Login or Register ಅತ್ಯುತ್ತಮ CarDekho experience ಗೆ
Login

ಹೊಸ Honda Amaze ಬಿಡುಗಡೆ ದಿನಾಂಕ ಫಿಕ್ಸ್‌

ನವೆಂಬರ್ 06, 2024 10:06 pm ರಂದು shreyash ಮೂಲಕ ಪ್ರಕಟಿಸಲಾಗಿದೆ
94 Views

ಹೊಸ ಅಮೇಜ್ ತಾಜಾ ವಿನ್ಯಾಸದ ಶೈಲಿ ಮತ್ತು ಹೊಸ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಹೊಂದಿರುತ್ತದೆ, ಆದರೆ ಇದು ಅದೇ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮುಂದುವರಿಯುತ್ತದೆ

  • ಹೊಸ ಎಲ್ಇಡಿ ಲೈಟಿಂಗ್ ಅಂಶಗಳ ಜೊತೆಗೆ ಹೊಸ ವಿನ್ಯಾಸ ಭಾಷೆಯನ್ನು ಒಳಗೊಂಡಿರುತ್ತದೆ.

  • ಡ್ಯುಯಲ್-ಟೋನ್ ಕ್ಯಾಬಿನ್ ಥೀಮ್‌ನೊಂದಿಗೆ ಹೊಸ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಪಡೆಯಬಹುದು.

  • ದೊಡ್ಡ ಟಚ್‌ಸ್ಕ್ರೀನ್, ಸಿಂಗಲ್ ಪೇನ್ ಸನ್‌ರೂಫ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಹೊಸ ಫೀಚರ್‌ಗಳನ್ನು ಪಡೆಯಬಹುದೆಂದು ನಿರೀಕ್ಷಿಸಲಾಗಿದೆ.

  • ಇದರ ಸುರಕ್ಷತಾ ಪ್ಯಾಕೇಜ್‌ 6 ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್‌ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ರಿಯರ್ ವ್ಯೂ ಕ್ಯಾಮೆರಾವನ್ನು ಒಳಗೊಂಡಿರಬಹುದು.

  • 7.50 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಬೆಲೆಗಳನ್ನು ನಿರೀಕ್ಷಿಸಲಾಗಿದೆ.

ಹೊಸ ತಲೆಮಾರಿನ ಹೋಂಡಾ ಅಮೇಜ್‌ನ ಟೀಸರ್ ಸ್ಕೆಚ್ ಚಿತ್ರವನ್ನು ಇತ್ತೀಚೆಗೆ ಬಿಡುಗಡೆ ಮಾಡಿದ ನಂತರ, ವಾಹನ ತಯಾರಕರು ಈಗ ಸೆಡಾನ್‌ನ ಹೊಸ ಫೆಸ್‌ಲಿಫ್ಟ್‌ ಆವೃತ್ತಿಯನ್ನು ಡಿಸೆಂಬರ್ 4 ರಂದು ಬಿಡುಗಡೆ ಮಾಡಲಾಗುವುದು ಎಂದು ಖಚಿತಪಡಿಸಿದ್ದಾರೆ.

ಬಾಹ್ಯ ಬದಲಾವಣೆಗಳು

ಹೊಸ-ಪೀಳಿಗೆಯ ಅಮೇಜ್ ಹೇಗೆ ಕಾಣುತ್ತದೆ ಎಂಬುದನ್ನು ಹೋಂಡಾ ಇನ್ನೂ ಸ್ಪಷ್ಟವಾಗಿ ಬಹಿರಂಗಪಡಿಸಿಲ್ಲ, ಆದರೆ ಅದರ ವಿನ್ಯಾಸದ ಸ್ಕೆಚ್ ಟೀಸರ್ ಪ್ರಕಾರ, ಇದು ತಾಜಾ ಬಾಹ್ಯ ವಿನ್ಯಾಸವನ್ನು ಹೊಂದಿರುತ್ತದೆ. ಹೊಸ ಅಮೇಜ್ ಹೊಸ ಡ್ಯುಯಲ್-ಬ್ಯಾರೆಲ್ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಇಂಟಿಗ್ರೇಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಒಳಗೊಂಡಿರುತ್ತದೆ ಎಂದು ಟೀಸರ್ ದೃಢಪಡಿಸುತ್ತದೆ, ಇದು ಎಲಿವೇಟ್‌ನಲ್ಲಿ ಇರುವಂತೆ ಕಾಣುತ್ತದೆ.

ಹೋಂಡಾ ಹೊಸ-ಜೆನ್ ಅಮೇಜ್‌ನ ಸೈಡ್ ಮತ್ತು ರಿಯರ್ ಪ್ರೊಫೈಲ್‌ಗಳನ್ನು ಬಹಿರಂಗಪಡಿಸಿಲ್ಲ, ಆದರೆ ಇದು ಹೊಸ ಅಲಾಯ್ ಚಕ್ರಗಳು ಮತ್ತು ಹೊಸ ಎಲ್ಇಡಿ ಅಂಶಗಳೊಂದಿಗೆ ಹೊಸ ಟೈಲ್ ಲೈಟ್‌ಗಳನ್ನು ಪಡೆಯುತ್ತದೆ ಎಂದು ನಾವು ನಿರೀಕ್ಷಿಸಬಹುದು.

ಇದನ್ನೂ ಸಹ ಓದಿ: ಬಿಡುಗಡೆಗೆ ಮುಂಚಿತವಾಗಿಯೇ 2024ರ Maruti Dzireನ ಅನಾವರಣ

ಕ್ಯಾಬಿನ್ ಮತ್ತು ಫೀಚರ್‌ಗಳು

ಹೊಸ ತಲೆಮಾರಿನ ಅಮೇಜ್‌ನ ಒಳಭಾಗವನ್ನು ಹೋಂಡಾ ಇನ್ನೂ ಅನಾವರಣಗೊಳಿಸಿಲ್ಲ, ಆದರೆ ಇದು ತಾಜಾ ಡ್ಯಾಶ್‌ಬೋರ್ಡ್ ವಿನ್ಯಾಸ ಮತ್ತು ಹೊಸ ಕ್ಯಾಬಿನ್ ಥೀಮ್ ಅನ್ನು ಹೊಂದಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಅಮೇಜ್ ದೊಡ್ಡ ಟಚ್‌ಸ್ಕ್ರೀನ್, ವೈರ್‌ಲೆಸ್ ಫೋನ್ ಚಾರ್ಜರ್, ಡ್ರೈವರ್‌ಗಾಗಿ ಸೆಮಿ-ಡಿಜಿಟಲ್ ಡಿಸ್‌ಪ್ಲೇ ಮತ್ತು ಸಿಂಗಲ್-ಪೇನ್ ಸನ್‌ರೂಫ್‌ನಂತಹ ಹೊಸ ಫೀಚರ್‌ಗಳೊಂದಿಗೆ ಬರುವ ನಿರೀಕ್ಷೆಯಿದೆ.

ಸುರಕ್ಷತೆಯ ಪ್ಯಾಕೇಜ್‌ನಲ್ಲಿ, ಇದು 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ನಂತೆ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ರಿಯರ್ ವ್ಯೂ ಕ್ಯಾಮೆರಾದೊಂದಿಗೆ ಬರುವ ನಿರೀಕ್ಷೆಯಿದೆ.

ಮೊದಲಿನಂತೆಯೇ ಅದೇ ಪವರ್‌ಟ್ರೇನ್ ಅನ್ನು ಬಳಸುವ ಸಾಧ್ಯತೆ

ಹೊಸ ಅಮೇಜ್ ಅದರ ಹೊರಹೋಗುವ ಆವೃತ್ತಿಯೊಂದಿಗೆ ನೀಡಲಾದ ಅದೇ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಬಳಸುವ ಸಾಧ್ಯತೆಯಿದೆ. ಇದರ ವಿಶೇಷಣಗಳು ಈ ಕೆಳಗಿನಂತಿವೆ:

ಎಂಜಿನ್‌

1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್

ಪವರ್‌

90 ಪಿಎಸ್‌

ಟಾರ್ಕ್‌

110 ಎನ್‌ಎಮ್‌

ಗೇರ್‌ಬಾಕ್ಸ್‌

5-ಸ್ಪೀಡ್‌ ಮ್ಯಾನುವಲ್‌, CVT*

* CVT - ಕಂಟಿನ್ಯೂವಸ್ಲಿ ವೇರಿಯಬಲ್ ಟ್ರಾನ್ಸ್‌ಮಿಷನ್‌

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

2024 ರ ಹೋಂಡಾ ಅಮೇಜ್‌ನ ಬೆಲೆ 7.50 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ. ಇದು ಹೊಸ-ಜನರೇಶನ್‌ನ ಮಾರುತಿ ಡಿಜೈರ್, ಟಾಟಾ ಟಿಗೋರ್ ಮತ್ತು ಹ್ಯುಂಡೈ ಔರಾಗೆ ಪ್ರತಿಸ್ಪರ್ಧಿಯಾಗಲಿದೆ.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ : ಹೋಂಡಾ ಅಮೇಜ್ ಆಟೋಮ್ಯಾಟಿಕ್

Share via

Write your Comment on Honda ಅಮೇಜ್‌

R
ram
Nov 11, 2024, 4:20:37 PM

It must be Ncap rating 5 star

A
anand gupta
Nov 10, 2024, 9:31:45 AM

I hope it will be very charming

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.1.70 - 2.69 ಸಿಆರ್*
ಹೊಸ ವೇರಿಯೆಂಟ್
Rs.6.54 - 9.11 ಲಕ್ಷ*
ಫೇಸ್ ಲಿಫ್ಟ್
ಹೊಸ ವೇರಿಯೆಂಟ್
Rs.12.28 - 16.55 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ