ಮಾರುತಿ ಜಿಮ್ನಿ ವರ್ಸಸ್ ಮಹೀಂದ್ರಾ ಥಾರ್- ಬೆಲೆ ಪರಿಶೀಲನೆ

published on ಜೂನ್ 09, 2023 02:00 pm by tarun for ಮಾರುತಿ ಜಿಮ್ನಿ

  • 24 Views
  • ಕಾಮೆಂಟ್‌ ಅನ್ನು ಬರೆಯಿರಿ

ಒಂದು ಕುಟುಂಬ-ಸ್ನೇಹಿ ಪೆಟ್ರೋಲ್ ಚಾಲಿತ ಆಫ್-ರೋಡರ್ ಆಗಿದ್ದರೆ ಇನ್ನೊಂದು ದೊಡ್ಡದಾದ, ದುಬಾರಿ ಬೆಲೆಯುಳ್ಳ ಡೀಸೆಲ್ ಆಯ್ಕೆಯನ್ನು ಪಡೆಯುತ್ತದೆ!

Maruti Jimny Vs Mahindra Thar - Price Check

 

ಮಾರುತಿ ಜಿಮ್ನಿಯ ಬೆಲೆಗಳನ್ನು ಈಗಷ್ಟೇ ಬಹಿರಂಗಪಡಿಸಲಾಗಿದ್ದು, ಇದು ರೂ.12.74 ಲಕ್ಷ (ಎಕ್ಸ್-ಶೋರೂಂ ದೆಹಲಿ)  ಬೆಲೆಬಾಳುತ್ತದೆ. ಇದರ ಪ್ರಮುಖ ಮತ್ತು ನೇರ ಪ್ರತಿಸ್ಪರ್ಧಿ ಮಹೀಂದ್ರಾ ಥಾರ್ ಎಂದು ಬೇರೆ ಹೇಳಬೇಕಾಗಿಲ್ಲ. ಸಬ್‌-ಕಾಂಪ್ಯಾಕ್ಟ್ ಆಫ್-ರೋಡರ್‌ಗಳಾಗಿರುವ ಮೂಲ ಉದ್ದೇಶ ಈ ಎರಡಕ್ಕೂ ಒಂದೇ ಆಗಿದ್ದರೂ, ಅದರ ಬಗ್ಗೆ ಅವುಗಳು ವಿಭಿನ್ನ ರೀತಿಯಲ್ಲಿ ಹೋಗುತ್ತವೆ ಮತ್ತು ಅವುಗಳ ಬೆಲೆಗಳು ಅದನ್ನು ಪ್ರತಿಬಿಂಬಿಸುತ್ತವೆ.

 ಜಿಮ್ನಿಯು 4WD ಅನ್ನು ಸ್ಟಾಂಡರ್ಡ್ ಆಗಿ ಪಡೆದಿರುವ ಪೆಟ್ರೋಲ್ ಮಾತ್ರ ಆಫರಿಂಗ್ ಆಗಿರುವುದರಿಂದ, ನಾವು ಅದರ ಬೆಲೆಗಳನ್ನು ಥಾರ್‌ನ ಪೆಟ್ರೋಲ್-ಚಾಲಿತ 4WD ವೇರಿಯೆಂಟ್‌ಗಳೊಂದಿಗೆ ಮಾತ್ರ ಹೋಲಿಕೆ ಮಾಡುತ್ತಿದ್ದೇವೆ. ಬೆಲೆಗಳು ಎಷ್ಟಿವೆ ಎಂಬುದನ್ನು ನಾವು ನೋಡೋಣ.

 

ಬೆಲೆ ಪರಿಶೀಲನೆ

 ಮ್ಯಾನುವಲ್ ವೇರಿಯೆಂಟ್‌ಗಳು

ಮಾರುತಿ ಜಿಮ್ನಿ

ಮಹೀಂದ್ರಾ ಥಾರ್

ಝೆಟಾ MT - ರೂ 12.74 ಲಕ್ಷ

 

ಆಲ್ಫಾ MT - ರೂ 13.69 ಲಕ್ಷ

AX (O) ಪೆಟ್ರೋಲ್ MT ಸಾಫ್ಟ್ ಟಾಪ್ - ರೂ 13.87 ಲಕ್ಷ

 

LX ಪೆಟ್ರೋಲ್ MT ಹಾರ್ಡ್ ಟಾಪ್ - ರೂ 14.56 ಲಕ್ಷ

  •  ಥಾರ್‌ಗೆ ಹೋಲಿಸಿದರೆ, ಜಿಮ್ನಿಯ ಆರಂಭಿಕ ಬೆಲೆ ಸುಮಾರು ಒಂದು ಲಕ್ಷದಷ್ಟು ಕಡಿಮೆ ಇದೆ. ಇದರ ಟಾಪ್ ಸ್ಪೆಕ್ ಪೆಟ್ರೋಲ್ ಆಯ್ಕೆಯು ಮಹೀಂದ್ರಾಗಿಂತ ಹೆಚ್ಚು ಕೈಗೆಟುಕುವಂಥದ್ದು ಮತ್ತು ಹೆಚ್ಚು ಫೀಚರ್‌ಗಳನ್ನು ನೀಡುತ್ತದೆ.

Maruti Jimny front

  •  5-ಡೋರ್ ಜಿಮ್ನಿಯ ಝೆಟಾ ವೇರಿಯೆಂಟ್ ಆರು ಏರ್‌ಬ್ಯಾಗ್‌ಗಳು, ESP, ಹಿಲ್‌ಹೋಲ್ಡ್ ಮತ್ತು ಡಿಸೆಂಟ್ ಕಂಟ್ರೋಲ್, ಹಿಂಭಾಗದ ಕ್ಯಾಮರಾ ಮತ್ತು 7-ಇಂಚು ಟಚ್‌ಸ್ಕ್ರೀನ್‌ನೊಂದಿಗೆ ಉತ್ತಮವಾಗಿ ಸಜ್ಜುಗೊಂಡಿದೆ.
  •  ಥಾರ್ AX(O) ಪೆಟ್ರೋಲ್-MTಗಿಂತ ಕಡಿಮೆ ಬೆಲೆಗೆ ಜಿಮ್ನಿಯು 9-ಇಂಚು ಇನ್ಫೋಟೇನ್‌ಮೆಂಟ್ ಸಿಸ್ಟಮ್, ಆಟೋಮ್ಯಾಟಿಕ್ AC, ಪುಶ್ ಬಟನ್ ಸ್ಟಾರ್ಟ್-ಸ್ಟಾಪ್ ಅಲಾಯ್ ವ್ಹೀಲ್‌ಗಳು, LED ಲೈಟಿಂಗ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ನೀಡುತ್ತದೆ. ಇದಕ್ಕೆ ಹೋಲಿಸಿದರೆ ಥಾರ್, ಎರಡು ಏರ್‌ಬ್ಯಾಗ್‌ಗಳು, ಸ್ಟೀಲ್ ವ್ಹೀಲ್‌ಗಳು, ಮ್ಯಾನುವಲ್ AC ಮತ್ತು ಸೆಂಟ್ರಲ್ ಲಾಕಿಂಗ್‌ನಂತಹ  ಕೇವಲ ಮೂಲ ಫೀಚರ್‌ಗಳನ್ನು ಮಾತ್ರ ಪಡೆದಿದೆ. 
  •  ಅಲ್ಲದೇ ಟಾಪ್-ಸ್ಪೆಕ್ ಥಾರ್ LX ತುಲನಾತ್ಮಕವಾಗಿ ಸಣ್ಣ ಸೆಂಟ್ರಲ್ ಡಿಸ್‌ಪ್ಲೇ, ಮ್ಯಾನುವಲ್ AC, ಕೇವಲ ಎರಡು ಏರ್‌ಬ್ಯಾಗ್‌ಗಳು ಮತ್ತು ಹ್ಯಾಲೋಜನ್ ಹೆಡ್‌ಲೈಟ್‌ಗಳನ್ನು ಪಡೆದಿದೆ.
  •  ಬಾನೆಟ್ ಅಡಿಯಲ್ಲಿ ಏನಿದೆ ಎಂಬುದು ಕೂಡಾ ಪ್ರಮುಖ ವಿಷಯವಾಗಿದೆ. ಜಿಮ್ನಿಯು ಮಾರುತಿ ಸ್ಟೇಬಲ್‌ಗೆ ಹೋಲುವ 1.5-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಪಡೆದಿದ್ದು, ಇದಕ್ಕೆ 105PS ಮತ್ತು 134Nm ಉತ್ಪಾದಿಸುವ 5-ಸ್ಪೀಡ್ ಮ್ಯಾನುವಲ್ ಅನ್ನು ಜೋಡಿಸಲಾಗಿದೆ. ಇದೇವೇಳೆ, ಥಾರ್ 2-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ ಹೆಚ್ಚು ಪಂಚ್ ಹೊಂದಿದ್ದು, ಇದಕ್ಕೆ 6-ಸ್ಪೀಡ್ ಮ್ಯಾನುವಲ್ ಅನ್ನು ಜೋಡಿಸಲಾಗಿದೆ ಮತ್ತು 152PS ಮತ್ತು 320Nm ಅನ್ನು ಉತ್ಪಾದಿಸುತ್ತದೆ.
  •  ಇನ್ನೊಂದು ವಿಶಿಷ್ಟ ಅಂಶವೆಂದರೆ ಇದರ ಪ್ರಾಯೋಗಿಕತೆ, ಇದು ಜಿಮ್ನಿಗಿಂತ ಉತ್ತಮವಾಗಿದೆ. ಇದು ಸರಿಯಾದ ಬೂಟ್ ಅನ್ನು ಹೊಂದಿದ್ದು ಥಾರ್‌ಗಿಂತ ಭಿನ್ನವಾಗಿ,ಇದು ಹಿಂದಿನ ಸೀಟುಗಳಿಗೆ ಪ್ರವೇಶವನ್ನು ಹೊಂದಿದೆ ಹಾಗೂ ಇದರಿಂದಾಗಿ ಜಿಮ್ನಿ ಕುಟುಂಬ-ಆಧಾರಿತ ಖರೀದಿದಾರರಿಗೆ ಸಂಭಾವ್ಯ ಆಯ್ಕೆಯನ್ನಾಗಿ ಮಾಡಿದೆ. ಆದಾಗ್ಯೂ ಎರಡೂ ಕೂಡಾ ನಾಲ್ಕು-ಸೀಟರ್‌ಗಳೆಂದು ಅಧಿಕೃತವಾಗಿ ಪಟ್ಟಿ ಮಾಡಲಾಗಿದೆ.

Mahindra Thar ground clearance

  •  ಥಾರ್‌ನಲ್ಲಿ ನೀವು ಕಾಂಪೋಸಿಟ್ ಹಾರ್ಡ್ ಟಾಪ್ ಅಥವಾ ಕನ್ವರ್ಟಿಬಲ್ ಸಾಫ್ಟ್ ಟಾಪ್ ರೂಫ್ ನಡುವೆ ಯಾವುದನ್ನಾದರೂ ಆಯ್ಕೆ ಮಾಡಬಹುದು. ಜಿಮ್ನಿಯಲ್ಲಿ ಕೇವಲ ಜೋಡಿಸಿದ ಮೆಟಲ್ ರೂಫ್ ಡಿಸೈನ್ ಮಾತ್ರ ಇರುತ್ತದೆ.
  •  ಥಾರ್ ಖರೀದಿದಾರರಿಗೆ ಇನ್ನೊಂದು ಅನುಕೂಲವೆಂದರೆ, ಇದು SUV ಮತ್ತು ಆಫ್ ರೋಡರ್ ಪ್ರಿಯರಿಗೆ ಹೆಚ್ಚು ಪ್ರಿಯವಾಗುವ ಡೀಸೆಲ್ ಪವರ್‌ಟ್ರೇನ್‌ ಆಯ್ಕೆಯನ್ನು ಇದು ಪಡೆದಿದೆ.ಡೀಸೆಲ್ ವೇರಿಯೆಂಟ್‌ಗೆ ರೂ14.44 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.
  •  4WD ಆದ್ಯತೆ ಅಲ್ಲದಿದ್ದರೆ, ರಿಯರ್-ವ್ಹೀಲ್ ಡ್ರೈವ್‌ಟ್ರೇನ್‌ನೊಂದಿಗೆ ಮಹೀಂದ್ರಾ ಥಾರ್ ಹೆಚ್ಚು ಕೈಗೆಟುಕುವ ಪರ್ಯಾಯವಾಗಿದೆ. ಅಲ್ಲದೇ ನೀವು ಡೀಸೆಲ್ ಪವರ್‌ಟ್ರೇನ್ ಆಯ್ಕೆಯನ್ನು ಪಡೆಯುತ್ತೀರಿ ಮತ್ತು ಆರಂಭಿಕ ಹಂತದ AX (O) RWD ಡೀಸೆಲ್‌ನ ಬೆಲೆ ರೂ 10.54 ಲಕ್ಷದಷ್ಟು ಇದ್ದು, ಇದು ಜಿಮ್ನಿಗಿಂತ ರೂ 2.20 ಲಕ್ಷದಷ್ಟು ಅಗ್ಗವಾಗಿದೆ.

 ಆಟೋಮ್ಯಾಟಿಕ್ ವೇರಿಯೆಂಟ್‌ಗಳು

ಮಾರುತಿ ಜಿಮ್ನಿ

ಮಹೀಂದ್ರಾ ಥಾರ್

ಝೆಟಾ AT - ರೂ 13.94 ಲಕ್ಷ

-

ಆಲ್ಫಾ AT - ರೂ 14.89 ಲಕ್ಷ

-

-

LX ಕನ್ವರ್ಟಿಬಲ್ ಸಾಫ್ಟ್ ಟಾಪ್ - ರೂ16.02 ಲಕ್ಷ

 

LX ಹಾರ್ಡ್ ಟಾಪ್ - ರೂ16.10 ಲಕ್ಷ

  • ಮಹೀಂದ್ರಾ ಕೇವಲ ಪೆಟ್ರೋಲ್-ಆಟೋಮ್ಯಾಟಿಕ್ ಪವರ್‌ಟ್ರೇನ್ ಹೊಂದಿರುವ ಟಾಪ್ ಸ್ಪೆಕ್ ಥಾರ್ LX ಅನ್ನು ಮಾತ್ರ ನೀಡುತ್ತದೆ. ಇದರಿಂದಾಗಿ ಇದು ಟಾಪ್-ಸ್ಪೆಕ್ ಪೆಟ್ರೋಲ್-AT ಗಿಂತ ರೂ 1.13 ಲಕ್ಷದಷ್ಟು ದುಬಾರಿಯಾಗಿದೆ. ಇದೇವೇಳೆ, ಬೇಸ್ ಸ್ಪೆಕ್ ಜಿಮ್ನಿ ಪೆಟ್ರೋಲ್-AT ರೂ 2.08 ಲಕ್ಷ ಮಾರ್ಜಿನ್‌ನೊಂದಿಗೆಇನ್ನಷ್ಟು ಕೈಗೆಟುಕುವಂತಿದೆ.

Maruti Jimny ground clearance

  •  ಜಿಮ್ನಿಯು ಥಾರ್‌ಗಿಂತ ಹೆಚ್ಚು ಫೀಚರ್‌ಗಳನ್ನು ಹೊಂದಿದ್ದರೂ, ಮಾರುತಿಯ 4-ಸ್ಪೀಡ್ ಆಟೋಗೆ ಹೋಲಿಸಿದರೆ, 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಹೊಂದಿರುವ ಎರಡನೆಯದು ಉತ್ತಮ ಪವರ್‌ಟ್ರೇನ್ ಹೊಂದಿದೆ.

  •  ಇಲ್ಲಿ ಕೂಡಾ, ರೂ 13.49 ಲಕ್ಷಕ್ಕೆ ಜಿಮ್ನಿಗೆ ಹೋಲಿಸಿದರೆ ತುಸು ಹೆಚ್ಚು ಕೈಗೆಟುಕುವ ಪೆಟ್ರೋಲ್-AT ಹೊಂದಿರುವ ಥಾರ್ RWD ಆಯ್ಕೆ ಕೂಡಾ ಇರುತ್ತದೆ. ಡೀಸೆಲ್-ಆಟೋಮ್ಯಾಟಿಕ್ ವೇರಿಯೆಂಟ್‌ಗಳಿಗೆ ಹೋಲಿಸಿದರೆ, ಇವುಗಳು ಇನ್ನಷ್ಟು ದುಬಾರಿಯಾಗಿದ್ದು, ಬೆಲೆಗಳು ರೂ 16.68ಲಕ್ಷದಿಂದ ಪ್ರಾರಂಭವಾಗುತ್ತದೆ.

 ಒಟ್ಟಾರೆಯಾಗಿ, ಮಾರುತಿ ಜಿಮ್ನಿಯು ಮಹೀಂದ್ರಾ ಥಾರ್‌ಗೆ ಹೋಲಿಸಿದರೆ, ಹೆಚ್ಚು ಕೈಗೆಟುಕುವ ಮತ್ತು ಪ್ರಾಯೋಗಿಕ ಪ್ರೆಟ್ರೋಲ್-ಚಾಲಿತ 4x4 ಆಫ್-ರೋಡರ್ ಆಗಿದೆ. ಆದರೆ ನಿಮಗೆ ಕನ್ವರ್ಟಿಬಲ್ ಸಾಫ್ಟ್ ಟಾಪ್ ಮತ್ತು ಹೆಚ್ಚು ಕಾರ್ಯಕ್ಷಮತೆಯ ಹಾಗೂ ಡೀಸೆಲ್ ಇಂಜಿನ್‌ನ ಆಯ್ಕೆ ಬೇಕಾದರೆ ಥಾರ್ ನಿಮ್ಮ ಆಯ್ಕೆಯಾಗುತ್ತದೆ.

(ಎಲ್ಲಾ ಬೆಲೆಗಳು ಎಕ್ಸ್-ಶೋರೂಂ ಪ್ರಕಾರ)

 ಇನ್ನಷ್ಟು ಓದಿ :ಜಿಮ್ನಿ ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ ಜಿಮ್ನಿ

1 ಕಾಮೆಂಟ್
1
N
neeraj kumar
Jun 8, 2023, 5:18:19 PM

Over priced

Read More...
    ಪ್ರತ್ಯುತ್ತರ
    Write a Reply
    Read Full News

    explore similar ಕಾರುಗಳು

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trendingಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience