ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತ ಹೆಮ್ಮೆಯ ಭಾರತೀಯರಿಗೆ ಸಿಗಲಿದೆ MG Windsor EV
ZS EV ಮತ್ತು ಕಾಮೆಟ್ EV ನಂತರ MG ವಿಂಡ್ಸರ್ EV ಭಾರತದಲ್ಲಿ ಬ್ರಿಟಿಷ್ ಕಾರು ತಯಾರಕರ ಮೂರನೇ ಎಲೆಕ್ಟ್ರಿಕ್ ವಾಹನವಾಗಲಿದೆ
JSW ಗ್ರೂಪ್‌ನ ಅಧ್ಯಕ್ಷರಾದ ಸಜ್ಜನ್ ಜಿಂದಾಲ್ ಅವರು ಪ್ಯಾರಿಸ್ 2024 ರ ಒಲಿಂಪಿಕ್ಸ್‌ನಲ್ಲಿ ಪ್ರತಿ ಭಾರತೀಯ ಪದಕ ವಿಜೇತರು MG ವಿಂಡ್ಸರ್ EV ಅನ್ನು ಉಡುಗೊರೆಯಾಗಿ ಪಡೆಯಲಿದ್ದಾರೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಒಲಂಪಿಕ್ಸ್ ನಲ್ಲಿ ಪದಕ ಗೆದ್ದಿರುವ ಕ್ರೀಡಾಪಟುಗಳ ಸಾಧನೆಗಳನ್ನು ಗೌರವಿಸಲು MG ಮೋಟಾರ್ ಇಂಡಿಯಾ ಮತ್ತು JSW ಗ್ರೂಪ್ ಇದನ್ನು ಒಟ್ಟಾಗಿ ನೀಡುತ್ತಿವೆ.
ಒಲಿಂಪಿಕ್ಸ್‌ನಲ್ಲಿ ಭಾರತದ ಸಾಧನೆ
2024ರ ಪ್ಯಾರಿಸ್ ಒಲಿಂಪಿಕ್ಸ್ ಇದೀಗ ನಡೆಯುತ್ತಿದ್ದು, ಭಾರತೀಯ ಕ್ರೀಡಾಪಟುಗಳು ಈಗಾಗಲೇ ಮೂರು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಪದಕಗಳ ಸಂಖ್ಯೆಯು ಕೆಲವೇ ದಿನಗಳಲ್ಲಿ ಹೆಚ್ಚುವ ನಿರೀಕ್ಷೆಯಿದ್ದು, MG ವಿಂಡ್ಸರ್ EV ಯನ್ನು ನೀಡುವ ಮೂಲಕ ದೇಶಕ್ಕಾಗಿ ಆಡುತ್ತಿರುವ ಕ್ರೀಡಾಪಟುಗಳ ಕಠಿಣ ಪರಿಶ್ರಮ ಮತ್ತು ಯಶಸ್ಸನ್ನು ಗೌರವಿಸಲಾಗುತ್ತಿದೆ.
MG ಯ ಹೊಸ ಕ್ರಾಸ್ಒವರ್ EV ಅನ್ನು ಇಂಗ್ಲೆಂಡ್‌ನ ವಿಂಡ್ಸರ್ ಕ್ಯಾಸಲ್‌ನಿಂದ ಪ್ರೇರಿತಗೊಂಡು 'ವಿಂಡ್ಸರ್' ಎಂದು ಕರೆಯಲಾಗುವುದು ಎಂಬ ಸುದ್ದಿಯ ಬಂದ ಸ್ವಲ್ಪ ಸಮಯದಲ್ಲೇ MG ಚೇರ್ಮನ್ ಮತ್ತು MD ಇದನ್ನು ಟ್ವೀಟ್ ಮಾಡಿದ್ದಾರೆ. ವಿಂಡ್ಸರ್ EVಯು ವಿದೇಶದಲ್ಲಿ ಮಾರಾಟವಾಗುತ್ತಿರುವ ವುಲಿಂಗ್ ಕ್ಲೌಡ್ EVಯನ್ನು ಆಧರಿಸಿದೆ. ಭಾರತದಲ್ಲಿ ಬರಲಿರುವ ಈ EV ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲಾ ವಿವರಗಳು ಇಲ್ಲಿದೆ:
ಇದನ್ನು ಕೂಡ ಓದಿ: ಭಾರತದಲ್ಲಿ ಲಾಂಚ್ ಆಗಲಿದೆ MG Cloud EV: ಇಲ್ಲಿದೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ 5 ವಿಷಯಗಳು
MG ವಿಂಡ್ಸರ್ EV: ಸಣ್ಣ ಪರಿಚಯ
MG ವಿಂಡ್ಸರ್ ಭಾರತದಲ್ಲಿ MG ಯ ಮೂರನೇ ಎಲೆಕ್ಟ್ರಿಕ್ ವಾಹನವಾಗಿದ್ದು, ಇದನ್ನು MG ಕಾಮೆಟ್ EV ಮತ್ತು MG ZS EV ನಡುವೆ ಇರಿಸಲಾಗುವುದು. ಭಾರತದಲ್ಲಿ ಬರಲಿರುವ ವರ್ಷನ್ ನ ಸ್ಪೆಸಿಫಿಕೇಷನ್ ಗಳು ನಮಗೆ ಇನ್ನೂ ತಿಳಿದಿಲ್ಲ, ಆದರೆ ಇದು ಇಂಡೋನೇಷ್ಯಾದಲ್ಲಿ ಮಾರಾಟವಾಗುತ್ತಿರುವ ವರ್ಷನ್ ನಲ್ಲಿರುವ ಎಲೆಕ್ಟ್ರಿಕ್ ಪವರ್‌ಟ್ರೇನ್ ಅನ್ನು ಪಡೆಯುವ ಸಾಧ್ಯತೆಯಿದೆ.
ಇದು 136 PS ಮತ್ತು 200 Nm ಟಾರ್ಕ್ ನೀಡುವ ಏಕೈಕ ಮೋಟರ್ ನೊಂದಿಗೆ 50.6 kWh ಬ್ಯಾಟರಿಯನ್ನು ಪಡೆಯಬಹುದು. ಇಂಡೋನೇಷ್ಯಾ ಮಾಡೆಲ್ ಚೀನಾ ಲೈಟ್ ಡ್ಯೂಟಿ ವೆಹಿಕಲ್ ಟೆಸ್ಟ್ ಸೈಕಲ್ (CLTC) ಆಧಾರದ ಮೇಲೆ 460 ಕಿಮೀ ರೇಂಜ್ ಅನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಆದರೆ ಭಾರತದಲ್ಲಿ ವಾಹನಗಳನ್ನು ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಟೆಸ್ಟ್ ಮಾಡುವ ಕಾರಣ ಈ ರೇಂಜ್ ಬದಲಾಗಬಹುದು.
ಇತರ MG ಕಾರುಗಳಂತೆ MG ವಿಂಡ್ಸರ್ ಕೂಡ ಹಲವಾರು ಫೀಚರ್ ಗಳೊಂದಿಗೆ ಬರಲಿದೆ. 15.6-ಇಂಚಿನ ಟಚ್‌ಸ್ಕ್ರೀನ್, 8.8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಪವರ್-ಅಡ್ಜಸ್ಟ್ ಮಾಡಬಹುದಾದ ಮುಂಭಾಗದ ಸೀಟುಗಳಂತಹ ಫೀಚರ್ ಗಳನ್ನು ಇಂಡಿಯಾ-ಸ್ಪೆಕ್ ಮಾಡೆಲ್‌ನಲ್ಲಿ ನೀಡುವ ನಿರೀಕ್ಷೆಯಿದೆ. ಸುರಕ್ಷತಾ ಕಿಟ್ ನಲ್ಲಿ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆಯಬಹುದು. ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ (ADAS) ಅನ್ನು ಕೂಡ ನೀಡುವ ಸಾಧ್ಯತೆಯಿದೆ.
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
MG ವಿಂಡ್ಸರ್ EV ಮಾರಾಟವು ಹಬ್ಬಗಳ ಸಮಯದಲ್ಲಿ ಶುರುವಾಗಬಹುದು, ಮತ್ತು ಇದರ ಬೆಲೆಯು ರೂ 20 ಲಕ್ಷದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್ ಶೋರೂಂ). ಇದು MG ZS EV ಗೆ ಹೋಲಿಸಿದರೆ ಕಡಿಮೆ ಬೆಲೆಯ ಆಯ್ಕೆಯಾಗಲಿದೆ ಮತ್ತು ಟಾಟಾ ನೆಕ್ಸಾನ್ EV ಮತ್ತು ಮಹೀಂದ್ರಾ XUV400 EV ಗೆ ಹೋಲಿಸಿದರೆ ಹೆಚ್ಚು ಪ್ರೀಮಿಯಂ ಆಯ್ಕೆಯಾಗಲಿದೆ.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್ ಗಳನ್ನು ಪಡೆಯಲು ಕಾರ್ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.