್ತು ಎಂಪಿವಿಗಳಿಗಾಗಿ ಹೊರತಂದಿರುವ ಹೊಸ ಸಂಪರ್ಕಿತ ಫೀಚರ್‌ಗಳು ಒಟಿಎ (ಓವರ್-ದಿ-ಏರ್) ಅಪ್‌ಡೇಟ್ ನಂತರ ಆ್ಯಕ್ಸೆಸ್ ಮಾಡಬಹುದಾಗಿದೆ

Maruti Ertiga, XL6 and Baleno

  • ಎಲ್ಲಾ ಮೂರು ಕಾರುಗಳು ಈಗ ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಅನ್ನು ಹೊಂದಿವೆ.

  • ಹೊಸ ನವೀಕರಣವು ಮಾಡೆಲ್‌ಗಳನ್ನು ಅವಲಂಬಿಸಿ MID ಮತ್ತು MIDನಲ್ಲಿ ಟರ್ನ್-ಬೈ-ಟರ್ನ್(TBT) ನಿರ್ದೇಶನಗಳನ್ನು ಸಹ ಒಳಗೊಂಡಿದೆ.

  • ಎರ್ಟಿಗಾ ಮತ್ತು ಎಕ್ಸ್‌ಎಲ್6 ಎರಡೂ ARKAMYS ನಿಂದ ಸರೌಂಡ್ ಸೆನ್ಸ್ ಆಡಿಯೋ ಟ್ಯೂನಿಂಗ್ ಅನ್ನು ಪಡೆದಿವೆ.

  • ಈಗ ಬಲೆನೊ ಸಹ ESP ಮತ್ತು ಹಿಲ್ ಹೋಲ್ಡ್ ಅಸಿಸ್ಟ್ ಅನ್ನು ಪ್ರಮಾಣಿತವಾಗಿ ಪಡೆದಿದೆ.

ಮಾರುತಿ ಸುಝುಕಿಯು ಬಲೆನೊಎರ್ಟಿಗಾ ಮತ್ತು ಎಕ್ಸ್‌ಎಲ್6 ಗೆ ಹೊಸ ಸಂಪರ್ಕಿತ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಸ್ಮಾರ್ಟ್‌ಪ್ಲೇ ಪ್ರೊ (ಏಳು-ಇಂಚುಗಳು) ಮತ್ತು ಸ್ಮಾರ್ಟ್‌ಪ್ಲೇ ಪ್ರೊ+ (ಒಂಬತ್ತು ಇಂಚುಗಳು) ಇನ್‌ಫೋಟೈನ್‌ಮೆಂಟ್ ಸಿಸ್ಟಮ್‌ಗಳನ್ನು ಹೊಂದಿರುವ ಅವುಗಳ ವೈಶಿಷ್ಟ್ಯ-ಭರಿತ ವೇರಿಯೆಂಟ್‌ಗಳು ಹೊಸ ಟೆಕ್ ಅನ್ನು ಪಡೆದುಕೊಂಡಿವೆ. ಒಟಿಎ (ಓವರ್-ದಿ-ಏರ್) ಅಪ್‌ಡೇಟ್ ಮೂಲಕ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಸಹ ಈ ನವೀಕರಣವನ್ನು ನೀಡಲಾಗುತ್ತದೆ.

ಹೆಚ್ಚಿನ ಅನುಕೂಲಕ್ಕಾಗಿ ಇನ್ನಷ್ಟು ಟೆಕ್

Maruti Baleno Infotainment
Maruti Baleno HUD

ಎಲ್ಲಾ ಮೂರು ವಾಹನಗಳು ಈಗ ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಅನ್ನು ಪಡೆದಿವೆ. ಈ ಎಂಪಿವಿಗಳು ಏಳು-ಇಂಚಿನ ಟಚ್‌ಸ್ಕ್ರೀನ್ ಅನ್ನು ಪಡೆದರೆ, ಟಾಪ್ ರೇಂಜ್‌ನ ಬಲೆನೊ ಒಂಬತ್ತು ಇಂಚಿನ ಯೂನಿಟ್ ಅನ್ನು ಹೊಂದಿದೆ. ಟಾಪ್-ಸ್ಪೆಕ್ ಬಲೊನೊದ MID (ಮಲ್ಟಿ-ಇನ್ಫಾರ್ಮೇಷನ್ ಡಿಸ್‌ಪ್ಲೇ) ಮಾತ್ರವಲ್ಲದೇ, HUD (ಹೆಡ್-ಅಪ್ ಡಿಸ್‌ಪ್ಲೇ)ನಲ್ಲಿಯೂ ಸಹ TBT (ಟರ್ನ್-ಬೈ-ಟರ್ನ್) ನ್ಯಾವಿಗೇಶನ್ ಅನ್ನು ನೀಡಿರುವುದು ಮತ್ತೊಂದು ಹೊಸ ವೈಶಿಷ್ಟ್ಯವಾಗಿದೆ. ಆದಾಗ್ಯೂ, ಎರ್ಟಿಗಾ ಮತ್ತು ಎಕ್ಸ್‌ಎಲ್6ನ MID ಡಿಸ್‌ಪ್ಲೇಗಳಲ್ಲಿ TBT ನ್ಯಾವಿಗೇಷನ್ ಆ್ಯಂಡ್ರಾಯ್ಡ್ ಆಟೋ ಜೊತೆಗೆ ಗೂಗಲ್ ಮ್ಯಾಪ್‌ನೊಂದಿಗೆ ಮಾತ್ರ ಲಭ್ಯವಿದ್ದು ಆ್ಯಪಲ್ ಕಾರ್‌ಪ್ಲೇನೊಂದಿಗೆ ಆ್ಯಪಲ್ ಮ್ಯಾಪ್‌ಗಳೊಂದಿಗೆ ಅಲ್ಲ ಎಂಬುದನ್ನು ಗಮನಿಸಬೇಕು.

ಇದನ್ನೂ ಓದಿ: ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ ಮತ್ತು ಇತರ ಪ್ರಮುಖ ನಗರಗಳಲ್ಲಿ ಮಾರುತಿ ಹ್ಯಾಚ್‌ಬ್ಯಾಕ್‌ಗಳ ಕಾಯುವಿಕೆ ಅವಧಿ 

ಡಿಜಿಟಲ್ ವರ್ಧಿತ ಆಡಿಯೋ

Maruti Ertiga

ವಿಶೇಷವಾಗಿ ಎರ್ಟಿಗಾ ಮತ್ತು ಎಕ್ಸ್‌ಎಲ್6ನ ನವೀಕರಣವು ಸುಧಾರಿತ ಸ್ಪೀಕರ್ ಸೌಂಡ್ ಗುಣಮಟ್ಟಕ್ಕಾಗಿ ARKAMYS ಸರೌಂಡಿಂಗ್ ಸೆನ್ಸ್ ಆಡಿಯೋ ಟ್ಯೂನಿಂಗ್ ಅನ್ನು ಮತ್ತು ವಿವಿಧ ಮೂಡ್‌ಗಳಿಗಾಗಿ ಸಿಗ್ನೇಚರ್ ಆ್ಯಂಬಿಯನ್ಸ್ ಸೆಟಿಂಗ್‌ಗಳನ್ನು ಹೊಂದಿದೆ. ಈ ಮಾಡೆಲ್‌ನ ಇತ್ತೀಚಿನ ಆವೃತ್ತಿಗಳ ಅಸ್ತಿತ್ವದಲ್ಲಿರುವ ಮಾಲೀಕರಿಗೆ ಸ್ಮಾರ್ಟ್ ಪ್ಲೇ ಪ್ರೊ ಸಿಂಕ್ ಅಪ್ಲಿಕೇಶನ್ ಬಳಸಿಕೊಂಡು ಸಾಫ್ಟ್‌ವೇರ್ ವೈಶಿಷ್ಟ್ಯದ ನವೀಕರಣವನ್ನು ಅವರ ಸ್ಮಾರ್ಟ್‌ಫೋನ್‌ಗಳ ಮೂಲಕ ಅಳವಡಿಸಬಹುದು.

ಇದನ್ನೂ ಓದಿ: ಈ ಫೆಬ್ರವರಿಯಲ್ಲಿ ಮಾರುತಿ ಇಗ್ನಿಸ್ ಮತ್ತು ಸಿಯಾಝ್‌ಗಳ ಮೇಲೆ ಪಡೆಯಿರಿ ರೂ. 45,000 ವರೆಗಿನ ಪ್ರಯೋಜನ

ಬಲೆನೊಗಾಗಿ ಇನ್ನಷ್ಟು ಸುರಕ್ಷತೆ

Maruti Baleno

ಮಾರುತಿಯು ಮೌನವಾಗಿ, ಇಎಸ್‌ಪಿ (ಎಲೆಕ್ಟ್ರಿಕ್ ಸ್ಟೆಬಿಲಿಟಿ ಪ್ರೊಗ್ರಾಂ) ಮತ್ತು ಹಿಲ್ ಅಸಿಸ್ಟ್ ಅನ್ನು ಬಲೆನೊದಲ್ಲಿ ಪ್ರಮಾಣಿತವಾಗಿ ಒದಗಿಸುವ ಮೂಲಕ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಿದೆ. ಇನ್ನೊಂದೆಡೆ ಇದನ್ನು ಎರ್ಟಿಗಾ ಮತ್ತು ಎಕ್ಸ್‌ಎಲ್6ನಲ್ಲಿ ಪ್ರಮಾಣಿತ ಸಾಧನವಾಗಿ ನೀಡಿದೆ.

ಇದನ್ನೂ ಓದಿ: 2030 ರ ವೇಳೆಗೆ ಐಸಿಇ ಮಾಡೆಲ್‌ಗಳಿಂದ ಗರಿಷ್ಠ ಮಾರಾಟ  ಇವಿಗಳಿಂದ ಕನಿಷ್ಠ ಮಾರಾಟ ಬರಲಿದೆ ಎಂದು ಊಹಿಸಿದ ಮಾರುತಿ.

ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ

ಮಾರುತಿಯು ಪ್ರತಿವರ್ಷದಂತೆ 2023 ಕ್ಕೆ ಬೋರ್ಡ್‌ನಾದ್ಯಂತ ಬೆಲೆಗಳನ್ನು ಹೆಚ್ಚಿಸುವ ಸಾಧ್ಯತೆಯಿದ್ದು, ಸಾಫ್ಟ್‌ವೇರ್ ಅಪ್‌ಡೇಟ್ ತನ್ನದೇ ಆದ ಯಾವುದೇ ಪ್ರೀಮಿಯಂ ಅನ್ನು ಹೊಂದಿರುವುದಿಲ್ಲ. ಈ ಬಲೆನೊಗೆ ರೂ. 6.49 ಲಕ್ಷದಿಂದ ರೂ. 9.83 ಲಕ್ಷಗಳವರೆಗೆ ಬೆಲೆ ನಿಗದಿಪಡಿಸಲಾಗಿದ್ದು, ಎಕ್ಸ್‌ಎಲ್6 ರೂ. 11.41 ಲಕ್ಷದಿಂದ ರೂ. 14.55 ಲಕ್ಷಗಳ ಬೆಲೆಯಲ್ಲಿ ಮಾರಾಟವಾಗಲಿದೆ, ಮತ್ತು ಈ ಎರ್ಟಿಗಾ ರೂ. 8.49 ಲಕ್ಷದಿಂದ ರೂ. 12.93 ಲಕ್ಷ ಬೆಲೆಯಲ್ಲಿ ಮಾರಾಟವಾಗಿದೆ.

ಎಲ್ಲಾ ಬೆಲೆಗಳು ಎಕ್ಸ್-ಶೋರೂಮ್

ಇನ್ನಷ್ಟು ಇಲ್ಲಿ ಓದಿ : ಎರ್ಟಿಗಾ ಆಟೋಮ್ಯಾಟಿಕ್

was this article helpful ?

Write your Comment on Maruti ಎರ್ಟಿಗಾ

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience