Maruti eVX; ಭಾರತದಲ್ಲಿ ಚಾರ್ಜಿಂಗ್ ಮಾಡುವ ವೇಳೆ ಮತ್ತೊಮ್ಮೆ ಪ್ರತ್ಯಕ್ಷವಾದ ಈ ಎಲೆಕ್ಟ್ರಿಕ್ SUV
ನವೆಂಬರ್ 23, 2023 10:57 pm ರಂದು shreyash ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
ಮಾರುತಿ ಇಂಡಿಯಾ ಸಂಸ್ಥೆಯ ಮೊದಲ ಸಂಪೂರ್ಣ ಎಲೆಕ್ಟ್ರಿಕ್ ಕಾರು ಎನಿಸಿರುವ eVX 2025ರಲ್ಲಿ ಬಿಡುಗಡೆಯಾಗುವ ಸಂಭವವಿದೆ.
- ಮಾರುತಿ eVX ಪರೀಕ್ಷಾರ್ಥ ವಾಹನವು EV ಚಾರ್ಜಿಂಗ್ ಸ್ಟೇಷನ್ ಒಂದರಲ್ಲಿ ಕಾಣಿಸಿಕೊಂಡಿದೆ.
- ಪಕ್ಕದ ಭಾಗ ಮತ್ತು ಹಿಂಭಾಗ ಮಾತ್ರವೇ ಸ್ಪೈ ಶಾಟ್ ಗಳಲ್ಲಿ ಕಾಣಿಸಿಕೊಂಡಿದ್ದು, ಈ ಕಾರನ್ನು ವಿಪರೀತವಾಗಿ ಮರೆಮಾಚಿರುವ ಕಾರಣ ಹೆಚ್ಚೇನೂ ಹೊಸತು ಕಾಣಿಸಿಕೊಂಡಿಲ್ಲ.
- ಹಿಂದಿನ ಸ್ಪೈ ಶಾಟ್ ಗಳನ್ನು ಆಧರಿಸಿ ಹೇಳುವುದಾದರೆ ಈ eVX ಕಾರು 360 ಡಿಗ್ರಿ ಕ್ಯಾಮರಾವನ್ನು ಹೊಂದಿರಲಿದೆ.
- eVX ಕಾರು 60 kWh ಬ್ಯಾಟರಿ ಕಾರನ್ನು ಬಳಸಲಿದ್ದು 550 km ನಷ್ಟು ಶ್ರೇಣಿಯನ್ನು ಹೊಂದಿರುವ ನಿರೀಕ್ಷೆ ಇದೆ.
- ಇದರ ಬೆಲೆಯು ರೂ. 25 ಲಕ್ಷದಿಂದ (ಎಕ್ಸ್ - ಶೋರೂಂ) ಪ್ರಾರಂಭಗೊಳ್ಳಲಿದೆ.
ಪರಿಕಲ್ಪನೆಯ ಮಾದರಿಯ ರೂಪದಲ್ಲಿ 2023ರ ಅಟೋ ಎಕ್ಸ್ಪೊ ಕಾರ್ಯಕ್ರಮದಲ್ಲಿ ಅನಾವರಣಗೊಂಡ ಮಾರುತಿ eVX ಕಾರು ಉತ್ಪಾದನೆಗೆ ಸಿದ್ಧಗೊಳ್ಳುವ ಮಾದರಿಯಾಗಿ ಸಜ್ಜುಗೊಳ್ಳುತ್ತಿದೆ. ಈ ಕಾರು ತಯಾರಕ ಸಂಸ್ಥೆಯು ಈ ಎಲೆಕ್ಟ್ರಿಕ್ SUV ಯ ಪರೀಕ್ಷೆಯನ್ನು ಭಾರತದಲ್ಲಿ ಪ್ರಾರಂಭಿಸಿದ್ದು, ಇದರ ಪರೀಕ್ಷಾರ್ಥ ವಾಹನದ ಹೊಸ ಸ್ಪೈ ಶಾಟ್ ಗಳು ನಮಗೆ ಸಿಕ್ಕಿವೆ.
ನಮಗೇನು ಕಾಣಸಿಕ್ಕಿದೆ
ಸಾಕಷ್ಟು ಮರೆಮಾಚಿದ ಸ್ಥಿತಿಯಲ್ಲಿ ಮರೆಮಾಚಿದ ಈ ಮಾರುತಿ eVX ಕಾರು ಚಾರ್ಜಿಂಗ್ ಸ್ಟೇಷನ್ ಒಂದರಲ್ಲಿ ಚಾರ್ಜ್ ಮಾಡುವ ವೇಳೆ ಕಾಣಿಸಿಕೊಂಡಿದೆ. ಪರೀಕ್ಷಾರ್ಥ ವಾಹನವು 10 ಸ್ಪೋಕ್ ಅಲೋಯ್ ವೀಲ್ ಮತ್ತು ಹಿಂಭಾಗದಲ್ಲಿ ಮೇಕ್ ಶಿಫ್ಟ್ ಟೇಲ್ ಲೈಟ್ ಗಳನ್ನು ಹೊಂದಿದೆ. ತಾತ್ಕಾಲಿಕ ಹೆಡ್ ಲೈಟ್ ಸೆಟಪ್ ಹೊಂದಿರುವ ಫೇಶಿಯಾದ ನೋಟವೂ ನಮಗೆ ಕಾಣಸಿಕ್ಕಿದೆ. ಈ eVX ವಾಹನವು 360 ಡಿಗ್ರಿ ಕ್ಯಾಮರಾವನ್ನು ಹೊಂದಿರಲಿದೆ ಎಂಬುದನ್ನು ಹಿಂದಿನ ಚಿತ್ರಗಳು ತೋರಿಸಿವೆ.
ಇದನ್ನು ಸಹ ಓದಿರಿ: ಪರೀಕ್ಷೆ ವೇಳೆ ಮತ್ತೆ ಕಾಣಿಸಿಕೊಂಡ ಟಾಟಾ ಕರ್ವ್
ಒಳಗಡೆ ಇದು ಹೇಗೆ ಕಾಣಿಸಿಕೊಳ್ಳುತ್ತದೆ
ಭಾರತದ ರಸ್ತೆಗಳಲ್ಲಿ ಓಡಾಡಲಿರುವ ಮಾರುತಿ eVX ಕಾರಿನ ಒಳಭಾಗವು ಇನ್ನೂ ಕಾಣಿಸಿಕೊಂಡಿಲ್ಲ. ಆದರೆ ಸುಜುಕಿ ಸಂಸ್ಥೆಯು ಈ ಪರಿಕಲ್ಪನೆಯ ವಿಕಸಿತ ಆವೃತ್ತಿಯ ಕ್ಯಾಬಿನ್ ಆವೃತ್ತಿಯನ್ನು ಬಿಡುಗಡೆ ಮಾಡಿಲ್ಲ. ಕ್ಯಾಬಿನ್ ನಲ್ಲಿ ಇಂಟಗ್ರೇಟೆಡ್ ಡಿಸ್ಪ್ಲೇ ಸೆಟಪ್ (ಇನ್ಫೊಟೈನ್ ಮೆಂಟ್ ಇನ್ಸ್ ಟ್ರುಮೆಂಟಲ್ ಕ್ಲಸ್ಟರ್), ಲಂಬಾತರವಾಗಿ ಹೊಂದಿಸಲಾದ AC ವೆಂಟ್ ವಿನ್ಯಾಸ, ನೊಗವನ್ನು ಹೋಲುವ ವಿಶಿಷ್ಟ 2 ಸ್ಪೋಕ್ ಸ್ಟೀಯರಿಂಗ್ ವೀಲ್, ಮತ್ತು ಡ್ರೈವ್ ಮೋಡ್ ಸೆಲೆಕ್ಟರ್ ಆಗಿ ಕಾರ್ಯ ನಿರ್ವಹಿಸುವ ರೋಟರಿ ಡಯಲ್ ಅನ್ನು ಕ್ಯಾಬಿನ್ ನಲ್ಲಿ ಕಾಣಬಹುದು.
ಬ್ಯಾಟರಿ ಮತ್ತು ಶ್ರೇಣಿ
ಮಾರುತಿ ಸಂಸ್ಥೆಯು eVX ಎಲೆಕ್ಟ್ರಿಕ್ SUVಯ ಕಾರ್ಯಕ್ಷಮತೆಯ ಕುರಿತು ಹೆಚ್ಚೇನೂ ಮಾಹಿತಿಯನ್ನು ನೀಡದಿದ್ದರೂ, ಇದು 550 km ಶ್ರೇಣಿಯೊಂದಿಗೆ 60 kWh ಬ್ಯಾಟರಿ ಪ್ಯಾಕ್ ಜೊತೆಗೆ ಬರಲಿದೆ ಎಂಬುದನ್ನು ಈ ಸಂಸ್ಥೆಯು ದೃಢೀಕರಿಸಿದೆ. ಈ eVX ಸಂಸ್ಥೆಯು ಆಲ್ ವೀಲ್ ಡ್ರೈವ್ ಆಯ್ಕೆಗೆ ಡ್ಯುವಲ್ ಮೋಟರ್ ಸೆಟಪ್ ಅನ್ನು ಹೊಂದಿರಲಿದೆ ಎಂಬುದನ್ನು ಸಹ ಮಾರುತಿಯು ತಿಳಿಸಿದೆ.
-
ನಿರೀಕ್ಷಿತ ಬಿಡುಗಡೆ ಮತ್ತು ಪ್ರತಿಸ್ಪರ್ಧಿಗಳು
ಮಾರುತಿ eVX ಅನ್ನು ಭಾರತದಲ್ಲಿ 2025ರ ಸುಮಾರಿಗೆ ಬಿಡುಗಡೆ ಮಾಡುವ ಸಾಧ್ಯತೆ ಇದ್ದು ಆರಂಭಿಕ ಬೆಲೆಯು ರೂ. 25 ಲಕ್ಷಕ್ಕಿಂತ ಕಡಿಮೆ ಇರದು (ಎಕ್ಸ್ - ಶೋರೂಂ). ಇದು MG ZS EV, ಹ್ಯುಂಡೈ ಕೋನಾ ಎಲೆಕ್ಟ್ರಿಕ್, ಮತ್ತು ಮುಂಬರುವ ಟಾಟಾ ಕರ್ವ್ EV ಜೊತೆ ಸ್ಪರ್ಧಿಸಲಿದ್ದು ಟಾಟಾ ನೆಕ್ಸನ್ EV ಮತ್ತು ಮಹೀಂದ್ರಾ XUV400 EV ಗೆ ಪ್ರೀಮಿಯಂ ದರದ ಬದಲಿ ಆಯ್ಕೆ ಎನಿಸಲಿದೆ.