ಹಳೆಯ Vs ಹೊಸ ಮಾರುತಿ ಸ್ವಿಫ್ಟ್ ಕಾರು: ಚಿತ್ರಗಳ ಮೂಲಕ ಹೋಲಿಕೆ
ಮಾರುತಿ ಸ್ವಿಫ್ಟ್ 2021-2024 ಗಾಗಿ ansh ಮೂಲಕ ನವೆಂಬರ್ 08, 2023 06:18 pm ರಂದು ಪ್ರಕಟಿಸಲಾಗಿದೆ
- 38 Views
- ಕಾಮೆಂಟ್ ಅನ್ನು ಬರೆಯಿರಿ
ಈ ಸಮಗ್ರ ಗ್ಯಾಲರಿಯಲ್ಲಿ ನಾಲ್ಕನೇ ತಲೆಮಾರಿನ ಸ್ವಿಫ್ಟ್ ಕಾರಿನ ಒಳಭಾಗ ಮತ್ತು ಹೊರಭಾಗದ ಹೊಸ ವಿನ್ಯಾಸವನ್ನು ನೋಡಬಹುದು
- 2024 ಸುಜುಕಿ ಸ್ವಿಫ್ಟ್ ಕಾರಿನ ಪರಿಕಲ್ಪನೆಯು ಅನಾವರಣಗೊಂಡ ಕೆಲವೇ ದಿನಗಳಲ್ಲಿ ಜಪಾನಿನಲ್ಲಿ ಇದು ಬಿಡುಗಡೆಯಾಗಿದೆ.
- ಅಂತರಾಷ್ಟ್ರೀಯವಾಗಿ ಇದು ಹೈಬ್ರಿಡ್ ಮತ್ತು ಆಲ್ ವೀಲ್ ಪವರ್ ಟ್ರೇನ್ ಆಯ್ಕೆಗಳೊಂದಿಗೆ 1.2-ಲೀಟರ್ 3-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯಲಿದೆ.
- 9 ಇಂಚಿನ ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂ, 360 ಡಿಗ್ರಿ ಕ್ಯಾಮರಾ, 6 ಏರ್ ಬ್ಯಾಗ್ ಗಳು ಮತ್ತು ADAS ತಂತ್ರಜ್ಞಾನ ಇತ್ಯಾದಿ ಹೊಸ ಸೌಲಭ್ಯಗಳೊಂದಿಗೆ ಇದು ಹೊರಬರಲಿದೆ.
- ಇದು 2024ರಲ್ಲಿ ಬಿಡುಗಡೆಯಾಗಲಿದ್ದು ಸುಮಾರು ರೂ. 6 ಲಕ್ಷಕ್ಕೆ (ಎಕ್ಸ್ - ಶೋರೂಂ) ದೊರೆಯುವ ಸಾಧ್ಯತೆ ಇದೆ.
ಉತ್ಪಾದನೆಗೆ ಸಿದ್ಧಗೊಂಡ ಪರಿಕಲ್ಪನೆಯಾಗಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೊಸ ತಲೆಮಾರಿನ ಸುಜುಕಿ ಸ್ವಿಫ್ಟ್ ಕಾರನ್ನು ಜಪಾನಿನಲ್ಲಿ ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ. ಸುಜುಕಿ ಸಂಸ್ಥೆಯು ಇತ್ತೀಚೆಗೆ ಹೊಸ ತಲೆಮಾರಿನ ಈ ಕಾಂಪ್ಯಾಕ್ಟ್ ಹ್ಯಾಚ್ ಬ್ಯಾಕ್ ಕಾರಿನ ಪವರ್ ಟ್ರೇನ್ ಮತ್ತು ಪರಿಷ್ಕೃತ ವೈಶಿಷ್ಟ್ಯಗಳ ಕುರಿತ ವಿವರಗಳನ್ನು ಬಹಿರಂಗಪಡಿಸಿದೆ. ಭಾರತದಲ್ಲಿ ರಸ್ತೆಗಿಳಿಯಲಿರುವ ಮಾದರಿಯಲ್ಲಿ ಒಂದಷ್ಟು ಭಿನ್ನತೆಗಳಿದ್ದರೂ, ಬಹುತೇಕವಾಗಿ ಜಪಾನಿನಲ್ಲಿ ಓಡಾಡಲಿರುವ ಹ್ಯಾಚ್ ಬ್ಯಾಕ್ ಕಾರು ನಮ್ಮ ದೇಶಕ್ಕೆ ಕಾಲಿಡಲಿದೆ. ಇಲ್ಲಿ ಸದ್ಯಕ್ಕೆ ಮಾರಾಟವಾಗುತ್ತಿರುವ ಕಾರಿಗೆ ಹೋಲಿಸಿದರೆ ಹೊಸ ಕಾರಿನಲ್ಲಿ ಏನೆಲ್ಲ ಬದಲಾವಣೆಗಳನ್ನು ಮಾಡಲಾಗಿದೆ ಎಂಬುದನ್ನು ನೋಡೋಣ:
ಮುಂಭಾಗ
ಒಟ್ಟಾರೆಯಾಗಿ ಮುಂಭಾಗವು ಹಾಗೆಯೇ ಇದ್ದರೂ ಇದರ ಗ್ರಿಲ್ ಅನ್ನು ಪರಿಷ್ಕರಿಸಲಾಗಿದೆ. ಇದು ಹೆಚ್ಚು ದುಂಡಗಿನ ವಿನ್ಯಾಸ, ಹೊಸ ಹನಿಕಾಂಬ್ ಮಾದರಿ, ಕೆಳಗಿನ ಅರ್ಧ ಭಾಗದಲ್ಲಿ U ಆಕಾರದ ಕ್ರೋಮ್ ಪಟ್ಟಿ ಇತ್ಯಾದಿಗಳನ್ನು ಹೊಂದಿದ್ದು ಸುಜುಕಿ ಲೋಗೋವನ್ನು ಬೋನೆಟ್ ಮೇಲೆ ಇರಿಸಲಾಗಿದೆ.
ಹೆಡ್ ಲೈಟ್ ಅನ್ನು L ಆಕಾರದ DRL ಗಳೊಂದಿಗೆ ಬದಲಾಯಿಸಲಾಗಿದ್ದು, LED ಫಾಗ್ ಲೈಟ್ ಗಳಿಗೆ ಹೊಸ ಹೌಸಿಂಗ್ ಮತ್ತು ಕೆಳಭಾಗದಲ್ಲಿ ಕ್ರೋಮ್ ಪಟ್ಟಿಯನ್ನು ನೀಡುವ ಮೂಲಕ ಬಂಪರ್ ವಿನ್ಯಾಸವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ.
ಪಕ್ಕದ ಭಾಗ
ಸ್ವಿಫ್ಟ್ ಕಾರು ಸರಿಸುಮಾರು ಅದೇ ಸಿಲೂಯೆಟ್ ಅನ್ನು ಉಳಿಸಿಕೊಂಡಿದ್ದು, ಹಿಂಭಾಗದ ಬಾಗಿಲ ಹ್ಯಾಂಡಲ್ ಗಳನ್ನು ಭಾರತಕ್ಕೆ ಸೀಮಿತವಾಗಿರುವ ಆವೃತ್ತಿಯಲ್ಲಿ ಕಂಡಂತೆ C ಪಿಲ್ಲರ್ ನಲ್ಲಿ ಇರಿಸುವ ಬದಲಿಗೆ ಬಾಗಿಲ ಮೇಲೆಯೇ ಇರಿಸಲಾಗಿದೆ.
ಅಲ್ಲದೆ 2024ರ ಆವೃತ್ತಿಯು ಆಕರ್ಷಕ ಡ್ಯುವಲ್ ಟೋನ್ ಅಲೋಯ್ ವೀಲ್ ಗಳನ್ನು ಪಡೆಯಲಿದೆ.
ಹಿಂದುಗಡೆ
ಹಿಂಭಾಗದಲ್ಲಿ ಸೂಕ್ಷ್ಮವಾದ ಬದಲಾವಣೆಗಳನ್ನು ಮಾಡಿದ್ದರೂ ಅವು ಎದ್ದು ಕಾಣುತ್ತವೆ. ಟೇಲ್ ಲ್ಯಾಂಪ್ ಗಳು ಮತ್ತು ಬೂಟ್ ಲಿಪ್ ಗಳಿಗೆ ಮೊನಚಾದ ನೋಟವನ್ನು ನೀಡುವುದಕ್ಕಾಗಿ ಅವುಗಳನ್ನು ಒಂದಷ್ಟು ಪರಿಷ್ಕರಿಸಲಾಗಿದೆ. ಆದರೆ ಬಂಪರ್ ಮಾತ್ರ ಸಂಪೂರ್ಣವಾಗಿ ಹೊಸ ನೋಟವನ್ನು ಪಡೆದಿದೆ. ಭಾರತಕ್ಕೆ ಸೀಮಿತವಾಗಿರುವ ಆವೃತ್ತಿಗೆ ಹೋಲಿಸಿದರೆ 2024 ಸುಜುಕಿ ಸ್ವಿಫ್ಟ್ ಕಾರು ಉದ್ದನೆಯ ರಿಫ್ಲೆಕ್ಟರ್ ಪ್ಯಾನೆಲ್ ಗಳನ್ನು ಹೊಂದಿರುವ ಕಪ್ಪಗಿನ ಮತ್ತು ಕ್ರೋಮ್ ಬಂಪರ್ ಜೊತೆಗೆ ಬರಲಿದೆ.
ಇದನ್ನು ಸಹ ಓದಿರಿ: ಪರೀಕ್ಷಾರ್ಥ ಚಾಲನೆ ವೇಳೆ ಕಾಣಿಸಿಕೊಂಡ 2024 ಮಾರುತಿ ಸ್ವಿಫ್ಟ್, ವಿನ್ಯಾಸದ ಹೊಸ ವಿವರಗಳ ಬಹಿರಂಗ
ಡ್ಯಾಶ್ ಬೋರ್ಡ್
ಇದರ ಡ್ಯಾಶ್ ಬೋರ್ಡ್ ಅನ್ನು ಸಹ ಬದಲಾಯಿಸಲಾಗಿದ್ದು ಮಾರುತಿ ಬಲೇನೊ, ಫ್ರಾಂಕ್ಸ್ ಅಥವಾ ಗ್ರಾಂಡ್ ವಿಟಾರ ಕಾರುಗಳಲ್ಲಿರುವ ಡ್ಯಾಶ್ ಬೋರ್ಡ್ ಗಳಂತೆಯೇ ಇದು ಕಾಣಿಸಿಕೊಳ್ಳುತ್ತದೆ. ಇದು ಕಪ್ಪು ಬಿಳುಪು ಡ್ಯುವಲ್ ಟೋನ್ ಛಾಯೆಯೊಂದಿಗೆ ಬರುತ್ತದೆ. ಮಾರುತಿಯ ಇತರ ಮಾದರಿಗಳು ಹೊಂದಿರುವಂತಹ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಅನ್ನೇ ಇದು ಹೊಂದಿದ್ದು, ಇನ್ನು ಮುಂದೆ ಇದು ದುಂಡಗಿನ AC ವೆಂಟ್ ಗಳನ್ನು ಹೊಂದಿರುವುದಿಲ್ಲ.
ಹೊಸ ಡ್ಯಾಶ್ ಬೋರ್ಡಿನ ನಡುಭಾಗದಲ್ಲಿ ಇದು ಸದ್ಯದ ಸ್ವಿಫ್ಟ್ ಕಾರಿನಲ್ಲಿರುವ 7 ಇಂಚಿನ ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂ ಬದಲಿಗೆ 9 ಇಂಚಿನ ಸಿಸ್ಟಂ ಅನ್ನು ಹೊಂದಿರಲಿದೆ.
ಮುಂದಿನ ಸೀಟುಗಳು
2024 ಸ್ವಿಫ್ಟ್ ಕಾರು ಹೊಸ ವಿನ್ಯಾಸ ಮಾದರಿಯೊಂದಿಗೆ ಸಂಪೂರ್ಣ ಕಪ್ಪಗಿನ ಸೆಮಿ ಲೆದರ್ ಸೀಟುಗಳೊಂದಿಗೆ ಬರಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ಸೀಟುಗಳು ದೊಡ್ಡದಾದ ಬಾಹ್ಯರೇಖೆಗಳನ್ನು ಹೊಂದಿವೆ.
ನಾಲ್ಕನೇ ತಲೆಮಾರಿನ ಸುಜುಕಿ ಸ್ವಿಫ್ಟ್ ಕಾರಿನ ಕುರಿತ ವಿಸ್ತೃತ ವಿವರಗಳು ಇನ್ನೂ ಬಹಿರಂಗಗೊಳ್ಳದೆ ಇದ್ದರೂ, ಇದು ಸಂಪೂರ್ಣ ಹೊಸ ಪೆಟ್ರೋಲ್ ಎಂಜಿನ್ ಅನ್ನು ಪಡೆಯುವುದು ಖಚಿತವಾಗಿದೆ.
ಬಿಡುಗಡೆಯ ಸಮಯ
ಹೊಸ ತಲೆಮಾರಿನ ಮಾರುತಿ ಸ್ವಿಫ್ಟ್ ಕಾರು ಜಾಗತಿಕ ಮಾರುಕಟ್ಟೆಗೆ ಬಿಡುಗಡೆಗೊಂಡ ಸ್ವಲ್ಪವೇ ಸಮಯದಲ್ಲಿ ಭಾರತದ ರಸ್ತೆಗಳಿಗೂ ಇಳಿಯಲಿದ್ದು, 2024ರ ಅರಂಭದಲ್ಲಿಯೇ ನಾವು ಈ ಕಾರನ್ನು ಕಾಣುವ ಸಾಧ್ಯತೆ ಇದೆ. ಇದು ರೂ. 6 ಲಕ್ಷದಿಂದ (ಎಕ್ಸ್-ಶೋರೂಂ) ದೊರೆಯಲಿದ್ದು ಹ್ಯುಂಡೈ ಗ್ರಾಂಡ್ i10 ನಿಯೋಸ್ ಕಾರಿನೊಂದಿಗೆ ಸ್ಪರ್ಧಿಸಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಸ್ವಿಫ್ಟ್ AMT