Login or Register ಅತ್ಯುತ್ತಮ CarDekho experience ಗೆ
Login

MG Windsor EV ವರ್ಸಸ್‌ Tata Nexon EV: ಯಾವುದು ಬೆಸ್ಟ್‌ ? ಇಲ್ಲಿದೆ ಹೋಲಿಕೆ

published on ಸೆಪ್ಟೆಂಬರ್ 18, 2024 09:32 pm by dipan for ಎಂಜಿ windsor ev

ಎಮ್‌ಜಿ ವಿಂಡ್ಸರ್ ಇವಿಯು ಟಾಟಾ ನೆಕ್ಸಾನ್ ಇವಿಗೆ ಸ್ಪರ್ಧೆಯನ್ನು ಒಡ್ಡುತ್ತದೆ, ಮುಖ್ಯವಾಗಿ ಅದರ ಪವರ್‌ಟ್ರೇನ್ ಮತ್ತು ಫೀಚರ್‌ಗಳ ಸೆಟ್‌ನಿಂದ. ಹಾಗಾದರೆ ಈ ಎರಡರಲ್ಲಿ ಯಾವುದು ಉತ್ತಮವಾಗಿದೆ ಎಂಬುದನ್ನು ವಿವರವಾಗಿ ತಿಳಿಯೋಣ

ಎಮ್‌ಜಿ ವಿಂಡ್ಸರ್ ಇವಿಯನ್ನು ನಮ್ಮ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ, ಭಾರತದಾದ್ಯಂತ ಇದರ ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆಗಳು 9.99 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ. ಅದರ ಎಲೆಕ್ಟ್ರಿಕ್ ವಿಶೇಷಣಗಳು, ಒಂದೇ ರೀತಿಯ ಬೆಲೆಗಳು ಮತ್ತು ಫೀಚರ್‌ಗಳನ್ನು ಗಮನಿಸುವಾಗ, ಇದು ಜನಪ್ರಿಯ ಟಾಟಾ ನೆಕ್ಸಾನ್ ಇವಿ ವಿರುದ್ಧ ಸ್ಪರ್ಧಿಸುತ್ತದೆ. ಆದ್ದರಿಂದ ಎರಡರ ನಡುವೆ ಯಾವುದನ್ನು ಆರಿಸಿಕೊಳ್ಳಬೇಕೆಂಬುದರ ಬಗ್ಗೆ ನೀವು ಗೊಂದಲಕ್ಕೊಳಗಾಗಿದ್ದರೆ, ಈ ಎರಡು ಇವಿಗಳು ಹೇಗೆ ಹೋಲಿಕೆಯಾಗುತ್ತವೆ ಎಂಬುದು ಇಲ್ಲಿದೆ:

ಬೆಲೆಗಳು

ಮೊಡೆಲ್‌

ಬೆಲೆ

ಎಂಜಿ ವಿಂಡ್ಸರ್ ಇವಿ

9.99 ಲಕ್ಷ ರೂ.ನಿಂದ*

ಟಾಟಾ ನೆಕ್ಸಾನ್‌ ಇವಿ

12.49 ಲಕ್ಷ ರೂ.ನಿಂದ 16.49 ಲಕ್ಷ ರೂ.

*ಸಂಪೂರ್ಣ ವೇರಿಯೆಂಟ್‌ವಾರು ಬೆಲೆ ಪಟ್ಟಿಯನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು. ಎಮ್‌ಜಿ ವಿಂಡ್ಸರ್ ಇವಿಯ ಯ ಬ್ಯಾಟರಿ ಪ್ಯಾಕ್ ಅನ್ನು ಪ್ರತಿ ಕಿ.ಮೀ.ಗೆ 3.5 ರೂ.ಗಳ ಚಂದಾದಾರಿಕೆಯ ಆಧಾರದ ಮೇಲೆ ನೀಡುತ್ತಿದೆ, ಆದರೆ ತಿಂಗಳಿಗೆ 1,500 ಕಿ.ಮೀ.ವರೆಗಿನ ಮೊತ್ತವನ್ನು ಕಡ್ಡಾಯವಾಗಿ ಪಾವತಿಸಬೇಕಾಗುತ್ತದೆ.

ಇವುಗಳು ಭಾರತದಾದ್ಯಂತದ ಎಕ್ಸ್ ಶೋರೂಂ ಬೆಲೆಗಳಾಗಿವೆ

ಗಾತ್ರಗಳು

ಎಂಜಿ ವಿಂಡ್ಸರ್‌ ಇವಿ

ಟಾಟಾ ನೆಕ್ಸಾನ್ ಇವಿ

ವ್ಯತ್ಯಾಸ

ಉದ್ದ

4,295 ಮಿ.ಮೀ

3,994 ಮಿ.ಮೀ

+301 ಮಿಮೀ

ಅಗಲ

1,850 ಮಿಮೀ (ORVMಗಳನ್ನು ಹೊರತುಪಡಿಸಿ)

1,811 ಮಿ.ಮೀ

+39 ಮಿಮೀ

ಎತ್ತರ

1,677 ಮಿ.ಮೀ

1,616 ಮಿ.ಮೀ

+61 ಮಿಮೀ

ವೀಲ್‌ ಬೇಸ್‌

2,700 ಮಿ.ಮೀ

2,498 ಮಿ.ಮೀ

+202 ಮಿಮೀ

ಬೂಟ್ ಸ್ಪೇಸ್

604 ಲೀಟರ್ ವರೆಗೆ

350 ಲೀಟರ್

+254 ಲೀಟರ್ ವರೆಗೆ

ಎಮ್‌ಜಿ ವಿಂಡ್ಸರ್ ಇವಿಯ ಉದ್ದವು 4 ಮಿ.ಮೀ.ಗಿಂತಲೂ ಹೆಚ್ಚಿರುವುದರಿಂದ, ಇದು ಪ್ರತಿ ಆಯಾಮದಲ್ಲಿ ಟಾಟಾ ನೆಕ್ಸಾನ್ ಇವಿಗಿಂತ ದೊಡ್ಡ ಕೊಡುಗೆಯಾಗಿದೆ. ಇದು ಸುಮಾರು 300 ಮಿ.ಮೀ. ಉದ್ದವಾಗಿದೆ ಮತ್ತು 202 ಮಿ.ಮೀ. ಉದ್ದದ ವೀಲ್‌ಬೇಸ್ ಅನ್ನು ಸಹ ಹೊಂದಿದೆ. ಹೆಚ್ಚುವರಿಯಾಗಿ, ವಿಂಡ್ಸರ್ ಇವಿ ನೆಕ್ಸಾನ್ ಇವಿಗಿಂತ ಹೆಚ್ಚಿನ ಬೂಟ್ ಜಾಗವನ್ನು ನೀಡುತ್ತದೆ.

ಬ್ಯಾಟರಿ ಪ್ಯಾಕ್, ಎಲೆಕ್ಟ್ರಿಕ್ ಮೋಟಾರ್ ಮತ್ತು ರೇಂಜ್

ಎಂಜಿ ವಿಂಡ್ಸರ್‌ ಇವಿ

ಟಾಟಾ ನೆಕ್ಸಾನ್ ಇವಿ

ಬ್ಯಾಟರಿ ಪ್ಯಾಕ್‌

38 ಕಿ.ವ್ಯಾಟ್‌

30 ಕಿ.ವ್ಯಾಟ್‌

40.5 ಕಿ.ವ್ಯಾಟ್‌

ಎಲೆಕ್ಟ್ರಿಕ್ ಮೋಟರ್‌ಗಳ ಸಂಖ್ಯೆ

1

1

1

ಪವರ್‌

136 ಪಿಎಸ್‌

129 ಪಿಎಸ್‌

145 ಪಿಎಸ್‌

ಟಾರ್ಕ್

200 ಎನ್‌ಎಮ್‌

215 ಎನ್‌ಎಮ್‌

215 ಎನ್‌ಎಮ್‌

MIDC-ಕ್ಲೈಮ್ ಮಾಡಿದ ರೇಂಜ್‌

331 ಕಿ.ಮೀ.

275 ಕಿ.ಮೀ*

390 ಕಿ.ಮೀ*

*MIDC ಭಾಗ 1 + ಭಾಗ 2 ಸೈಕಲ್‌ನ ಪ್ರಕಾರ

ಎಮ್‌ಜಿ ವಿಂಡ್ಸರ್‌ ಇವಿಯು ಒಂದೇ 38 ಕಿ.ವ್ಯಾಟ್‌ ಬ್ಯಾಟರಿ ಆಯ್ಕೆಯೊಂದಿಗೆ ಬರುತ್ತದೆ, ಆದರೆ ಟಾಟಾ ನೆಕ್ಸಾನ್‌ ಇವಿ ಎರಡು ನೀಡುತ್ತದೆ: 40.5 ಕಿ.ವ್ಯಾಟ್‌ ಬ್ಯಾಟರಿಯೊಂದಿಗೆ ಲಾಂಗ್‌ ರೇಂಜ್‌ ಆವೃತ್ತಿ ಮತ್ತು 30 ಕಿ.ವ್ಯಾಟ್‌ ಬ್ಯಾಟರಿಯೊಂದಿಗೆ ಮಿಡ್‌ ರೇಂಜ್‌ನ ಆವೃತ್ತಿ. ವಿಂಡ್ಸರ್ ಇವಿಗೆ ಹೋಲಿಸಿದರೆ ಲಾಂಗ್‌ ರೇಂಜ್‌ನ ನೆಕ್ಸಾನ್‌ ಇವಿ ಹೆಚ್ಚಿನ ಕ್ಲೈಮ್ ರೇಂಜ್‌ ಅನ್ನು ಹೊಂದಿದೆ ಮತ್ತು ಹೆಚ್ಚು ಶಕ್ತಿಶಾಲಿ ಎಲೆಕ್ಟ್ರಿಕ್ ಮೋಟರ್ ಹೊಂದಿದೆ. ನೆಕ್ಸಾನ್‌ ಇವಿಯ ದೊಡ್ಡ ಬ್ಯಾಟರಿ ಪ್ಯಾಕ್‌ನಲ್ಲಿ ಕ್ಲೈಮ್ ಮಾಡಲಾದ ರೇಂಜ್‌ ಎಮ್‌ಜಿ ಇವಿಗಿಂತ ಹೆಚ್ಚಾಗಿರುತ್ತದೆ.

ಇದನ್ನು ಸಹ ಗಮನಿಸಿ:ಬ್ರೇಕಿಂಗ್: ಭಾರತದಲ್ಲಿ ಕಾರುಗಳನ್ನು ತಯಾರಿಸಲು ವಾಪಾಸ್ ಬರುತ್ತಿರುವ Ford

ಫೀಚರ್‌ಗಳು

ಎಂಜಿ ವಿಂಡ್ಸರ್‌ ಇವಿ

ಟಾಟಾ ನೆಕ್ಸಾನ್ ಇವಿ

ಎಕ್ಸ್‌ಟೀರಿಯರ್‌

  • ಆಟೋ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು

  • ಕನೆಕ್ಟೆಡ್‌ ಎಲ್ಇಡಿ ಡಿಆರ್‌ಎಲ್‌ಗಳು

  • ಎಲ್ಇಡಿ ಕಾರ್ನರಿಂಗ್ ಲ್ಯಾಂಪ್‌ಗಳು

  • ಕನೆಕ್ಟೆಡ್‌ ಎಲ್‌ಇಡಿ ಟೈಲ್‌ಲೈಟ್‌ಗಳು

  • ಎಲ್ಇಡಿ ಹಿಂದಿನ ಫಾಗ್‌ ಲ್ಯಾಂಪ್‌ಗಳು

  • 18-ಇಂಚಿನ ಡ್ಯುಯಲ್ ಟೋನ್ ಅಲಾಯ್‌ ವೀಲ್‌ಗಳು

  • ಫ್ಲಶ್ ಡೋರ್ ಹ್ಯಾಂಡಲ್‌ಗಳು

  • ಆಟೋ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು

  • ಕನೆಕ್ಟೆಡ್‌ ಎಲ್ಇಡಿ ಡಿಆರ್‌ಎಲ್‌ಗಳು

  • ಕನೆಕ್ಟೆಡ್‌ ಎಲ್‌ಇಡಿ ಟೈಲ್‌ಲೈಟ್‌ಗಳು

  • ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಟೈಲ್ ಲೈಟ್‌ಗಳೊಂದಿಗೆ ವೆಲ್‌ಕಮ್‌ ಮತ್ತು ಗುಡ್‌ಬೈ ಫಂಕ್ಷನ್‌ಗಳು

  • 16-ಇಂಚಿನ ಡ್ಯುಯಲ್-ಟೋನ್ ಅಲಾಯ್‌ ವೀಲ್‌ಗಳು

ಇಂಟಿರಿಯರ್‌

  • ವ್ಯತಿರಿಕ್ತವಾಗಿ ಗೋಲ್ಡ್‌ ಮತ್ತು ಕಂಚಿನ ಬಣ್ಣದ ಹೈಲೈಟ್ಸ್‌ನೊಂದಿಗೆ ಕಪ್ಪು ಲೆಥೆರೆಟ್ ಸೀಟ್ ಕವರ್‌

  • 60:40 ಸ್ಪ್ಲಿಟ್-ಫೋಲ್ಡ್‌ ಮಾಡಬಹುದಾದ ಹಿಂದಿನ ಸೀಟುಗಳು

  • 135-ಡಿಗ್ರಿ ಒರಗಿರುವ ಹಿಂದಿನ ಸೀಟುಗಳು

  • 256-ಬಣ್ಣದ ಆಂಬಿಯೆಂಟ್ ಲೈಟಿಂಗ್

  • ಮುಂಭಾಗ ಮತ್ತು ಹಿಂದಿನ ಸೀಟಿನ ಪ್ರಯಾಣಿಕರಿಗೆ ಟೈಪ್-ಸಿ USB ಚಾರ್ಜಿಂಗ್ ಪೋರ್ಟ್‌ಗಳು

  • ಬಹು ಕ್ಯಾಬಿನ್ ಥೀಮ್‌ಗಳು (ಆಯ್ಕೆ ಮಾಡಿದ ಆವೃತ್ತಿಯನ್ನು ಆಧರಿಸಿ)

  • ಲೆಥೆರೆಟ್ ಸೀಟ್ ಕವರ್‌

  • ಲೆದರ್‌ನಿಂದ ಸುತ್ತಿದ ಸ್ಟೀರಿಂಗ್ ವೀಲ್

  • 2-ಸ್ಪೋಕ್ ಸ್ಟೀರಿಂಗ್ ವೀಲ್

  • ಆಂಬಿಯೆಂಟ್ ಲೈಟಿಂಗ್

  • ಮುಂಭಾಗ ಮತ್ತು ಹಿಂಭಾಗದಲ್ಲಿ 45W ಟೈಪ್-ಸಿ ಫಾಸ್ಟ್ ಚಾರ್ಜರ್‌ಗಳು

ಸೌಕರ್ಯ ಮತ್ತು ಸೌಲಭ್ಯ

  • 8.8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ

  • ಮುಂಭಾಗದಲ್ಲಿ ವೆಂಟಿಲೇಟೆಡ್‌ ಸೀಟ್‌ಗಳು

  • PM2.5 ಏರ್ ಫಿಲ್ಟರ್

  • ಕ್ರೂಸ್ ಕಂಟ್ರೋಲ್

  • 6-ವೇ ಪವರ್ ಹೊಂದಾಣಿಕೆಯ ಡ್ರೈವರ್ ಸೀಟ್

  • ಹಿಂಭಾಗದ ವೆಂಟ್ಸ್‌ನೊಂದಿಗೆ ಆಟೋ ಎಸಿ

  • ವೈರ್‌ಲೆಸ್ ಫೋನ್ ಚಾರ್ಜರ್

  • ಪವರ್-ಫೋಲ್ಡಿಂಗ್ ಫಂಕ್ಷನ್‌ನೊಂದಿಗೆ ಎಲೆಕ್ಟ್ರಿಕಲ್ ಹೊಂದಾಣಿಕೆ ಮತ್ತು ಫೋಲ್ಡೆಬಲ್‌ ORVM ಗಳು

  • ಪನೋರಮಿಕ್ ಗ್ಲಾಸ್‌ ರೂಫ್‌

  • 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ

  • ಸಿಂಗಲ್‌ ಪ್ಯಾನ್‌ ಸನ್‌ರೂಫ್

  • ಹಿಂಭಾಗದ ವೆಂಟ್ಸ್‌ನೊಂದಿಗೆ ಆಟೋ ಎಸಿ

  • ವೈರ್‌ಲೆಸ್ ಫೋನ್ ಚಾರ್ಜರ್

  • ಮುಂಭಾಗದಲ್ಲಿ ವೆಂಟಿಲೇಟೆಡ್‌ ಸೀಟ್‌ಗಳು

  • ಕ್ರೂಸ್ ಕಂಟ್ರೋಲ್

  • ವಾಹನದಿಂದ ವಾಹನಕ್ಕೆ ಚಾರ್ಜಿಂಗ್

  • ವಾಹನದಿಂದ ಬೇರೆ ಡಿವೈಸ್‌ಗೆ ಲೋಡ್

ಇಂಫೋಟೈನ್‌ಮೆಂಟ್‌

  • 15.6-ಇಂಚಿನ ಟಚ್‌ಸ್ಕ್ರೀನ್

  • ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ

  • 9-ಸ್ಪೀಕರ್ ಇನ್ಫಿನಿಟಿ ಸೌಂಡ್ ಸಿಸ್ಟಮ್

  • ಕನೆಕ್ಟೆಡ್‌ ಕಾರ್ ಟೆಕ್

  • 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್

  • ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ

  • 9-ಸ್ಪೀಕರ್ ಜೆಬಿಎಲ್‌ ಸೌಂಡ್ ಸಿಸ್ಟಮ್

  • Arcade.ev ಆಪ್ ಸ್ಟೋರ್

ಸುರಕ್ಷತೆ

  • 6 ಏರ್‌ಬ್ಯಾಗ್‌ಗಳು

  • ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್‌

  • 360 ಡಿಗ್ರಿ ಕ್ಯಾಮೆರಾ

  • ಹಿಂದಿನ ಪಾರ್ಕಿಂಗ್ ಸೆನ್ಸಾರ್‌ಗಳು

  • ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS)

  • ISOFIX ಚೈಲ್ಡ್ ಸೀಟ್ ಮೌಂಟ್‌ಗಳು

  • ಹಿಲ್-ಸ್ಟಾರ್ಟ್ ಅಸಿಸ್ಟ್

  • ಬೆಟ್ಟ-ಇಳಿತ ನಿಯಂತ್ರಣ

  • ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು

  • ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್

  • ಮಳೆ-ಸಂವೇದಿ ವೈಪರ್‌ಗಳು

  • ಹಿಂಭಾಗದ ಡಿಫಾಗರ್

  • 6 ಏರ್‌ಬ್ಯಾಗ್‌ಗಳು

  • ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್‌

  • ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS)

  • ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್

  • ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು

  • ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು

  • ಬ್ಲೈಂಡ್ ವ್ಯೂ ಮಾನಿಟರ್ ಜೊತೆಗೆ 360-ಡಿಗ್ರಿ ಕ್ಯಾಮರಾ

  • ಎಮ್‌ಜಿ ವಿಂಡ್ಸರ್ ಇವಿಯು ದೊಡ್ಡದಾದ 18-ಇಂಚಿನ ಅಲಾಯ್‌ ವೀಲ್‌ಗಳು ಮತ್ತು ಫ್ಲಶ್-ಮಾದರಿಯ ಡೋರ್ ಹ್ಯಾಂಡಲ್‌ಗಳನ್ನು ಹೊಂದಿದೆ, ಆದರೆ ಟಾಟಾ ನೆಕ್ಸಾನ್ ಇವಿಯು 16-ಇಂಚಿನ ಅಲಾಯ್‌ ವೀಲ್‌ಗಳನ್ನು ಹೊಂದಿದೆ.

  • ಇಲ್ಲಿರುವ ಎರಡೂ ಎಲೆಕ್ಟ್ರಿಕ್ ಕೊಡುಗೆಗಳು ಲೆಥೆರೆಟ್ ಕವರ್‌ ಅನ್ನು ಹೊಂದಿವೆ, ಆದರೆ ವಿಂಡ್ಸರ್ ಇವಿಯು ಕಪ್ಪು ಇಂಟಿರಿಯರ್‌ ಥೀಮ್ ಅನ್ನು ಹೊಂದಿದೆ, ಆದರೆ ನೆಕ್ಸಾನ್‌ ಇವಿಯ ಇಂಟಿರಿಯರ್‌ ಬಣ್ಣವು ಆಯ್ಕೆಮಾಡಿದ ಆವೃತ್ತಿಯನ್ನು ಅವಲಂಬಿಸಿ ಬದಲಾಗುತ್ತದೆ.

  • ವಿಂಡ್ಸರ್ ಇವಿಯು ಪನರೋಮಿಕ್‌ ಗ್ಲಾಸ್‌ ರೂಫ್‌ ಅನ್ನು ಒಳಗೊಂಡಿದೆ, ಆದರೆ ನೆಕ್ಸಾನ್ ಇವಿ ಸಿಂಗಲ್ ಪೇನ್ ಸನ್‌ರೂಫ್ ಅನ್ನು ಹೊಂದಿದೆ.

  • ವಿಂಡ್ಸರ್ ಇವಿಯು 15.6-ಇಂಚಿನ ಟಚ್‌ಸ್ಕ್ರೀನ್ ಅನ್ನು ಹೊಂದಿದೆ, ಆದರೆ ನೆಕ್ಸನ್ ಇವಿ ಸ್ವಲ್ಪ ಚಿಕ್ಕದಾದ 12.3-ಇಂಚಿನ ಟಚ್‌ಸ್ಕ್ರೀನ್ ಅನ್ನು ಹೊಂದಿದೆ. ಎರಡೂ ಮೊಡೆಲ್‌ಗಳು ಇನ್ಸ್‌ಟ್ರುಮೆಂಟೇಶನ್‌ಗಾಗಿ ಡಿಜಿಟಲ್‌ ಡಿಸ್‌ಪ್ಲೇಯನ್ನು ಪಡೆಯುತ್ತವೆ, ಆದರೆ ಇಲ್ಲಿ ನೆಕ್ಸಾನ್ ಇವರೆಡರ ನಡುವೆ ದೊಡ್ಡ ಡಿಸ್‌ಪ್ಲೇಯನ್ನು ಹೊಂದಿದೆ. ಎಂಜಿ ಮತ್ತು ಟಾಟಾ ಎರಡೂ ತಮ್ಮ ಇವಿಗಳನ್ನು 9-ಸ್ಪೀಕರ್ ಆಡಿಯೊ ಸಿಸ್ಟಮ್‌ನೊಂದಿಗೆ ನೀಡುತ್ತಿವೆ.

  • ಎರಡೂ EVಗಳ ಸುರಕ್ಷತಾ ಸೂಟ್‌ಗಳು 6 ಏರ್‌ಬ್ಯಾಗ್‌ಗಳು (ಎಲ್ಲಾ ಆವೃತ್ತಿಗಳಲ್ಲಿ), ಎಲ್ಲಾ-ನಾಲ್ಕು ಡಿಸ್ಕ್ ಬ್ರೇಕ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ನೊಂದಿಗೆ ಹೋಲುತ್ತವೆ.

ಯಾವ ಇವಿಯನ್ನು ಖರೀದಿಸಬೇಕು?

ಎಮ್‌ಜಿ ವಿಂಡ್ಸರ್ ಇವಿ ಮಾರುಕಟ್ಟೆಯಲ್ಲಿ ಹೊಸ ಪ್ರತಿಸ್ಪರ್ಧಿಯಾಗಿದ್ದು, ಅದರ ಪ್ರಮುಖ ಪ್ರತಿಸ್ಪರ್ಧಿಗಳಲ್ಲಿ ಒಂದಾಗಿರುವ ಟಾಟಾ ನೆಕ್ಸಾನ್ ಇವಿಗೆ ಹೋಲಿಸಿದರೆ ಆಕರ್ಷಕ ಬೆಲೆಯಿದೆ. ಆದರೆ, ಇದು ಪ್ರತಿ ಕಿ.ಮೀ.ಗೆ 3.5 ರೂ.ಗಳ ಬ್ಯಾಟರಿ ಬಾಡಿಗೆ ಶುಲ್ಕದೊಂದಿಗೆ ಬರುತ್ತದೆ, ತಿಂಗಳಿಗೆ 1,500 ಕಿ.ಮೀ.ವರೆಗಿನ ಮೊತ್ತವನ್ನು ಕಡ್ಡಾಯವಾಗಿ ಪಾವತಿಸಬೇಕಾಗುತ್ತದೆ. ಈ ವೆಚ್ಚವು ನಿಮ್ಮ ಚಾಲನಾ ಅಭ್ಯಾಸವನ್ನು ಆಧರಿಸಿ ಬದಲಾಗಬಹುದು ಮತ್ತು ಹೆಚ್ಚುವರಿ ಚಾರ್ಜಿಂಗ್ ವೆಚ್ಚಗಳನ್ನು ಒಳಗೊಂಡಿರುವುದಿಲ್ಲ.

MG ಬ್ಯಾಟರಿಯ ಮೇಲೆ ಅನಿಯಮಿತ ಕಿಮೀ/ವರ್ಷದ ವಾರಂಟಿಯನ್ನು ನೀಡುತ್ತದೆ, ಹಾಗಾಗಿ ವಿಂಡ್ಸರ್ ಇವಿಯನ್ನು ಪರಿಗಣಿಸಲು ಯೋಗ್ಯವಾಗಿದೆ. ಇದಕ್ಕೆ ವಿರುದ್ಧವಾಗಿ, ನೆಕ್ಸಾನ್‌ ಇವಿಯು 8-ವರ್ಷ ಅಥವಾ 1.6 ಲಕ್ಷ ಕಿಮೀ ವಾರಂಟಿಯನ್ನು ಒದಗಿಸುತ್ತದೆ. ವಿಂಡ್ಸರ್‌ಗಾಗಿ ಜೀವಿತಾವಧಿಯ ಬ್ಯಾಟರಿ ವಾರಂಟಿಯು ಮೊದಲ ಮಾಲೀಕರಿಗೆ ಮಾತ್ರ ಮಾನ್ಯವಾಗಿರುತ್ತದೆ, ಆದರೆ ಎರಡನೇ ಮಾಲೀಕರು ಪ್ರಮಾಣಿತ 8-ವರ್ಷ ಅಥವಾ 1.6 ಲಕ್ಷ ಕಿಮೀ ವಾರಂಟಿಯನ್ನು ಪಡೆಯುತ್ತಾರೆ.

ವಿಂಡ್ಸರ್ ಇವಿ ಸಹ ದೊಡ್ಡ ಕಾರು ಆಗಿದ್ದು ಮತ್ತು ಆದ್ದರಿಂದ ನೆಕ್ಸಾನ್ ಇವಿಗಿಂತ ಹೆಚ್ಚು ವಿಶಾಲವಾದ ಕ್ಯಾಬಿನ್ ಅನ್ನು ಒದಗಿಸುತ್ತದೆ, ಜೊತೆಗೆ ಸುಸಜ್ಜಿತ ಇಂಟಿರಿಯರ್‌ ಅನ್ನು ಹೊಂದಿದೆ. ಇದು 15.6-ಇಂಚಿನ ಟಚ್‌ಸ್ಕ್ರೀನ್ ಮತ್ತು 135-ಡಿಗ್ರಿ ರಿಕ್ಲೈನಿಂಗ್ ಹಿಂಬದಿಯ ಸೀಟ್‌ಗಳನ್ನು ಹೊಂದಿದೆ, ಇದು ಬಜೆಟ್‌ನಲ್ಲಿ ಫೀಚರ್‌-ಭರಿತ ಮತ್ತು ಸೌಕರ್ಯ-ಚಾಲಿತ ಇವಿಯನ್ನು ಬಯಸುವವರಿಗೆ ಉತ್ತಮ ಆಯ್ಕೆಯಾಗಿದೆ.

ಮತ್ತೊಂದೆಡೆ, ಟಾಟಾ ನೆಕ್ಸಾನ್ ಇವಿಯ ಸಾಮರ್ಥ್ಯವು ಅದರ ಸುಸಜ್ಜಿತ ಫೀಚರ್‌ಗಳು ಮತ್ತು ವಿಭಿನ್ನ ಗ್ರಾಹಕರ ಅಗತ್ಯಗಳಿಗೆ ಸರಿಹೊಂದುವಂತೆ ಎರಡು ಬ್ಯಾಟರಿ ಪ್ಯಾಕ್‌ಗಳ ಆಯ್ಕೆಯಾಗಿದೆ. ನೀವು ಕಾಂಪ್ಯಾಕ್ಟ್ ಆಯಾಮಗಳನ್ನು ಹೊಂದಿರುವ ಇವಿಗಾಗಿ ಹುಡುಕುತ್ತಿದ್ದರೆ, ನೆಕ್ಸಾನ್‌ ಇವಿಯು ಸಾಕಷ್ಟು ಪ್ರೀಮಿಯಂ ವೈಶಿಷ್ಟ್ಯಗಳನ್ನು ಪ್ಯಾಕ್ ಮಾಡುತ್ತದೆ, ಸುಗಮ ಸವಾರಿಯ ಅನುಭವವನ್ನು ನೀಡುತ್ತದೆ ಮತ್ತು 300 ಕಿಮೀಗಿಂತ ಹೆಚ್ಚು ಕ್ಲೈಮ್ ಮಾಡಲಾದ ರೇಂಜ್‌ ಅನ್ನು ನೀಡುವ ಮೂಲಕ ಟಾಟಾದ ಈ ಇವಿಯು ಬೆಲೆಗೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ.

ಹಾಗಾದರೆ, ನೀವು ಯಾವ ಇವಿ ಆಯ್ಕೆ ಮಾಡುತ್ತೀರಿ? ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.

ನಿರಂತರ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.

ಹೆಚ್ಚು ಓದಿ: ಎಮ್‌ಜಿ ವಿಂಡ್ಸರ್ ಇವಿ ಆಟೋಮ್ಯಾಟಿಕ್‌

d
ಅವರಿಂದ ಪ್ರಕಟಿಸಲಾಗಿದೆ

dipan

  • 19 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment on M ಜಿ windsor ev

ಪೋಸ್ಟ್ ಕಾಮೆಂಟ್
2 ಕಾಮೆಂಟ್ಗಳು
I
ironstag
Sep 18, 2024, 6:40:53 PM

I don't think so. Nexon ev has no proven record, if it has proven something, then that is the unreliable nature of it. from everyday niggles to HV errors to complete battery replacement.

P
ponsil nadar
Sep 18, 2024, 6:00:20 PM

Nexon EV still stands tall in front of Windsor EV. This is primarily due to proven record of Nexon EV. There are still a lot of unknowns with Windsor which only time will tell if it's worth considerin

Read Full News

Enable notifications to stay updated with exclusive offers, car news, and more from CarDekho!

trending ಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ