Login or Register ಅತ್ಯುತ್ತಮ CarDekho experience ಗೆ
Login

ಹೊಸ ಎಕ್ಸ್‌ಕ್ಲೂಸಿವ್ ಪ್ರೊ ವೇರಿಯೆಂಟ್‌ನಲ್ಲಿ ADAS ಫೀಚರ್‌ಗಳನ್ನು ನೀಡುತ್ತಿರುವ ಎಂಜಿ ZS ಇವಿ

published on ಜುಲೈ 13, 2023 10:01 pm by rohit for ಎಂಜಿ ಜೆಡ್‌ಎಸ್‌ ಇವಿ

ಎಂಜಿ ZS ಇವಿ ಈಗ ಅದರ ICE-ತದ್ರೂಪಿ ಆಗಿರುವ ಆಸ್ಟರ್‌ನಿಂದ ಒಟ್ಟು 17 ಫೀಚರ್‌ಗಳನ್ನು ಪಡೆಯುತ್ತಿದೆ.

  • ಈ ADAS ಫೀಚರ್‌ಗಳು ಹೊಸ ಟಾಪ್-ಸ್ಪೆಕ್ ಎಕ್ಸ್‌ಕ್ಲೂಸಿವ್ ಪ್ರೊ ವೇರಿಯೆಂಟ್‌ಗೆ ಮಾತ್ರ ಸೀಮಿತವಾಗಿವೆ.

  • ಈ ಎಕ್ಸ್‌ಕ್ಲೂಸಿವ್ ಪ್ರೊ ರೂ.27.90 ಲಕ್ಷ (ಎಕ್ಸ್‌-ಶೋರೂಮ್) ಬೆಲೆಯನ್ನು ಹೊಂದಿದೆ.

  • ಬಿಡುಗಡೆಯ ಸಮಯದಲ್ಲಿ, ಈ ZS ಇವಿ ಕೇವಲ ಬ್ಲೈಂಡ್ ಸ್ಪಾಡ್ ಡಿಟೆಕ್ಷನ್ ಮತ್ತು ರಿಯರ್-ಕ್ರಾಸ್ ಟ್ರಾಫಿಕ್ ಅಲರ್ಟ್‌ನೊಂದಿಗೆ ಮಾತ್ರ ಲಭ್ಯವಿತ್ತು.

  • ಇತ್ತೀಚಿನ ADAS ತಂತ್ರಜ್ಞಾನವು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಡಿಪಾರ್ಚರ್ ವಾರ್ನಿಂಗ್ ಮತ್ತು ಟ್ರಾಫಿಕ್ ಜಾಮ್ ಅಸಿಸ್ಟ್ ಅನ್ನು ಒಳಗೊಂಡಿದೆ.

  • ಇದರಲ್ಲಿ ಲಭ್ಯವಿರುವ ಇತರ ಸುರಕ್ಷತಾ ಫೀಚರ್‌ಗಳೆಂದರೆ 360-ಡಿಗ್ರಿ ಕ್ಯಾಮರಾ ಮತ್ತು ಆರು ಏರ್‌ಬ್ಯಾಗ್‌ಗಳು.

  • ಈ ZS ಇವಿ 461km ಕ್ಲೈಮ್ ಮಾಡಲಾದ 50.3kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.

2022 ರ ಪ್ರಾರಂಭದಲ್ಲಿ, ಎಂಜಿ ZS ಇವಿಗೆ ಸಂಪೂರ್ಣ ಮಿಡ್‌ಲೈಫ್ ನವೀಕರಣವನ್ನು ನೀಡಲಾಯಿತು. ನವೀಕರಣದೊಂದಿಗೆ ಎಂಜಿಯ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಎಸ್‌ಯುವಿ ಟ್ವೀಕ್ ಮಾಡಲಾದ ವಿನ್ಯಾಸ ಮತ್ತು ಚಾಲಕ ಸಹಾಯ ಕಾರ್ಯಾಚರಣೆಗಳನ್ನು ಒಳಗೊಂಡಂತೆ ಹೊಸ ಉಪಕರಣಗಳನ್ನು ಪಡೆದುಕೊಂಡಿದೆ. ಈಗ, ಕಾರು ತಯಾರಕರು ಮುಂದುವರಿದು ZS ಇವಿಯಲ್ಲಿ 17 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಫೀಚರ್‌ಗಳನ್ನು ಪರಿಚಯಿಸಿದ್ದಾರೆ ಮತ್ತು ಇವೆಲ್ಲವನ್ನೂ ಆಸ್ಟರ್ ಮತ್ತು ಹೆಕ್ಟರ್‌ನಿಂದ ಎರವಲು ಪಡೆಯಲಾಗಿದೆ. ಈ ಫೀಚರ್‌ಗಳು ಈ ಎಲೆಕ್ಟ್ರಿಕ್ ಎಸ್‌ಯುವಿಯ ಹೊಸ ಟಾಪ್-ವೇರಿಯೆಂಟ್ ಎಕ್ಸ್‌ಕ್ಲೂಸಿವ್ ಪ್ರೊಗೆ ಮಾತ್ರ ಸೀಮಿತವಾಗಿದ್ದು, ಇದರ ಬೆಲೆಯನ್ನು ರೂ. 27.90 ಲಕ್ಷಕ್ಕೆ(ಪರಿಚಯಾತ್ಮಕ, ಎಕ್ಸ್-ಶೋರೂಮ್) ನಿಗದಿಪಡಿಸಲಾಗಿದೆ.

ಹೊಸ ADAS ಫೀಚರ್‌ಗಳು

ಈ ZS ಇವಿಯ ನವೀಕರಣಗೊಂಡ ADAS ಸೂಟ್, ಲೇನ್ ಅಸಿಸ್ಟ್‌ಗಳು (ಡಿಪಾರ್ಚರ್ ವಾರ್ನಿಂಗ್ ಮತ್ತು ಲೇನ್ ಕೀಪ್), ಹೈ-ಬೀಮ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋನೊಮಸ್ ತುರ್ತು ಬ್ರೇಕಿಂಗ್ (ಪಾದಾಚಾರಿಗಳ ಸುರಕ್ಷತೆ), ಮತ್ತು ಟ್ರಾಫಿಕ್ ಜಾಮ್ ಅಸಿಸ್ಟ್ ಅನ್ನು ಹೊಂದಿದೆ.

ಎಲ್ಲಾ ಹೊಸ ADAS ಫೀಚರ್‌ಗಳನ್ನು ಸೂಕ್ಷ್ಮತೆಯ ಮೂರು ಹಂತಗಳಾಗಿ ವರ್ಗೀಕರಿಸಲಾಗಿದ್ದು ಅವುಗಳೆಂದರೆ– ಕಡಿಮೆ, ಮಧ್ಯಮ ಮತ್ತು ಅಧಿಕ ಎಂದಾಗಿದೆ ಇಷ್ಟು ಮಾತ್ರವಲ್ಲದೇ ಮೂರು ವಾರ್ನಿಂಗ್ ಹಂತಗಳಲ್ಲಿಯೂ ವರ್ಗೀಕರಿಸಲಾಗಿದೆ (ಹ್ಯಾಪ್ಟಿಕ್, ಆಡಿಯೋ ಮತ್ತು ದೃಶ್ಯ).

ಇದನ್ನೂ ಓದಿ: ಈ ಕಂಪನಿಗಳು ಪ್ರಮುಖ ಪಾಲನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದು ಎಂಜಿ ಮೋಟಾರ್ ಸದ್ಯದಲ್ಲಿಯೇ ಭಾರತದ್ದಾಗಬಹುದು

ಇದು ಈಗಾಗಲೇ ಏನನ್ನು ಹೊಂದಿತ್ತು?

ಈ ನವೀಕೃತ ZS ಇವಿ, 2022 ರಲ್ಲಿ ಬಿಡುಗಡೆ ಹೊಂದಿದ್ದು, ಕೇವಲ ಬ್ಲೈಂಡ್ ಸ್ಪಾಟ್ ಅಸಿಸ್ಟೆನ್ಸ್ ಡಿಟೆಕ್ಷನ್ ಮತ್ತು ರಿಯರ್-ಕ್ರಾಸ್ ಟ್ರಾಫಿಕ್ ಅಲರ್ಟ್‌ನಂತಹ ADAS ಫೀಚರ್‌ಗಳನ್ನು ಹೊಂದಿತ್ತು. ಆರು ಏರ್‌ಬ್ಯಾಗ್‌ಗಳು, ABS ಜೊತೆಗೆ EBD, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, 360-ಡಿಗ್ರಿ ಕ್ಯಾಮಾರಾ ಮತ್ತು ಹಿಲ್ ಅಸಿಸ್ಟ್ ಕಂಟ್ರೋಲ್‌ನಂತಹ ಫೀಚರ್‌ಗಳು ಪ್ರಯಾಣಿಕರ ಸುರಕ್ಷತೆಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದವು.

ಬರಲಿರುವ ಇತರ ಫೀಚರ್‌ಗಳು

ಈ ZS ಇವಿಯು ತನ್ನ ಪ್ರಮುಖ ಫೀಚರ್‌ಗಳಾಗಿ ವಿಹಂಗಮ ಸನ್‌ರೂಫ್, 10.1-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಸಂಪರ್ಕಿತ ಕಾರ್ ಟೆಕ್ ಅನ್ನು ಹೊಂದಿರುತ್ತದೆ.

ಬ್ಯಾಟರಿ ಪ್ಯಾಕ್ ಮತ್ತು ರೇಂಜ್

ಈ ZS ಇವಿಯು 177PS ಮತ್ತು 280Nm ನಲ್ಲಿ ರೇಟ್ ಮಾಡಲಾದ 50.3kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದರೊಂದಿಗೆ, 461km ನಷ್ಟು ಕ್ಲೈಮ್ ಡ್ರೈವಿಂಗ್ ರೇಂಜ್ ಅನ್ನು ಇದು ನೀಡುತ್ತದೆ.

ವೇರಿಯೆಂಟ್‌ಗಳು ಮತ್ತು ಪ್ರತಿಸ್ಪರ್ಧಿಗಳು

ಎಂಜಿ ಈಗ ZS ಇವಿಯನ್ನು ಮೂರು ವೇರಿಯೆಂಟ್‌ಗಳಲ್ಲಿ ಮಾರಾಟ ಮಾಡುತ್ತಿದೆ: ಎಕ್ಸೈಟ್, ಎಕ್ಸ್‌ಕ್ಲೂಸಿವ್ ಮತ್ತು ಎಕ್ಸ್‌ಕ್ಲೂಸಿವ್ ಪ್ರೊ. ಈ ಎಲೆಕ್ಟ್ರಿಕ್ ಎಸ್‌ಯುವಿಯು ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಮತ್ತು BYD ಆಟ್ಟೋ 3ಗೆ ಪೈಪೋಟಿ ನೀಡಿದರೆ, ಟಾಟಾ ನೆಕ್ಸಾನ್ ಇವಿ ಮ್ಯಾಕ್ ಮತ್ತು ಮಹೀಂದ್ರಾ XUV400ಗೆ ಪ್ರೀಮಿಯಂ ಆಯ್ಕೆಯಾಗಿ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ: ಇವುಗಳು ಜೂನ್-2023 ರಲ್ಲಿನ ಹೆಚ್ಚು ಬೇಡಿಕೆಯ ಕಾರುಗಳು

ಇನ್ನಷ್ಟು ಇಲ್ಲಿ ಓದಿ: ಎಂಜಿ ZS ಇವಿ ಆಟೋಮ್ಯಾಟಿಕ್

r
ಅವರಿಂದ ಪ್ರಕಟಿಸಲಾಗಿದೆ

rohit

  • 14 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಎಂಜಿ ZS EV

Read Full News

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
Rs.10.99 - 15.49 ಲಕ್ಷ*
Rs.7.99 - 11.89 ಲಕ್ಷ*
Rs.6.99 - 9.40 ಲಕ್ಷ*
Rs.60.95 - 65.95 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ