ಬ್ಲ್ಯಾಕ್ ಸ್ಟೋರ್ಮ್ ಆವೃತ್ತಿಯೊಂದಿಗೆ ಸಂಪೂರ್ಣ-ಕಪ್ಪು ಬಣ್ಣವನ್ನು ಪಡೆಯಲಿರುವ ಎಂಜಿ ಗ್ಲೋಸ್ಟರ್
ಎಂಜಿ ಗ್ಲೋಸ್ಟರ್ ಗಾಗಿ ansh ಮೂಲಕ ಜೂನ್ 30, 2023 08:08 pm ರಂದು ಪ್ರಕಟಿಸಲಾಗಿದೆ
- 19 Views
- ಕಾಮೆಂಟ್ ಅನ್ನು ಬರೆಯಿರಿ
ಸಂಪೂರ್ಣ ಕಪ್ಪು ಎಕ್ಸ್‌ಟೀರಿಯರ್ ಹೊರತಾಗಿ, ಈ ವಿಶೇಷ ಆವೃತ್ತಿಯು ವಿಭಿನ್ನ ಕ್ಯಾಬಿನ್ ಥೀಮ್ ಅನ್ನು ಸಹ ಪಡೆಯಬಹುದು
ಈ ಎಂಜಿ ಗ್ಲೋಸ್ಟರ್ ಶೀಘ್ರದಲ್ಲಿಯೇ ಹೊಸ ವಿಶೇಷ ಆವೃತ್ತಿಯನ್ನು ಪಡೆಯಲಿದೆ. ಹೊಸ ಟೀಸರ್‌ನಲ್ಲಿ, ಕಾರುತಯಾರಕರು ಈ ಎಸ್‌ಯುವಿಯ ವಿಶೇಷ “ಬ್ಲ್ಯಾಕ್‌ಸ್ಟೋರ್ಮ್” ಆವೃತ್ತಿಯ ಒಂದು ನೋಟವನ್ನು ಬಿಡುಗಡೆ ಮಾಡಿದ್ದಾರೆ. ಅದರ ನೋಟದಿಂದ, ಗ್ಲೋಸ್ಟರ್‌ನ ಈ ವಿಶೇಷ ಆವೃತ್ತಿಯು ಎಕ್ಸ್‌ಟೀರಿಯರ್‌ನಲ್ಲಿ ಬ್ಲ್ಯಾಕ್‌ಸ್ಟೋರ್ಮ್ ಬ್ಯಾಡ್ಜಿಂಗ್‌ನೊಂದಿಗೆ ಸಂಪೂರ್ಣ ಕಪ್ಪು ಬಾಹ್ಯ ಬಣ್ಣವನ್ನು ಪಡೆಯಲಿದೆ ಎಂಬುದನ್ನು ತಿಳಿಯಬಹುದು.
ಏನನ್ನು ನಿರೀಕ್ಷಿಸಬಹುದು
ಎಂಜಿ ಈಗಾಗಲೇ ಗ್ಲೋಸ್ಟರ್ ಅನ್ನು ಎಕ್ಸ್‌ಟೀರಿಯರ್‌ನಲ್ಲಿ ಕಪ್ಪು ಬಣ್ಣವನ್ನು ನೀಡುತ್ತಿದೆ. ಆದ್ದರಿಂದ ಈ ವಿಶೇಷ ಆವೃತ್ತಿಯೊಂದಿಗೆ ನಾವು ಎಲ್ಲಾ ಕ್ರೋಮ್ ಬಿಟ್‌ಗಳನ್ನು ಮಾತ್ರವಲ್ಲದೇ ಅಲಾಯ್ ವ್ಹೀಲ್‌ಗಳನ್ನು ಸಹ ಸಂಪೂರ್ಣ ಕಪ್ಪು ಬಣ್ಣದಲ್ಲಿ ನಿರೀಕ್ಷಿಸಬಹುದು. ಟೀಸರ್‌ನಲ್ಲಿ ಅದರ ಕ್ಯಾಬಿನ್ ಅನ್ನು ನೋಡಲು ಸಾಧ್ಯವಾಗದಿದ್ದರೂ, ಅದರ ಮೇಲ್ಗವಸಿನಲ್ಲೂ ನಾವು ಕಪ್ಪು ಬಣ್ಣವನ್ನು ನಿರೀಕ್ಷಿಸಬಹುದು.
ಫೀಚರ್‌ಗಳು
ಈ ಟೀಸರ್‌ನಲ್ಲಿ ಬ್ಲ್ಯಾಕ್ ಸ್ಟೋರ್ಮ್ ಆವೃತ್ತಿಯ ಬಗ್ಗೆ ಹೆಚ್ಚಿನದನ್ನು ತಿಳಿಯಲು ಸಾಧ್ಯವಿಲ್ಲ, ಆದರೆ ಈ ಎಸ್‌ಯುವಿಯ ಪ್ರಮಾಣಿತ ಆವೃತ್ತಿಯು ಈಗಾಗಲೇ ಸುಸಜ್ಜಿತವಾಗಿರುವುದರಿಂದ ಯಾವುದೇ ಹೊಸ ಫೀಚರ್‌ಗಳನ್ನು ಸೇರಿಸುವುದಿಲ್ಲ. ಇದು ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಜೊತೆಗೆ 12.3 ಇಂಚಿನ ಇನ್‌ಫೊಟೇನ್‌ಮೆಂಟ್ ಸಿಸ್ಟಮ್, ಡ್ಯುಯಲ್-ಪೇನ್ ವಿಹಂಗಮ ಸನ್‌ರೂಫ್, 12-ರೀತಿಯಲ್ಲಿ ಹೊಂದಿಸಬಹುದಾದ ಡ್ರೈವರ್ ಸೀಟ್ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಅನ್ನು ಪಡೆಯುತ್ತದೆ.
ಇದನ್ನೂ ಓದಿ: ಇವಿಗಳನ್ನು ಗಮನದಲ್ಲಿರಿಸಿಕೊಂಡು 5 ವರ್ಷಗಳ ಮಾರ್ಗಸೂಚಿಗಳನ್ನು ರಚಿಸುತ್ತಿರುವ ಎಂಜಿ ಮೋಟಾರ್ ಇಂಡಿಯಾ
ಸುರಕ್ಷತೆಯ ವಿಷಯದಲ್ಲಿ, ಇದು ಆರು ಏರ್‌ಬ್ಯಾಗ್‌ಗಳನ್ನು ಇಬಿಡಿ ಜೊತೆಗೆ ಎಬಿಎಸ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ಮತ್ತು ಸುಧಾರಿತ ಡ್ರೈವರ್ ಸಹಾಯಕ ವ್ಯವಸ್ಥೆ (ADAS) ಯನ್ನು ಹೊಂದಿದ್ದು, ಇದು ಲೇನ್ ಬದಲಾವಣೆ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಮುಂಭಾಗದ ಘರ್ಷಣಾ ವಾರ್ನಿಂಗ್ ಮತ್ತು ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ಅನ್ನು ಒಳಗೊಂಡಿದೆ.
ಪವರ್‌ಟ್ರೇನ್
ಈ ಬ್ಲ್ಯಾಕ್ ಸ್ಟೋರ್ಮ್ 2-ಲೀಟರ್ ಡಿಸೇಲ್ ಎಂಜಿನ್ (161PS ಮತ್ತು 374Nm) ಜೊತೆಗೆ ರಿಯರ್-ವ್ಹೀಲ್-ಡ್ರೈವ್ ಸೆಟಪ್ ಮತ್ತು 2-ಲೀಟರ್ ಟ್ವಿನ್-ಟರ್ಬೋ ಡಿಸೇಲ್ ಎಂಜಿನ್ (216PS ಮತ್ತು 479Nm) ನಾಲ್ಕು-ವ್ಹೀಲ್ ಡ್ರೈವ್‌ಟ್ರೇನ್ ಅನ್ನು ಪಡೆಯುವ ಸಾಧ್ಯತೆಯಿದೆ. ಎರಡೂ ಎಂಜಿನ್‌ಗಳು ಸಹ 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅನ್ನು ಪಡೆಯುತ್ತವೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಈ ಗ್ಲೋಸ್ಟರ್ ರೂ. 38.08 ಲಕ್ಷದಿಂದ ರೂ. 42.38 ಲಕ್ಷದವರೆಗೆ (ಎಕ್ಸ್‌ಶೋರೂಮ್) ಬೆಲೆಯನ್ನು ಹೊಂದಬಹುದು ಮತ್ತು ಈ ಬ್ಲ್ಯಾಕ್ ಸ್ಟೋರ್ಮ್ ಆವೃತ್ತಿಯು ಪ್ರಮಾಣಿತ ವೇರಿಯೆಂಟ್‌ಗಳಿಗಿಂತ ಪ್ರೀಮಿಯಂ ಅನ್ನು ಪಡೆಯುವ ಸಾಧ್ಯತೆಯಿದೆ. ಈ ಗ್ಲೋಸ್ಟರ್ ಟೊಯೋಟಾ ಫಾರ್ಚುನರ್, ಸ್ಕೋಡಾ ಕಾಡಿಯಾಕ್ ಮತ್ತು ಜೀಪ್ ಮೆರಿಡಿಯನ್‌ಗೆ ಪ್ರತಿಸ್ಪರ್ಧಿಯಾಗಬಹುದು.
ಇನ್ನಷ್ಟು ಇಲ್ಲಿ ಓದಿ : ಎಂಜಿ ಗ್ಲಾಸ್ಟರ್ ಡಿಸೇಲ್