Mahindra Thar Roxx ಹೆಸರಿನ ಇನ್ಸ್ಟಾಗ್ರಾಮ್ ಸಮೀಕ್ಷೆ: ಇಲ್ಲಿದೆ ನಮಗೆ ಸಿಕ್ಕಿರುವ ಕುತೂಹಲಕಾರಿ ಫಲಿತಾಂಶಗಳು!
ಥಾರ್ ರಾಕ್ಸ್ ಹೆಸರಿನ ಬಗ್ಗೆ ನಮ್ಮ ಫಾಲೋವರ್ಸ್ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಸಮೀಕ್ಷೆಯು ನಮಗೆ ಒಳನೋಟವನ್ನು ನೀಡುತ್ತದೆ ಮತ್ತು ಮಹೀಂದ್ರಾ ಆಯ್ಕೆ ಮಾಡಬಹುದಾದ ಇತರ ಸಂಭಾವ್ಯ ಹೆಸರುಗಳನ್ನು ಕೂಡ ನೋಡಲಿದ್ದೇವೆ
ಮಹೀಂದ್ರಾ ಥಾರ್ ತನ್ನ 5-ಡೋರ್ ಅನ್ನು ಅಧಿಕೃತವಾಗಿ 'ಥಾರ್ ರಾಕ್ಸ್' ಎಂದು ಹೆಸರಿಸುವ ಮೂಲಕ ಆಟೋಮೋಟಿವ್ ಇಂಡಸ್ಟ್ರಿಯಲ್ಲಿ ಒಂದು ಸಂಚಲನವನ್ನು ಮೂಡಿಸಿದೆ. ಅಂತಿಮ ಮಾಡೆಲ್ ಗಾಗಿ ಪರಿಗಣಿಸಲಾದ ಆರು ಇತರ ಪೇಟೆಂಟ್ ಮಾಡಿರುವ ಹೆಸರುಗಳಲ್ಲಿ ಇದನ್ನು ಆಯ್ಕೆ ಮಾಡಲಾಗಿದೆ. 'ರಾಕ್ಸ್ ' ಎಂಬ ಹೆಸರು ಜನರಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ, ಆದ್ದರಿಂದ ಮುಂಬರುವ ಥಾರ್ 5-ಡೋರ್ ಮಾಡೆಲ್ ಗೆ ನೀಡಿರುವ ಈ ಹೆಸರಿನ ಬಗ್ಗೆ ನಾವು ನಮ್ಮ ಇನ್ಸ್ಟಾಗ್ರಾಮ್ ಫಾಲೋವರ್ಸ್ ಗಳ ಅಭಿಪ್ರಾಯವನ್ನು ಕೇಳಲು ನಿರ್ಧರಿಸಿದೆವು. ನಮ್ಮ ಫಾಲೋವರ್ಸ್ ಗಳ ಪ್ರತಿಕ್ರಿಯೆ ಹೇಗಿತ್ತು ಎಂದು ನೋಡೋಣ:
ಜನರ ಅಭಿಪ್ರಾಯ
ಸಮೀಕ್ಷೆಯ ಪ್ರಶ್ನೆ ಸರಳವಾಗಿತ್ತು - "ನೀವು ಥಾರ್ ರಾಕ್ಸ್ ಹೆಸರನ್ನು ಇಷ್ಟಪಡುತ್ತೀರಾ?", ಮತ್ತು ಆಯ್ಕೆ ಮಾಡಲು ಎರಡು ಆಯ್ಕೆಗಳನ್ನು ನೀಡಲಾಗಿತ್ತು. ಫಲಿತಾಂಶಗಳು ಈ ಕೆಳಗಿನಂತಿದ್ದವು:
ಪ್ರತಿಕ್ರಿಯೆ ನೀಡಿದವರಲ್ಲಿ 72 ಪ್ರತಿಶತ ಜನರು ಹೊಸ ಥಾರ್ 5-ಡೋರ್‌ಗೆ ನೀಡಿರುವ 'ರಾಕ್ಸ್' ಹೆಸರನ್ನು ಇಷ್ಟಪಟ್ಟಿದ್ದಾರೆ. ಆದರೆ, 28 ಪ್ರತಿಶತದಷ್ಟು ಜನರು ಬೇರೆ ಹೆಸರು ಹೆಚ್ಚು ಸೂಕ್ತವೆಂದು ಪ್ರತಿಕ್ರಿಯಿಸಿದರು.
ಮಹೀಂದ್ರಾ ಇತರ ಯಾವ ಹೆಸರುಗಳನ್ನು ಟ್ರೇಡ್‌ಮಾರ್ಕ್ ಮಾಡಿದೆ?
ಥಾರ್ ರಾಕ್ಸ್ ಗೆ ಬೇರೆ ಹೆಸರನ್ನು ನೀಡಲು ಮಹೀಂದ್ರಾ ನಿರ್ಧರಿಸಿದ್ದರೆ, ಅದು ಥಾರ್ 5-ಡೋರ್ SUVಗೆ ಆರು ಇತರ ಟ್ರೇಡ್‌ಮಾರ್ಕ್ ಮಾಡಿರುವ ಹೆಸರುಗಳಿಂದ ಆಯ್ಕೆಮಾಡಬಹುದು. ಈ ಹೆಸರುಗಳ ವಿವರ ಇಲ್ಲಿದೆ:
ಇನ್ನಷ್ಟು ಓದಿ: ಮಹೀಂದ್ರಾ ಥಾರ್ ರಾಕ್ಸ್ ವರ್ಸಸ್ ಮಹೀಂದ್ರಾ ಥಾರ್ 3-ಡೋರ್: 5 ಪ್ರಮುಖ ಹೊರಭಾಗದ ವ್ಯತ್ಯಾಸಗಳು
ಥಾರ್ ರಾಕ್ಸ್ ಬಗ್ಗೆ ಇನ್ನಷ್ಟು ವಿವರ
ಮಹೀಂದ್ರಾ ಥಾರ್ ರಾಕ್ಸ್ ಆಗಸ್ಟ್ 15, 2024 ರಂದು ಲಾಂಚ್ ಆಗಲಿದೆ. ಥಾರ್‌ನ ಈ ಉದ್ದವಾದ ವರ್ಷನ್ 3-ಡೋರ್ ಮಾಡೆಲ್ ನ ಆಕಾರವನ್ನು ಹೋಲುತ್ತದೆ, ಅದರ ಜೊತೆಗೆ ಹೊಸ ಹೆಡ್‌ಲೈಟ್‌ಗಳು, C-ಆಕಾರದ ಇಂಟರ್ನಲ್ ಎಲಿಮೆಂಟ್ ಗಳೊಂದಿಗೆ LED ಟೈಲ್ ಲೈಟ್‌ಗಳು ಮತ್ತು ಎರಡು ಹೆಚ್ಚುವರಿ ಡೋರ್ ಗಳೊಂದಿಗೆ ಉದ್ದವಾದ ವೀಲ್‌ಬೇಸ್ ಅನ್ನು ಒಳಗೊಂಡಿರುತ್ತದೆ.
ಕ್ಯಾಬಿನ್ ನಲ್ಲಿ ಥಾರ್ ರಾಕ್ಸ್ ಬ್ಲಾಕ್ ಮತ್ತು ಬೀಜ್ ಕಲರ್ ನ ಅಪ್ಹೋಲಿಸ್ಟ್ರೀಯನ್ನು ಪಡೆಯಬಹುದು, ಮತ್ತು ಫೀಚರ್ ವಿಷಯದಲ್ಲಿ ಎರಡು 10.25-ಇಂಚಿನ ಸ್ಕ್ರೀನ್ ಗಳನ್ನು (ಒಂದು ಟಚ್‌ಸ್ಕ್ರೀನ್‌ಗೆ ಮತ್ತು ಇನ್ನೊಂದು ಡ್ರೈವರ್ ಡಿಸ್‌ಪ್ಲೇಗಾಗಿ), ಪನರೋಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆಯುವ ಸಾಧ್ಯತೆಯಿದೆ. ಸುರಕ್ಷತೆಗಾಗಿ, ಇದು ಆರು ಏರ್‌ಬ್ಯಾಗ್‌ಗಳು, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳ (ADAS) ಸೂಟ್ ಅನ್ನು ನೀಡುತ್ತದೆ.
ಥಾರ್ ರಾಕ್ಸ್ ಅದರ 3-ಡೋರ್ ಮಾಡೆಲ್ ನಲ್ಲಿರುವ ಎಂಜಿನ್‌ಗಳೊಂದಿಗೆ ಬರುವ ಸಾಧ್ಯತೆಯಿದೆ: 132 PS 2.2-ಲೀಟರ್ ಡೀಸೆಲ್ ಮತ್ತು 150 PS 2-ಲೀಟರ್ ಟರ್ಬೊ-ಪೆಟ್ರೋಲ್. 6-ಸ್ಪೀಡ್ ಮ್ಯಾನುವಲ್ ಮತ್ತು ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಎರಡೂ ನೀಡುವ ನಿರೀಕ್ಷೆಯಿದೆ.
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಮಹೀಂದ್ರಾ ಥಾರ್ ರಾಕ್ಸ್ ಬೆಲೆಯು ರೂ.15 ಲಕ್ಷಗಳಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ. ಇದು ಮಾರುತಿ ಜಿಮ್ನಿಗೆ ಹೋಲಿಸಿದರೆ ದೊಡ್ಡ ಗಾತ್ರದ ಪರ್ಯಾಯ ಆಯ್ಕೆಯಾಗಲಿದೆ ಮತ್ತು ಫೋರ್ಸ್ ಗೂರ್ಖಾ 5-ಡೋರ್ ಗೆ ನೇರ ಪ್ರತಿಸ್ಪರ್ಧಿಯಾಗಲಿದೆ.
ಮಹೀಂದ್ರಾ ಥಾರ್ ರಾಕ್ಸ್ ಹೆಸರಿನ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕೆಳಗೆ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.
ಆಟೋಮೋಟಿವ್ ಪ್ರಪಂಚದ ನಿರಂತರ ಅಪ್ಡೇಟ್ ಗಳನ್ನು ಪಡೆಯಲು ಕಾರ್ದೇಖೋ ವಾಟ್ಸ್ಅಪ್ ಚಾನಲ್ ಅನ್ನು ಫಾಲೋ ಮಾಡಿ.
ಇನ್ನಷ್ಟು ಓದಿ: ಮಹೀಂದ್ರಾ ಥಾರ್ ಆಟೋಮ್ಯಾಟಿಕ್
dipan
- 65 ವೀಕ್ಷಣಿಗಳು