ಹೆಚ್ಚು ಶಕ್ತಿಯುತ ಮತ್ತು ಫೀಚರ್‌ಭರಿತ ಕಿಯಾ ಕಾರೆನ್ಸ್ ಬಿಡುಗಡೆ!

published on ಮಾರ್ಚ್‌ 15, 2023 04:26 pm by tarun for ಕಿಯಾ ಕೆರೆನ್ಸ್

  • 30 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ MPV ಯು RDE ಮತ್ತು BS6 ಫೇಸ್ 2-ಅನುಸರಣೆಯ ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್‌ಗಳನ್ನು ಹೊಂದಿದ್ದು ಎರಡನೆಯದು iMTಆಯ್ಕೆಯನ್ನು ಹೊಂದಿದೆ.

Kia Carens

  • ಕಾರೆನ್ಸ್ ಹೊಸ 160PS 1.5- ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ ಮತ್ತು ಸಿಕ್ಸ್-ಸ್ಪೀಡ್ iMT ಆಯ್ಕೆಯನ್ನೂ ಹೊಂದಿದೆ.
  • ಡೀಸೆಲ್ ಇಂಜಿನ್ ಈಗ iMT ಗೇರ್‌ಬಾಕ್ಸ್‌ನೊಂದಿಗೂ ಲಭ್ಯವಿದೆ.
  •  ಡೀಸೆಲ್ ಮತ್ತು ಟರ್ಬೋ-ಪೆಟ್ರೋಲ್ ಇಂಜಿನ್‌ಗಳಲ್ಲಿ ಇನ್ನು ಮುಂದೆ ಮ್ಯಾನುವಲ್ ಟ್ರಾನ್ಸ್‌ಮಿಷನ್ ಲಭ್ಯವಿರುವುದಿಲ್ಲ.
  •  12.5-ಇಂಚಿನ ಡಿಜಿಟೈಸ್ಡ್ ಇನ್ಸ್‌ಟ್ರುಮೆಂಟ್ ಈಗ ಸ್ಟಾಂಡರ್ಡ್ ಆಗಿದೆ; ಇಂಟೆಗ್ರೇಟಡ್ ಅಲೆಕ್ಸಾ ಕನೆಕ್ಟಿವಿಟಿಯನ್ನೂ ಸೇರಿಸಲಾಗಿದೆ.
  •  ಈ ಕಾರೆನ್ಸ್ ಬೆಲೆ ಈಗ ರೂ 10.45 ಲಕ್ಷದಿಂದ ರೂ 18.95 ಲಕ್ಷದ (ಎಕ್ಸ್-ಶೋರೂಂ) ತನಕ ಇದೆ.

ಕಿಯಾ ಸದ್ದಿಲ್ಲದೇ ನವೀಕೃತ ಕಾರೆನ್ಸ್ ಅನ್ನು ಬಿಡುಗಡೆ ಮಾಡಿದ್ದು ಅದರ ಹೊಸ ಬೆಲೆಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಿದೆ. ಇದು ಹೊಸ ಪವರ್‌ಟ್ರೇನ್‌ಗಳು, ಟ್ರಾನ್ಸ್‌ಮಿಷನ್‌ಗಳು ಮತ್ತು ಹೆಚ್ಚು ಫೀಚರ್‌ಗಳನ್ನು ಸ್ಟಾಂಡರ್ಡ್ ಆಗಿ ಪಡೆದಿದೆ. ಈ ನವೀಕರಣಗಳೊಂದಿಗೆ, ಈ MPVಯ ಬೆಲೆ ಈಗ ರೂ 10.45 ಲಕ್ಷದಿಂದ ರೂ 18.95 ಲಕ್ಷದ (ಎಕ್ಸ್-ಶೋರೂಂ ದೆಹಲಿ) ತನಕ ಇದೆ.

 

ಹೊಸ ಟರ್ಬೋ-ಪೆಟ್ರೋಲ್ ಇಂಜಿನ್

Kia Carens

ಈ ಕಾರೆನ್ಸ್ ಈಗ 1.4-ಲೀಟರ್ ಟರ್ಬೋ-ಪೆಟ್ರೋಲ್ ಯೂನಿಟ್‌ಗೆ ಬದಲಾಗಿ 160PS 1.5-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್‌ನೊಂದಿಗೆ ಲಭ್ಯವಿದೆ. ಈ ಹೊಸ ಇಂಜಿನ್ 20PS ಹೆಚ್ಚು ಉತ್ಪಾದಿಸುತ್ತದೆ ಮತ್ತು ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಬದಲಾಗಿ iMT (ಕ್ಲಚ್ ಪೆಡಲ್ ಇಲ್ಲದೇ ಮ್ಯಾನುವಲ್) ಅನ್ನು ಹೊಂದಿದೆ, ಸೆವೆನ್-ಸ್ಪೀಡ್ DCT (ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್) ಹಾಗೆಯೇ ಮುಂದುವರೆಯುತ್ತಿದೆ.

ಕಾರೆನ್ಸ್ ಟರ್ಬೋ

1.4 ಲೀಟರ್ MT

1.5 ಲೀಟರ್ iMT (ಹೊಸದು)

ವ್ಯತ್ಯಾಸ

ಪ್ರೀಮಿಯಂ

ರೂ 11.55 ಲಕ್ಷ

ರೂ 12 ಲಕ್ಷ

ರೂ 45,000

ಪ್ರೆಸ್ಟೀಜ್

ರೂ 12.75 ಲಕ್ಷ

ರೂ 13.25 ಲಕ್ಷ

ರೂ 50,000

ಪ್ರೆಸ್ಟೀಜ್ ಪ್ಲಸ್

ರೂ 14.25 ಲಕ್ಷ

ರೂ 14.75 ಲಕ್ಷ

ರೂ 50,000

ಲಕ್ಷುರಿ

ರೂ 15.70 ಲಕ್ಷ

ರೂ 16.20 ಲಕ್ಷ

ರೂ 50,000

ಲಕ್ಷುರಿ ಪ್ಲಸ್ 6 ಸೀಟರ್

ರೂ 17 ಲಕ್ಷ

ರೂ 17.50 ಲಕ್ಷ

ರೂ 50,000

ಲಕ್ಷುರಿ ಪ್ಲಸ್

ರೂ 17.05 ಲಕ್ಷ

ರೂ 17.55 ಲಕ್ಷ

ರೂ 50,000

 

ಇದನ್ನೂ ಓದಿ: ಕಿಯಾ ಕಾರೆನ್ಸ್ ಅನ್ನು 5 ಸೀಟರ್ ಆಯ್ಕೆಯೊಂದಿಗೂ ನೀಡುವ ನಿರೀಕ್ಷೆ ಇದೆ

 

ಕಾರೆನ್ಸ್ ಟರ್ಬೋ

1.4 ಲೀಟರ್ DCT

1.5 ಲೀಟರ್ DCT (ಹೊಸದು)

ವ್ಯತ್ಯಾಸ

ಪ್ರೆಸ್ಟೀಜ್ ಪ್ಲಸ್

ರೂ 15.25 ಲಕ್ಷ

ರೂ 15.75 ಲಕ್ಷ

ರೂ 50,000

ಲಕ್ಷುರಿ ಪ್ಲಸ್ 6 ಸೀಟರ್

ರೂ 17.90 ಲಕ್ಷ

ರೂ 18.40 ಲಕ್ಷ

ರೂ 50,000

ಲಕ್ಷುರಿ ಪ್ಲಸ್

ರೂ 17.95 ಲಕ್ಷ

ರೂ 18.45 ಲಕ್ಷ

ರೂ 50,000

ಈ ಕಾರೆನ್ಸ್ ಟರ್ಬೋ ವೇರಿಯೆಂಟ್‌ಗಳು ಬೇಸ್ ಪ್ರೀಮಿಯಂ ಹೊರತಾಗಿ ಉಳಿದ ಎಲ್ಲಾ ವೇರಿಯೆಂಟ್‌ಗಳಲ್ಲಿ ರೂ 50,000 ಗಳಷ್ಟು ಬೆಲೆ ಹೆಚ್ಚಳವನ್ನು ಕಂಡಿದೆ.

ಡೀಸೆಲ್ iMT ಆಯ್ಕೆಯನ್ನೂ ಹೊಂದಿದೆ

ಕಾರೆನ್ಸ್

ಡೀಸೆಲ್ MT

ಡೀಸೆಲ್ iMT

ವ್ಯತ್ಯಾಸ

ಪ್ರೀಮಿಯಮ್

ರೂ 12.15 ಲಕ್ಷ

ರೂ 12.65 ಲಕ್ಷ

ರೂ 50,000

ಪ್ರೆಸ್ಟೀಜ್ 

ರೂ 13.35 ಲಕ್ಷ

ರೂ 13.85 ಲಕ್ಷ

ರೂ 50,000

ಪ್ರೆಸ್ಟೀಜ್ ಪ್ಲಸ್

ರೂ 14.85 ಲಕ್ಷ

ರೂ 15.35 ಲಕ್ಷ

ರೂ 50,000

ಲಕ್ಷುರಿ

ರೂ 16.30 ಲಕ್ಷ

ರೂ 16.80 ಲಕ್ಷ

ರೂ 50,000

ಲಕ್ಷುರಿ ಪ್ಲಸ್ 6 ಸೀಟರ್

ರೂ 17.50 ಲಕ್ಷ

ರೂ 18 ಲಕ್ಷ

ರೂ 50,000

ಲಕ್ಷುರಿ ಪ್ಲಸ್ 7- ಸೀಟರ್

ರೂ 17.55 ಲಕ್ಷ

ರೂ 18 ಲಕ್ಷ

ರೂ 45,000

ಈ ಮೊದಲೇ ವರದಿ ಮಾಡಿದಂತೆ, ಕಿಯಾ ತನ್ನ ಸಾಂಪ್ರದಾಯಿಕ ತ್ರೀ-ಪೆಡಲ್ ಮ್ಯಾನುವಲ್ ಟ್ರಾನ್ಸ್‌ಮಿಶನ್ ಸೆಟಪ್ ಅನ್ನು ಡೀಸೆಲ್-ಚಾಲಿತ ಮಾಡೆಲ್‌ಗಳಿಂದ ಕೈಬಿಡುತ್ತಿದೆ. ಈ ಕಾರೆನ್ಸ್ ಡೀಸೆಲ್ ವೇರಿಯೆಂಟ್‌ಗಳನ್ನು ಈಗ iMT ಟ್ರಾನ್ಸ್‌ಮಿಷನ್ ಮತ್ತು ಈಗಾಗಲೇ ಇರುವ ಸಿಕ್ಸ್ ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್‌ನೊಂದಿಗೆ ನೀಡಲಾಗುತ್ತಿದೆ. 116PS/250Nm 1.5-ಲೀಟರ್ ಡೀಸೆಲ್ ಇಂಜಿನ್ ಈಗ BS6 ಫೇಸ್ 2 ಅನುಸರಣೆಗೆ ತಕ್ಕಂತೆ ಇದೆ. ಈ iMT ವೇರಿಯೆಂಟ್‌ಗಳ ಬೆಲೆಗಳು ಡೀಸೆಲ್‌ ಮ್ಯಾನುವಲ್ ಟ್ರಿಮ್‌ಗಳಿಗಿಂತ ರೂ. 50,000 ಗಳಷ್ಟು ಹೆಚ್ಚು ಇದೆ.

 ಡೀಸೆಲ್ ಆಟೋಮ್ಯಾಟಿಕ್ ಜೊತೆಯು ಟಾಪ್-ಎಂಡ್ ಲಕ್ಷುರಿ ಪ್ಲಸ್ ವೇರಿಯೆಂಟ್‌ಗೆ ಮಾತ್ರ ಸೀಮಿತವಾಗಿದೆ. ಇದರ ಬೆಲೆ ರೂ 18.90 ಲಕ್ಷದಿಂದ ರೂ 18.95 ಲಕ್ಷದ ತನಕ ಇದ್ದು ಅದರ BS6 ಫೇಸ್ 2 ಅನುಸರಣೆಗಾಗಿ ರೂ 50,000 ಹೆಚ್ಚುವರಿ ಬೆಲೆಯನ್ನು ನಿಗದಿಪಡಿಸಿದೆ.

ಇದನ್ನೂ ಓದಿ: ಕಿಯಾ ಕರೇನ್ಸ್ ವರ್ಸಸ್ ಮಾರುತಿ XL6: ಸ್ಥಳ ಮತ್ತು ಪ್ರಾಯೋಗಿಕವಾಗಿ ಹೋಲಿಸಲಾಗಿದೆ

 

New Features ಹೊಸ ಫೀಚರ್‌ಗಳು

 ಈ ಫೀಚರ್‌ಭರಿತ MPV ಈಗ ಹೆಚ್ಚು ಸ್ಟಾಂಡರ್ಡ್ ಆಗಿ ನೀಡುತ್ತದೆ. ಇದರ 12.5-ಇಂಚಿನ ಡಿಜಿಟೈಸ್ಡ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಅನ್ನು ಮೊದಲು ಸೆಕೆಂಡ್-ಟು-ಬೇಸ್ ಪ್ರೆಸ್ಟೀಜ್ ವೇರಿಯೆಂಟ್‌ನಲ್ಲಿ ನೀಡಲಾಗುತ್ತಿದ್ದು ಈಗ ಸ್ಟಾಂಡರ್ಡ್ ಆಗಿದೆ. ಹೆಚ್ಚುವರಿಯಾಗಿ, ಕಿಯಾ ಕನೆಕ್ಟಡ್ ಕಾರ್ ಟೆಕ್ನಾಲಜಿ ಸೂಟ್‌, ಇಂಟೆಗ್ರೇಟೆಡ್ ಅಲೆಕ್ಸಾ ಕನೆಕ್ಟಿವಿಟಿಯನ್ನು ಪಡೆದಿದೆ. ಕೊನೆಯದಾಗಿ, ಮಿಡ್-ಸ್ಪೆಕ್ ಪ್ರೆಸ್ಟೀಜ್ ಪ್ಲಸ್ ಟ್ರಿಮ್ ಈಗ ಲೆದರ್-ಸುತ್ತಿದ ಗೇರ್ ನಾಬ್‌ನೊಂದಿಗೆ ಲಭ್ಯವಿದ್ದು ಇದನ್ನು ಟಾಪ್ ಎಂಡ್ ಲಕ್ಷುರಿ ವೇರಿಯೆಂಟ್‌ನಿಂದ ಪಡೆಯಲಾಗಿದೆ.  

ಇದು 10.25-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಕ್ರ್ಯೂಸ್ ಕಂಟ್ರೋಲ್, ಇಲೆಕ್ಟ್ರಿಕ್ ವನ್-ಟಚ್ ಫೋಲ್ಡಿಂಗ್ ಸೆಕೆಂಡ್-ರೋ ಸೀಟುಗಳು, ಇಲೆಕ್ಟ್ರಿಕ್ ಸನ್‌ರೂಫ್, ವಾತಾಯನದ ಫ್ರಂಟ್ ಸೀಟುಗಳು, ಆರು ಏರ್‌ಬ್ಯಾಗ್‌ಗಳು ಮತ್ತು ರಿಯರ್ ಪಾರ್ಕಿಂಗ್ ಕ್ಯಾಮರಾವನ್ನು ಈಗಾಗಲೇ ಹೊಂದಿದೆ. 

 ಈ ಕಾರೆನ್ಸ್ ಮಾರುತಿ ಎರ್ಟಿಗಾ  ಮತ್ತು XL6, ಟೊಯೋಟಾ ಇನ್ನೋವಾ ಹೈಕ್ರಾಸ್ ಮತ್ತು ಟೊಯೋಟಾ ಇನ್ನೋವಾ ಕ್ಸಿಸ್ಟಾದ ಕೆಲವು ವೇರಿಯೆಂಟ್‌ಗಳಿಗೆ ಪ್ರೀಮಿಯಂ ಬದಲಿಯಾಗಿ ಮುಂದುವರಿಯುತ್ತಿದೆ.

ಇನ್ನಷ್ಟು ಓದಿ : ಕಾರೆನ್ಸ್ ಡೀಸೆಲ್

 


 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಕಿಯಾ ಕೆರೆನ್ಸ್

Read Full News

explore ಇನ್ನಷ್ಟು on ಕಿಯಾ ಕೆರೆನ್ಸ್

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience