ಆಲ್ಟ್ರೋಝ್‌ನೊಂದಿಗೆ ಹಂಚಿಕೊಂಡಿರುವ ದೊಡ್ಡ ಫೀಚರ್‌ಗಳನ್ನು ಬಹಿರಂಗಪಡಿಸಿದ ನವೀಕೃತ ಟಾಟಾ ನೆಕ್ಸಾನ್‌ನ ಹೊಸ ಸ್ಪೈ ಶಾಟ್‌ಗಳು
ಟಾಟಾ ನೆಕ್ಸಾನ್ ಗಾಗಿ rohit ಮೂಲಕ ಏಪ್ರಿಲ್ 27, 2023 08:18 pm ರಂದು ಮಾರ್ಪಡಿಸಲಾಗಿದೆ
- 15 Views
- ಕಾಮೆಂಟ್ ಅನ್ನು ಬರೆಯಿರಿ
ಟಾಟಾ ತನ್ನ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ (ಡಿಸಿಟಿ ) ಗೇರ್‌ಬಾಕ್ಸ್ ಅನ್ನು ಆಲ್ಟ್ರೋಝ್‌ನಲ್ಲಿ 2022 ರ ಮಾರ್ಚ್ ನಲ್ಲಿ ಪರಿಚಯಿಸಿದೆ.
- ಹೊಸ ಸ್ಪೈಶಾಟ್‌ಗಳಲ್ಲಿ ಮುಂಬರುವ ನೆಕ್ಸಾನ್ ಡಿಸಿಟಿ ಗೇರ್‌ಸ್ಟಿಕ್‌ಗಾಗಿ ಆಲ್ಟ್ರೋಝ್-ತರಹದ “ಪಾರ್ಕ್” ಮೋಡ್ ಹೊಂದಿರುವುದನ್ನು ನಾವು ಗಮನಿಸಬಹುದು.
- ಈ ಸ್ಪೈ ಶಾಟ್‌ಗಳು ಸುಳಿವು ನೀಡುವಂತೆ ಟಾಟಾ ಈ ಎಸ್‌ಯುವಿಯನ್ನು ಪ್ಯಾಡಲ್ ಶಿಫ್ಟರ್‌ನೊಂದಿಗೆ ಸಜ್ಜುಗೊಳಿಸಲಿದೆ.
- ಇದರಲ್ಲಿನ ಇತರ ಹೊಸ ಫೀಚರ್‌ಗಳು 360-ಡಿಗ್ರಿ ಕ್ಯಾಮರಾ ಮತ್ತು ADAS ಅನ್ನು ಒಳಗೊಂಡಿರಬಹುದು.
- ಪ್ರಸ್ತುತ ಮಾಡೆಲ್‌ನಂತೆಯೇ ಅದೇ 1.5-ಲೀಟರ್ ಡಿಸೇಲ್ ಎಂಜಿನ್ ಅನ್ನು ಪಡೆಯುವ ಸಾಧ್ಯತೆಯಿದೆ; ಹೊಸ 1.2-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ಪಡೆಯಬಹುದು.
- 2024 ರ ಆರಂಭದಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ; ಆರಂಭಿಕ ಬೆಲೆಯು ರೂ. 8 ಲಕ್ಷದಿಂದ (ಎಕ್ಸ್-ಶೋರೂಮ್) ಪ್ರಾರಂಭವಾಗುವ ಸಾಧ್ಯತೆಯಿದೆ.
ಇಂದು ದೇಶದಲ್ಲಿ ಮಾರಾಟವಾಗುತ್ತಿರುವ ಸಬ್-4m ಎಸ್‌ಯುವಿಗಳಲ್ಲಿ ಒಂದಾದ ಟಾಟಾ ನೆಕ್ಸಾನ್, ಮತ್ತೊಂದು ಮಿಡ್‌ಲೈಫ್ ರಿಫ್ರೆಶ್‌ಗಾಗಿ ಸಿದ್ಧವಾಗುತ್ತಿದೆ. ಅದರ ಟೆಸ್ಟ್ ಮ್ಯೂಲ್‌ಗಳು ಈಗಾಗಲೇ ಕೆಲವು ಬಾರಿ ಕಂಡಿದ್ದರೂ ಇತ್ತೀಚಿನ ಸ್ಪೈ ಶಾಟ್‌ಗಳು ಇನ್ನೂ ಕೆಲವು ಆಸಕ್ತಿದಾಯಕ ವಿವರಗಳನ್ನು ಬಹಿರಂಗಪಡಿಸುತ್ತವೆ.
ಅತ್ಯಂತ ಪ್ರಮುಖ ಅಪ್‌ಡೇಟ್
ಟಾಟಾ ಎಎಂಟಿ ಆಯ್ಕೆಯನ್ನು ಬದಲಿಸಲು ಆಲ್ಟ್ರೋಝ್‌ನಂತೆಯೇ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ (DCT) ನೊಂದಿಗೆ ನವೀಕೃತ ನೆಕ್ಸಾನ್ ಅನ್ನು ಸಜ್ಜುಗೊಳಿಸಲಿದೆ ಎಂಬುದನ್ನು ಇತ್ತೀಚಿನ ಸ್ಪೈ ಶಾಟ್‌ಗಳು ಸೂಚಿಸುತ್ತವೆ. ಈ ಹೊಸ ನೆಕ್ಸಾನ್‌ನ ಸ್ಪೈಶಾಟ್‌ಗಳು ಅದರ ಹ್ಯಾಚ್‌ಬ್ಯಾಕ್ ವಾಹನಗಳಲ್ಲಿನ ಡ್ರೈವ್ ಸೆಲೆಕ್ಟ್ ಗುರುತುಗಳಂತೆಯೇ “ಪಾರ್ಕ್” ಮೋಡ್ ಅನ್ನು ಪಡೆಯುತ್ತದೆ ಎಂಬುದನ್ನು ತಿಳಿಸುತ್ತವೆ. ಕಾರು ತಯಾರಕರು ಡಿಸಿಟಿ ಆಯ್ಕೆಯೊಂದಿಗೆ ಈ ಎಸ್‌ಯುವಿಯ ಸಲಕರಣಾ ಲಿಸ್ಟ್‌ಗೆ ಪ್ಯಾಡಲ್ ಶಿಫ್ಟರ್‌ಗಳನ್ನು ಸೇರಿಸಿದ್ದಾರೆ ಎಂಬುದನ್ನು ಈ ಹೊಸ ಸ್ಪೈಶಾಟ್ ಚಿತ್ರವು ಬಹಿರಂಗಪಡಿಸುತ್ತದೆ.
ಹಿಂದೆ ಗಮನಿಸಿದ ಬದಲಾವಣೆಗಳು
ಇತ್ತೀಚೆಗೆ ನವೀಕರಸಲಾದ ಹ್ಯಾರಿಯರ್-ಸಫಾರಿ ಜೋಡಿ ಮತ್ತು ಹೊಸ ನೆಕ್ಸಾನ್ ಇವಿ ಮ್ಯಾಕ್ಸ್ ಡಾರ್ಕ್ ಆವೃತ್ತಿಯಲ್ಲಿ ಕಾಣಿಸಿಕೊಂಡಿರುವ ದೊಡ್ಡ 10.25-ಇಂಚಿನ ಟಚ್‌ಸ್ಕ್ರೀನ್‌ನೊಂದಿಗೆ ಈ ನವೀಕೃತ ನೆಕ್ಸಾನ್ ಬರಲಿದೆ ಎಂದು ಈ ಹಿಂದಿನ ಸ್ಪೈಶಾಟ್‌ಗಳು ದೃಢಪಡಿಸಿದ್ದವು. ಹೊಸ ನೆಕ್ಸಾನ್ ಅವಿನ್ಯಾ ತರಹದ ಫ್ಲಾಟ್-ಬಾಟಮ್ ಸ್ಟಿಯರಿಂಗ್ ವ್ಹೀಲ್, ನೀಲಿ ಬಣ್ಣದ ಮೇಲ್ಗವಸು, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಅನ್ನು ಪಡೆಯುತ್ತದೆ ಎಂಬುದನ್ನು ಸಹ ಬಹಿರಂಗಪಡಿಸಲಾಗಿತ್ತು.
ಇತರ ವೈಶಿಷ್ಟ್ಯ ನವೀಕರಣಗಳೆಂದರೆ 360-ಡಿಗ್ರಿ ಕ್ಯಾಮರಾ, ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ಮತ್ತು ಆರು ಏರ್‌ಬ್ಯಾಗ್‌ಗಳು. ನೆಕ್ಸಾನ್ ಪ್ರಸ್ತುತ ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಆಟೋ ಕ್ಲೈಮೆಟ್ ಕಂಟ್ರೋಲ್‌ನಂತಹ ಫೀಚರ್‌ಗಳನ್ನು ಪಡೆಯುತ್ತದೆ.
ಪವರ್‌ಟ್ರೇನ್ ವಿವರಗಳು
ಈ ನವೀಕೃತ ನೆಕ್ಸಾನ್ ತನ್ನ ಅದೇ 1.5-ಲೀಟರ್ ಡಿಸೇಲ್ ಎಂಜಿನ್‌ನೊಂದಿಗೆ ಮ್ಯಾನ್ಯುವಲ್ ಮತ್ತು ಎಎಂಟಿ ಆಯ್ಕೆಯೊಂದಿಗೆ ಮುಂದುವರಿಯುವ ಸಾಧ್ಯತೆಯಿದೆ. ಟಾಟಾ ಇದನ್ನು ಅಪ್‌ಡೇಟೆಡ್ 1.2-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ (125PS/225Nm) ನೊಂದಿಗೆ ಸಹ ನೀಡಬಹುದು. ಪೆಟ್ರೋಲ್ ಎಂಜಿನ್ ಡಿಸಿಟಿ ಆಯ್ಕೆಯೊಂದಿಗೆ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅನ್ನು ಖಂಡಿತವಾಗಿಯೂ ಪಡೆಯುತ್ತದೆ.
ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು
ಟಾಟಾ ಮುಂದಿನ ವರ್ಷದ ಆರಂಭದಲ್ಲಿ ಈ ನವೀಕೃತ ನೆಕ್ಸಾನ್ ಅನ್ನು ರೂ. 8 ಲಕ್ಷದ ಆರಂಭಿಕ ಬೆಲೆಯೊಂದಿಗೆ (ಎಕ್ಸ್-ಶೋರೂಮ್) ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಸಬ್-4m ಎಸ್‌ಯುವಿಯು ಕಿಯಾ ಸೋನೆಟ್, ಮಹೀಂದ್ರಾ XUV300, ಹ್ಯುಂಡೈ ವೆನ್ಯು, ರೆನಾಲ್ಟ್ ಕಿಗರ್, ಮಾರುತಿ ಬ್ರೆಝಾ, ನಿಸಾನ್ ಮ್ಯಾಗ್ನೇಟ್ ಮತ್ತು ಮಾರುತಿ ಫ್ರಾಂಕ್ಸ್ ನೊಂದಿಗೆ ತನ್ನ ಸ್ಪರ್ಧೆಯನ್ನು ಹೊಂದಿರುತ್ತದೆ.
ಇನ್ನಷ್ಟು ಇಲ್ಲಿ ಓದಿ : ಟಾಟಾ ನೆಕ್ಸಾನ್ ಎಎಂಟಿ