9.99 ಲಕ್ಷ ರೂ ಬೆಲೆಗೆ 331 ಕಿ.ಮೀ ರೇಂಜ್ ಹೊಂದಿರುವ MG Windsor EV ಬಿಡುಗಡೆ
ವಿಂಡ್ಸರ್ ಇವಿಯು ಭಾರತದಲ್ಲಿ ಜೆಡ್‌ಎಸ್ ಇವಿ ಮತ್ತು ಕಾಮೆಟ್ ಇವಿ ನಂತರ ಎಮ್‌ಜಿಯ ಮೂರನೇ ಸಂಪೂರ್ಣ-ಎಲೆಕ್ಟ್ರಿಕ್ ಕೊಡುಗೆಯಾಗಿದೆ
-
ಎಂಜಿ ವಿಂಡ್ಸರ್ ಇವಿಯು ಎಕ್ಸೈಟ್, ಎಕ್ಸ್‌ಕ್ಲೂಸಿವ್ ಮತ್ತು ಎಸೆನ್ಸ್ ಎಂಬ ಮೂರು ವಿಶಾಲವಾದ ಆವೃತ್ತಿಗಳಲ್ಲಿ ಲಭ್ಯವಿದೆ.
-
ಭಾರತದಲ್ಲಿ, ವಿಂಡ್ಸರ್ EV ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ಬಾಡಿಗೆ ಕಾರ್ಯಕ್ರಮದ ಮೂಲಕವೂ ಲಭ್ಯವಿದೆ, ಪ್ರತಿ ಕಿ.ಮೀಗೆ 3.5 ರೂ.
-
ಹೊರಭಾಗದ ಹೈಲೈಟ್ಸ್‌ಗಳಲ್ಲಿ ಕನೆಕ್ಟೆಡ್ ಎಲ್ಇಡಿ ಲೈಟಿಂಗ್, 18-ಇಂಚಿನ ಅಲಾಯ್ ವೀಲ್‌ಗಳು ಮತ್ತು ಫ್ಲಶ್ ಡೋರ್ ಹ್ಯಾಂಡಲ್‌ಗಳನ್ನು ಒಳಗೊಂಡಿವೆ.
-
ವಿಂಡ್ಸರ್ ಇವಿಯು ವುಡನ್ ಮತ್ತು ಕಂಚಿನ ಇನ್ಸರ್ಟ್ಸನೊಂದಿಗೆ ಸಂಪೂರ್ಣ ಕಪ್ಪು ಕ್ಯಾಬಿನ್ ಥೀಮ್ ಅನ್ನು ಪಡೆಯುತ್ತದೆ.
-
ವಿಂಡ್ಸರ್ ಇವಿಯಲ್ಲಿನ ಫೀಚರ್‌ಗಳು 15.6-ಇಂಚಿನ ಟಚ್‌ಸ್ಕ್ರೀನ್, 8.8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ಪನರೋಮಿಕ್ ಗ್ಲಾಸ್ ರೂಪ್ ಅನ್ನು ಒಳಗೊಂಡಿವೆ.
-
38 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಬಳಸುತ್ತದೆ ಮತ್ತು 331 km ವರೆಗೆ ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡುತ್ತದೆ.
-
ವಿಂಡ್ಸರ್ ಇವಿಯ ಪರಿಚಯಾತ್ಮಕ, ಎಕ್ಸ್ ಶೋರೂಂ ಬೆಲೆಯು 9.99 ಲಕ್ಷ ರೂ.ನಿಂದ ಪ್ರಾರಂಭವಾಗಲಿದೆ.
ಆನ್‌ಲೈನ್‌ನಲ್ಲಿ ಹಲವು ಟೀಸರ್‌ಗಳನ್ನು ಬಿಡುಗಡೆ ಮಾಡಿದ ನಂತರ, ಇದೀಗ ಎಮ್‌ಜಿ ವಿಂಡ್ಸರ್ ಇವಿಯನ್ನು ಅಂತಿಮವಾಗಿ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ, ಇದರ ಪರಿಚಯಾತ್ಮಕ, ಎಕ್ಸ್ ಶೋರೂಂ ಬೆಲೆಯು 9.99 ಲಕ್ಷ ರೂ.ನಿಂದ ಪ್ರಾರಂಭವಾಗಲಿದೆ. ವಿಂಡ್ಸರ್ ಇವಿಯು ಎಲೆಕ್ಟ್ರಿಕ್ ಕ್ರಾಸ್‌ಒವರ್ ಆಗಿದ್ದು, ಇದು ಎಮ್‌ಜಿಯ ಭಾರತೀಯ ಇವಿಗಳ ಪಟ್ಟಿಯಲ್ಲಿ ಕಾಮೆಟ್ ಇವಿ ಮತ್ತು ಜೆಡ್‌ಎಸ್ ಇವಿಯ ನಡುವೆ ಇರುತ್ತದೆ. ಇದರ ಬುಕಿಂಗ್ ಅಕ್ಟೋಬರ್ 3 ರಿಂದ ಪ್ರಾರಂಭವಾಗಲಿದ್ದು, ಅಕ್ಟೋಬರ್ 12 ರಿಂದ ಡೆಲಿವೆರಿಗಳನ್ನು ನಿಗದಿಪಡಿಸಲಾಗಿದೆ. ಎಮ್‌ಜಿಯು ಇದನ್ನು ಎಕ್ಸೈಟ್, ಎಕ್ಸ್‌ಕ್ಲೂಸಿವ್ ಮತ್ತು ಎಸೆನ್ಸ್ ಎಂಬ ಮೂರು ಆವೃತ್ತಿಗಳಲ್ಲಿ ನೀಡುತ್ತಿದೆ.
ವಿಂಡ್ಸರ್ ಇವಿಯು ಈಗಾಗಲೇ ಇಂಡೋನೇಷಿಯನ್ ಮಾರುಕಟ್ಟೆಯಲ್ಲಿ ವುಲಿಂಗ್ ಬ್ರಾಂಡ್ ಅಡಿಯಲ್ಲಿ ಕ್ಲೌಡ್ ಇವಿಯಾಗಿ ಲಭ್ಯವಿದೆ. ಈ ಇಂಡಿಯಾ-ಸ್ಪೆಕ್ ಎಮ್‌ಜಿ ವಿಂಡ್ಸರ್ ಇವಿ ಏನನ್ನು ನೀಡುತ್ತದೆ ಎಂಬುದನ್ನು ನೋಡೋಣ.
ಬಾಡಿಗೆ ಸೇವೆಯಾಗಿ ಬ್ಯಾಟರಿ ಲಭ್ಯ
ವಿಂಡ್ಸರ್ EV ಬಿಡುಗಡೆಯೊಂದಿಗೆ, ಎಮ್‌ಜಿ ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ಮಾಲೀಕತ್ವದ ಬಾಡಿಗೆ ಕಾರ್ಯಕ್ರಮವನ್ನು ಸಹ ಪರಿಚಯಿಸಿದೆ. ಇದರ ಮೂಲಕ, ಈ ಎಲೆಕ್ಟ್ರಿಕ್ ಕ್ರಾಸ್ಒವರ್ ಹೆಚ್ಚು ಕೈಗೆಟಕುವಂತಾಗಿದೆ ಮತ್ತು ಮುಂಗಡ ವೆಚ್ಚವನ್ನು ಇಲ್ಲಿ ನಿವಾರಿಸುವುದರಿಂದ ಗ್ರಾಹಕರು ಅದರ ಬಳಕೆಗೆ ಮಾತ್ರ ಪಾವತಿಸುತ್ತಾರೆ. ವಿಂಡ್ಸರ್ ಇವಿ ಪ್ರತಿ ಕಿ.ಮೀಗೆ 3.5 ರೂಗಳಲ್ಲಿ ಲಭ್ಯವಿರುತ್ತದೆ, ಇದು ICE (ಇಂಟರ್ನಲ್ ಕಂಬಸ್ಟಿಯನ್ ಎಂಜಿನ್) ಚಾಲಿತ ವಾಹನದ ಇಂಧನ ವೆಚ್ಚದ ಶೇಕಡಾ 40 ರಷ್ಟಿದೆ.
ಕ್ಲೀನ್ ವಿನ್ಯಾಸ, ಆದರೂ ಆಧುನಿಕವಾದ ಲುಕ್
ಎಮ್‌ಜಿ ವಿಂಡ್ಸರ್ ಇವಿ ಕ್ರಾಸ್ಒವರ್ ಬಾಡಿ ಸ್ಟೈಲ್ ಅನ್ನು ಹೊಂದಿದೆ ಮತ್ತು ಕ್ಲೀನ್, ಕಡಿಮೆ ವಿನ್ಯಾಸವನ್ನು ಹೊಂದಿದೆ. ಇದರ ಹೊರತಾಗಿಯೂ, ಇದು ಆಧುನಿಕ ಲುಕ್ ಅನ್ನು ಹೊಂದಿದೆ, ಮುಂಭಾಗ ಮತ್ತು ಹಿಂಭಾಗದಲ್ಲಿರುವ ಕನೆಕ್ಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಎಲ್‌ಇಡಿ ಟೈಲ್ ಲೈಟ್‌ಗಳಿಗೆ ನಾವಿಲ್ಲಿ ಧನ್ಯವಾದ ಹೇಳಲೇಬೇಕು. ಹೆಡ್‌ಲೈಟ್‌ಗಳನ್ನು ಬಂಪರ್‌ನಲ್ಲಿ ಇರಿಸಲಾಗಿದೆ, ಆದರೆ MG ಲೋಗೋವನ್ನು ಮಧ್ಯದಲ್ಲಿ ಕನೆಕ್ಟೆಡ್ ಡಿಆರ್‌ಎಲ್ ಸ್ಟ್ರಿಪ್‌ನ ಕೆಳಗೆ ಇರಿಸಲಾಗಿದೆ.
ಬದಿಗಳಲ್ಲಿ, ನೀವು ಗಮನಿಸುವ ಮೊದಲ ವಿಷಯವೆಂದರೆ ಅದರ ದೊಡ್ಡ 18-ಇಂಚಿನ ಏರೋಡೈನಾಮಿಕ್ ಶೈಲಿಯ ಅಲಾಯ್ ವೀಲ್‌ಗಳು, ಆದರೆ ಚಾರ್ಜಿಂಗ್ ಫ್ಲಾಪ್ ಅನ್ನು ಮುಂಭಾಗದ ಎಡ ಫೆಂಡರ್‌ನಲ್ಲಿ ಇರಿಸಲಾಗುತ್ತದೆ. ಅದರ ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳು ಮಾಡರ್ನ್ ಲುಕ್ ಅನ್ನು ನೀಡುತ್ತದೆ.
ವಿಂಡ್ಸರ್ ಇವಿಯು ಸ್ಟಾರ್‌ಬರ್ಸ್ಟ್ ಬ್ಲ್ಯಾಕ್, ಪರ್ಲ್ ವೈಟ್, ಕ್ಲೇ ಬೀಜ್ ಮತ್ತು ಟರ್ಕೋಯಿಸ್ ಗ್ರೀನ್ ಎಂಬ ನಾಲ್ಕು ಬಾಡಿ ಕಲರ್‌ನ ಆಯ್ಕೆಗಳಲ್ಲಿ ಲಭ್ಯವಿದೆ.
ಇದನ್ನು ಸಹ ಓದಿ: ಎಷ್ಟಿರಬಹುದು Hyundai Alcazar ಫೇಸ್‌ಲಿಫ್ಟ್ ಮೈಲೇಜ್? ಇಲ್ಲಿದೆ ಕ್ಲೇಮ್ ಮಾಡಿರುವ ಇಂಧನ ದಕ್ಷತೆ
ಕ್ಯಾಬಿನ್ ಮತ್ತು ಫೀಚರ್‌ಗಳು
ಒಳಭಾಗದಲ್ಲಿ, ಎಮ್‌ಜಿ ವಿಂಡ್ಸರ್ ಇವಿಯು ಸಂಪೂರ್ಣ ಕಪ್ಪು ಕ್ಯಾಬಿನ್ ಥೀಮ್ ಅನ್ನು ಹೊಂದಿದೆ, ಡ್ಯಾಶ್‌ಬೋರ್ಡ್ ಅನ್ನು ವುಡನ್ ಟ್ರಿಮ್‌ನಿಂದ ಅಲಂಕರಿಸಲಾಗಿದೆ, ಆದರೆ ಕ್ಯಾಬಿನ್ ಸುತ್ತಲೂ ಕಂಚಿನ ಎಕ್ಸೆಂಟ್‌ಗಳಿವೆ. ಇದು ಕಪ್ಪು ಲೆಥೆರೆಟ್ ಸೀಟ್ ಕವರ್‌ನೊಂದಿಗೆ ಬರುತ್ತದೆ ಮತ್ತು ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್ ಅನ್ನು ಲೆಥೆರೆಟ್‌ನಿಂದ ಸುತ್ತಿಡಲಾಗಿದೆ. ಇದರ ಹಿಂದಿನ ಸೀಟುಗಳು 135-ಡಿಗ್ರಿ ರಿಕ್ಲೈನಿಂಗ್ ಆಂಗಲ್ ಅನ್ನು ನೀಡುತ್ತವೆ ಮತ್ತು ಸೆಂಟರ್ ಆರ್ಮ್‌ರೆಸ್ಟ್‌ನೊಂದಿಗೆ ಬರುತ್ತವೆ.
ಎಮ್‌ಜಿ ತನ್ನ ಎಲೆಕ್ಟ್ರಿಕ್ ಕ್ರಾಸ್‌ಒವರ್ ಅನ್ನು 15.6-ಇಂಚಿನ ಟಚ್‌ಸ್ಕ್ರೀನ್‌ನೊಂದಿಗೆ ಸಜ್ಜುಗೊಳಿಸಿದೆ, ಇದು ಇಲ್ಲಿಯವರೆಗೆ ಭಾರತದಲ್ಲಿ MG ಕಾರಿನಲ್ಲಿ ನೀಡಲಾಗುತ್ತಿರುವ ಅತಿದೊಡ್ಡ ಸ್ಕ್ರೀನ್ ಆಗಿದೆ. ವಿಂಡ್ಸರ್ ಇವಿಯು 8.8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್, ಆಟೋಮ್ಯಾಟಿಕ್ ಎಸಿ, ಚಾಲಿತ ಡ್ರೈವರ್ ಸೀಟ್, ಚಾಲಿತ ಟೈಲ್‌ಗೇಟ್ ಮತ್ತು ಭಾರತ-ಸ್ಪೆಕ್ ಮಾಡೆಲ್‌ಗೆ ಎಕ್ಸ್‌ಕ್ಲೂಸಿವ್ ಆಗಿರುವ ಪ್ಯಾನರೋಮಿಕ್ ಗ್ಲಾಸ್ ಸನ್‌ರೂಫ್ ಅನ್ನು ಸಹ ಪಡೆಯುತ್ತದೆ.
ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮೂಲಕ ಪ್ರಯಾಣಿಕರ ಸುರಕ್ಷತೆಯನ್ನು ನೋಡಿಕೊಳ್ಳಲಾಗುತ್ತದೆ.
ಪವರ್‌ಟ್ರೈನ್ ವಿವರಗಳು
ಎಮ್‌ಜಿ ವಿಂಡ್ಸರ್ ಇವಿಯನ್ನು 38 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್‌ನೊಂದಿಗೆ ನೀಡಲಾಗುತ್ತದೆ. ಇದರ ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:
ಬ್ಯಾಟರಿ ಪ್ಯಾಕ್ |
38 ಕಿ.ವ್ಯಾಟ್ |
ಇಲೆಕ್ಟ್ರಿಕ್ ಮೋಟಾರ್‌ಗಳ ಸಂಖ್ಯೆ |
1 |
ಪವರ್ |
136 ಪಿಎಸ್ |
ಟಾರ್ಕ್ |
200 ಎನ್‌ಎಮ್ |
MIDC-ಕ್ಲೈಮ್ ಮಾಡಲಾದ ರೇಂಜ್ |
331 ಕಿ.ಮೀ |
ಚಾರ್ಜಿಂಗ್ ವಿವರಗಳು
ವಿಂಡ್ಸರ್ ಇವಿಯ ಚಾರ್ಜಿಂಗ್ ಆಯ್ಕೆಗಳು ಈ ಕೆಳಗಿನಂತಿವೆ:
ಚಾರ್ಜರ್ |
ಚಾರ್ಜಿಂಗ್ ಸಮಯ |
3.3 ಕಿ.ವ್ಯಾಟ್ ಎಸಿ ಚಾರ್ಜರ್ |
13.8 ಗಂಟೆಗಳು |
7.4 ಕಿ.ವ್ಯಾಟ್ ಎಸಿ ಫಾಸ್ಟ್ ಚಾರ್ಜರ್ |
6.5 ಗಂಟೆಗಳು |
50 ಕಿ.ವ್ಯಾಟ್ ಡಿಸಿ ಫಾಸ್ಟ್ ಚಾರ್ಜರ್ |
55 ನಿಮಿಷಗಳು |
ಕಾರು ಜಗತ್ತಿನಲ್ಲಿ ಮೊದಲ ಬಾರಿಗೆ, ಮೊದಲ ಸೆಟ್ ಗ್ರಾಹಕರು ವಿಂಡ್ಸರ್ ಇವಿಯ ಬ್ಯಾಟರಿ ಪ್ಯಾಕ್‌ಗೆ ಜೀವಮಾನದ ವ್ಯಾರಂಟಿಯನ್ನು ಪಡೆಯುತ್ತಾರೆ. ಅಲ್ಲದೆ, ಎಮ್‌ಜಿ ಮೂಲಕ eHUB ಅಪ್ಲಿಕೇಶನ್ ಮೂಲಕ ಚಾರ್ಜ್ ಮಾಡಿದರೆ ಗ್ರಾಹಕರು ಎಲ್ಲಾ ಸಾರ್ವಜನಿಕ ಚಾರ್ಜರ್‌ಗಳಲ್ಲಿ ಒಂದು ವರ್ಷದವರೆಗೆ ಉಚಿತ ಚಾರ್ಜಿಂಗ್ ಅನ್ನು ಪಡೆಯಬಹುದು.
ಪ್ರತಿಸ್ಪರ್ಧಿಗಳು
ಎಮ್‌ಜಿ ವಿಂಡ್ಸರ್ ಇವಿಯನ್ನು ಟಾಟಾ ನೆಕ್ಸಾನ್ ಇವಿ ಮತ್ತು ಮಹೀಂದ್ರಾ ಎಕ್ಸ್‌ಯುವಿ400 ಇವಿಗೆ ಪರ್ಯಾಯವಾಗಿ ಪರಿಗಣಿಸಬಹುದು. ಅದರ ಬೆಲೆಯನ್ನು ಪರಿಗಣಿಸಿದರೆ, ವಿಂಡ್ಸರ್ ಇವಿಯು ಟಾಟಾ ಪಂಚ್ ಇವಿ ಗೆ ಪ್ರತಿಸ್ಪರ್ಧಿಯಾಗಿದೆ.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ : ವಿಂಡ್ಸರ್ ಇವಿ ಆಟೋಮ್ಯಾಟಿಕ್