ಎಕ್ಸಾಸ್ಟ್ ನೋಟ್ ಬಗ್ಗೆ ಸುಳಿವು ನೀಡಿದ ಹೊಸ Tata Altroz Racer ಟೀಸರ್
ಇದರ ಹೊಸ ಟೀಸರ್ ಮುಂಭಾಗದ ಫೆಂಡರ್‌ಗಳಲ್ಲಿ ಸನ್‌ರೂಫ್ ಮತ್ತು ವಿಶೇಷ ರೇಸರ್ ಬ್ಯಾಡ್ಜ್ ಅನ್ನು ತೋರಿಸುತ್ತದೆ.
ಟಾಟಾ ಆಲ್ಟ್ರೊಜ್ ರೇಸರ್‌ನ ಮೊದಲ ಟೀಸರ್ ವೀಡಿಯೋ ಹೊರಬಂದಿದ್ದು, ಶೀಘ್ರದಲ್ಲೇ ಅದು ಮಾರುಕಟ್ಟೆಗೆ ಬರುವ ಸೂಚನೆಯನ್ನು ನೀಡಿದೆ. ಟೀಸರ್ ಅನ್ನು ಹತ್ತಿರದಿಂದ ನೋಡಿದಾಗ ಮುಂಬರುವ ಟಾಟಾ ಆಲ್ಟ್ರೊಜ್ ರೇಸರ್ ವರ್ಷನ್ ನ ದೃಢೀಕರಿಸಲಾದ ಹಲವಾರು ಫೀಚರ್ ಗಳನ್ನು ಇದು ಬಹಿರಂಗಪಡಿಸುತ್ತದೆ.
ಹೊರಭಾಗದ ಡಿಸೈನ್ ನ ಝಲಕ್
ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2024 ರ ಮಾಡೆಲ್ ನಲ್ಲಿ ತೋರಿಸಿದಂತೆ, ಹೊಸ ಡ್ಯುಯಲ್-ಟೋನ್ ಆರೆಂಜ್ ಮತ್ತು ಬ್ಲಾಕ್ ಕಲರ್ ನಲ್ಲಿ ಸ್ಪೋರ್ಟಿಯರ್ ಹ್ಯಾಚ್‌ಬ್ಯಾಕ್‌ನ ಸೈಡ್ ಪ್ರೊಫೈಲ್ ಅನ್ನು ಟೀಸರ್ ತೋರಿಸುತ್ತದೆ. ಇದನ್ನು ಸ್ಟ್ಯಾಂಡರ್ಡ್ ಆಲ್ಟ್ರೋಜ್‌ನಿಂದ ಭಿನ್ನವಾಗಿ ಕಾಣಲು ಮುಂಭಾಗದ ಫೆಂಡರ್‌ಗಳಲ್ಲಿ ರೇಸರ್ ಬ್ಯಾಡ್ಜ್ ಅನ್ನು ನೀಡಲಾಗಿದೆ.
ಆಲ್ಟ್ರೊಜ್ ರೇಸರ್ ವರ್ಷನ್ ಬಾನೆಟ್‌ನಿಂದ ಶುರುವಾಗಿ ರೂಫ್ ವರೆಗೆ ರೇಸ್ ಫ್ಲ್ಯಾಗ್-ಪ್ರೇರಿತ ಡಿಸೈನ್ ನೊಂದಿಗೆ ಡ್ಯುಯಲ್ ವೈಟ್ ಸ್ಟ್ರೈಪ್‌ಗಳನ್ನು ಪಡೆಯುತ್ತದೆ. ಬಾನೆಟ್ ಮತ್ತು ಪಿಲ್ಲರ್‌ಗಳೆಲ್ಲವೂ ಬ್ಲಾಕ್ ಕಲರ್ ನಲ್ಲಿದ್ದು, ಫ್ಲೋಟಿಂಗ್ ರೂಫ್ ನಂತಹ ಅನುಭವವನ್ನು ಸೃಷ್ಟಿಸುತ್ತದೆ ಎಂದು ಟೀಸರ್ ತೋರಿಸುತ್ತದೆ. ಆಲ್ಟ್ರೋಜ್ ರೇಸರ್ ಸಿಂಗಲ್ ಪೇನ್ ಸನ್‌ರೂಫ್ ಅನ್ನು ಪಡೆಯಲಿದೆ ಎಂದು ಟೀಸರ್ ಖಚಿತಪಡಿಸುತ್ತದೆ.
ಒಳಭಾಗ ಮತ್ತು ಫೀಚರ್ ಗಳ ವಿವರ
ಟೀಸರ್ ಒಳಭಾಗದ ಒಂದು ನೋಟವನ್ನು ತೋರಿಸುತ್ತಾ, 10.25-ಇಂಚಿನ ಟಚ್‌ಸ್ಕ್ರೀನ್ ಮತ್ತು ಗೇರ್ ಲಿವರ್‌ನ ಸುತ್ತಲೂ ಆರೆಂಜ್ ಅಕ್ಸೆಂಟ್ ಅನ್ನು ತೋರಿಸುತ್ತದೆ. ರೇಸರ್ ವರ್ಷನ್ ಹೆಡ್ಸ್-ಅಪ್ ಡಿಸ್ಪ್ಲೇ, 360-ಡಿಗ್ರಿ ಕ್ಯಾಮೆರಾ, ಆರೆಂಜ್ ಆಂಬಿಯೆಂಟ್ ಲೈಟಿಂಗ್, 7-ಇಂಚಿನ ಫುಲ್ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳಂತಹ ಹೊಸ ಫೀಚರ್ ಗಳನ್ನು ಕೂಡ ಪಡೆಯುತ್ತದೆ.
ಇದರ ಜೊತೆಗೆ, ಟೀಸರ್ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಈ ಸ್ಪೋರ್ಟಿಯರ್ ವರ್ಷನ್ ನ ಎಕ್ಸಾಸ್ಟ್ ಸೌಂಡ್ ಅನ್ನು ಕೂಡ ಬಹಿರಂಗಪಡಿಸುತ್ತದೆ. ಈ ಮಾಡೆಲ್ ಸ್ಟ್ಯಾಂಡರ್ಡ್ ಆಲ್ಟ್ರೊಜ್‌ಗಿಂತ ಇನ್ನೂ ಆಕರ್ಷಕವಾದ ಎಕ್ಸಾಸ್ಟ್ ನೋಟ್ ಅನ್ನು ಹೊಂದಿದ್ದು, ಇದು ಸ್ಪೋರ್ಟಿ ಲುಕ್ ಅನ್ನು ನೀಡುತ್ತದೆ.
ಇದನ್ನು ಕೂಡ ಓದಿ: ರೆಗ್ಯುಲರ್ ಆಲ್ಟ್ರೊಜ್ ಗೆ ಹೋಲಿಸಿದರೆ ಟಾಟಾ ಆಲ್ಟ್ರೊಜ್ ರೇಸರ್ ಪಡೆಯಲಿರುವ 7 ಫೀಚರ್ ಗಳು
ಪವರ್‌ಟ್ರೇನ್
ಆಲ್ಟ್ರೊಜ್ ರೇಸರ್ ವರ್ಷನ್ ನೆಕ್ಸಾನ್‌ನಲ್ಲಿರುವ ಹೆಚ್ಚು ಶಕ್ತಿಶಾಲಿ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ, ಇದು ಹೊಸ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ನೊಂದಿಗೆ 120 PS ಮತ್ತು 170 Nm ಅನ್ನು ಉತ್ಪಾದಿಸುತ್ತದೆ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ (DCT) ಅನ್ನು ಕೂಡ ಪಡೆಯಬಹುದು.
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ಆಲ್ಟ್ರೊಜ್ ರೇಸರ್ ಬೆಲೆಯು 10 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ. ಆಲ್ಟ್ರೊಜ್ ರೇಸರ್ ಹ್ಯುಂಡೈ i20 N ಲೈನ್‌ಗೆ ನೇರ ಪ್ರತಿಸ್ಪರ್ಧಿಯಾಗಲಿದೆ.
ಇನ್ನಷ್ಟು ಓದಿ: ಆಲ್ಟ್ರೊಜ್ ಆನ್ ರೋಡ್ ಬೆಲೆ