Login or Register ಅತ್ಯುತ್ತಮ CarDekho experience ಗೆ
Login

MY2025 Kia Seltos ಮೂರು ಹೊಸ HTE (O), HTK (O) ಮತ್ತು HTK ಪ್ಲಸ್ (O) ವೇರಿಯಂಟ್‌ಗಳೊಂದಿಗೆ ಲಾಂಚ್, ಅದರ ಫೀಚರ್‌ಗಳು ಇಲ್ಲಿವೆ

ಕಿಯಾ ಸೆಲ್ಟೋಸ್ ಗಾಗಿ dipan ಮೂಲಕ ಫೆಬ್ರವಾರಿ 24, 2025 01:35 pm ರಂದು ಪ್ರಕಟಿಸಲಾಗಿದೆ

ಈ ಅಪ್ಡೇಟ್‌ ಜೊತೆಗೆ, ಕಿಯಾ ಸೆಲ್ಟೋಸ್‌ನ ಬೆಲೆಯು ಈಗ ರೂ.11.13 ಲಕ್ಷಗಳಿಂದ ರೂ.20.51 ಲಕ್ಷಗಳವರೆಗೆ (ಎಕ್ಸ್ ಶೋರೂಂ) ಇದೆ

ಇತ್ತೀಚೆಗೆ ರೂ.28,000 ಗಳವರೆಗೆ ಬೆಲೆ ಏರಿಕೆಯಾದ ನಂತರ, ಕಿಯಾ ತನ್ನ ಸೆಲ್ಟೋಸ್‌ನ ಗ್ರಾವಿಟಿ ಎಡಿಷನ್ ಅನ್ನು ಸ್ಥಗಿತಗೊಳಿಸಿದೆ ಮತ್ತು ಮೂರು ಹೊಸ ಕೆಲ ಮಟ್ಟದ ವೇರಿಯಂಟ್‌ಗಳನ್ನು ಪರಿಚಯಿಸಿದೆ: HTE (O), HTK (O), ಮತ್ತು HTK ಪ್ಲಸ್ (O). ಈ ಹೊಸ ವೇರಿಯಂಟ್‌ಗಳು ಮೇಲ್ಮಟ್ಟದ ಟ್ರಿಮ್‌ಗಳಲ್ಲಿರುವ ಕೆಲವು ಫೀಚರ್‌ಗಳನ್ನು ಈಗ ಕೈಗೆಟುಕುವಂತೆ ಮಾಡಿವೆ.

ಅವುಗಳ ಬೆಲೆಗಳು ಇಲ್ಲಿವೆ:

ವೇರಿಯಂಟ್

ಬೆಲೆ

HTE (O) 1.5 N/A ಪೆಟ್ರೋಲ್ MT

ರೂ.11.13 ಲಕ್ಷ

HTK (O) 1.5 N/A ಪೆಟ್ರೋಲ್ MT

ರೂ.13 ಲಕ್ಷ

HTK ಪ್ಲಸ್ (O) 1.5 N/A ಪೆಟ್ರೋಲ್ MT

ರೂ.14.40 ಲಕ್ಷ

HTK ಪ್ಲಸ್ (O) 1.5 N/A ಪೆಟ್ರೋಲ್ CVT

ರೂ.15.76 ಲಕ್ಷ

HTE (O) 1.5 ಡೀಸೆಲ್ MT

ರೂ.12.71 ಲಕ್ಷ

HTK (O) 1.5 ಡೀಸೆಲ್ MT

ರೂ.14.56 ಲಕ್ಷ

HTK ಪ್ಲಸ್ (O) 1.5 ಡೀಸೆಲ್ MT

ರೂ.15.96 ಲಕ್ಷ

HTK ಪ್ಲಸ್ (O) 1.5 ಡೀಸೆಲ್ AT

ರೂ.17.22 ಲಕ್ಷ

ಎಲ್ಲಾ ಬೆಲೆಗಳು ಎಕ್ಸ್-ಶೋರೂಮ್, ಭಾರತಾದ್ಯಂತ ಬೆಲೆಗಳಾಗಿವೆ.

ಬನ್ನಿ, ಹೊಸ ವೇರಿಯಂಟ್‌ಗಳಲ್ಲಿ ಏನೇನನ್ನು ನೀಡಲಾಗಿದೆ ಎಂದು ನೋಡೋಣ

ಹೊಸ ವೇರಿಯಂಟ್‌ಗಳಲ್ಲಿ ಏನೇನಿವೆ?

ಹೊಸ HTE (O) ಈಗ ಕಿಯಾ ಸೆಲ್ಟೋಸ್‌ನ ಬೇಸ್ ಮಾಡೆಲ್ ಆಗಿದ್ದು, ಇದು ಪೆಟ್ರೋಲ್ ಅಥವಾ ಡೀಸೆಲ್ ಎಂಜಿನ್‌ನೊಂದಿಗೆ ಬರುತ್ತದೆ. ಹೊರಗಡೆ, ಇದು ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಕವರ್‌ಗಳೊಂದಿಗೆ 16-ಇಂಚಿನ ಸ್ಟೀಲ್ ವೀಲ್‌ಗಳು, ಕನೆಕ್ಟೆಡ್ LED ಟೈಲ್ ಲೈಟ್‌ಗಳು ಮತ್ತು LED DRL ಗಳನ್ನು ಪಡೆಯುತ್ತದೆ.

ಒಳಗಡೆ, ಇದು ಫ್ಯಾಬ್ರಿಕ್ ಸೀಟ್ ಅಪ್ಹೋಲ್ಸ್ಟರಿ, ಸಿಲ್ವರ್ ಡೋರ್ ಹ್ಯಾಂಡಲ್‌ಗಳು, ಎಲ್ಲಾ ನಾಲ್ಕು ಪವರ್ ವಿಂಡೋಗಳು ಮತ್ತು ಅನಲಾಗ್ ಡಯಲ್‌ಗಳೊಂದಿಗೆ 4.2-ಇಂಚಿನ ಕಲರ್ TFT ಸ್ಕ್ರೀನ್ ಅನ್ನು ಪಡೆಯುತ್ತದೆ. ಇದು 8-ಇಂಚಿನ ಟಚ್‌ಸ್ಕ್ರೀನ್, 6-ಸ್ಪೀಕರ್ ಸೌಂಡ್ ಸಿಸ್ಟಮ್ ಮತ್ತು ಹಿಂಭಾಗದ ವೆಂಟ್‌ಗಳೊಂದಿಗೆ ಮ್ಯಾನುವಲ್ AC ಅನ್ನು ಕೂಡ ಹೊಂದಿದೆ.

HTK (O) ಈ ಲೈನ್‌ಅಪ್‌ನ ಮೂರನೇ ವೇರಿಯಂಟ್ ಆಗಿದ್ದು, ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಎರಡೂ ಆಯ್ಕೆಗಳೊಂದಿಗೆ ಬರುತ್ತದೆ. ಇದನ್ನು HTK ಮತ್ತು HTK ಪ್ಲಸ್ ವೇರಿಯಂಟ್‌ಗಳ ನಡುವೆ ಇರಿಸಲಾಗಿದೆ. ಇದು HTK ಟ್ರಿಮ್‌ಗೆ ಹೋಲಿಸಿದರೆ ಪನೋರಮಿಕ್ ಸನ್‌ರೂಫ್, 16-ಇಂಚಿನ ಅಲಾಯ್ ವೀಲ್‌ಗಳು, ಕೀಲೆಸ್ ಎಂಟ್ರಿ, ವಾಷರ್ ಮತ್ತು ಡಿಫಾಗರ್ ಹೊಂದಿರುವ ಹಿಂಭಾಗದ ವೈಪರ್ ಮತ್ತು ಕ್ರೂಸ್ ಕಂಟ್ರೋಲ್ ಸೇರಿದಂತೆ ಹಲವಾರು ಫೀಚರ್‌ಗಳನ್ನು ಒಳಗೊಂಡಿದೆ. ಇದು ಪನೋರಮಿಕ್ ಸನ್‌ರೂಫ್‌ನೊಂದಿಗೆ ಬರುವ ಸೆಲ್ಟೋಸ್‌ನ ಎಂಟ್ರಿ ಲೆವೆಲ್ ವೇರಿಯಂಟ್ ಆಗಿದೆ.

HTK ಪ್ಲಸ್ (O) ವೇರಿಯಂಟ್ HTK (O) ಮತ್ತು HTX ಮಾಡೆಲ್‌ಗಳ ನಡುವೆ ಇರುತ್ತದೆ ಮತ್ತು ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳೊಂದಿಗೆ ಮಾತ್ರ ಲಭ್ಯವಿದೆ. ಹಿಂದಿನ HTK (O) ವೇರಿಯಂಟ್‌ಗೆ ಹೋಲಿಸಿದರೆ, ಇದು LED ಹೆಡ್‌ಲೈಟ್‌ಗಳು, ಸೀಕ್ವೆನ್ಷಿಯಲ್ ಟರ್ನ್ ಇಂಡಿಕೇಟರ್ ಗಳು, LED ಫಾಗ್ ಲ್ಯಾಂಪ್‌ಗಳು ಮತ್ತು 17-ಇಂಚಿನ ಅಲಾಯ್ ವೀಲ್‌ಗಳೊಂದಿಗೆ ಬರುತ್ತದೆ. ಆಟೋ-ಫೋಲ್ಡಿಂಗ್ ಹೊರಗಿನ ರಿಯರ್‌ವ್ಯೂ ಕನ್ನಡಿಗಳು (ORVM ಗಳು), ಆಂಬಿಯೆಂಟ್ ಲೈಟಿಂಗ್ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ (CVT ಆಯ್ಕೆಯೊಂದಿಗೆ ಮಾತ್ರ ಲಭ್ಯವಿದೆ) ನಂತಹ ಫೀಚರ್‌ಗಳನ್ನು ಈ ವೇರಿಯಂಟ್‌ನಲ್ಲಿ ಸೇರಿಸಲಾಗಿದೆ.

ಪವರ್‌ಟ್ರೇನ್ ಆಯ್ಕೆಗಳು

ಕಿಯಾ ಸೆಲ್ಟೋಸ್ ಮೂರು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ, ಮತ್ತು ಅವುಗಳ ವಿವರಗಳು ಈ ಕೆಳಗಿನಂತಿವೆ:

ಎಂಜಿನ್

1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್

1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್

1.5-ಲೀಟರ್ ಡೀಸೆಲ್ ಎಂಜಿನ್

ಪವರ್

115 ಪಿಎಸ್‌

160 ಪಿಎಸ್‌

116 ಪಿಎಸ್‌

ಟಾರ್ಕ್

144 ಎನ್‌ಎಮ್‌

253 ಎನ್‌ಎಮ್‌

250 ಎನ್‌ಎಮ್‌

ಟ್ರಾನ್ಸ್‌ಮಿಷನ್‌*

6-ಸ್ಪೀಡ್ MT, 7-ಸ್ಟೆಪ್ CVT

6-ಸ್ಪೀಡ್ iMT, 7-ಸ್ಪೀಡ್ DCT

6-ಸ್ಪೀಡ್ MT, 6-ಸ್ಪೀಡ್ AT

*CVT = ಕಂಟಿನ್ಯೂಅಸ್ಲಿ ವೇರಿಯೇಬಲ್ ಟ್ರಾನ್ಸ್‌ಮಿಷನ್‌;

iMT = ಕ್ಲಚ್ ಇಲ್ಲದ ಮ್ಯಾನುವಲ್ ಗೇರ್‌ಬಾಕ್ಸ್;

AT = ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಕಿಯಾ ಸೆಲ್ಟೋಸ್ ಈಗ ರೂ. 11.13 ಲಕ್ಷದಿಂದ ರೂ. 20.51 ಲಕ್ಷಗಳವರೆಗೆ (ಎಕ್ಸ್ ಶೋ ರೂಂ, ಪ್ಯಾನ್-ಇಂಡಿಯಾ) ಬೆಲೆಯನ್ನು ಹೊಂದಿದೆ. ಇದು ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಹೋಂಡಾ ಎಲಿವೇಟ್, ಟೊಯೋಟಾ ಹೈರೈಡರ್, ಸ್ಕೋಡಾ ಕುಶಾಕ್ ಮತ್ತು ವೋಕ್ಸ್‌ವ್ಯಾಗನ್ ಟೈಗುನ್‌ನಂತಹ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಿ ಮುಂದುವರಿಯಲಿದೆ.

ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.

Share via

Write your Comment on Kia ಸೆಲ್ಟೋಸ್

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.15.50 - 27.25 ಲಕ್ಷ*
ಹೊಸ ವೇರಿಯೆಂಟ್
Rs.15 - 26.50 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.20 - 10.51 ಲಕ್ಷ*
ಎಲೆಕ್ಟ್ರಿಕ್
Rs.48.90 - 54.90 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ