ಮಾರುತಿ ಜಿಮ್ನಿಯನ್ನು ನಿರೀಕ್ಷಿಸುತ್ತಿರುವವರಿಗೆ ಸಿಹಿ ಸುದ್ದಿ: ಬಿಡುಗಡೆಯ ಮುನ್ನವೇ ಡೀಲರ್‌ಶಿಪ್‌ಗೆ ಬಂದಿಳಿದ ಜಿಮ್ನಿ

modified on ಮಾರ್ಚ್‌ 17, 2023 07:32 pm by ansh for ಮಾರುತಿ ಜಿಮ್ನಿ

  • 30 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಲೈಫ್‌ಸ್ಟೈಲ್ SUV 1.5-ಲೀಟರ್ ಪೆಟ್ರೋಲ್ ಇಂಜಿನ್ ಮತ್ತು 4-ವ್ಹೀಲ್-ಡ್ರೈವ್ ಸ್ಟಿಸ್ಟಮ್ ಅನ್ನು ಸ್ಟಾಂಡರ್ಡ್ ಆಗಿ ಒಳಗೊಂಡಿದೆ.

Maruti Jimny at Dealership

  • ಆಟೋ ಎಕ್ಸ್‌ಪೋ 2023ರಲ್ಲಿ ಜಿಮ್ನಿ 5-ಡೋರ್ ಪಾದಾರ್ಪಣೆ ಮಾಡಿದ್ದು ಅಂದಿನಿಂದಲೇ ಬುಕಿಂಗ್‌ಗಳನ್ನು ತೆರೆಯಲಾಗಿತ್ತು.
  •  ಇದರ 1.5-ಲೀಟರ್ ಇಂಜಿನ್ 105PS ಮತ್ತು 134Nm ಅನ್ನು ಉತ್ಪಾದಿಸುತ್ತದೆ ಜೊತೆಗೆ 4WD ಅನ್ನು ಸ್ಟಾಂಡರ್ಡ್ ಆಗಿ ಹೊಂದಿದೆ.
  •  9-ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇ, ಕ್ರ್ಯೂಸ್ ಕಂಟ್ರೋಲ್ ಮತ್ತು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಇವೇ ಮೊದಲಾದ ಫೀಚರ್‌ಗಳನ್ನು ಹೊಂದಿದೆ.
  •  5-ಡೋರ್ ಕಾನ್‌ಫಿಗರೇಶನ್ ಕಾರ್ಯಸಾಧ್ಯತೆಯನ್ನು ಹೆಚ್ಚಿಸಿದರೂ ಇದು 4-ಸೀಟರ್ ಅನ್ನೇ ಹೊಂದಿದೆ.
  •  ಬೆಲೆಗಳನ್ನು ರೂ 10 ಲಕ್ಷದಿಂದ (ಎಕ್ಸ್-ಶೋರೂಂ) ನಿಗದಿಪಡಿಸುವ ನಿರೀಕ್ಷೆ ಇದೆ.

ಈ 5-ಡೋರ್ ಮಾರುತಿ ಜಿಮ್ನಿ ಆಟೋ ಎಕ್ಸ್‌ಪೋ 2023 ರಲ್ಲಿ ಜಾಗತಿಕವಾಗಿ ಪಾದಾರ್ಪಣೆಗೊಂಡರೂ ಕಂಪನಿಯ ಹೊರತಾಗಿ ಬೇರೆಯವರು ಇದರ ಅನುಭವವನ್ನು ಇನ್ನಷ್ಟೇ ಪಡೆಯಬೇಕಿದೆ. ಜಿಮ್ನಿ ದೇಶಾದ್ಯಂತ ಕೆಲವು ಡೀಲರ್‌ಶಿಪ್‌ಗಳಿಗೆ ತಲುಪಿದ್ದು ಈ SUV ಬಿಡುಗಡೆಯಾದ ನಂತರ ಟೆಸ್ಟ್ ಡ್ರೈವ್‌ಗಳು ಪ್ರಾರಂಭವಾಗಬಹುದು ಮತ್ತು ಸಂಭಾವ್ಯ ಗ್ರಾಹಕರು ಇದನ್ನು ಪರಿಶೀಲಿಸಬಹುದಾಗಿದೆ.

 ಪವರ್‌ಟ್ರೇನ್

Maruti Jimny Gear Shifter and Low-range Gearbox

ಈ 5-ಡೋರ್ ಜಿಮ್ನಿ 1.5-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಹೊಂದಿದ್ದು 105PS ಮತ್ತು 134Nm ಉತ್ಪಾದಿಸುತ್ತದೆ. ಈ ಯುನಿಟ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 4-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್‌ನೊಂದಿಗೆ ಜೋಡಿಸಲಾಗಿದೆ. ಪ್ರಮುಖ ಪ್ರತಿಸ್ಪರ್ಧಿಗಿಂತ ಭಿನ್ನವಾಗಿ ಜಿಮ್ನಿ 4-ವ್ಹೀಲ್-ಡ್ರೈವ್ ಸಿಸ್ಟಮ್ ಅನ್ನು ಸ್ಟಾಂಡರ್ಡ್ ಆಗಿ ಪಡೆದಿದೆ. ಈ ಕಾರುತಯಾರಕ ಸಂಸ್ಥೆ SUVಯ ಇಲೆಕ್ಟ್ರಿಕ್ ಆವೃತ್ತಿಯ ಮೇಲೂ ಕಾರ್ಯನಿರ್ವಹಿಸುತ್ತಿದೆ, ಆದರೆ ಇದು ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವುದಿಲ್ಲ.

ಫೀಚರ್‌ಗಳು ಮತ್ತು ಸುರಕ್ಷತೆ

Maruti Jimny Cabin

ಈ ಆಫ್-ರೋಡರ್ ಸಾಕಷ್ಟು ಫೀಚರ್‌ಭರಿತವಾಗಿದ್ದು, ಅನೇಕ ಫೀಚರ್‌ಗಳನ್ನು ಸ್ಟಾಂಡರ್ಡ್ ಆಗಿ ಪಡೆದಿದೆ. ಇದು 9-ಇಂಚಿನ ಟಚ್‌ಸ್ಕ್ರೀನ್ ಇನ್ಫಾರ್ಮೇಶನ್ ಡಿಸ್‌ಪ್ಲೇ ಜೊತೆಗೆ ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಆಟೋ LED ಹೆಡ್‌ಲ್ಯಾಂಪ್‌ಗಳು ಮತ್ತು ಕ್ರ್ಯೂಸ್ ಕಂಟ್ರೋಲ್ ಅನ್ನು ಪಡೆದಿದೆ.

 ಇದನ್ನೂ ಓದಿ: ಪೀಳಿಗೆಗಳ ಮೂಲಕ ಮಾರುತಿ ಜಿಮ್ನಿಯ ವಿಕಸನ 

ಕಾರಿನಲ್ಲಿರುವ ಪ್ರಯಾಣಿಕರ ಸುರಕ್ಷತೆಗಾಗಿ, ಈ ಜಿಮ್ನಿಯು ಆರು ಏರ್‌ಬ್ಯಾಗ್‌ಗಳು, ABS ಜೊತೆಗೆ EBD, ಹಿಲ್‌-ಹೋಲ್ಡ್ ಅಸಿಸ್ಟ್, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಬ್ರೇಕ್ ಅಸಿಸ್ಟ್ ಮತ್ತು ರಿಯರ್‌ವ್ಯೂ ಕ್ಯಾಮರಾ ಅನ್ನು ಸ್ಟಾಂಡರ್ಡ್ ಸುರಕ್ಷತಾ ಫೀಚರ್‌ಗಳಾಗಿ ಪಡೆದಿದೆ.

 ಬೆಲೆ ಮತ್ತು ಪ್ರತಿಸ್ಪರ್ಧಿಗಳು

Maruti Jimny Front

ಮಾರುತಿ ಜಿಮ್ನಿಯ ಬೆಲೆಯನ್ನು ರೂ 10 ಲಕ್ಷದಿಂದ (ಎಕ್ಸ್-ಶೋರೂಂ) ನಿಗದಿಪಡಿಸುವ ನಿರೀಕ್ಷೆ ಇದ್ದು ಅದರ ಪ್ರತಿಸ್ಪರ್ಧಿಗಳಾದ ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗೋರ್ಖ ವಿರುದ್ಧ ಅತ್ಯಂತ ಸ್ಪರ್ಧಾತ್ಮಕ ಶ್ರೇಣಿಯಲ್ಲಿ ತಂದಿಡಬಹುದು.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ ಜಿಮ್ನಿ

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience