MG ಹೆಕ್ಟರ್ vs ಕಿಯಾ ಸೆಲ್ಟೋಸ್ ಟರ್ಬೊ -ಪೆಟ್ರೋಲ್: ನೈಜ ಪ್ರಪಂಚದ ಕಾರ್ಯದಕ್ಷತೆ ಮತ್ತು ಮೈಲೇಜ್ ಹೋಲಿಕೆ
ಎಂಜಿ ಹೆಕ್ಟರ್ 2019-2021 ಗಾಗಿ dhruv ಮೂಲಕ ಅಕ್ಟೋಬರ್ 17, 2019 11:27 am ರಂದು ಪ್ರಕಟಿಸಲಾಗಿದೆ
- 30 Views
- ಕಾಮೆಂಟ್ ಅನ್ನು ಬರೆಯಿರಿ
ಹೊಸ ಎರೆಡು SUV ಗಳು ದೇಶದಲ್ಲಿ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಕೊಡುತ್ತಿದೆ ಮತ್ತು ಅವು ಹತ್ತಿರವಾಗಿ ಬೆಲೆ ಪಟ್ಟಿ ಹೊಂದಿದೆ. ಹಾಗಾಗಿ, ಅವು ನಿಜ ಪ್ರಪಂಚದಲ್ಲಿ ಹೇಗೆ ನಿಭಾಯಿಸುತ್ತದೆ ? ನಾವು ತಿಳಿಯೋಣ.
ಇತ್ತೀಚಿಗೆ ಬಿಡುಗಡೆಯಾದ MG ಹೆಕ್ಟರ್ ಮತ್ತು ಕಿಯಾ ಸೆಲ್ಟೋಸ್ ಬಹಳಷ್ಟು ಕಾರ್ ಗ್ರಾಹಕರನ್ನು ಗೊಂದಲಕ್ಕೀಡುಮಾಡಿದ್ದಾರೆ ಯಾವ ಕೊಡುಗೆ ಉತ್ತಮ ಪ್ಯಾಕೇಜ್ ಹೊಂದಿದೆ ಎಂದು. ನಾವು ಇತ್ತೀಚಿಗೆ ಕಿಯಾ ಸೆಲ್ಟೋಸ್ ಅನ್ನು 1.4- ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಜೊತೆಗೆ ಮಾನ್ಯುಯಲ್ ಟ್ರಾನ್ಸ್ಮಿಷನ್ ಒಂದಿಗೆ ಪರೀಕ್ಷಿಸಿದ್ದೇವೆ ಮತ್ತು ಅದರ ಮೈಲೇಜ್ ಅನ್ನು MG 1.5- ಲೀಟರ್ ಟರ್ಬೊ ಪೆಟ್ರೋಲ್ ಮೈಲ್ಡ್ ಹೈಬ್ರಿಡ್ ಆವೃತ್ತಿ (MT) ಒಂದಿಗೆ ಹೋಲಿಕೆ ಮಾಡಿದ್ದೇವೆ.
ಆದರೆ, ನಾವು ಪೂರ್ಣ ವಿವರಗಳಿಗೆ ಹೋಗುವ ಮುಂಚೆ , ನಾವು ಕಾಗದದಲ್ಲಿರುವ ಈ ಎರೆಡು ಎಂಜಿನ್ ಗಳ ಸ್ಪೆಕ್ ಗಳನ್ನು ತಿಳಿಯೋಣ.
|
MG ಹೆಕ್ಟರ್ |
ಕಿಯಾ ಸೆಲ್ಟೋಸ್ |
Displacement |
1.5-litre turbo-petrol hybrid |
1.4-litre turbo-petrol |
Power |
143PS |
140PS |
Torque |
250Nm |
242Nm |
Transmission |
6-speed MT |
6-speed MT |
Claimed FE |
15.81kmpl |
16.1kmpl |
Emission Type |
BS4 |
BS6 |
ಹೆಕ್ಟರ್ ಪವರ್ ಹಾಗು ಟಾರ್ಕ್ ಸಂಖ್ಯೆಗಳನ್ನು ಸ್ವಲ್ಪ ಹೆಚ್ಚು ಪಡೆದಿದೆ ಆದರೆ ಸೆಲ್ಟೋಸ್ ಈ ಪಟ್ಟಿಯನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿನ ಮೈಲೇಜ್ ಒಂದಿಗೆ ನಿಭಾಯಿಸುತ್ತದೆ. ಹಾಗಾಗಿ, ಕಾಗದದಲ್ಲಿ, ಎರೆಡೂ ಕಾರ್ ಗಳು ತೀವ್ರವಾಗಿ ಪ್ರತಿಸ್ಪರ್ದಿಸುತ್ತದೆ.
ಕಾರ್ಯದಕ್ಷತೆ ಹೋಲಿಕೆ
ವೇಗಗತಿ ಪಡೆಯುವಿಕೆ ಹಾಗು ರೋಲ್ ಆನ್ ಪರೀಕ್ಷೆಗಳು:
|
0-100kmph |
30-80kmph |
40-100kmph |
MG ಹೆಕ್ಟರ್ |
11.68s |
8.24s |
13.57s |
ಕಿಯಾ ಸೆಲ್ಟೋಸ್ |
9.36s |
6.55s |
10.33s |
ಸೆಲ್ಟೋಸ್ ಎಲ್ಲ ಪರೀಕ್ಷೆ ವಿಚಾರದಲ್ಲಿ ಹೆಕ್ಟರ್ ಅನ್ನು ಸೋಲಿಸುತ್ತದೆ, ಅದು ಬಹಳಷ್ಟು ಅಂತರದೊಂದಿಗೆ. ಎರೆಡು ಕಾರ್ ಮೇಕರ್ ಗಳು ಅಧಿಕೃತವಾಗಿ ಎರೆಡೂ ಕಾರ್ ಗಳ ಕೆರ್ಬ್ ವೆಯಿಟ್ ತಿಳಿಸಿಲ್ಲ, ಹೆಕ್ಟರ್ ಸ್ವಾಪ್ಪ ದೊಡ್ಡದಾಗಿದ್ದು, ಅದು ಎಲ್ಲ ತಾರಹದಲ್ಲೂ ಸೆಲ್ಟೋಸ್ ಗಿಂತಲೂ ಬಾರವಾಗಿರುತ್ತದೆ, ಹಾಗಾಗಿ ಹೆಚ್ಚು ಪವರ್ ಮತ್ತು ಟಾರ್ಕ್ ಹೋಂದಿದ್ದರೂ ಸಹ ನಿಧಾನ ವೇಗಗತಿ ಪಡೆಯುವಿಕೆ ವಿವರಿಸುತ್ತದೆ.
ಬ್ರೇಕಿಂಗ್ ದೂರ:
100-0kmph |
80-0kmph |
|
MG ಹೆಕ್ಟರ್ |
40.61m |
27.06m |
ಕಿಯಾ ಸೆಲ್ಟೋಸ್ |
41.30m |
26.43m |
ಪರೀಕ್ಷೆಗಳ ಫಲಿತಾಂಶಗಳು ಆಶ್ಚರ್ಯಕರವಾಗಿದ್ದವು ಹೆಕ್ಟರ್ (ಅದು ದೊಡ್ಡದಾಗಿದೆ ಎಂಬ ನಮ್ಮ ಅನಿಸಿಕೆ ಮೇಲೆ ) ಹೆಚ್ಚು ಬಾರವಾಗಿರುವುದು ಕಾರಣವಾಗಿರಬಹುದು. ಅದು 350mm ಉದ್ದ, 35mm ಅಗಲ, ಮತ್ತು 140mm ಹೆಚ್ಚು ಎತ್ತರ ಇದೆ ಸೆಲ್ಟೋಸ್ ಗಿಂತಲೂ. ಅದರ ಹೊರತಾಗಿ, ಬ್ರೇಕಿಂಗ್ ದೂರ 80-0kmph ಸೆಲ್ಟೋಸ್ ಗೆ ಹತ್ತಿರವಾಗಿದೆ ಅದು ಕೊರಿಯಾ SUV ಗಿಂತಲೂ ಬೇಗನೆ ನಿಲ್ಲುತ್ತದೆ 100kmph! ನಿಂದ.
ಮೈಲೇಜ್ ಹೋಲಿಕೆ
|
Claimed (ARAI) |
Highway (Tested) |
City (Tested) |
MG ಹೆಕ್ಟರ್ |
15.81kmpl |
14.44kmpl |
9.36kmpl |
ಕಿಯಾ ಸೆಲ್ಟೋಸ್ |
16.1kmpl |
18.03kmpl |
11.51kmpl |
ARAI ಸಂಖ್ಯೆಗಳು ಹತ್ತಿರವಾಗಿದ್ದರೂ , ನೈಜ ಪರಿಕ್ಷೆಗಳಲ್ಲಿ ಹೊಸ ವಿಚಾರ ಹೊರಬರುತ್ತವೆ. ಹೆಕ್ಟರ್ ಅನ್ನು ಕಡಿಮೆ ಮೈಲೇಜ್ ಕೊಡುತ್ತದೆ ಎನ್ನಬಹುದು ನಗರಗಳಲ್ಲಿ 10kmpl ಗಿಂತಲೂ ಕಡಿಮೆ ಕೊಡುವುದರೊಂದಿಗೆ. ಹೈವೇ ನಲ್ಲಿ, ಈ ಸಂಖ್ಯೆಗಳು ಉತ್ತಮವಾಗಿರುತ್ತದೆ, ಆದರೆ ಅದು ARAI ಸಂಖ್ಯೆಗಳಿಗಿಂತ ಕಡಿಮೆ ಇದೆ.
ಕಿಯಾ ಸೆಲ್ಟೋಸ್ ಇನ್ನೊಂದು ಬದಿಯಲ್ಲಿ ಸುಮಾರು 11-12kmpl ಕೊಡುತ್ತದೆ ನಗರಗಳಲ್ಲಿ, ಮತ್ತು ಹೈವೇ ಗಳಲ್ಲಿ ARAI-ಅಧಿಕೃತ ಸಂಖ್ಯೆಗಳನ್ನು ಹೆಚ್ಚಿಸುತ್ತದೆ 2kmpl ಅಷ್ಟು.
ಹೋಲಿಕೆಯಲ್ಲಿ ಸೆಲ್ಟೋಸ್ ಉತ್ತಮ ಆಯ್ಕೆ ಆಗಿದೆ, ಮತ್ತು ನೀವು ಹೆಕ್ಟರ್ ಮತ್ತು ಸೆಲ್ಟೋಸ್ ನಿಂದ ನಿಮ್ಮ ಉಪಯೋಗಕ್ಕೆ ಅನುಗುಣವಾಗಿ ಎಷ್ಟು ಮೈಲೇಜ್ ಪಡೆಯಬೇಕೆಂದು ತಿಳಿಯಬಯಸಿದರೆ ಕೆಳಗಿನ ಪಟ್ಟಿ ನೋಡಿರಿ.
|
50% highway, 50% city |
25% highway, 75% city |
75% highway, 25% city |
MG ಹೆಕ್ಟರ್ |
11.36kmpl |
10.26kmpl |
12.71kmpl |
ಕಿಯಾ ಸೆಲ್ಟೋಸ್ |
14.05kmpl |
12.65kmpl |
15.79kmpl |
ಅಂತಿಮ ಅನಿಸಿಕೆ
ಸೆಲ್ಟಸ್ ಉತ್ತಮ ನೇರವಾದ ವೇಗ ಪಡೆಯುವಿಕೆ ಹೊಂದಿದೆ ಮತ್ತು ಹೆಚ್ಚು ಮೈಲೇಜ್ ಕೊಡುತ್ತದೆ. ನಮ್ಮ ಪರೀಕ್ಷೆಗಳಲ್ಲಿ, MG ಹೆಕ್ಟರ್ ವಾಹನ ಸೆಲ್ಟೋಸ್ ಅನ್ನು ಬ್ರೇಕಿಂಗ್ ಪರೀಕ್ಷೆಯಲ್ಲಿ ಹಿಂದಿಕ್ಕಿಸಿತು. ಸೆಲ್ಟಸ್ ನ ಬಹಳಷ್ಟು ಪರೀಕ್ಷೆಯಲ್ಲಿನ ಕಾರ್ಯದಕ್ಷರೇ ಗಮನಿಸಿದಾಗ, ನಾವು ಈ ಕೊರಿಯಾ SUV ಯನ್ನು ಶಿಫಾರಸು ಮಾಡುತ್ತೇವೆ.