• English
  • Login / Register

ಪ್ರಥಮ ಬಾರಿಗೆ Maruti e Vitaraದ ಉತ್ಪಾದನಾ ಆವೃತ್ತಿಯ ಟೀಸರ್‌ ಔಟ್‌

ಮಾರುತಿ ಇ vitara ಗಾಗಿ shreyash ಮೂಲಕ ಡಿಸೆಂಬರ್ 20, 2024 05:40 pm ರಂದು ಪ್ರಕಟಿಸಲಾಗಿದೆ

  • 64 Views
  • ಕಾಮೆಂಟ್‌ ಅನ್ನು ಬರೆಯಿರಿ

ಇ ವಿಟಾರಾವು ಮಾರುತಿಯ ಮೊದಲ ಆಲ್-ಎಲೆಕ್ಟ್ರಿಕ್ ಕೊಡುಗೆಯಾಗಿದ್ದು, ಇದು ಟಾಟಾ ಕರ್ವ್‌ ಇವಿ ಮತ್ತು ಎಂಜಿ ಝಡ್ಎಸ್ ಇವಿಗಳಂತಹುಗಳಿಗೆ ಸ್ಪರ್ಧೆಯನ್ನು ಒಡ್ಡುತ್ತದೆ

Production-spec Maruti e Vitara Teased For The First Time Ahead Of Debut At Bharat Mobility Global Expo 2025

  • 2025ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋವು ಜನವರಿ 17 ಮತ್ತು 22ರ ನಡುವೆ ನಡೆಯಲಿದೆ.

  • ಇ ವಿಟಾರಾ ಮಾರುತಿಯ ಹೊಸ ಹಾರ್ಟೆಕ್ಟ್-ಇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, ಇದನ್ನು ವಿಶೇಷವಾಗಿ ಇವಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.

  • ಹೊರಭಾಗದ ಹೈಲೈಟ್‌ಗಳು ವೈ-ಆಕಾರದ ಎಲ್ಇಡಿ ಡಿಆರ್‌ಎಲ್‌ಗಳು, ಕನೆಕ್ಟೆಡ್‌ ಎಲ್ಇಡಿ ಟೈಲ್ ಲೈಟ್‌ಗಳು ಮತ್ತು ಸಂಪೂರ್ಣ ಕಪ್ಪಾದ ಅಲಾಯ್ ವೀಲ್‌ಗಳನ್ನು ಒಳಗೊಂಡಿವೆ.

  • ಒಳಭಾಗದಲ್ಲಿ, ಗ್ಲೋಬಲ್-ಸ್ಪೆಕ್ ಇ ವಿಟಾರಾವು ಡ್ಯುಯಲ್ ಇಂಟಿಗ್ರೇಟೆಡ್ ಸ್ಕ್ರೀನ್‌ಗಳನ್ನು ಪಡೆಯುತ್ತದೆ.

  • ಜಾಗತಿಕವಾಗಿ ಇದನ್ನು 49 ಕಿ.ವ್ಯಾಟ್‌ ಮತ್ತು 61 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ.

  • ಭಾರತದಲ್ಲಿ ಇದು ಫ್ರಂಟ್-ವೀಲ್-ಡ್ರೈವ್ ಮತ್ತು ಆಲ್-ವೀಲ್-ಡ್ರೈವ್ ಆವೃತ್ತಿಗಳನ್ನು ಪಡೆಯಬಹುದೆಂದು ನಿರೀಕ್ಷಿಸಲಾಗಿದೆ.

  • ಅನಾವರಣಗೊಂಡ ಕೆಲದಿನದೊಳಗೆ ಬಿಡುಗಡೆಯಾಗುವ ಸಾಧ್ಯತೆ ಇದ್ದು, ಇದರ ಬೆಲೆ 22 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದು.

ಈ ಹಿಂದೆ ಅದರ ಪರಿಕಲ್ಪನೆಯ ರೂಪವನ್ನು eVX ಎಂದು ಕರೆಯಲ್ಪಡುತ್ತಿದ್ದ ಮಾರುತಿ ಸುಜುಕಿ ಇ ವಿಟಾರಾದ ಟೀಸರ್‌ ಅನ್ನು ಮೊದಲ ಬಾರಿಗೆ ಬಿಡುಗಡೆ ಮಾಡಲಾಗಿದೆ. ಜನವರಿ 17 ರಿಂದ 22 ರವರೆಗೆ ನಡೆಯಲಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ ಇ ವಿಟಾರಾ ಉತ್ಪಾದನೆಗೆ ಸಿದ್ಧವಾದ ಆವೃತ್ತಿಯನ್ನು ಪ್ರದರ್ಶಿಸುವುದಾಗಿ ಮಾರುತಿಯು ದೃಢಪಡಿಸಿದೆ.  ಪ್ರದರ್ಶನದ ನಂತರ ಇದರ ಬೆಲೆಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ಇ ವಿಟಾರಾವನ್ನು HEARTECT-e ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ ಮತ್ತು ಇದು ಮಾರುತಿಯ ಮೊದಲ ಆಲ್-ಎಲೆಕ್ಟ್ರಿಕ್ ಕಾರು ಆಗಲಿದೆ. 

ಟೀಸರ್‌ನಲ್ಲಿ ಏನಿದೆ?

ಟೀಸರ್ ಮುಖ್ಯವಾಗಿ ಇ ವಿಟಾರಾ ಮುಂಭಾಗದ ತುದಿಯನ್ನು ಪ್ರದರ್ಶಿಸುತ್ತದೆ, Y-ಆಕಾರದ ಎಲ್ಇಡಿ ಡಿಆರ್‌ಎಲ್‌ಗಳನ್ನು ಹೈಲೈಟ್ ಮಾಡುತ್ತದೆ. ಈ ಡಿಆರ್‌ಎಲ್‌ಗಳು ಇತ್ತೀಚೆಗೆ ಅನಾವರಣಗೊಂಡ ಇ-ವಿಟಾರಾದ ಜಾಗತಿಕ-ಸ್ಪೆಕ್ ಆವೃತ್ತಿಯಂತೆಯೇ ಕಾಣುತ್ತವೆ.

ವಿನ್ಯಾಸದ ಕುರಿತು ಇನ್ನಷ್ಟು

Maruti eVX Revealed Globally As The Suzuki e Vitara, India Launch Soon

ಗ್ಲೋಬಲ್-ಸ್ಪೆಕ್ ಇ ವಿಟಾರಾದಲ್ಲಿ ನೋಡಿದಂತೆ, ಇದು ಮುಂಭಾಗದಲ್ಲಿ ದಪ್ಪನಾದ ಬಂಪರ್ ಅನ್ನು ಪಡೆಯುತ್ತದೆ ಮತ್ತು ಅದು ಫಾಗ್‌ಲ್ಯಾಂಪ್‌ಗಳನ್ನು ಸಂಯೋಜಿಸುತ್ತದೆ. ಪ್ರೊಫೈಲ್‌ನಲ್ಲಿ, ಇ ವಿಟಾರಾ ರಗಡ್‌ ಆಗಿ ಕಾಣುತ್ತದೆ, ದಪ್ಪವಾದ ಬಾಡಿ ಕ್ಲಾಡಿಂಗ್ ಮತ್ತು 19-ಇಂಚಿನ ಸಂಪೂರ್ಣ ಕಪ್ಪಾದ ಅಲಾಯ್‌ ವೀಲ್‌ಗಳನ್ನು ಹೊಂದಿದೆ. ಆಸಕ್ತಿದಾಯಕ ಅಂಶವೆಂದರೆ, ಹಿಂದಿನ ಬಾಗಿಲಿನ ಹ್ಯಾಂಡಲ್‌ಗಳನ್ನು ಸಿ-ಪಿಲ್ಲರ್ ಮೇಲೆ ಇರಿಸಲಾಗಿದೆ. ಹಿಂಭಾಗದಲ್ಲಿ, ಇ-ವಿಟಾರಾವು ಕನೆಕ್ಟೆಡ್‌ ಎಲ್‌ಇಡಿ ಟೈಲ್ ಲೈಟ್‌ಗಳನ್ನು ಪಡೆಯುತ್ತದೆ, ಅದರ ಪರಿಕಲ್ಪನೆಯ ಆವೃತ್ತಿಯಲ್ಲಿ ನಾವು ನೋಡಿದಂತೆಯೇ 3-ಪೀಸ್ ಲೈಟಿಂಗ್ ಅಂಶಗಳನ್ನು ಹೊಂದಿದೆ. ಇಂಡಿಯಾ-ಸ್ಪೆಕ್ ಇ ವಿಟಾರಾ ಹೆಚ್ಚಾಗಿ ಈ ವಿನ್ಯಾಸದ ಶೈಲಿಯನ್ನು ಅನುಸರಿಸುತ್ತದೆ.

ಇದನ್ನೂ ಓದಿ: ಕೆಲವು Hyundai ಕಾರುಗಳ ಮೇಲೆ 2 ಲಕ್ಷ ರೂ.ಗಳವರೆಗೆ ಭರ್ಜರಿ ಡಿಸ್ಕೌಂಟ್‌..!

ಕ್ಯಾಬಿನ್ ಮತ್ತು ನಿರೀಕ್ಷಿತ ಫೀಚರ್‌ಗಳು

Maruti eVX Revealed Globally As The Suzuki e Vitara, India Launch Soon

ಜಾಗತಿಕ-ಸ್ಪೆಕ್ ಇ ವಿಟಾರಾ ಎರಡು-ಟೋನ್ ಕಪ್ಪು ಮತ್ತು ಕಂದು ಕ್ಯಾಬಿನ್ ಥೀಮ್ ಅನ್ನು ಪಡೆಯುತ್ತದೆ. ಸ್ಟೀರಿಂಗ್ ವೀಲ್ ಹೊಸ 2-ಸ್ಪೋಕ್ ಯುನಿಟ್ ಆಗಿದ್ದು, ಎಸಿ ವೆಂಟ್‌ಗಳನ್ನು ಲಂಬವಾಗಿ ಜೋಡಿಸಲಾಗಿದೆ ಮತ್ತು ಪ್ರೀಮಿಯಂ ನೋಟಕ್ಕಾಗಿ ಕ್ರೋಮ್‌ನಿಂದ ಆವೃತವಾಗಿದೆ. ಕ್ಯಾಬಿನ್‌ನ ಒಳಗಿನ ಪ್ರಮುಖ ಹೈಲೈಟ್‌ ಎಂದರೆ ಅದರ ಡ್ಯುಯಲ್-ಸ್ಕ್ರೀನ್ ಸೆಟಪ್ (ಒಂದು ಇನ್ಫೋಟೈನ್‌ಮೆಂಟ್ ಮತ್ತು ಇನ್ನೊಂದು ಡ್ರೈವರ್ ಡಿಸ್‌ಪ್ಲೇಗಾಗಿ).

ಇದು ಆಟೋಮ್ಯಾಟಿಕ್‌ ಎಸಿ, ಮುಂಭಾಗದಲ್ಲಿ ವೆಂಟಿಲೇಟೆಡ್ ಸೀಟುಗಳು ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಸೌಕರ್ಯಗಳನ್ನು ಪಡೆಯುವ ನಿರೀಕ್ಷೆಯಿದೆ. ಇದರ ಸುರಕ್ಷತಾ ಕಿಟ್ 6 ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್‌ನಂತೆ), 360-ಡಿಗ್ರಿ ಕ್ಯಾಮೆರಾ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಒಳಗೊಂಡಿರಬಹುದು.

ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್

ಅಂತಾರಾಷ್ಟ್ರೀಯವಾಗಿ, e Vitara ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುತ್ತಿದೆ, ಅವುಗಳೆಂದರೆ, 49 ಕಿ.ವ್ಯಾಟ್‌ ಮತ್ತು 61 ಕಿ.ವ್ಯಾಟ್‌. ವಿಶೇಷಣಗಳು ಈ ಕೆಳಗಿನಂತಿವೆ:

ವೇರಿಯೆಂಟ್‌

FWD (ಫ್ರಂಟ್‌-ವೀಲ್‌-ಡ್ರೈವ್‌)

FWD (ಫ್ರಂಟ್‌-ವೀಲ್‌-ಡ್ರೈವ್‌)

AWD (ಆಲ್‌-ವೀಲ್‌-ಡ್ರೈವ್‌)

ಬ್ಯಾಟರಿ ಪ್ಯಾಕ್‌

49 ಕಿ.ವ್ಯಾಟ್‌.

61 ಕಿ.ವ್ಯಾಟ್‌

61 ಕಿ.ವ್ಯಾಟ್‌

ಪವರ್‌

144 ಪಿಎಸ್‌

174 ಪಿಎಸ್‌

184 ಪಿಎಸ್‌

ಟಾರ್ಕ್‌

189 ಎನ್‌ಎಮ್‌

189 ಎನ್‌ಎಮ್‌

300 ಎನ್‌ಎಮ್‌

ಇದು ಜಾಗತಿಕವಾಗಿ FWD ಮತ್ತು AWD ಎರಡೂ ಆವೃತ್ತಿಗಳೊಂದಿಗೆ ಬಂದರೂ, ಮಾರುತಿಯ ಗ್ರ್ಯಾಂಡ್ ವಿಟಾರಾ ಈಗಾಗಲೇ AWD ಅನ್ನು ಪಡೆಯುತ್ತದೆ ಎಂದು ಪರಿಗಣಿಸಿ ಭಾರತದಲ್ಲಿ ಎರಡೂ ಆಯ್ಕೆಗಳು ಲಭ್ಯವಿರಬಹುದೆಂದು ಎಂದು ನಿರೀಕ್ಷಿಸಲಾಗಿದೆ. ಇದು ಸುಮಾರು 550 ಕಿಮೀಗಳಷ್ಟು ಕ್ಲೈಮ್ ಡ್ರೈವಿಂಗ್ ರೇಂಜ್‌ ಅನ್ನು ನೀಡುವ ನಿರೀಕ್ಷೆಯಿದೆ.

ಗಮನಿಸಿ: ರೇಂಜ್‌ ಮತ್ತು ವಿಶೇಷಣಗಳು ಜಾಗತಿಕ-ಸ್ಪೆಕ್ ಆವೃತ್ತಿಯದ್ದಾಗಿದ್ದು, ಮತ್ತು ಭಾರತದಲ್ಲಿ ಬದಲಾಗಬಹುದು.

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

 ಮಾರುತಿ ಇ ವಿಟಾರಾದ ಬೆಲೆಯು 22 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ. ಇದು MG ZS EV, ಟಾಟಾ ಕರ್ವ್‌ ಇವಿ, ಮಹೀಂದ್ರಾ BE 6, ಮಹೀಂದ್ರಾ XEV 9e ಮತ್ತು ಮುಂಬರುವ ಹ್ಯುಂಡೈ ಕ್ರೆಟಾ EV ಗೆ ಪ್ರತಿಸ್ಪರ್ಧಿಯಾಗಲಿದೆ. 

ವಾಹನ ಜಗತ್ತಿನ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೊ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

was this article helpful ?

Write your Comment on Maruti ಇ vitara

1 ಕಾಮೆಂಟ್
1
R
ramakrishnan nambiar
Dec 22, 2024, 9:07:57 PM

Best in class first in class

Read More...
    ಪ್ರತ್ಯುತ್ತರ
    Write a Reply

    explore ಇನ್ನಷ್ಟು on ಮಾರುತಿ ಇ vitara

    space Image

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಲೆಕ್ಟ್ರಿಕ್ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    • ಹೊಸ ವೇರಿಯೆಂಟ್
      ಮಹೀಂದ್ರ be 6
      ಮಹೀಂದ್ರ be 6
      Rs.18.90 - 26.90 ಲಕ್ಷಅಂದಾಜು ದಾರ
      ಮಾರಚ್‌, 2025: ನಿರೀಕ್ಷಿತ ಲಾಂಚ್‌
    • ಹೊಸ ವೇರಿಯೆಂಟ್
      ಮಹೀಂದ್ರ xev 9e
      ಮಹೀಂದ್ರ xev 9e
      Rs.21.90 - 30.50 ಲಕ್ಷಅಂದಾಜು ದಾರ
      ಮಾರಚ್‌, 2025: ನಿರೀಕ್ಷಿತ ಲಾಂಚ್‌
    • ಆಡಿ ಕ್ಯೂ6 ಈ-ಟ್ರಾನ್
      ಆಡಿ ಕ್ಯೂ6 ಈ-ಟ್ರಾನ್
      Rs.1 ಸಿಆರ್ಅಂದಾಜು ದಾರ
      ಮಾರಚ್‌, 2025: ನಿರೀಕ್ಷಿತ ಲಾಂಚ್‌
    • ಮಹೀಂದ್ರ xev 4e
      ಮಹೀಂದ್ರ xev 4e
      Rs.13 ಲಕ್ಷಅಂದಾಜು ದಾರ
      ಮಾರಚ್‌, 2025: ನಿರೀಕ್ಷಿತ ಲಾಂಚ್‌
    • ಮಾರುತಿ ಇ vitara
      ಮಾರುತಿ ಇ vitara
      Rs.17 - 22.50 ಲಕ್ಷಅಂದಾಜು ದಾರ
      ಮಾರಚ್‌, 2025: ನಿರೀಕ್ಷಿತ ಲಾಂಚ್‌
    ×
    We need your ನಗರ to customize your experience