ಮಾರುತಿ ಪ್ರದರ್ಶಿಸಿದೆ ಭಾರತದ ಮೊದಲ ಸಬ್‌ಕಾಂಪ್ಯಾಕ್ಟ್ ಸಿಎನ್‌ಜಿ ಎಸ್‌ಯುವಿ, ಸಿಎನ್‌ಜಿ-ಯುಕ್ತ ಬ್ರೆಝಾ
ಮಾರುತಿ ಬ್ರೆಜ್ಜಾ ಗಾಗಿ tarun ಮೂಲಕ ಜನವರಿ 13, 2023 05:14 pm ರಂದು ಪ್ರಕಟಿಸಲಾಗಿದೆ
- 23 Views
- ಕಾಮೆಂಟ್ ಅನ್ನು ಬರೆಯಿರಿ
ಸ್ವಚ್ಛ ಇಂಧನ ಪರ್ಯಾಯಕ್ಕಾಗಿ ಬ್ರೆಝಾ ಆಗಿದೆ ಮೊದಲ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ
-
ಮಾರುತಿ ಬ್ರೆಝಾ ಸಿಎನ್‌ಜಿ ಪಡೆಯಲಿದೆ 88PS/121.5 Nm 1.5 ಲೀಟರ್ ಪೆಟ್ರೋಲ್- ಸಿಎನ್‌ಜಿ ಇಂಜಿನ್
-
ಸುಮಾರು 27 km/kg ನೀಡುವ ನಿರೀಕ್ಷೆಯಿದ್ದು, ಇದು ಗ್ರ್ಯಾಂಡ್ ವಿಟಾರಾ ಸಿಎನ್‌ಜಿ ಅನ್ನು ಹೋಲುತ್ತದೆ.
-
ಎಸ್‌ಯುವಿಯ ಮಿಡ್-ಸ್ಪೆಕ್ VXI ಮತ್ತು ZXI ವೇರಿಯೆಂಟ್‌ಗಳಲ್ಲಿ ಸಿಎನ್‌ಜಿಯನ್ನು ನಿರೀಕ್ಷಿಸಲಾಗಿದೆ
-
ಇದರ ಅನುಗುಣವಾದ ಪೆಟ್ರೋಲ್ ವೇರಿಯೆಂಟ್‌ಗಳಿಗಿಂತ ಸುಮಾರು ಒಂದು ಲಕ್ಷ ಹೆಚ್ಚು ಬೆಲೆ ಇರಬಹುದು
ಮಾರುತಿ ಸುಝುಕಿ ಆಟೋ ಎಕ್ಸ್‌ಪೋ 2023ರಲ್ಲಿ ಬ್ರೆಝಾ ಸಿಎನ್‌ಜಿ ಅನ್ನು ಅನಾವರಣಗೊಳಿಸಿದೆ. ಗ್ರ್ಯಾಂಡ್ ವಿಟಾರಾ ನಂತರ ಈ ಕಾರು ತಯಾರಕರ ಎರಡನೇ ಸಿಎನ್‌ಜಿ ಎಸ್‌ಯುವಿ ಇದಾಗಿದೆ. ತನ್ನ ವಿಭಾಗದಲ್ಲಿ ಇದು ಮೊದಲನೆಯ ಆಯ್ಕೆಯಾಗಿದೆ. ಇದರ ಬೆಲೆಗಳು ಶೀಘ್ರದಲ್ಲೇ ಪ್ರಕಟಗೊಳ್ಳುವ ನಿರೀಕ್ಷೆಯಿದೆ.
ಬ್ರೆಝಾವು ಇತ್ತೀಚೆಗೆ ಬಿಡುಗಡೆಯಾದ ಗ್ರ್ಯಾಂಡ್ ವಿಟಾರಾದಲ್ಲಿ ನೋಡಿದಂತೆ 1.5- ಲೀಟರ್ ಪೆಟ್ರೋಲ್-ಸಿಎನ್‌ಜಿ ಎಂಜಿನ್ ಅನ್ನು ಹೊಂದಿದೆ. ಸಿಎನ್‌ಜಿಯಲ್ಲಿ ಓಡುವಾಗ ಎಂಜಿನ್ 88PS ಮತ್ತು 121.5Nm ನಲ್ಲಿ ಕಾರ್ಯಾಚರಿಸುತ್ತದೆ ಮತ್ತು ಫೈವ್ ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ. ಇಂಧನ ಮಿತವ್ಯಯದ ಅಂಕಿ ಅಂಶಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಆದರೆ ಇದು ಗ್ರ್ಯಾಂಡ್ ವಿಟಾರಾ ಸಿಎನ್‌ಜಿಗೆ ಸಮಾನಾದ ಸುಮಾರು 27 km/kg ನೀಡುತ್ತದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ.
ಇಲೆಕ್ಟ್ರಿಕ್ ಸನ್‌ರೂಫ್, ಕ್ರ್ಯೂಸ್ ಕಂಟ್ರೋಲ್, ಎಂಜಿನ್ ಪುಶ್ ಸ್ಟಾರ್ಟ್/ಸ್ಟಾಪ್, ಆಟೋಮ್ಯಾಟಿಕ್ ಎಸಿ, 7- ಇಂಚು ಟಚ್‌ಸ್ಕ್ರೀನ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, ರಿಯರ್ ಪಾರ್ಕಿಂಗ್ ಕ್ಯಾಮರಾ, ಇಎಸ್‌ಪಿ ಮತ್ತು ಹಿಲ್ ಹೋಲ್ಡ್ ಅಸಿಸ್ಟ್-ಈ ಫೀಚರ್‌ಗಳೊಂದಿಗೆ ಬರುವ ಬ್ರೆಝಾದ VXI ಮತ್ತು ZXI ವೇರಿಯೆಂಟ್‌ಗಳು ಸಿಎನ್‌ಜಿ ಆಯ್ಕೆಯನ್ನು ಹೊಂದುವ ನಿರೀಕ್ಷೆ ನಮ್ಮದಾಗಿದೆ.
ಮಾರುತಿ ಬ್ರೆಝಾ ಸಿಎನ್‌ಜಿ ತನ್ನ ಅನುಗುಣವಾದ ಪೆಟ್ರೋಲ್ ವೇರಿಯೆಂಟ್‌ಗಳಿಗಿಂತ ಸುಮಾರು ಒಂದು ಲಕ್ಷದಷ್ಟು ಹೆಚ್ಚಿರಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಪರಾಮರ್ಶೆಗಾಗಿ, ಕಾಂಪ್ಯಾಕ್ಟ್ ಎಸ್‌ಯುವಿ ರೂ 7.99 ಲಕ್ಷದಿಂದ ರೂ. 13.96 ಲಕ್ಷ ತನಕ ಇದೆ (ಎಕ್ಸ್-ಶೋರೂಂ ಬೆಲೆ). ಮೊದಲೇ ಹೇಳಿದಂತೆ, ಸಿಎನ್‌ಜಿ ಆಯ್ಕೆಯಿರುವ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳು ಪ್ರಸ್ತುತ ಇಲ್ಲ. ಈ ಮಧ್ಯೆಯೇ, ಈಗ ಮಾರುತಿ 13 CNG ಕಾರುಗಳನ್ನು ಮಾರಾಟಕ್ಕೆ ಇಟ್ಟಿದೆ. ಇದು ಆಲ್ಟೋ 800, ಆಲ್ಟೋ K10, ಎಸ್-ಪ್ರೆಸ್ಸೋ, ಈಕೋ, ವ್ಯಾಗನ್ ಆರ್, ಸೆಲೆರಿಯೋ, ಸ್ವಿಫ್ಟ್, ಡಿಝೈರ್, ಬಲೆನೋ, ಗ್ರ್ಯಾಂಡ್ ವಿಟಾರಾ, XL6 ಮತ್ತು ಎರ್ಟಿಗಾ ಅನ್ನು ಒಳಗೊಂಡಿದೆ.
ಇನ್ನಷ್ಟು ಓದಿ: ಬ್ರೆಝಾ ಆನ್ ರೋಡ್ ಬೆಲೆ