• English
  • Login / Register

Maruti Jimnyಯ ಬೆಲೆಯಲ್ಲಿ ಇಳಿಕೆ! ಸೀಮಿತ ಅವಧಿಗೆ ರೂ 10.74 ಲಕ್ಷದಿಂದ ಪ್ರಾರಂಭ, ಹೊಸ ಥಂಡರ್ ಆವೃತ್ತಿಯೂ ಸೇರ್ಪಡೆ

ಮಾರುತಿ ಜಿಮ್ನಿ ಗಾಗಿ rohit ಮೂಲಕ ಡಿಸೆಂಬರ್ 02, 2023 10:19 am ರಂದು ಪ್ರಕಟಿಸಲಾಗಿದೆ

  • 114 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೊಸ ಲಿಮಿಟೆಡ್‌ ಆವೃತ್ತಿಯೊಂದಿಗೆ, ಮಾರುತಿ ಜಿಮ್ನಿ 2 ಲಕ್ಷದವರೆಗೆ ಬೆಲೆ ಇಳಿಕೆಯಾಗಿ ಹೆಚ್ಚು ಕೈಗೆಟುಕುವ ದರದಲ್ಲಿ ಮಾರ್ಪಟ್ಟಿದೆ

Maruti Jimny Thunder Edition

  • ಮಾರುತಿ ಜೂನ್ 2023 ರಲ್ಲಿ 5-ಬಾಗಿಲಿನ ಜಿಮ್ನಿಯನ್ನು ಬಿಡುಗಡೆ ಮಾಡಿತು, ಇದನ್ನು ಎರಡು ಸುಸಜ್ಜಿತ ವೇರಿಯೆಂಟ್‌ಗಳಲ್ಲಿ ನೀಡಿದೆ.  
  • ಹೊಸ ಲಿಮಿಟೆಡ್‌ ಆವೃತ್ತಿಯು ಡೋರ್ ವೈಸರ್, ಇಂಟೀರಿಯರ್ ಸ್ಟೈಲಿಂಗ್ ಕಿಟ್ ಮತ್ತು ಟ್ಯಾನ್-ಫಿನಿಶ್ ಸ್ಟೀರಿಂಗ್ ವೀಲ್‌ನಂತಹ ಆಕ್ಸೆಸರಿ ಐಟಂಗಳೊಂದಿಗೆ ಬರುತ್ತದೆ.
  • ಜಿಮ್ನಿಯ ವೈಶಿಷ್ಟ್ಯದಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡಲಾಗಿಲ್ಲ, ಆದರೂ 9 ಇಂಚಿನ ಟಚ್‌ಸ್ಕ್ರೀನ್ ಮತ್ತು 6 ಏರ್‌ಬ್ಯಾಗ್‌ಗಳು ಸೇರ್ಪಡೆಯಾಗಿದೆ.
  • ಅಸ್ತಿತ್ವದಲ್ಲಿರುವ ಮೊಡೆಲ್‌ನ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು 4WD ಜೊತೆಗೆ ಸ್ಟ್ಯಾಂಡರ್ಡ್‌ ಆಗಿ ಪಡೆಯುತ್ತದೆ.
  • ದೆಹಲಿಯಲ್ಲಿ ಇದರ ಪರಿಷ್ಕೃತ ಬೆಲೆಗಳು 10.74 ಲಕ್ಷ ರೂ. ನಿಂದ 14.05 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ)  ಇದೆ.

 ಜೂನ್ 2023 ರಲ್ಲಿ 12.74 ಲಕ್ಷ ರೂ ಆರಂಭಿಕ ಬೆಲೆಯೊಂದಿಗೆ 5-ಬಾಗಿಲಿನ ಮಾರುತಿ ಜಿಮ್ನಿ  ಮಾರುಕಟ್ಟೆಗೆ ಲಗ್ಗೆ ಇಟ್ಟಿತು. ಇದೀಗ, ‘ಥಂಡರ್ ಎಡಿಷನ್’ ಅನ್ನು ಪರಿಚಯಿಸುವುದರೊಂದಿಗೆ ಈ ಲಿಮಿಟೆಡ್‌ ಅವಧಿಗೆ 2 ಲಕ್ಷ ರೂ.ವರೆಗೆ ಗಮನಾರ್ಹ ಬೆಲೆ ಕಡಿತವನ್ನು ಮಾಡಿದೆ. ಅದರ ಪರಿಷ್ಕೃತ ಬೆಲೆಗಳು ಮತ್ತು ಸೀಮಿತ ಆವೃತ್ತಿಯು ಏನೆಲ್ಲಾ ಆಫರ್‌ಗಳನ್ನು ಒಳಗೊಂಡಿದೆ ಎಂಬುವುದನ್ನು ನೋಡೋಣ:

ಜಿಮ್ನಿ ವೇರಿಯಂಟ್-ವಾರು ಬೆಲೆಗಳು

ವೇರಿಯಂಟ್ 

ಸಾಮಾನ್ಯ ಬೆಲೆ

ಥಂಡರ್ ಆವೃತ್ತಿ (ಸೀಮಿತ ಅವಧಿಗೆ)

ವ್ಯತ್ಯಾಸ

ಝೀಟಾ ಮ್ಯಾನುಯಲ್‌

12.74 ಲಕ್ಷ ರೂ

10.74 ಲಕ್ಷ ರೂ

(2 ಲಕ್ಷ ರೂ.)

ಝೀಟಾ  ಆಟೋಮ್ಯಾಟಿಕ್‌

13.94 ಲಕ್ಷ ರೂ

11.94 ಲಕ್ಷ ರೂ

(2 ಲಕ್ಷ ರೂ.)

ಅಲ್ಫಾ ಮ್ಯಾನುಯಲ್‌

13.69 ಲಕ್ಷ ರೂ

12.69 ಲಕ್ಷ ರೂ

(1 ಲಕ್ಷ ರೂ.)

ಅಲ್ಫಾ ಮ್ಯಾನುಯಲ್‌ ಡುಯಲ್ ಟೋನ್ 

13.85 ಲಕ್ಷ ರೂ

12.85 ಲಕ್ಷ ರೂ

(1 ಲಕ್ಷ ರೂ.)

ಅಲ್ಫಾ ಆಟೋಮ್ಯಾಟಿಕ್‌

14.89 ಲಕ್ಷ ರೂ

13.89 ಲಕ್ಷ ರೂ

(1 ಲಕ್ಷ ರೂ.)

ಅಲ್ಫಾ ಆಟೋಮ್ಯಾಟಿಕ್‌ ಡುಯಲ್ ಟೋನ್ 

15.05 ಲಕ್ಷ ರೂ

14.05 ಲಕ್ಷ ರೂ

(1 ಲಕ್ಷ ರೂ.)

ಮಾರುತಿ ಜಿಮ್ನಿಯ ಟಾಪ್-ಎಂಡ್‌ ಮೊಡೆಲ್‌ ಆಗಿರುವ ಆಲ್ಫಾ ಟ್ರಿಮ್‌ನ ಬೆಲೆಗಳನ್ನು 1 ಲಕ್ಷ ರೂಪಾಯಿಗಳಷ್ಟು ಕಡಿಮೆ ಮಾಡಿದೆ, ಆದರೆ ಪ್ರವೇಶ ಮಟ್ಟದ ಝೀಟಾ ವೇರಿಯೆಂಟ್‌ಗಳ ಮೇಲೆ 2 ಲಕ್ಷ ರೂಪಾಯಿಗಳಷ್ಟು ದರ ಕಡಿತ ಮಾಡಲಾಗಿದೆ.

ಈ ಲಿಮಿಟೆಡ್‌ ಎಡಿಷನ್‌ನ ವಿಶೇಷತೆ ಏನು?

ಜಿಮ್ನಿ ಥಂಡರ್ ಆವೃತ್ತಿಯು ಮಾರುತಿಯ ಆಫ್‌ರೋಡರ್‌ಗೆ ಕೇವಲ ಆಕ್ಸೆಸರಿ ಕಿಟ್ ನ ಸೇರ್ಪಡೆಯಾಗಿದೆ. ಮಾರುತಿ ಇದನ್ನು ಮುಂಭಾಗದ ಬಂಪರ್ ಗಾರ್ನಿಶ್, ಡೆಕಲ್ಸ್, ಇಂಟೀರಿಯರ್ ಸ್ಟೈಲಿಂಗ್ ಕಿಟ್, ಫ್ಲೋರ್ ಮ್ಯಾಟ್ಸ್ (ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ವೇರಿಯಂಟ್‌ಗಳಿಗೆ ವಿಭಿನ್ನ), ಮತ್ತು ಟ್ಯಾನ್-ಫಿನಿಶ್ ಸ್ಟೀರಿಂಗ್ ವೀಲ್‌ನಂತಹ ಆಕ್ಸೆಸರಿ ಐಟಂಗಳೊಂದಿಗೆ ನೀಡುತ್ತಿದೆ. ಜಿಮ್ನಿ ಥಂಡರ್ ಆವೃತ್ತಿಯು ಡೋರ್ ವೈಸರ್, ಮುಂಭಾಗ ಮತ್ತು ಹಿಂಭಾಗದ ಫೆಂಡರ್ ಗಾರ್ನಿಶ್‌ಗಳು ಮತ್ತು ಬಾಡಿ ಕ್ಲಾಡಿಂಗ್ ಅನ್ನು ಸಹ ಪಡೆಯುತ್ತದೆ.

ವೈಶಿಷ್ಟ್ಯಗಳಲ್ಲಿ ಬದಲಾವಣೆ ಇಲ್ಲ

Maruti Jimny 9-inch touchscreen

ಜಿಮ್ನಿಯ ವೈಶಿಷ್ಟ್ಯಗಳ ಪಟ್ಟಿಯಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದರ ಪ್ರಮುಖ ವೈಶಿಷ್ಟ್ಯಗಳಲ್ಲಿ 9-ಇಂಚಿನ ಟಚ್‌ಸ್ಕ್ರೀನ್, ಕ್ರೂಸ್ ಕಂಟ್ರೋಲ್, ಆಟೋ ಎಸಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ), ರಿವರ್ಸಿಂಗ್ ಕ್ಯಾಮೆರಾ ಮತ್ತು ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ ಆಗಿ) ಸೇರಿವೆ.

ಇದನ್ನೂ ಓದಿ: ಕ್ಯಾಲೆಂಡರ್ ವರ್ಷದ ಕೊನೆಯಲ್ಲಿ ಹೊಸ ಕಾರು ಖರೀದಿಸಿದರೆ ಆಗುವ ಲಾಭ ಮತ್ತು ನಷ್ಟ ಏನು?

ಪವರ್‌ಟ್ರೇನ್‌ನಲ್ಲಿ ಬದಲಾವಣೆ ಇದೆಯೇ?

Maruti Jimny 1.5-litre petrol engine

ಮಾರುತಿ ಜಿಮ್ನಿ ಥಂಡರ್ ಆವೃತ್ತಿಯನ್ನು ಅದರ ಸ್ಟ್ಯಾಂಡರ್ಡ್ 1.5-ಲೀಟರ್ ಪೆಟ್ರೋಲ್ ಎಂಜಿನ್ (105 PS/134 Nm) ನೊಂದಿಗೆ ಎಂದಿನಂತೆ ಸಜ್ಜುಗೊಳಿಸಿದೆ. ಇದು 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಜೋಡಿಯಾಗಿ ಬರುತ್ತದೆ, ಆದರೆ 4-ವೀಲ್ ಡ್ರೈವ್‌ಟ್ರೇನ್ (4WD) ಎರಡೂ ಟ್ರಿಮ್‌ಗಳಲ್ಲಿ ಲಭ್ಯವಿದೆ.

ಕಾರ್ ಆರೋಗ್ಯ ತಪಾಸಣೆ

ಡೋರ್‌ಸ್ಟೆಪ್ ಕಾರ್ ಸರ್ವೀಸ್‌

ಪ್ರತಿಸ್ಪರ್ಧಿಗಳ ಕುರಿತು

 ಮಾರುತಿ ಜಿಮ್ನಿಯ ಸೀಮಿತ ಆವೃತ್ತಿಯು ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ ಆದರೆ ಈ ಆಫ್‌ರೋಡರ್ ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗೂರ್ಖಾದಂತಹ ಇತರ ಲೈಫ್‌ಸ್ಟೈಲ್‌ ಆಫ್‌ರೋಡರ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋ ರೂಂ ಬೆಲೆಗಳಾಗಿವೆ

ಇನ್ನಷ್ಟು ಓದಿ : ಮಾರುತಿ ಜಿಮ್ನಿ ಆನ್‌ರೋಡ್‌ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Maruti ಜಿಮ್ನಿ

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience