ಮಾರುತಿ ಸುಜುಕಿ ಬಲೆನೊ RS ಅನ್ನು ಸ್ಥಗಿತಗೊಳಿಸುತ್ತಿದೆ
ಮಾರುತಿ ಬಾಲೆನೋ ಆರ್ಎಸ್ ಗಾಗಿ dinesh ಮೂಲಕ ಜನವರಿ 30, 2020 11:14 am ರಂದು ಪ್ರಕಟಿಸಲಾಗಿದೆ
- 22 Views
- ಕಾಮೆಂಟ್ ಅನ್ನು ಬರೆಯಿರಿ
ಗರಿಷ್ಟ ಪವರ್ ಹೊಂದಿರುವ ಬಲೆನೊ RS ಅನ್ನು BS4 1.0-ಲೀಟರ್ ಟರ್ಬೊ ಚಾರ್ಜ್ ಪೆಟ್ರೋಲ್ ಎಂಜಿನ್ ಒಂದಿಗೆ ಕೊಡಲಾಗುತ್ತಿತ್ತು
ಮಾರುತಿ ಭಾರತದಲ್ಲಿ ಬಲೆನೊ RS ಅನ್ನು ಸ್ಥಗಿತಗೊಳಿಸಿದೆ, ಅದನ್ನು ನೆಕ್ಸಾ ವೆಬ್ಸೈಟ್ ನಿಂದ ತೆಗೆಯಲಾಗಿದೆ. ಅದನ್ನು ಮುಂಬರುವ BS6 ನಾರ್ಮ್ಸ್ ಹಿನ್ನಲೆಯಲ್ಲಿ ಮಾಡಲಾಗಿದೆ.
ಕಾರ್ ಮೇಕರ್ ನಿರ್ದರಿಸಿರುವಂತೆ 1.0-ಲೀಟರ್ ಬೂಸ್ಟರ್ ಜೆಟ್ ಟರ್ಬೊ ಚಾರ್ಜ್ ಪೆಟ್ರೋಲ್ ಎಂಜಿನ್ ಅನ್ನು ಕಠಿಣ ಎಮಿಷನ್ ನಾರ್ಮ್ಸ್ ಗಾಗಿ ನವೀಕರಣ ಗೊಳಿಸದಿರಲು ನಿರ್ಧರಿಸಲಾಗಿದೆ.
ಅದರ ಪೂರ್ಣಾವಧಿ ಮುಂಚೆ , ಮಾರುತಿ ರಿಯಾಯಿತಿಗಳನ್ನು ರೂ 1 ಲಕ್ಷ ವರೆಗೂ (ಡಿಸೆಂಬರ್ 2019) ನಲ್ಲಿ ಕೊಡುತ್ತಿತ್ತು ಬಲೆನೊ RS ಮೇಲೆ. ಈ ರಿಯಾಯಿತಿ ಒಂದಿಗೆ RS.ಬೆಲೆಯು ಪೆಟ್ರೋಲ್ ಬಲೆನೊ ಅಲ್ಫಾ MT ಗೆ ಹತ್ತಿರವಾಗಿತ್ತು, ಹಾಗು ಉತ್ತಮ ಮೌಲ್ಯ ಯುಕ್ತವಾಗಿತ್ತು ಸಹ. ಕಾರ್ ಮೇಕರ್ ಅಧಿಕೃತವಾಗಿ ಹೇಳಿಕೆ ನೀಡಿಲ್ಲದಿದ್ದರೂ ಮೂಲಗಳ ಪ್ರಕಾರ ಬಲೆನೊ RS ಸ್ಟಾಕ್ ಮುಗಿದಿದೆ.
ಬಲೆನೊ RS ಸ್ಟ್ಯಾಂಡರ್ಡ್ ಬಲೆನೊ ಟಾಪ್ ಸ್ಪೆಕ್ ಅಲ್ಫಾ ವೇರಿಯೆಂಟ್ ಆಧಾರದಮೇಲೆ ಮಾಡಲಾಗಿತ್ತು. ಹಾಗಾಗಿ, ಅದರಲ್ಲಿ ಫೀಚರ್ ಗಳಾದ ಆಟೋ LED ಹೆಡ್ ಲ್ಯಾಂಪ್ ಗಳು, ಆಟೋ AC, ಹಾಗು 7-ಇಂಚು ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಸ್ಟ್ಯಾಂಡರ್ಡ್ ಸುರಕ್ಷತೆ ಫೀಚರ್ ಗಳಾದ ಏರ್ಬ್ಯಾಗ್ ಗಳು ಹಾಗು ABS ಲಭ್ಯವಿತ್ತು. ಅದರಲ್ಲಿ ಫೀಚರ್ ಗಳಾದ ರೀ ಡಿಸೈನ್ ಆಗಿರುವ ಬಂಪರ್ ಗಳು ಹಾಗು ಡಿಸ್ಕ್ ಬ್ರೇಕ್ ಗಳನ್ನು ಎಲ್ಲ ನಾಲ್ಕು ವೀಲ್ ಗಳು ಕೊಡಲಾಗಿತ್ತು. 1.0 ಟರ್ಬೋ -ಪೆಟ್ರೋಲ್ ಎಂಜಿನ್ 102PS ಹಾಗು 150Nm ಕೊಡುತ್ತಿತ್ತು, ಹಾಗು ಅದನ್ನು 5-ಸ್ಪೀಡ್ ಮಾನ್ಯುಯಲ್ ಒಂದಿಗೆ ಸಂಯೋಜಿಸಲಾಗಿತ್ತು.
ಬಲೆನೊ RS ಹೊರಹೋಗುವುದರೊಂದಿಗೆ , ಪೋಲೊ GT TSI ಟರ್ಬೊ ಚಾರ್ಜ್ ಪೆಟ್ರೋಲ್ ಎಂಜಿನ್ ಹೊಂದಿರುವ ಕೇವಲ ಪ್ರೀಮಿಯಂ ಹ್ಯಾಚ್ ಬ್ಯಾಕ್ ಆಗಿರಲಿದೆ, ಆದರೆ 2020 ಯಲ್ಲಿ ಬಹಳಷ್ಟು ಬದಲಾವಣೆಗಳು ಬರಲಿವೆ ಮೂರನೇ -ಪೀಳಿಗೆಯ i20 ನಲ್ಲಿ ವೆನ್ಯೂ ನಲ್ಲಿರುವ 1.0-ಲೀಟರ್ ಟರ್ಬೊ ಚಾರ್ಜ್ ಪೆಟ್ರೋಲ್ ಎಂಜಿನ್ ನಿರೀಕ್ಷಿಸಲಾಗಿದೆ. ಹಾಗೆಯೆ, ಟಾಟಾ ಸಹ ಹೆಚ್ಚು ಪವರ್ ಹೊಂದಿರುವ ಆವೃತ್ತಿಯ 1.2-ಲೀಟರ್ ಟರ್ಬೊ ಚಾರ್ಜ್ ಪೆಟ್ರೋಲ್ ಯುನಿಟ್ ಅಲ್ಟ್ರಾಜ್ ಅನ್ನು ಹೊರ ತರಲಿದೆ.
ಮುಂದುವರೆಯುತ್ತಾ , BS6 ಅವಧಿಯಲ್ಲಿ , ಬಲೆನೇ ವನ್ನು ನಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಒಂದಿಗೆ ಮಾತ್ರ ಕೊಡಲಾಗುವುದು. ಕಾರ್ ಮೇಕರ್ ಬಲೆನೊ ಡೀಸೆಲ್ ಅನ್ನು ಸಹ ಸ್ಥಗಿತಗೊಳಿಸುವುದು , ಈಗಾಗಲೇ ಹೇಳಿಕೆ ನೀಡಿರುವಂತೆ ಡೀಸೆಲ್ ಕಾರ್ ಗಳ ಮಾರಾಟವನ್ನು ಏಪ್ರಿಲ್ 2020 ನಂತರ ಸ್ಥಗಿತಗೊಳಿಸಲಾಗುವುದು.
ಹೆಚ್ಚು ಓದಿ: ಮಾರುತಿ ಬಲೆನೊ RS ಆನ್ ರೋಡ್ ಬೆಲೆ