ಬಿಡುಗಡೆಗೆ ಮೊದಲೇ MG Windsor EVಯ ಆಫ್‌ಲೈನ್ ಬುಕಿಂಗ್‌ಗಳು ಪ್ರಾರಂಭ
ಎಂಜಿ ವಿಂಡ್ಸರ್ ಇವಿ ಗಾಗಿ samarth ಮೂಲಕ ಆಗಸ್ಟ್ 29, 2024 06:25 pm ರಂದು ಪ್ರಕಟಿಸಲಾಗಿದೆ
- 71 Views
- ಕಾಮೆಂಟ್ ಅನ್ನು ಬರೆಯಿರಿ
ಮುಂಬರುವ ಎಮ್‌ಜಿ ವಿಂಡ್ಸರ್ ಇವಿಯು ಟಾಟಾ ನೆಕ್ಸಾನ್ ಇವಿ ಮತ್ತು ಮಹೀಂದ್ರಾ ಎಕ್ಸ್‌ಯುವಿ400 ಇವಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ
-
MG ವಿಂಡ್ಸರ್ EV ವುಲಿಂಗ್ ಕ್ಲೌಡ್ EV ಯ ರೀಬ್ಯಾಡ್ಜ್ ಮಾಡಿದ ವರ್ಷನ್ ಆಗಿದೆ.
-
ದೃಢೀಕರಿಸಿದ ಫೀಚರ್ ಗಳಲ್ಲಿ ಪನರೋಮಿಕ್ ಗ್ಲಾಸ್ ರೂಫ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು 135 ಡಿಗ್ರಿಗಳವರೆಗೆ ರಿಕ್ಲೈನ್ ಆಗುವ ಹಿಂದಿನ ಸೀಟುಗಳು ಸೇರಿವೆ.
-
EV ಯು 15.6-ಇಂಚಿನ ಟಚ್‌ಸ್ಕ್ರೀನ್ ಮತ್ತು 8.8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇಯನ್ನು ಕೂಡ ಪಡೆಯುತ್ತದೆ.
-
ಅಂತರಾಷ್ಟ್ರೀಯ ಎಡಿಷನ್ ನಲ್ಲಿ, ಇದು 50.6 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ, ಮತ್ತು 136 PS ಮತ್ತು 200 Nm ಉತ್ಪಾದಿಸುವ ಏಕೈಕ ಮೋಟಾರ್‌ನೊಂದಿಗೆ ಜೋಡಿಸಲಾಗಿದೆ.
-
ಆರಂಭಿಕ ಬೆಲೆಯು ಸುಮಾರು ರೂ. 20 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ.
ಕೆಲವು ಆಯ್ದ MG ಡೀಲರ್‌ಶಿಪ್‌ಗಳು ಈಗ ಭಾರತದಲ್ಲಿ MG ಯ ಮೂರನೇ ಎಲೆಕ್ಟ್ರಿಕ್ ವಾಹನವಾಗಿರುವ ಹೊಸ MG ವಿಂಡ್ಸರ್ EV ಗಾಗಿ ಅನಧಿಕೃತವಾಗಿ ಆರ್ಡರ್ ಗಳನ್ನು ತೆಗೆದುಕೊಳ್ಳುತ್ತಿವೆ. ಈ ಎಲೆಕ್ಟ್ರಿಕ್ ಕ್ರಾಸ್‌ಒವರ್ ಅನ್ನು ಸೆಪ್ಟೆಂಬರ್ 11 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಮತ್ತು MG ತನ್ನ ಅಧಿಕೃತ ಹ್ಯಾಂಡಲ್ ಗಳಲ್ಲಿ ಅದರ ಟೀಸರ್ ಗಳನ್ನು ಬಿಡಲು ಪ್ರಾರಂಭಿಸಿದೆ. ವಿಂಡ್ಸರ್ EV ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಈಗಾಗಲೇ ಲಭ್ಯವಿರುವ ವುಲಿಂಗ್ ಕ್ಲೌಡ್ EVಯ ರೀಬ್ಯಾಡ್ಜ್ ಮಾಡಿರುವ ವರ್ಷನ್ ಆಗಿದೆ. ವಿಂಡ್ಸರ್ EV ಬಗ್ಗೆ ನಮ್ಮ ಬಳಿ ಲಭ್ಯವಿರುವ ವಿವರಗಳು ಇಲ್ಲಿವೆ.
ನಿರೀಕ್ಷಿಸಲಾಗಿರುವ ಫೀಚರ್ ಗಳು ಮತ್ತು ಸುರಕ್ಷತೆ
MG ತನ್ನ ಹೊಸ ಕಾರಿನ ಕೆಲವು ಪ್ರಮುಖ ಫೀಚರ್ ಗಳಾದ ಪನೋರಮಿಕ್ ಗ್ಲಾಸ್ ರೂಫ್, 135 ಡಿಗ್ರಿಗಳಷ್ಟು ರಿಕ್ಲೈನ್ ಆಗುವ ಹಿಂದಿನ ಸೀಟುಗಳು ಮತ್ತು ಕನೆಕ್ಟೆಡ್ ಕಾರ್ ಟೆಕ್ನಾಲಜಿ, ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಿರುವ 15.6-ಇಂಚಿನ ಟಚ್‌ಸ್ಕ್ರೀನ್‌ಗಳ ಬಗ್ಗೆ ಸುಳಿವು ನೀಡಿದೆ. ನಿರೀಕ್ಷಿಸಲಾಗಿರುವ ಇತರ ಫೀಚರ್ ಗಳಲ್ಲಿ 8.8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್, ಹಿಂಬದಿಯ ವೆಂಟ್ ಗಳೊಂದಿಗೆ ಆಟೋ AC, ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಮುಂಭಾಗದ ಸೀಟುಗಳು ಮತ್ತು ಪವರ್ಡ್ ಟೈಲ್‌ಗೇಟ್ ಸೇರಿವೆ.
ಸುರಕ್ಷತೆಯ ವಿಷಯದಲ್ಲಿ, ಇದು ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 360-ಡಿಗ್ರಿ ಕ್ಯಾಮೆರಾ ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳನ್ನು (ADAS) ಪಡೆಯುವ ನಿರೀಕ್ಷೆಯಿದೆ.
ಇದನ್ನು ಕೂಡ ಓದಿ: ದೊಡ್ಡದಾದ ಟಚ್‌ಸ್ಕ್ರೀನ್ ಸಿಸ್ಟಮ್‌ನೊಂದಿಗೆ ಬರಲಿದೆ MG Windsor EV !
ಪವರ್‌ಟ್ರೇನ್
ಇಂಡೋನೇಷ್ಯಾದಲ್ಲಿ, MG ವಿಂಡ್ಸರ್ EV 50.6 kWh ಬ್ಯಾಟರಿಯನ್ನು ಪಡೆಯುತ್ತದೆ, ಮತ್ತು ಇದನ್ನು 136 PS ಮತ್ತು 200 Nm ಅನ್ನು ಉತ್ಪಾದಿಸುವ ಇ-ಮೋಟರ್‌ಗೆ ಜೋಡಿಸಲಾಗಿದೆ. ಇಂಡೋನೇಷಿಯನ್ ಮಾರುಕಟ್ಟೆಯಲ್ಲಿ ಕ್ಲೌಡ್ EV 460 ಕಿಮೀಗಳ ಕ್ಲೇಮ್ ಮಾಡಿರುವ ರೇಂಜ್ ಅನ್ನು ನೀಡುತ್ತದೆ.
ಇತರ ದೇಶಗಳಲ್ಲಿ, ನೀವು 37.9 kWh ಬ್ಯಾಟರಿ ಪ್ಯಾಕ್ ಅನ್ನು ಕೂಡ ಆಯ್ಕೆ ಮಾಡಬಹುದು, ಇದು 360 ಕಿಮೀಗಳ ಕ್ಲೇಮ್ ಮಾಡಿರುವ ರೇಂಜ್ ಅನ್ನು ನೀಡುತ್ತದೆ. ಭಾರತದಲ್ಲಿ MG ಯಾವ ವರ್ಷನ್ ಅನ್ನು ನೀಡಲಿದೆ ಎಂದು ನಮಗೆ ಇನ್ನೂ ತಿಳಿದಿಲ್ಲ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
MG ವಿಂಡ್ಸರ್ EV ಯ ಬೆಲೆಯು ರೂ 20 ಲಕ್ಷದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್-ಶೋರೂಮ್), ಇದು MG ZS EV ಗೆ ಹೋಲಿಸಿದರೆ ಹೆಚ್ಚು ಕೈಗೆಟುಕುವ ಬೆಲೆಯ ಪರ್ಯಾಯ ಆಯ್ಕೆಯಾಗಲಿದೆ ಮತ್ತು ಟಾಟಾ ನೆಕ್ಸಾನ್ EV, ಮಹೀಂದ್ರಾ XUV400 EV ಮತ್ತು ಟಾಟಾ ಕರ್ವ್ ನ ಕೆಲವು ವೇರಿಯಂಟ್ ಗಳಿಗೆ ನೇರ ಪ್ರತಿಸ್ಪರ್ಧಿಯಾಗಲಿದೆ.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಅಪ್ಡೇಟ್ ಗಳಿಗಾಗಿ ಕಾರ್ದೇಖೋ ಅವರ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ