ಕೆಲವು ಡೀಲರ್‌ಶಿಪ್‌ಗಳಲ್ಲಿ ಹೊಸ Honda Amazeನ ಆಫ್‌ಲೈನ್ ಬುಕಿಂಗ್‌ಗಳು ಪ್ರಾರಂಭ
ಹೋಂಡಾ ಅಮೇಜ್ 2025 ಗಾಗಿ dipan ಮೂಲಕ ನವೆಂಬರ್ 26, 2024 04:05 pm ರಂದು ಪ್ರಕಟಿಸಲಾಗಿದೆ
- 63 Views
- ಕಾಮೆಂಟ್ ಅನ್ನು ಬರೆಯಿರಿ
2024ರ ಹೋಂಡಾ ಅಮೇಜ್ ಅನ್ನು ಡಿಸೆಂಬರ್ 4 ರಂದು ಪರಿಚಯಿಸಲಾಗುವುದು ಮತ್ತು ಬೆಲೆಗಳು ರೂ 7.5 ಲಕ್ಷ ರೂ.ನಿಂದ(ಎಕ್ಸ್ ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ
-
ಮೂರನೇ ತಲೆಮಾರಿನ ಅಮೇಜ್ ಅನ್ನು ಭಾರತದಲ್ಲಿ ಡಿಸೆಂಬರ್ 4 ರಂದು ಪರಿಚಯಿಸಲಾಗುವುದು.
-
ಹೋಂಡಾ ಈಗಾಗಲೇ ಈ ಕಾರಿನ ಕೆಲವು ವಿನ್ಯಾಸದ ಸ್ಕೆಚ್‌ಗಳನ್ನು ಬಹಿರಂಗಪಡಿಸಿದೆ.
-
ಇದು ನಯವಾದ ಟ್ವಿನ್-ಪಾಡ್ ಹೆಡ್‌ಲೈಟ್‌ಗಳು ಮತ್ತು ಸುತ್ತುವ ಟೈಲ್ ಲೈಟ್‌ಗಳೊಂದಿಗೆ ಹೋಂಡಾ ಸಿಟಿ-ಪ್ರೇರಿತ ವಿನ್ಯಾಸವನ್ನು ತೋರಿಸುತ್ತದೆ.
-
ನೀಲಿ ಲೈಟಿಂಗ್ ಮತ್ತು ಬೋರ್ಡ್‌ನಿಂದ ಮೇಲಕ್ಕಿರುವ ಟಚ್‌ಸ್ಕ್ರೀನ್‌ನೊಂದಿಗೆ ಡ್ಯಾಶ್‌ಬೋರ್ಡ್ ವಿನ್ಯಾಸವು ಅಕಾರ್ಡ್‌ನಂತೆಯೇ ಇದೆ.
-
ನಿರೀಕ್ಷಿತ ಫೀಚರ್‌ಗಳಲ್ಲಿ ದೊಡ್ಡ ಟಚ್‌ಸ್ಕ್ರೀನ್, ಸಿಂಗಲ್ ಪೇನ್ ಸನ್‌ರೂಫ್ ಮತ್ತು ಕೆಲವು ADAS ಫೀಚರ್‌ಗಳು ಸೇರಿವೆ.
-
ಅದೇ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಅದೇ 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮುಂದುವರಿಯಬಹುದು.
ಮಾರುತಿ ಡಿಜೈರ್ ಇತ್ತೀಚೆಗೆ ತನ್ನ ನಾಲ್ಕನೇ ಜನರೇಶನ್‌ನ ಅವತಾರದಲ್ಲಿ ಪಾದಾರ್ಪಣೆ ಮಾಡಿದ ನಂತರ, ಇದರ ಪ್ರತಿಸ್ಪರ್ಧಿಯಾದ ಹೋಂಡಾ ಅಮೇಜ್ ಸಹ ಭಾರತದಲ್ಲಿ ಡಿಸೆಂಬರ್ 4 ರಂದು ಬಿಡುಗಡೆ ಮಾಡಲಿರುವ ಜನರೇಶನ್‌ನ ಬದಲಾವಣೆಗೆ ಸಜ್ಜಾಗಿದೆ. ಈ ಸಬ್‌ಕಾಂಪ್ಯಾಕ್ಟ್ ಸೆಡಾನ್ ಕುರಿತು ವಿವರವಾದ ಮಾಹಿತಿಗಾಗಿ ಕಾಯುತ್ತಿರುವಾಗ, ಭಾರತದಾದ್ಯಂತ ಕೆಲವು ಡೀಲರ್‌ಶಿಪ್‌ಗಳು ಈಗಾಗಲೇ ಆಫ್‌ಲೈನ್ ಬುಕಿಂಗ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿವೆ ಎಂಬುವುದು ತಿಳಿದುಬಂದಿದೆ. ಮುಂಬರುವ ಅಮೇಜ್ ಬಗ್ಗೆ ನಮಗೆ ತಿಳಿದಿರುವ ಎಲ್ಲವನ್ನೂ ನಾವು ಈಗ ಸಂಕ್ಷಿಪ್ತವಾಗಿ ನೋಡೋಣ:
2024ರ ಹೋಂಡಾ ಅಮೇಜ್: ಒಂದು ಅವಲೋಕನ
2024ರ ಹೋಂಡಾ ಅಮೇಜ್‌ನ ಟೀಸರ್ ಸ್ಕೆಚ್‌ಗಳು ಹೋಂಡಾ ಸಿಟಿ ಮತ್ತು ಇಂಟರ್ನ್ಯಾಷನಲ್-ಮೊಡೆಲ್ ಅಕಾರ್ಡ್‌ನಿಂದ ಪ್ರೇರಿತವಾದ ತಾಜಾ ವಿನ್ಯಾಸವನ್ನು ಬಹಿರಂಗಪಡಿಸುತ್ತವೆ. ಇದು ಟ್ವಿನ್-ಪಾಡ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಕನೆಕ್ಟ್ ಮಾಡುವ ಕ್ರೋಮ್ ಬಾರ್, ಆಯತಾಕಾರದ ಗ್ರಿಲ್, ಮಲ್ಟಿ-ಸ್ಪೋಕ್ ಅಲಾಯ್ ವೀಲ್‌ಗಳು ಮತ್ತು ನಯವಾದ ಎಲ್‌ಇಡಿ ಟೈಲ್ ಲೈಟ್‌ಗಳನ್ನು ಒಳಗೊಂಡಿರಬಹುದು.
ಒಳಭಾಗದಲ್ಲಿ, ಕಪ್ಪು ಮತ್ತು ಮರಳು ಬಣ್ಣದ ಥೀಮ್, 3-ಸ್ಪೋಕ್ ಸ್ಟೀರಿಂಗ್ ವೀಲ್, ಫ್ರೀ-ಸ್ಟ್ಯಾಂಡಿಂಗ್ ಟಚ್‌ಸ್ಕ್ರೀನ್ ಮತ್ತು ಅಕಾರ್ಡ್‌ನ ಮಾದರಿಯ ಡ್ಯಾಶ್‌ಬೋರ್ಡ್ ಟ್ರಿಮ್ ನೊಂದಿಗೆ ಇದರ ಕ್ಯಾಬಿನ್ ಸಿಟಿ ಮತ್ತು ಎಲಿವೇಟ್ ಅನ್ನು ಹೋಲುವ ನಿರೀಕ್ಷೆಯಿದೆ,
ಇದನ್ನೂ ಓದಿ: ಹಳೆಯ vs ಹೊಸ ಮಾರುತಿ ಡಿಜೈರ್: ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳ ಹೊಲಿಕೆ
ಆಫರ್‌ನಲ್ಲಿರುವ ಫೀಚರ್‌ಗಳಲ್ಲಿ ವೈರ್‌ಲೆಸ್ ಫೋನ್ ಚಾರ್ಜರ್, ಆಟೋ ಎಸಿ, ಸಿಂಗಲ್-ಪೇನ್ ಸನ್‌ರೂಫ್, ಆರು ಏರ್‌ಬ್ಯಾಗ್‌ಗಳು ಮತ್ತು ರಿಯರ್‌ವ್ಯೂ ಕ್ಯಾಮೆರಾ ಸೇರಿವೆ. ಇಂಟೀರಿಯರ್ ಡಿಸೈನ್ ಸ್ಕೆಚ್ ಸಹ ಈ ಸಬ್-4ಎಮ್ ಸೆಡಾನ್ ಕೆಲವು ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳನ್ನು (ADAS) ಪಡೆಯಬಹುದು ಎಂದು ತಿಳಿಸುತ್ತದೆ, ಇದು ಈ ಸೆಗ್ಮೆಂಟ್‌ನಲ್ಲಿ ಮೊದಲ ಬಾರಿಗೆ ಪರಿಚಯಿಸಿದಂತಾಗುತ್ತದೆ.
ಅಮೇಜ್ ತನ್ನ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು (90 ಪಿಎಸ್/110 ಎನ್‌ಎಮ್) 5-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಆಯ್ಕೆಗಳೊಂದಿಗೆ ಉಳಿಸಿಕೊಳ್ಳುವ ನಿರೀಕ್ಷೆಯಿದೆ.
2024 ಹೋಂಡಾ ಅಮೇಜ್: ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
2025ರ ಹೋಂಡಾ ಅಮೇಜ್ ಬೆಲೆ 7.5 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ. ಇದು ಸಬ್-4ಎಮ್ ಸೆಡಾನ್ ಸೆಗ್ಮೆಂಟ್‌ನಲ್ಲಿ ಟಾಟಾ ಟಿಗೊರ್, ಹ್ಯುಂಡೈ ಔರಾ ಮತ್ತು ಮಾರುತಿ ಡಿಜೈರ್‌ಗೆ ಪ್ರತಿಸ್ಪರ್ಧಿಯಾಗಿ ಮುಂದುವರಿಯುತ್ತದೆ.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ : ಅಮೇಜ್ ಆಟೋಮ್ಯಾಟಿಕ್
0 out of 0 found this helpful