• English
  • Login / Register

ಒಂದು ವಾರದೊಳಗೆ ಮಾರುತಿ ಸ್ವೀಕರಿಸಿದೆ ಜಿಮ್ನಿಗೆ 5,000 ಕ್ಕೂ ಅಧಿಕ ಬುಕಿಂಗ್

ಮಾರುತಿ ಜಿಮ್ನಿ ಗಾಗಿ sonny ಮೂಲಕ ಜನವರಿ 23, 2023 12:18 pm ರಂದು ಪ್ರಕಟಿಸಲಾಗಿದೆ

  • 20 Views
  • ಕಾಮೆಂಟ್‌ ಅನ್ನು ಬರೆಯಿರಿ

ಇದು 4WD ಅನ್ನು ಸ್ಟಾಂಡರ್ಡ್ ಆಗಿಟ್ಟುಕೊಂಡು ಆಟೋ ಎಕ್ಸ್‌ಪೋ 2023 ರಲ್ಲಿ ತನ್ನ ಜಾಗತಿಕ ಪ್ರೀಮಿಯರ್ ಅನ್ನು ಮಾಡಿದೆ

 

  • ಜಿಮ್ನಿ ತನ್ನ ಫೈವ್-ಡೋರ್ ಅವತಾರದಲ್ಲಿ ಭಾರತಕ್ಕೆ ಪ್ರವೇಶಿಸುತ್ತಿದೆ.

  • ಆರಂಭಿಕ ಬುಕಿಂಗ್‌ ರೂ 25,000 ಕ್ಕೆ ತೆರೆಯಲಾಗಿದೆ.

  • ಪ್ರವೇಶ-ನಿರ್ದಿಷ್ಟತೆಯನ್ನು ಎರಡು ಫೀಚರ್-ಪ್ಯಾಕ್ಡ್ ಟ್ರಿಮ್‌ಗಳಲ್ಲಿ ಮಾತ್ರ ನೀಡಲಾಗುತ್ತದೆ.

  • ಜಿಮ್ನಿಯ 1.5 ಲೀಟರ್ ಪೆಟ್ರೋಲ್‌ನಲ್ಲಿ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್‌ಗಳ ಆಯ್ಕೆ ಇದೆ.

  • ರೂ 10 ಲಕ್ಷದ (ಎಕ್ಸ್-ಶೋರೂಂ)ಆರಂಭಿಕ ಬೆಲೆಯೊಂದಿಗೆ ಏಪ್ರಿಲ್ 2023 ರ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ.

Maruti Jimny bookings

ಮಾರುತಿ ಸುಝುಕಿ ಜಿಮ್ನಿಯ ಈ ಫೈವ್-ಡೋರ್ ಆವೃತ್ತಿಯು ಆಟೋ ಎಕ್ಸ್‌ಪೋ 2023 ರಲ್ಲಿ ತನ್ನ ಜಾಗತಿಕ ಪ್ರೀಮಿಯರ್ ಅನ್ನು ಮಾಡಿತು ಮತ್ತು ಅದೇ ದಿನ ಆರ್ಡರ್ ಬುಕಿಂಗ್ ಅನ್ನು ತೆರೆಯಿತು. ನಂತರ ಒಂದು ವಾರದೊಳಗೆ, ಸುಮಾರು 5,000 ಕ್ಕೂ ಅಧಿಕ ಜನರು ಆ ವಾಹನಕ್ಕಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ಈ ಪ್ರವೇಶ-ನಿರ್ದಿಷ್ಟ ಜಿಮ್ನಿಯನ್ನು ಲೋ ರೇಂಜ್ ಟ್ರಾನ್ಸ್‌ಫರ್ ಕೇಸ್‌ನೊಂದಿಗೆ 4x4 ಡ್ರೈವ್‌ಟ್ರೈನ್  ಅನ್ನು ಸ್ಟಾಂಡರ್ಡ್ ಆಗಿಟ್ಟುಕೊಂಡು ಕೇವಲ ಎರಡು ಟ್ರಿಮ್‌ಗಳಲ್ಲಿ ನೀಡಲಾಗಿದೆ. ಇದು ಫೈವ್-ಸ್ಪೀಡ್ ಮ್ಯಾನುವಲ್ ಮತ್ತು ಫೋರ್-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್‌ಗಳ ಆಯ್ಕೆಯೊಂದಿಗೆ 1.5-ಲೀಟರ್ ಪೆಟ್ರೋಲ್ ಇಂಜಿನ್‌ನಿಂದ ಚಾಲಿತವಾಗಿದೆ. ಇಂಜಿನ್ ಔಟ್‌ಪುಟ್ ಅನ್ನು 105PS ಮತ್ತು 134Nm ನಲ್ಲಿ ರೇಟ್ ಮಾಡಲಾಗಿದ್ದು, ಇದು ಸುಮಾರು 1,200 ಕೆಜಿ ತೂಕದ ಆಫ್-ರೋಡರ್‌ಗೆ ಸಾಕಾಗುತ್ತದೆ.

Maruti Jimny side

ಸಂಬಂಧಿತ: ಈ 20 ಚಿತ್ರಗಳಲ್ಲಿ ಮಾರುತಿ ಜಿಮ್ನಿಯ ವಿಸ್ತೃತ ನೋಟ ಪಡೆಯಿರಿ

ಮಾರುತಿ ಜಿಮ್ನಿ ಈಗ ಐದು ಡೋರ್‌ಗಳನ್ನು ಹೊಂದಿದ್ದು ಸಬ್-ಫೋರ್-ಮಿಟರ್ ಕೊಡುಗೆಯಾಗಿಯೇ ಉಳಿದಿದೆ. ಆದರೂ ಇದು ಫೋರ್-ಸೀಟರ್ ಕೊಡುಗೆಯಾಗಿದ್ದು ಇದರ ವಿಸ್ತರಿಸಿದ ಉದ್ದ ಮತ್ತು ವ್ಹೀಲ್‌ಬೇಸ್ ಹಿಂದೆ ಸ್ವಲ್ಪ ಲೆಗ್‌ರೂಂ ಅನ್ನು ತೆರೆಯುತ್ತದೆ ಮತ್ತು ಇದು ಈಗ 208 ಲೀಟರ್‌ಗಳ ಲಗೇಜ್ ಸಾಮರ್ಥ್ಯದೊಂದಿಗೆ ಬಳಸಬಹುದಾದ ಬೂಟ್ ಹೊಂದಿದೆ.

ಫೀಚರ್‌ಗಳ ವಿಚಾರಕ್ಕೆ ಬರುವುದಾದರೆ, ಜಿಮ್ನಿ ವಯರ್‌ಲೈಸ್ ಆ್ಯಂಡ್ರಾಯ್ಡ್ ಆಟೋದೊಂದಿಗೆ ಇನ್‌ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ ಆ್ಯಪಲ್ ಕಾರ್‌-ಪ್ಲೇ, ಆರು ಏರ್‌ಬ್ಯಾಗ್‌ಗಳು, ರಿಯರ್‌ವ್ಯೂ ಕ್ಯಾಮರಾ, ಪವರ್ ವಿಂಡೋಗಳು, ಮತ್ತು ಗಾಜ್ ಕ್ಲಸ್ಟರ್‌ನಲ್ಲಿ ಒಂದು TFT ಮಲ್ಟಿ-ಇನ್ಫರ್ಮೇಶನ್ ಡಿಸ್‌ಪ್ಲೇ ಮುಂತಾದ ಪ್ರಥಮ ನಿರ್ದಿಷ್ಟತೆಯನ್ನು ಆಧರಿಸಿ ಸ್ಟಾಂಡರ್ಡ್ ಆಗಿ ಇನ್ನಷ್ಟನ್ನು ಹೊಂದಿದೆ. ಈ ಟಾಪ್ ವೇರಿಯೆಂಟ್ ಮಾರುತಿಯ ಇತ್ತೀಚಿನ ಒಂಭತ್ತು ಇಂಚಿನ ಟಚ್‌ಸ್ಕ್ರೀನ್ ಯೂನಿಟ್, ಆಟೋ ಎಸಿ, ಕ್ರೂಸ್ ಕಂಟ್ರೋಲ್, ಆಟೋ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ವಾಶರ್‌ಗಳು ಹಾಗೂ ಅಲಾಯ್ ವ್ಹೀಲ್ಸ್ ಅನ್ನು ಹೊಂದಿದೆ.

ಇದನ್ನೂ ಓದಿ: ಇಲ್ಲಿದೆ ಮಾರುತಿ ಜಿಮ್ನಿಯ ಪ್ರತಿ ವೇರಿಯೆಂಟ್ ಏನನ್ನು ನೀಡುತ್ತಿದೆ ಎಂಬುದರ ಮಾಹಿತಿ

Maruti Jimny cabin

ಈ ಮಾರುತಿ ಜಿಮ್ನಿಯು ಥ್ರೀ-ಡೋರ್ ಮಹೀಂದ್ರಾ ಥಾರ್‌ಗೆ ವಿಭಿನ್ನ ರೀತಿಯಲ್ಲಿ ಸ್ಪರ್ಧೆಯೊಡ್ಡುತ್ತದೆ. ಇದರ ಬುಕಿಂಗ್‌ಗಳು ಪ್ರಸ್ತುತ ಒಂದು ನೆಕ್ಸಾ ಕೊಡುಗೆಯಾಗಿ ರೂ. 25,000 ಠೇವಣಿಗೆ ತೆರೆದಿದೆ. ಈ ಜಿಮ್ನಿಯು ರೂ 10 ಲಕ್ಷದ (ಎಕ್ಸ್-ಶೋರೂಂ) ನಿರೀಕ್ಷಿತ ಆರಂಭಿಕ ಬೆಲೆಯೊಂದಿಗೆ ತನ್ನ ಮಾರುಕಟ್ಟೆಗೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Maruti ಜಿಮ್ನಿ

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience